ಅಳತೆ ಕುರಿತ ಅಭ್ಯಾಸಪತ್ರ
ಇಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ತೂಕ ಮಾಪನದ ಮೇಲೆ ಕಾರ್ಯಪತ್ರ ಕೊಡಲಾಗಿದೆ. ಈ ಮೋಜಿನ ಆದರೂ ಸವಾಲು ನೀಡುವ ಕಾರ್ಯಪತ್ರವನ್ನು ಒಂದು ಪುನರ್ಮನನ ಅಥವಾ ಮೌಲ್ಯ ಮಾಪನ ಕಾರ್ಯಪತ್ರವಾಗಿ ಬಳಸಬಹುದು. ಲೆಕ್ಕದ ಸಂಕೀರ್ಣತೆ ಪ್ರತಿ ಪುಟದೊಂದಿಗೆ ಹೆಚ್ಚುತ್ತಾ ಹೋಗುತ್ತದೆ.
ಗಣಿತದ ಅಭ್ಯಾಸಪತ್ರ
ಕೆಳಗಿನ ವಸ್ತುಗಳ ತೂಕ ಅಳೆಯಲು :ಅತ್ಯುತ್ತಮ ಘಟಕದ ಸುತ್ತ ವೃತ್ತ ಬರೆಯಿರಿ
** ಹಗುರ ವಸ್ತುಗಳನ್ನು ಮಿಲಿಗ್ರಾಂನಲ್ಲಿ ಮಾಪನ ಮಾಡುತ್ತೇವೆ ಮತ್ತು ಭಾರವಾದ ವಸ್ತುಗಳನ್ನು ಕಿಲೋಗ್ರಾಂಗಳಲ್ಲಿ ಅಳೆಯಲಾಗುತ್ತದೆ ಎಂದು ನೆನಪಿಡಿ.

ನೀವು ಈ ತೂಕದ ಯಂತ್ರಗಳಲ್ಲಿ ಯಾವುದನ್ನುಬಳಸಬಹುದು? ತೂಕ ಮಾಡಬೇಕಾದ ವಸ್ತುವಿನಿಂದ ಅದರ ಸರಿಯಾದ ತೂಕ ಯಂತ್ರದವರೆಗೆ ಗೆರೆ ಎಳೆಯಿರಿ

ಇವುಗಳನ್ನು ಅಳೆಯುವ ಸರಿಯಾದ ತೂಕದ ಮಾನ ವನ್ನು ಬರೆಯಿರಿ: (ಮಿಲಿಗ್ರಾಂ ,ಗ್ರಾಂ, ಕಿಲೋಗ್ರಾಂ)
1. ಚಾಕೋಲೆಟ್ ಬಾರ್: ______________________
2. ಅಳಿಸುವ ರಬ್ಬರು: ____________________
3. ಒಂದು ಗೋದಿ ಹಿಟ್ಟಿನ ಪ್ಯಾಕೆಟ್ಟು: ___________________
4. ಒಂದು ಪೆನ್ಸಿಲ್ಲು: _______________________
5. ಒಂದು ನವಿಲುಗರಿ: _____________________
6. ಒಂದು ನೋಟ್ ಪುಸ್ತಕ: _____________________
7. ಆಲೂಗೆಡ್ಡೆ ಮೂಟೆ: __________________
8. ಎರಡು ವರ್ಷ ವಯಸ್ಸಿನ ಮಗುವಿನ ತೂಕ: _____________________
ಸರಿಯಾದ ಪರ್ಯಾಯ ಆಯ್ಕೆ ಮಾಡಿರಿ:
1. ನನ್ನ ಕೊಠಡಿಯ ಅಳತೆಯನ್ನು ಈ ಮಾಪನದಲ್ಲಿ ಮಾಡುತ್ತೇನೆ:
a. ಸೆಂಟೀ ಮೀಟರು
b. ಗ್ರಾಂ
c. ಮಿಲಿಮೀಟರು
2. ನಾನು 1000ಗ್ರಾಂ ಎಲೆಕೋಸು ಮತ್ತು 1 ಕೆಜಿ ಹೂ ಕೋಸು ಖರೀದಿಸಿದ್ದೇನೆ
a. ಎಲೆಕೋಸು ಹೂ ಕೋಸಿಗಿಂತ ಭಾರ
b. ಎಲೆಕೋಸು ಹೂ ಕೋಸಿಗಿಂತ ಹಗುರ
c. ಎರಡರ ತೂಕವೂ ಒಂದೇ
3. ಒಂದು ಪರಿಮಳದ್ರವ್ಯದ ಬಾಟಲನ್ನು ಇದರಿಂದ ಅಳೆಯುತ್ತೇವೆ
a. ಗ್ರಾಂ (g)
b. ಕಿಲೋಗ್ರಾಂ (kg)
c. ಮಿಲಿಲೀಟರುಗಳು (ml)
4. ಇವುಗಳಲ್ಲಿ ಯಾವುದರ ತೂಕ ಹೆಚ್ಚು?
a. 500ಗ್ರಾಂ
b. 1000ಮಿಲಿಗ್ರಾಂ
c. 1ಕೆಜಿ
5. ಇವುಗಳಲ್ಲಿ ಯಾವುದು ಹಗುರ?
a. 1000 ಮಿಲಿಗ್ರಾಂ
b. 10 ಗ್ರಾಂ
c. 500 ಮಿಲಿಗ್ರಾಂ
6. ಇವುಗಳಲ್ಲಿ ಯಾವುದು ತಪ್ಪು?
a. 1 ಮಿಲಿಗ್ರಾಂ = 10000 ಗ್ರಾಂ
b. 1 ಕೆಜಿ = 1000 ಗ್ರಾಂ
c. 1 ಗ್ರಾಂ = 1000 ಮಿಲಿಗ್ರಾಂ
d. 1 ಕೆಜಿ = 1,00,000 ಮಿಲಿಗ್ರಾಂ
7. 2 ಕೆಜಿ ಆಗಲು ಎಷ್ಟು ಗ್ರಾಂ ಬೇಕು?
a. 200 ಗ್ರಾಂ
b. 20 ಗ್ರಾಂ
c. 2000 ಗ್ರಾಂ
d. 200000 ಮಿಲಿಗ್ರಾಂ
8.ಈ ಮುಂದಿನವನ್ನು ಕಿಲೋಗ್ರಾಂಗೆ ಪರಿವರ್ತಿಸಿರಿ:
a. 3000 ಗ್ರಾಂ = _____________
b. 5000 ಗ್ರಾಂ = _____________
c. 8000 ಗ್ರಾಂ = _____________
d. 10000 ಗ್ರಾಂ = ____________
9.ಈ ಮುಂದಿನವನ್ನು ಗ್ರಾಂಗೆ ಪರಿವರ್ತಿಸಿರಿ
a. 2 ಕೆಜಿ = _______________
b. 6 ಕೆಜಿ = _______________
c. 2000 ಮಿಲಿಗ್ರಾಂ = ___________
d. 6000 ಮಿಲಿಗ್ರಾಂ = ___________
ರುಕ್ಸಾನ ಮಾರುಕಟ್ಟೆ ಹೋದರು ಮತ್ತು 500 ಗ್ರಾಂ ತೂಕದ ಟೊಮ್ಯಾಟೊ , 200 ಗ್ರಾಂ ತೂಕದ ಒಂದು ಬಿಸ್ಕೆಟ್ ಪ್ಯಾಕೆಟ್ ,250 ಗ್ರಾಂ ತೂಕದ ಒಂದು ಹಾಲಿನ ಬಾಟಲ್ ಮತ್ತು 50ಗ್ರಾಂ ತೂಕದ ಒಣ ಹಣ್ಣುಗಳ ಒಂದು ಸಣ್ಣ ಪ್ಯಾಕೆಟ್ ಖರೀದಿಸಿದರು ಅವರು ಮರಳಿ ಮನೆಗೆ ಕೊಡೊಯ್ದ ಒಟ್ಟು ತೂಕ ಎಷ್ಟು?
ಅದ್ಭುತ ಸಂಗತಿಗಳು:
1. ಧ್ರುವದಲ್ಲಿ ಗುರುತ್ವ ಸೆಳೆತ ಸಮಭಾಜಕದಲ್ಲಿ ಇರುವುದಕ್ಕಿಂತ ಹೆಚ್ಚು ಆಗಿರುವ ಕಾರಣ ಧ್ರುವಗಳಲ್ಲಿ ನಿಮ್ಮ ತೂಕ ಹೆಚ್ಚು ಇರುತ್ತದೆ
2. ನೀವು ಲಿಫ್ಟ್ ನಲ್ಲಿ ಮೇಲಕ್ಕೆಹೋಗುವಾಗ ಮೇಲೆ ಹೋದಂತೆ ನಿಮ್ಮ ತೂಕ ಹೆಚ್ಚು ಎಂದು ಕಾಣಿಸುತ್ತದೆ ಮತ್ತು ನೀವು ಕೆಳಗೆ ಹೋದಾಗ ಹಗುರವಾಗಿರುವಂತೆ ಭಾಸವಾಗುತ್ತದೆ.
ಲಗತ್ತುಗಳು | ಗಾತ್ರ |
---|---|
![]() | 181.98 KB |
- ಟೀಕೆ ಬರೆಯಲು ಲಾಗಿನ್ ಆಗಿ ಅಥವಾ ನೋಂದಾಯಿಸಿಕೊಳ್ಳಿರಿ