ತುಂಡು ಏಳು ಆಕಾರ ಸಾವಿರ-ಚೀನಿ ಚಮತ್ಕಾರ

ಕಾಲಾವಧಿ: 
00 hours 03 mins
 ಟ್ಯಾನ್ಗ್ರಾಮ್ ಸಾವಿರಾರು ವರ್ಷಗಳ ಹಿಂದೆ ಚೀನಿಯರು ಕಂಡುಹಿಡಿದ ಪುರಾತನ ಚೀನೀ ಚತುರ ಸಮಸ್ಯೆಆಗಿದೆ .ಒಂದು ಚೌಕಾಕಾರದಿಂದ ಏಳು ತುಂಡುಗಳಾಗಿ ಕತ್ತರಿಸಿ ಇದನ್ನು ಮಾಡಲಾಗಿದೆ. ಇದರಲ್ಲಿ ಎರಡು ದೊಡ್ಡ ತ್ರಿಕೋನಗಳು, ಎರಡು ಸಣ್ಣ ತ್ರಿಕೋನಗಳು, ಒಂದು ಮಧ್ಯಂತರ ತ್ರಿಕೋನ, ಒಂದು ಸಮಾಂತರ ಚದರಾಕೃತಿ ಮತ್ತು ಒಂದು ಚೌಕಾಕಾರ ಇವೆ.  ಮೊದಲ ಸವಾಲು ಎಂದರೆ ಅದರ ಚೌಕಾಕಾರದ ಚೌಕಟ್ಟಿನಿಂದ  ಏಳು ತುಣುಕುಗಳನ್ನು ಹೊರ ತೆಗೆದು ನಂತರ ಅದೇ ಚೌಕಟ್ಟಿನಲ್ಲಿ ಅವುಗಳನ್ನು ಮೊದಲಿನಂತೆಯೆ ಜೋಡಿಸುವುದು. ಇದು ತುಂಬಾ ಸುಲಭವೇನೂ ಅಲ್ಲ.  ಎಲ್ಲಾ ಏಳು ತುಣುಕುಗಳನ್ನು ಬಳಸಿಕೊಂಡು ನೀವು ಸುಲಭವಾಗಿ ಗುರುತಿಸಬಹುದಾದ ಸಾವಿರಾರು ಪಕ್ಷಿಗಳು, ಮೃಗಗಳು ಮತ್ತು ದೋಣಿಗಳ ಆಕಾರವನ್ನು ಮಾಡಬಹುದು. ಈ ಚೀನೀ ಒಗಟಿನ ಚೌಕ ಪ್ರಬಲವಾದ ಮತ್ತು ಚಿರಂತನ  ಚತುರ ಸಮಸ್ಯೆ ಆಗಿದೆ. ಮುಂದೆಯೂ ಸಾವಿರಾರು ವರ್ಷ ಮಕ್ಕಳು ಮತ್ತು ಬೆಳೆದವರು ಎಲ್ಲರ ಮನಸೆಳೆದು ಗಮನವಿಟ್ಟು ಆಡುವಂತೆ ಮಾಡುತ್ತದೆ.ಮಕ್ಕಳ ಕೌಶಲ್ಯ ಹಾಗು ಕಲ್ಪನಾಶಕ್ತಿ ಇದರಿಂದ ವರ್ಧಿಸುತ್ತದೆ.

 

18091 ನೊಂದಾಯಿತ ಬಳಕೆದಾರರು
6935 ಸಂಪನ್ಮೂಲಗಳು