ಸಾಫ್ಟ್ ಹ್ಯಾಂಡ್ ಅನುಭವ

ಕಾಲಾವಧಿ: 
00 hours 03 mins

ಹಾಯ್! ನನ್ನ ಹೆಸರು ರಿಕ್ ಹಾಲ್. ಇಂಗ್ಲೆಂಡ್ನ ನಾಟಿಂಗ್ಹ್ಯಾಮ್ ಮೂಲದ IGNITE ಎಂಬ ಕಂಪೆನಿಯ ಸ್ಥಾಪಕ ನಾನೇ. ಶಾಲೆಗಳಲ್ಲಿನ ವಿಜ್ಞಾನ ಪಾಠಗಳಲ್ಲಿ ನಾವು ಹೆಚ್ಚು ಸೃಜನಾತ್ಮಕತೆಯನ್ನು ಪಡೆಯಲು ಪ್ರಯತ್ನಿಸುತ್ತೇವೆ. ಭಾರತದ ಪುಣೆ ಐಯುಸಿಎಎ ಸೈನ್ಸ್ ಸೆಂಟರ್ನಲ್ಲಿ ನಾನು ಕೆಲವು ಪ್ರಯೋಗಗಳನ್ನು ಮಾಡುತ್ತಿದ್ದೇನೆ. ಈ ಪ್ರಯೋಗಗಳಲ್ಲಿ ಕೆಲವು ನಮ್ಮ ಇಂದ್ರಿಯಗಳನ್ನು   ಕುರಿತ  ಪ್ರಯೋಗಗಳು .ಇಂದು ನಾವು ಸ್ಪರ್ಶ ವನ್ನು ಕುರಿತು ನಮ್ಮ ಅರ್ಥದಲ್ಲಿ ಅದ್ಭುತವಾದ ಪ್ರಯೋಗವನ್ನು ತೋರಿಸುತ್ತೇವೆ. ಈ ಪ್ರಯೋಗವು ನಿಮ್ಮ ಕೈಗಳನ್ನು ಮೃದುಗೊಳಿಸಲು ಅಥವಾ ಸಾಫ್ಟ್ ಹ್ಯಾಂಡ್ ಅನುಭವ ಪಡೆಯುವುದು  ಹೇಗೆ ಎಂದು ತೋರಿಸುತ್ತದೆ.. ನಾನು ಮೊದಲಿಗೆ ನ್ಯೂ ಮೆಕ್ಸಿಕೋ, ಅಮೆರಿಕಾದಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಈ ವಿಜ್ಞಾನ ಪ್ರಯೋಗವನ್ನು ಕಂಡುಕೊಂಡೆ. ಇದು ತುಂಬಾ ಸರಳವಾದ ಸಾಧನವಾಗಿದೆ. ನಾನು ಚಿತ್ರವಿಲ್ಲದ ಬರಿಯ  ಚೌಕಟ್ಟನ್ನು ತೆಗೆದುಕೊಂಡಿದ್ದೇನೆ ಮತ್ತು ಚೌಕಟ್ಟನ್ನು ಮುಚ್ಚಲು  ಸ್ವಲ್ಪ ಕೋಳಿ ಜಾಲರಿಗಳನ್ನು ಹರಡಲಾಗಿದೆ. ಈ ಪ್ರಯೋಗ ನಿಜವಾಗಿಯೂ ಚೆನ್ನಾಗಿ ಕೆಲಸ ಮಾಡಲು ನನಗೆ ಸಹಾಯ ಮಾಡಲು ಬೇರೊಬ್ಬರ ಅವಶ್ಯಕತೆ ಇದೆ. ಪ್ರಜ್ಞಾ ದಯವಿಟ್ಟು ಬಂದು ಈ ಪ್ರಯೋಗವನ್ನು ಮಾಡಲು ನನಗೆ ಸಹಾಯ ಮಾಡು.

ಮುಂದೆ ವಿಡಿಯೋ ನೋಡಿ

19218 ನೊಂದಾಯಿತ ಬಳಕೆದಾರರು
7452 ಸಂಪನ್ಮೂಲಗಳು