ಎಲ್ಇಡಿ ಟಾರ್ಚ್

ಕಾಲಾವಧಿ: 
00 hours 02 mins

ಇಂದು ನಾವು ಎಲ್ಇಡಿ ಸ್ಟ್ರಿಪ್ ಅನ್ನು ಬಳಸಿಕೊಂಡು ಪ್ರಕಾಶಮಾನವಾದ ಮತ್ತು ಹೊಳೆಯುವ ಟಾರ್ಚ್ ಮಾಡೋಣ. ನಿಮಗೆ ಒಂದು ಸಣ್ಣ ಪ್ಲ್ಯಾಸ್ಟಿಕ್ ಬಾಕ್ಸ್, 9-ವೋಲ್ಟ್ ಬ್ಯಾಟರಿ, ಆನ್ / ಆಫ್ ಸ್ವಿಚ್, ಕನೆಕ್ಟರ್, ವೈರ್ ಮತ್ತು ಎಲ್ಇಡಿ ಸ್ಟ್ರಿಪ್ ಅಗತ್ಯವಿರುತ್ತದೆ. ಬ್ಯಾಟರಿ ಕನೆಕ್ಟರ್ ಅನ್ನು ತೆಗೆದುಕೊಂಡು ತಂತಿಯಿಂದ ಪ್ಲಾಸ್ಟಿಕ್  ಹೊರ ಹೊದಿಕೆಯನ್ನು ತೆಗೆದುಹಾಕಿ.ತಾಮ್ರದ ತಂತಿ ಕಾಣುವಂತೆ ಮಾಡಿರಿ ಆನ್ / ಆಫ್ ಸ್ವಿಚ್ಗೆ ಸರಣಿಗಳಲ್ಲಿ ಬ್ಯಾಟರಿ ಕನೆಕ್ಟರ್ ಅನ್ನು ಸೇರಿಸಿ. ಮೀಟರ್ ಲೆಕ್ಕದಲ್ಲಿ ಎಲ್ಇಡಿ ಪಟ್ಟಿಗಳನ್ನು ಖರೀದಿಸಬಹುದು. ಈ ಪಟ್ಟಿಯಿಂದ 3 LED ಯ ಉದ್ದವನ್ನು ಕತ್ತರಿಸಿರಿ. ಬ್ಯಾಟರಿ ಕನೆಕ್ಟರ್ಗೆ 9-ವೋಲ್ಟ್ ಬ್ಯಾಟರಿಯನ್ನು ಜೋಡಿಸಿ. ಎಲ್ಇಡಿಗಳಿಗೆ ಬ್ಯಾಟರಿಯ ತಂತಿಗಳನ್ನು ಸಂಪರ್ಕಿಸಿದಾಗ ಅವು ಪ್ರಕಾಶಮಾನವಾಗಿ ಬೆಳಗುತ್ತವೆ. ಸ್ವಿಚ್ ಬಳಸಿ ನೀವು ಎಲ್ಇಡಿಗಳನ್ನು ಆನ್ ಅಥವಾ ಆಫ್ ಮಾಡಿ. ಸ್ವಿಚ್ ಅನ್ನು ನಿರ್ಮಿಸಲು ಪ್ಲಾಸ್ಟಿಕ್ ಪೆಟ್ಟಿಗೆಯಲ್ಲಿ ಆಯತಾಕಾರದ ಕಂಡಿಯನ್ನು ಕತ್ತರಿಸಿ. ನೀವು ಸುಲಭವಾಗಿ ಸ್ವಿಚ್ ಅನ್ನು ಅದರಲ್ಲಿ ಇರಿಸಿ ಬಳಸ ಬಹುದು. ನಂತರ ಬಾಕ್ಸ್ ಒಳಗೆ ಬ್ಯಾಟರಿ ಇರಿಸಿ. ಬ್ಯಾಟರಿಗೆ ಲಗತ್ತಿಸಿದ ತಂತಿಗಳು ಹೊರಬರಲು ಒಂದು ಕಂಡಿ ಮಾಡಿರಿ. ಪ್ಲ್ಯಾಸ್ಟಿಕ್ ಬಾಕ್ಸ್ ಮೇಲೆ ಎಲ್ಇಡಿ ಸ್ಟ್ರಿಪ್ ಅಂಟಿಸಿಕೊಳ್ಳಿ ಮತ್ತು ನಂತರ ಬ್ಯಾಟರಿ  ತಂತಿಗಳನ್ನುಎಲ್ಇಡಿ ಸಂಪರ್ಕ ಪಡಿಸಿ. ಸ್ವಿಚ್ ಹಾಕಿದಾಗ ಎಲ್ಇಡಿಗಳು ಪ್ರಕಾಶಮಾನವಾಗಿ ಬೆಳಕು ಚೆಲ್ಲುತ್ತವೆ. ಎಲ್ಇಡಿಗಳು ಕಡಿಮೆ ವಿದ್ಯುತ್ ಬಳಸುವುದರಿಂದ ಟಾರ್ಚ್ ಬ್ಯಾಟರಿಯು ಬಹಳ ಕಾಲ ಬಾಳುತ್ತದೆ.

18461 ನೊಂದಾಯಿತ ಬಳಕೆದಾರರು
7223 ಸಂಪನ್ಮೂಲಗಳು