ಅಭ್ಯಾಸ ಪತ್ರ: ಓದುವ ಮತ್ತು ಬರೆಯುವ ಕೌಶಲ್ಯ
ಅಭ್ಯಾಸ ಪತ್ರ: ಓದುವ ಮತ್ತು ಬರೆಯುವ ಕೌಶಲ್ಯ
ಚಟುವಟಿಕೆ 1: ಪ್ರಕೃತಿ ವಿಕೋಪಗಳ ಒಗಟುಗಳು.
ಕೆಳಗೆ ಕೊಟ್ಟಿರುವ ಮಾಹಿತಿಗಳನ್ನು ಓದಿ ಅದು ಯಾವ ಪ್ರಕೃತಿ ವಿಕೋಪ ಎಂದು ಕಂಡುಹಿಡಿಯಿರಿ.
- ನಾನು ನೆಲವು ನಡುಗುವಂತೆ ಮಾಡುತ್ತೇನೆ,ಅದು ಸೌಮ್ಯವೂ ಇರಬಹುದು ಅಥವಾ ಭೀಕರವಾಗಿ ಇರಬಹುದು.ಆದರೆ ನಾನು ಹೀಗೆ ಹಾನಿ ಮಾಡುತ್ತಿರುವಾಗ ನೀವು ನನ್ನನ್ನು ನೋಡಲಾರಿರಿ.ಹಾಗಾದರೆ ನಾನು ಯಾರು?----------
- ನಾನು ಸುತ್ತಿ ಸುತ್ತಿ ಸುಳಿದಾಡುವ ಗಾಳಿ ಎತ್ತಿನೆಲಕ್ಕೆ ಕುಕ್ಕುವ ಗಾಳಿ ನಾನು ಭೀಕರವೂ ಹೌದು ಅಪಾಯಕಾರಿಯೂ ಹೌದು ಹೇಳಿ ನಾನ್ಯಾರು? ________________.
- ನಾನು ದೊಡ್ಡ ಬಂಡೆಗಳು ಮತ್ತು ಬಂಡಿಗಟ್ಟಳೆ ಸಡಿಲ ಮಣ್ಣನ್ನು ಒಮ್ಮೆಲೆ ಬಯಲಿಗೆ ಸುರಿಸಿಬಿಡುತ್ತೇನೆ.ಇದರಿಂದ ನಾನು ಭೂಮಿ ತಾಯಿಯ ವಿನಾಶ ಮಾಡುತ್ತೇನೆ. ನಾನ್ಯಾರು?----------
ಚಟುವಟಿಕೆ 2 : ನೇರಹೋಗಿ ಎಡಕ್ಕೆ ತಿರುಗಿ --- ಇಲ್ಲಿ ಕೊಟ್ಟಿರುವ ನಿರ್ದೇಶಗಳನ್ನು ನೋಡಿ. ಅವುಗಳನ್ನು ಸರಿಯಾದ ಕ್ರಮದಲ್ಲಿ ಇರಿಸಿರಿ. ಸೂಚಿಸುವ ಸಲುವಾಗಿ ಕೊಟ್ಟ ಅಂಕಣಗಳಲ್ಲಿ 1, 2, 3,ಇತ್ಯಾದಿ ಬರೆಯಿರಿ. ಒಂದನ್ನು ನಿಮಗಾಗಿ ಮಾಡಿ ತೋರಿಸಲಾಗಿದೆ.
ಎ. ಗ್ರಂಥಾಲಯವು ಬೀದಿಯ ಎಡ ಮಗ್ಗುಲಿನಲ್ಲಿ ಕೊನೆಯಲ್ಲಿದೆ.
ಬಿ ಹಾಗೆಯೇ ನೇರವಾಗಿ ಮುಂದಕ್ಕೆ ಹೋಗಿರಿ.
ಸಿ ಮೂಲೆಯಲ್ಲಿ ಒಂದು ಸಿನಿಮಾ ಮಂದಿರವಿದೆ.
ಡಿ. ಅಂಚೆ ಕಚೇರಿಯನ್ನೂ ದಾಟಿ ಮುಂದಕ್ಕೆ ಹೋಗಿ.
ಇ. ಅದೇ ರಸ್ತೆಯಲ್ಲಿ ನೇರವಾಗಿ ಮುಂದೆ ಹೋಗಿರಿ
ಎಫ್ ಸಿನಿಮಾ ಮಂದಿರದ ಬಳಿ ಎಡಕ್ಕೆ ತಿರುಗಿ.
ಚಟುವಟಿಕೆ 3 :ನೀವೆಷ್ಟು ಚೆನ್ನಾಗಿ ಓದಬಲ್ಲಿರಿ?
ಮುಂದೆಕೊಟ್ಟಿರುವ ಪ್ಯಾರಾವನ್ನು ಓದಿ ಕೊಟ್ಟಿರುವ ಕಾರ್ಯವನ್ನು ಮಾಡಿರಿ:
- ಕೆಳಗಿನ ಚಿತ್ರದಲ್ಲಿ ಖಾಲಿ ಇರುವ ಅಂಕಣವನ್ನುಪ್ಯಾರಾದಲ್ಲಿ ಇರುವ ಸೂಕ್ತ ಪದವನ್ನು ಬಳಸಿ ಭರ್ತಿಮಾಡಿರಿ.
- ಚಿತ್ರದ ಅಡಿಯಲ್ಲಿ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿರಿ.
ನಾನು ಹಳ್ಳಿಯೊಂದರಲ್ಲಿ ಅಜ್ಜ,ಅಜ್ಜಿ , ಅಪ್ಪ, ಅಮ್ಮ ಇಬ್ಬರು ಸೋದರಿಯರು ಮತ್ತೊಬ್ಬ ಚಿಕ್ಕ ತಮ್ಮನ ಜೊತೆಯಲ್ಲಿ ವಾಸಿಸುತ್ತಿದ್ದೇನೆ. ನಾನು ಮತ್ತು ನನ್ನಸೋದರಿಯರು ಶಾಲೆಗೆ ಹೋಗುತ್ತಿದ್ದೇವೆ. ನಮ್ಮಅಜ್ಜನು ಪುಸ್ತಕದ ಅಂಗಡಿ ಇಟ್ಟುಕೊಂಡಿದ್ದಾರೆ.ಅಪ್ಪ ಅವರಿಗೆ ನೆರವಾಗುತ್ತಾರೆ.ನಮ್ಮತಾಯಿ ಮನೆಯಲ್ಲಿ ಕೆಲಸಮಾಡಿಕೊಂಡಿರುತ್ತಾರೆ.
ಪ್ರಶ್ನೆಗಳು:
1. ಕುಟುಂಬದಲ್ಲಿ ಎಷ್ಟು ಜನ ಸದಸ್ಯರಿದ್ದಾರೆ?
ನಿಜ/ಸುಳ್ಳು ಬರೆಯಿರಿ:
- ನನ್ನಜ್ಜ ಮತ್ತು ನನ್ನ ಅಪ್ಪ ಒಂದೇ ಸ್ಥಳದಲ್ಲಿ ಕೆಲಸಮಾಡುತ್ತಾರೆ.(ನಿಜ/ ಸುಳ್ಳು)
- ನನ್ನ ತಾಯಿ ಉದ್ಯೋಗಿ ಮಹಿಳೆ. (ನಿಜ/ ಸುಳ್ಳು)
3. ಮೇಲೆ ಹೇಳಿದ ಕುಟುಂಬವು ವಿಭಕ್ತ ಕುಟುಂಬ. ನೀವು ಈ ಹೇಳಿಕೆಯನ್ನು ಒಪ್ಪುತ್ತೀರಾ? ಅದಕ್ಕೆಕಾರಣ ನೀಡಿ.
-----------------------------------------------------------------------------------------------------
-----------------------------------------------------------------------------------------------------
----------------------------------------------------------------------------------------------------
----------------------------------------------------------------------------------------------------
ಚಟುವಟಿಕೆ 4 : ನಾನು ಯಾರು?
ಕೆಳಗೆ ಕೊಟ್ಟಿರುವ ಪ್ರಾಣಿ ವಿವರಣೆ ಓದಿರಿ ಮತ್ತು ಅವುಗಳ ಹೆಸರನ್ನು ಕೊಟ್ಟಿರುವ ಸ್ಥಳಾವಕಾಶದಲ್ಲಿ ಬರೆಯಿರಿ.
1. ನಾನೆಂದರೆ ನಿಧಾನಕ್ಕೆ ಇನ್ನೊಂದು ಹೆಸರು.ಆದರೆ ನನ್ನ ತಲೆ ಕಾಲು ರಕ್ಷಿಸಲು ನನ್ನಮೈಮೇಲೆ ದಪ್ಪ ಚಿಪ್ಪು ಇದೆ.ನಾನು ಸೊಪ್ಪು ತಿಂದು ಬದುಕುತ್ತೇನೆ ಮತ್ತು ಚಳಿಗಾಲದಲ್ಲಿ ನಿದ್ರಿಸುತ್ತೇನೆ. ಹಾಗಾದರೆ ನಾನು ಯಾರು? ನೀನು _____________________.
2. ನಾನೋ ಬೃಹದಾಕಾರದ ಪ್ರಾಣಿ ಮತ್ತು ಕಾಡಿನಲ್ಲಿ ವಾಸಿಸುತ್ತೇನೆ.ನನಗೆ ನಾಲ್ಕು ಕಾಲುಗಳು ಒಂದು ಸೊಂಡಿಲು ಮತ್ತು ಒಂದು ಬಾಲ ಇವೆ. ಹಾಗಾದರೆ ನಾನು ಯಾರು? ನೀನು ________________.
3.ನನಗೆ ಉದ್ದನೆ ಬಾಲ ಮತ್ತು ಕೈಗಳಿವೆ ಕಾಲು ಮಾತ್ರ ಗಿಡ್ಡ. ನಾನು ಮರ ಹತ್ತಬಲ್ಲೆ. ಕೆಲವೊಮ್ಮೆ ನಾನು ಬಲು ಕಿಲಾಡಿ ಹಾಗು ತುಂಟನಾಗಬಲ್ಲೆ.ನಾನ್ಯಾರು?
ನೀನು ________________.
- ನನ್ನ ದೇಹ ತೆಳು ನನಗೆ ಕಾಲಿಲ್ಲ. ಆದರೆ ನಾನು ವೇಗವಾಗಿ ಚಲಿಸಬಲ್ಲೆ ಇತರ ಪ್ರಾಣಿಗಳು ಮತ್ತು ಮಾನವರನ್ನು ತಿಂದು ಹಾಕಬಲ್ಲೆ. ನಾನು ಯಾರು?
ನೀನು ________________.
ಚಟುವಟಿಕೆ 5: ಈ ಕಥೆ ಹೇಳಿ ನೋಡೋಣ?
ವಿವರಣೆ ಮತ್ತು ಚಿತ್ರಗಳನ್ನು ಹೊಂದಿಸಿ.ನೀವು ಅದಕ್ಕೆ1,2,3, ಎಂದು ಅಂಕಿ ನೀಡಬಹುದು.
|
ಸ್ಫರ್ಧೆ ಆರಂಭವಾಯಿತು.ಎಂದಿನಂತೆ ಆಮೆ ನಿಧಾನವಾಗಿ ನಡೆಯಲಾರಂಭಿಸಿತು.ಮೊಲ ಜೋರಾಗಿ ಓಡಿತು.
|
|
|
ಲಗತ್ತುಗಳು | ಗಾತ್ರ |
---|---|
![]() | 684.01 KB |
- ಟೀಕೆ ಬರೆಯಲು ಲಾಗಿನ್ ಆಗಿ ಅಥವಾ ನೋಂದಾಯಿಸಿಕೊಳ್ಳಿರಿ