ನಮ್ಮ ತಂಡ

ನಮ್ಮತಂಡದಲ್ಲಿ ಅಜೀಂ ಪ್ರೇಂಜಿ ಫೌಂಡೇಷನ್ ನ ಕೆಲವಾರು ಪ್ರತಿಭಾವಂತರು ಮತ್ತು ಹಲವಾರು ಸಹಭಾಗಿ ಸಂಸ್ಥೆಗಳು,ಉತ್ಸಾಹಿ ವ್ಯಕ್ತಿಗಳು ಇದ್ದಾರೆ ಹಾಗು ಎಲ್ಲಕ್ಕೂ ಮಿಗಿಲಾಗಿ ತಾವು ಇದ್ದೀರಿ!

19824 ನೊಂದಾಯಿತ ಬಳಕೆದಾರರು
7791 ಸಂಪನ್ಮೂಲಗಳು
ಅರುಣ್

ಶಾಂತ,ಸ್ನೇಹಪರ,ನಿಶ್ಚಲಶ್ರದ್ಧೆಯ,ಅರುಣ್ ಅವರು ಸರಳಜೀವಿ ಹಾಗು ಸುಲಭವಾಗಿ ಇತರರೊಡನೆ ಬೆರೆಯುತ್ತಾರೆ.ಪ್ರಸ್ತುತ ಅಕೆಡೆಮಿಕ್ಸ್ ಮತ್ತು ಪೆಡಗೋಜಿ ತಂಡದ ಮುಖ್ಯಸ್ಥರಾದ ಇವರು ಕನ್ನಡ ಸಂಪಾದಕ ಮಂಡಳಿಯ ಸದಸ್ಯರಾಗಿ ಪೋರ್ಟಲ್ ಗೆ ಶೈಕ್ಷಣಿಕ ಮಾರ್ಗದರ್ಶನ ನೀಡುತ್ತಾರೆ. ಶ್ರೀ ಅರುಣ್ ಅವರು ಈ ಹಿಂದೆ ಒಂದು ವರ್ಷಕ್ಕೂ ಹೆಚ್ಚುಕಾಲ ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್ ನ ಮುಖ್ಯಸ್ಥರಾಗಿದ್ದರು.ಸಂಗೀತ,ಲಲಿತಕಲೆ,ಚಿತ್ರಕಲೆಗಳಲ್ಲಿ ಇವರಿಗೆ ತೀವ್ರಾಸಕ್ತಿ."ಪ್ರತಿಯೊಬ್ಬರೂ ತಮ್ಮ ಸ್ವಯಂ ಅಭಿವೃದ್ಧಿಗೆ ಶ್ರಮಿಸಬೇಕು"ಎಂಬುದು ಇವರ ದೃಢನಂಬಿಕೆ ಹಾಗು ಆದರ್ಶ.

ಉಷಾ

ಭಾವೋದ್ಧೀಪ್ತ,ಕಟಿಬದ್ಧ ಹಾಗೂ ತೆರೆದ ಮನಸ್ಸಿನ ಉಷಾ ಅವರು,ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್ ನ ಇಂಗ್ಲಿಷ್ ವಿಭಾಗದ ಉಸ್ತುವಾರಿಯನ್ನು ಹೊಂದಿರುವ 'ಟೀಚರ್ ಪ್ಲಸ್' ನ ಸಂಪಾದಕರು.ಆದರ್ಶ ಗೃಹಿಣಿ,ತಾಯಿ, ಹಾಗು ಗೃಹನಿರ್ವಹಣೆಯಲ್ಲೂ  ತೊಡಗಿಸಿಕೊಂಡ ಉಷಾ ಅವರು ಬರವಣಿಗೆ ,ಓದು,ವಿಶ್ವಕ್ರೀಡೆಗಳು ಮತ್ತು ಪ್ರವಾಸವನ್ನು ಬಹಳ ಇಷ್ಟ ಪಡುತ್ತಾರೆ." ಇನ್ನೊಬ್ಬರ ತಪ್ಪನ್ನುಮರೆಯುತ್ತೇನೆಯೇ ಹೊರತು ಕಲಿತಿದ್ದೇನನ್ನೂ ಮರೆಯಲಾರೆ" ಎಂದು ತಮ್ಮಪ್ರವೃತ್ತಿಯ ಪರಿಚಯ ಮಾಡುತ್ತಾರೆ."ಬದುಕಿನಲ್ಲಿ ನಿಮ್ಮದೇ ನಿಬಂಧನೆಗಳನ್ನು ಬೇರೂರಿಸುವ ಶಕ್ತಿ ಇಲ್ಲದಿದ್ದಲ್ಲಿ, ಜೀವನ ನಿಮ್ಮ ಮುಂದಿಡುವ ನಿಬಂಧನೆಗಳನ್ನು ಒಪ್ಪಿಕೊಳ್ಳಲು ನೀವು ಸಿದ್ಧರಿರಬೇಕು" –ಇದು ಇವರ ದೃಢ ನಂಬಿಕೆ.

ಜೂನಿ ಕೆ. ವಿಲ್ಫ್ರೆಡ್

ತೆರೆದ ಮನಸ್ಸಿನ, ನೇರನುಡಿಯ,ಹೋರಾಟ ಪ್ರವೃತ್ತಿಯ ಪ್ರತಿಭಾವಂತ  ಶ್ರೀ ಜೂನಿ ಅವರು  ತಂಡದ ದೃಶ್ಯಮಾಧ್ಯಮದ ಹಾಗು ಪಾರಸ್ಪರಿಕ ಸಂಸರ್ಗದ ವಿನ್ಯಾಸಕಾರರು.ಪ್ರಚಂಡ ಓದುಗುಳಿಯಾದ ಇವರ ಇತರ ಆಸಕ್ತಿಗಳು ರೇಖಾಚಿತ್ರ ರಚನೆ,ಚಲನಚಿತ್ರ ವೀಕ್ಷಣೆ, ಸಂಗೀತ ಕೇಳುವುದು ಮತ್ತು ಸೈಕಲ್ ಮೇಲೆ ನಗರ ಪ್ರದಕ್ಷಿಣೆ.ಮಧ್ಯಾನದ ಬಿಡುವಿನ ಕಿರುನಿದ್ದೆ ಹೊಸ ಚೈತನ್ಯ ತರುತ್ತದೆ ಎಂಬುದು ಇವರ ನಂಬಿಕೆ ಅದನ್ನು ಎಂದಿಗೂ ಇವರು ತಪ್ಪಿಸುವುದಿಲ್ಲ.

ಜೈಕುಮಾರ್ ಮರಿಯಪ್ಪ

ಸರಳ,ಸ್ನೇಹಪರ,ಸಜ್ಜನಿಕೆಯ ಹಾಗು ನೇರ ಮಾತಿನ ಶ್ರೀಜೈಕುಮಾರ್ ಅವರು ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್ನ ಕನ್ನಡ ವಿಭಾಗದ ಸಂಪಾದಕರಾಗಿದ್ದು ಸಂಪನ್ಮೂಲಗಳ ಆಯ್ಕೆ ಮತ್ತು ಪರಿಶೀಲನೆ ಕಾರ್ಯದಲ್ಲಿ ನಿರತರಾಗಿದ್ದಾರೆ.ಕವಿ, ಸಣ್ಣಕತೆಗಾರ,ಮತ್ತು ಸಾಹಿತ್ಯ ವಿಮರ್ಶಕರಾದ ಇವರಿಗೆ ಭಾಷಾಂತರ ಕ್ಷೇತ್ರದಲ್ಲಿ ವಿವಿಧ  ಕ್ಷೇತ್ರಗಳಲ್ಲಿನ ವಿಶಾಲ ಪರಿಧಿಯ ವಿಷಯ ಸಾಮಾಗ್ರಿಗಳನ್ನು ಭಾಷಾಂತರ ಮಾಡಿದ ಸಮೃದ್ಧ ಅನುಭವ ಇದೆ.ಅಡುಗೆ ಮಾಡುವುದು,ಛಾಯಾಚಿತ್ರ ಗ್ರಹಣ,ಬೋಧನೆ,ಮತ್ತು ವಿಶ್ವ ಮಹಾಕಾವ್ಯಗಳ ಅಧ್ಯಯನ ಇವರ ನೆಚ್ಚಿನ ಹವ್ಯಾಸಗಳು. ಭಾಷೆ ಎಂಬುದು ಅಢ್ಡಗೋಡೆಯಾಗಬಾರದು  ಮಮನುಷ್ಯ ಮನುಷ್ಯರ ನಡುವೆ ಸಂಬಂಧ ಸೇತು ಆಗಬೇಕು ಎಂಬುದು ಇವರ ಆಶಯ.ಕುವೆಂಪು ಅವರು ಸಾರಿದ ವಿಶ್ವಮಾನವ ತತ್ವದಲ್ಲಿ ಅಂದರೆ ಮಾನವನಿರ್ಮಿತ ಅಡ್ಡಗೋಡೆಗಳ ಒಳಗೇ ಸೀಮಿತವಾಗದ ಜಾಗತಿಕವಾಗಿ ನಮ್ಮ ಚೇತನವನ್ನು ತೆರೆದುಕೊಳ್ಳಬೇಕೆಂಬ ತತ್ವದಲ್ಲಿ ಅಪಾರ ನಂಬಿಕೆ.

ದಿವ್ಯಾ ಚೌದರಿ

ತರ್ಕ ಮತ್ತು ವಿವೇಚನೆಯ ಬೆಳಕಿನಲ್ಲಿ ಹೃದಯದ ಕರೆಗೆ ಓ ಗೊಡುವುದು ಶ್ರೀಮತಿ ದಿವ್ಯಾ ಇವರ ಪ್ರಥಮ ಆದ್ಯತೆ.ಭೂಗೋಳ ಶಾಸ್ತ್ರ, ಪ್ರವಾಸ,ಮತ್ತು ಪುಸ್ತಕದೊಳಗಿನ ವಿಶ್ವ ಇವರಿಗೆ ಅತಿಪ್ರಿಯವಾದ ವಿಷಯಗಳು. 'ಟೀಚರ್ ಪ್ಲಸ್' ನ ಸಂಪಾದಕ ಮಂಡಲಿಯ ಸದಸ್ಯರಾದ ದಿವ್ಯಾ ಅವರು ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್ ನ ಇಂಗ್ಲಿಷ್ ವಿಭಾಗದ ಸಂಪಾದಕರಾಗಿ ವಿಷಯ ಸಂಪನ್ಮೂಲಗಳನ್ನು ಆರಿಸುತ್ತಾರೆ ಮತ್ತು ಅವುಗಳ ಪರಿಶೀಲನೆ ಮಾಡುತ್ತಾರೆ ಹಾಗು ಇತರೆ ಸಂಪನ್ಮೂಲ ಸಹಭಾಗಿಗಳ ಜೊತೆಗೆ ಸಮನ್ವಯ ನಡೆಸುತ್ತಾರೆ." ಉತ್ತಮವಾದದ್ದನ್ನಲ್ಲದೆ ಬೇರಾವುದೂ ಬೇಡ ಎಂದು ನಿರಾಕರಿಸಿದರೆ, ಎಷ್ಟೋಬಾರಿ ಅವು ಸಿಕ್ಕಿಬಿಡುತ್ತವೆ " ಎಂಬ ಸೊಮರಸೆಟ್ ಮಾಮ್ ಅವರು ಜೀವನ ಕುರಿತು ಹೇಳಿದ ಮಾತು"ಅಕ್ಷರಶಃ ನಿಜ"ಎನ್ನುತ್ತಾರೆ ದಿವ್ಯಾ.

ನಾಗರಾಜು

ಕಟೀಬದ್ಧರಾಗಿ ಶ್ರಮಪಟ್ಟು ದುಡಿಯುವ ಮತ್ತು ಹೊಸಹೊಸ ವಿಷಯಗಳನ್ನು ಕಲಿಯಲು ಸದಾ ತೆರೆದ ಮನಸ್ಸಿನವರಾದ  ಶ್ರೀ ನಾಗರಾಜು ಅವರು ತೆಲುಗು ವಿಭಾಗದ ಸಂಪಾದಕರು.ಮಕ್ಕಳ ಚಿಕ್ಕಂದಿನ ಬೆಳವಣಿಗೆ ಮತ್ತು ಮೌಲ್ಯಮಾಪನದ ಬಗ್ಗೆ ಬಹಳ ಆಳವಾಗಿ ಆಸಕ್ತಿ ಹೊಂದಿರುತ್ತಾರೆ.ಸಂಗೀತ ಮತ್ತು ಅಂಚೆ ಚೀಟಿ ಸಂಗ್ರಹಣೆ ಇವರ ಇತರ  ಆಸಕ್ತಿಗಳು.ಟೀಚರ್ಸ್ ಆಫ್ ಇಂಡಿಯಾ ವೇದಿಕೆಯನ್ನು ಶಿಕ್ಷಣ ಕ್ಷೇತ್ರದ ಗೂಗಲ್ ಮಟ್ಟಕ್ಕೆ ತರಬೆಕೆಂಬುದು ಇವರ ಕಟ್ಟಾಸೆ.ಜೀವನದಲ್ಲಿ ಇವರು ಹೊಂದಿರುವ ಸರಳ ತತ್ವವೆಂದರೆ"ಇತರರನ್ನುಸದಾ ಹಸನ್ಮುಖಿಯಾಗಿಡಲು ಶ್ರಮಿಸುವುದು".

ನಿತಿನ್

ಸದಾ ಲವಲವಿಕೆಯ,ಉತ್ಸಾಹದ ಚಿಲುಮೆಯಾದ ನಿತಿನ್ ದೃಢ ಮನಸ್ಸಿನವರು ಮತ್ತು ಮೃದುಸ್ವಭಾವಿಗಳು. ಇವರು ಪೋರ್ಟಲ್ ಗಾಗಿ ಕಲಿಕಾ ಸಂಪನ್ಮೂಲಗಳು,ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು, ಶಿಕ್ಷಕಾಭಿವೃದ್ಧಿ ವ್ಯಾಸಂಗ ಕ್ರಮಗಳು ಶಾಲಾ ಮತ್ತು ಶಿಕ್ಷಕ ಶಿಕ್ಷಣ ಕುರಿತ ಸಂಶೋಧನೆಗಳನ್ನು ತಯಾರಿಸುವುದಲ್ಲಿ   ನಿರತರಾಗಿದ್ದಾರೆ. ಪ್ರವಾಸ ಮತ್ತು ಸೈಕಲ್ ಪ್ರಯಾಣ ಇವರ ಬಲು ಇಷ್ಟದ ವಿಷಯಗಳು. ಸೈಕಲ್ ಮೇಲೆ ವಿಶ್ವಪರ್ಯಟನೆ ಮಾಡಬೇಕೆಂಬುದು ಇವರ ನೆಚ್ಚಿನ ಕನಸು. "ಇದಿಲ್ಲದೇ ನಾನು ಬದುಕಬಲ್ಲೆ ಎಂದು ಒಬ್ಬ ವ್ಯಕ್ತಿ ಎಷ್ಟು ವಿಷಯಗಳನ್ನು ಬಿಡಬಲ್ಲನೋ ಅದರ ಮೇಲೆ ಆ ವ್ಯಕ್ತಿಯ ಶ್ರೀಮಂತಿಕೆಯನ್ನು ಅಳೆಯಬೇಕು" ಎಂಬ ಹೆನ್ರಿ ಡೇವಿಡ್ ಥೋರೊ ಅವರ ಮಾತುಗಳು ನಿತಿನ್ ಗೆ ಬಹಳ ಪ್ರಿಯ.

ನಿರಾಗ್ ಧವೆ

 

ಆಶಾವಾದಿ,ಚೈತನ್ಯ ಶೀಲ,ಸದಾ ಹಸನ್ಮುಖಿ  ನಿರಾಗ್ ಅವರ ಮುಕ್ತ ಗಟ್ಟಿನಗು ಕಛೇರಿಯ ಕಟ್ಟಡವನ್ನು ನಿನದಿಸುವುದೇ ಅಲ್ಲದೆ ಸ್ನೇಹ ಬಾಂಧವ್ಯದ ಸೇತು ಸಹ ಆಗಿರುತ್ತದೆ. ನಿರಾಗ್ ಅವರು ಯೋಗ ಪರಿಣಿತರು.ಇತರರಿಗೂ ಅದನ್ನು ಹೇಳಿಕೊಡುವುದರಲ್ಲಿ ಬಹಳ ಸಂತೋಷಪಡುತ್ತಾರೆ. "ಸದಾ ಆತ್ಮ ವಿಶ್ವಾಸವಿರಲಿ" ಎಂಬುದು ಇವರ ಜೀವನದ ತಾರಕಮಂತ್ರ. ನಿರಾಗ್ ಅವರು ಈ ಪೋರ್ಟಲ್ನ ಯೋಜನಾ ಸಮನ್ವಯಕಾರರಾಗಿದ್ದರು ಹಾಗೆಯೆ ಪೋರ್ಟಲ್ನ ತಾಂತ್ರಿಕ ಮತ್ತು ಹಣಕಾಸು ಸಂಬಂಧಿ ವಿಷಯಗಳನ್ನೂ ನೋಡಿಕೊಳ್ಳುತ್ತಿದ್ದರು.

ಪೂಜಾ

ತೆಳ್ಳಗೆ ತೇಲುತ್ತಾ ಬರುವ ಪೂಜಾ ಹೀರನಂದಾನಿ ಅವರು ಕವಿತೆಯಷ್ಟೇ ಕಂಪ್ಯೂಟರ್ ಕೋಡ್ ಅನ್ನೂ ಬರೆಯುವುದರಲ್ಲಿ ನಿಷ್ಣಾತರು. ಮರೆತು ಮರೆಯಾದ ಹಾಲಿವುಡ್ ಸಿನಿಮಾಗಳ ಸಂಗ್ರಹಣೆ, ನವನವೀನ ವಸ್ತುಗಳು ಪಿಂಗಾಣಿ ಮಗ್ ಗಳ ಸಂಗ್ರಹಣೆಗಳು ಇವರ ನೆಚ್ಚಿನ ಹವ್ಯಾಸ. ಸಾಮಾಜಿಕ ರಂಗದಲ್ಲಿ ಬಾಲಕಾರ್ಮಿಕರು ,ಶಿಕ್ಷಣ ಕ್ಷೇತ್ರ ಮತ್ತು ನಗರದ ಬಡವರ್ಗಗಳ ಪುರೋಭಿವೃದ್ಧಿಯ ಕಾರ್ಯದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವುದೇ ಅಲ್ಲದೇ ಆ ಸಮಸ್ಯೆಗಳನ್ನು ಕುರಿತು ಗಂಭೀರ ಚಿಂತನೆಗಳನ್ನು ನಡೆಸುತ್ತಾರೆ. ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್ನಲ್ಲಿ ಇವರು ಬಳಕೆದಾರ ಸಂಶೋಧನೆ ಹಾಗು ತಂತ್ರಜ್ಞಾನ ಕ್ಷೇತ್ರ ದಲ್ಲಿ ಕಾರ್ಯ ನಿರತರಾಗಿರುತ್ತಾರೆ.

ಮುಜಾಹಿದ್

ಚೈತನ್ಯ ಶೀಲ ಮತ್ತು ಪ್ರತಿಭಾವಂತ ಶ್ರೀಮುಜಾಹಿದ್ ಅವರು ತಂಡದ ಶೈಕ್ಷಣಿಕ ತಂತ್ರಜ್ಞಾನಿ.  ಶಿಕ್ಷಣದಲ್ಲಿ ಜನರಿಗೆ ನಿಲುಕುವ ತಂತ್ರಜ್ಞಾನವನ್ನು ಕಂಡುಹಿಡಿಯುವ,ರೂಪಿಸುವ ಮತ್ತು ಪರಿಕಲ್ಪಿಸುವ ಕ್ಷೇತ್ರದಲ್ಲಿ ಇವರು ಕಾರ್ಯನಿರತರಾಗಿದ್ದಾರೆ. ಬಳಕೆದಾರರಿಗೆ ಸಂಬಂಧಪಟ್ಟಂತೆ ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್ ನ ಬಳಕೆ ಸಾಮರ್ಥ್ಯ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸುವ ದಿಶೆಯಲ್ಲಿ ನಿರಂತರ ಬೆಂಬಲವನ್ನು ಇವರು ನೀಡುತ್ತಿದ್ದಾರೆ.ಅದರಲ್ಲೂ ಮೊಬೈಲ್ ತಂತ್ರಜ್ಞಾನವನ್ನು ಶಿಕ್ಷಣಕ್ಕೆ ಅಳವಡಿಸಿಕೊಳ್ಳುವ ಬಗ್ಗೆ ಕೆಲಸದಲ್ಲಿ ನಿರತರಾಗಿದ್ದಾರೆ. ಸಾಮಾಜಿಕ ಮತ್ತು ತಂತ್ರಜ್ಙಾನ ಕ್ಷೇತ್ರದಲ್ಲಿ ಸೈದ್ಧಾಂತಿಕ ಪ್ರಯೋಗಶೀಲ ಮತ್ತು ಉದಾರಿ ಸಂಪ್ರದಾಯವಾದಿ ಆದ ಮುಜಾಹಿದ್ ಅವರ ಹವ್ಯಾಸವೆಂದರೆ ಓದುವುದು, ಅಡುಗೆ ಮಾಡುವುದು ಪ್ರವಾಸ ಹೊಸ ಹೊಸ ಕ್ಷೇತ್ರ ಹೊಸ ಸಂಸ್ಕೃತಿ ಅನ್ವೇಷಣೆ."ನಿನ್ನಂತೆ ನೀನಾಗು ಬೇರೆಲ್ಲ ಬಗೆಗಳನ್ನು ಇತರರು ತೆಗೆದುಕೊಂಡುಬಿಟ್ಟಿದ್ದಾರೆ." ಎಂಬುದು ಬದುಕಿನ ಬಗ್ಗೆ ಮುಜಾಹಿದ್ ಅವರ ಚಾಟುನುಡಿ.

ರಮಣಿಕ್ ಮೋಹನ್

ಶ್ರೀ ರಮಣಿಕ್ ಮೋಹನ್ ಅವರು ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್ ನ ಹಿಂದಿ ವಿಭಾಗದ ಸಂಪಾದಕ ವರ್ಗದಲ್ಲಿ ಒಬ್ಬರು. ಇವರು ಪೋರ್ಟಲ್ಗಾಗಿ ಸಂಪನ್ಮೂಲಗಳನ್ನು ಗುರುತಿಸುತ್ತಾರೆ (ಕೆಲವೊಮ್ಮೆ ರಚಿಸುತ್ತಾರೆ ಕೂಡ) ಮತ್ತು ಅವುಗಳ ಪರಿಶೀಲನೆ  ಮಾಡುತ್ತಾರೆ ಭಾಷಾಂತರ ಮಾಡುತ್ತಾರೆ ಹಾಗು ಸಂಪನ್ಮೂಲಗಳ ಸಂಪಾದನೆಯ ಕಾರ್ಯವನ್ನು ಪೋರ್ಟಲ್ ನಿರೀಕ್ಷಿಸುವ ಗುಣಮಟ್ಟದಲ್ಲಿ ಮಾಡುತ್ತಾರೆ.ಇಂಗ್ಲಿಷ್ ಸಾಹಿತ್ಯದಲ್ಲಿ ಡಾಕ್ಟೋರೇಟ್ ಪದವಿಪಡೆದ ಶ್ರೀ ರಮಣಿಕ್ ಅವರು ಹೊಸ ಕ್ಷೇತ್ರಗಳ ಅನ್ವೇಷಣೆ ಮಾಡುವುದಕ್ಕಾಗಿ ಸ್ವಯಿಚ್ಛಾ ನಿವೃತ್ತಿ ಪಡೆಯುವ ಮೊದಲು 25 ವರ್ಷಗಳು ಕಾಲೇಜು ಒಂದರಲ್ಲಿ ಅಧ್ಯಾಪನ ಮಾಡಿದ್ದಾರೆ.ಪ್ರಗತಿಪರ ವಿಷಯಗಳ ಬಗ್ಗೆ ಸಾಮಾಜಿಕವಾಗಿ ಬದ್ಧರಾದ ಇವರು ಭಾರತ ಮತ್ತು ಪಾಕಿಸ್ತಾನಗಳ ಪ್ರಜೆಗಳ ನಡುವೆ ನೇರ ಸಂಪರ್ಕ ಇರಬೇಕೆಂದು ವಾದಿಸುವ ಶ್ರೀಯುತರು ಈ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ದುಡಿಯುತ್ತಿದ್ದಾರೆ.ಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಹ ಇವರು ಸಕ್ರಿಯವಾಗಿ ಭಾಗವಹಿಸಿರುತ್ತಾರೆ. 10 ವರ್ಷಗಳ ಕಾಲ ರಾಜ್ಯ ಸಂಪನ್ಮೂಲ ಕೇಂದ್ರ, ಹರಿಯಾಣದಲ್ಲಿ ಒಂದು ತ್ರೈಮಾಸಿಕದ ಸಂಪಾದನೆ ಮಾಡಿರುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ 'ದಿಗಂತರ್'ನಂತಹ ಸಂಸ್ಥೆಯ ಜೊತೆ ಕೆಲಸ ಮಾಡಿರುತ್ತಾರೆ. "ನಿನ್ನ ಸಾಮರ್ಥ್ಯವಿರುವಷ್ಟೂ ದುಡಿ ಮತ್ತು ಸಾಧಿಸು ಮುನ್ನಡೆ" ಎಂಬುದು ಇವರು ನಂಬಿರುವ ಸೂತ್ರ.

ರವಿ ಬಾಬು

ಆತ್ಮವಿಶ್ವಾಸ ಮತ್ತು ಆಶಾವಾದಗಳನ್ನು ಮೈ ಗೂಡಿಸಿಕೊಂಡಿರುವ ಶ್ರೀ ರವಿಬಾಬು ಅವರು ತಂಡದ "ತಾಂತ್ರಿಕ ಸಮಸ್ಯಾ ಪರಿಹಾರಕರು". ಇವರು ಅಂತರಜಾಲ ತಾಣ ಮತ್ತು ಸ್ಥಿರ ಹಾಗು ಚರ ರೇಖಾಚಿತ್ರಗಳನ್ನು ತಯಾರಿಸುತ್ತಾರೆ. ಇಳೆಯರಾಜ ಸಂಗೀತ ಕೇಳುವುದು, 80 ಮತ್ತು 90 ರ ದಶಕದ ಹಳೆಯ ಚಲನ ಚಿತ್ರಗಳನ್ನು ನೋಡುವುದು,ಓದುವುದು ಮತ್ತು ಚೆಸ್ ಆಡುವುದು ಇವರ ನೆಚ್ಚಿನ ಹವ್ಯಾಸಗಳು. ಸದಾ ಸ್ವಯಂ ಸ್ಫೂರ್ತರಾದ ರವಿಬಾಬು ಶ್ರಮಜೀವಿ ಮತ್ತು ವಾರಾಂತ್ಯವನ್ನು ಸುಖಭೋಜನ ಹಾಗು ನೆಮ್ಮದಿಯ ನಿದ್ದೆಯಲ್ಲಿ ಕಳೆಯಲು ಇಚ್ಛಿಸುತ್ತಾರೆ."ತಪ್ಪು ಮಾಡುವುದು ಮಾನವ ಸಹಜ ಆದರೆ ತೀರಾ ಹದಗೆಡಿಸಬೇಕು ಎಂದರೆ ಕಂಪ್ಯೂಟರ್ ಬೇಕೇ ಬೇಕು" ಎಂಬುದು ತಂತ್ರಜ್ಞಾನ ಕುರಿತ ಇವರ ಚಾಟುನುಡಿ.

ರಾಂಜಿ ವಲ್ಲತ್

ಶ್ರೀ ರಾಂಜಿ ವಲ್ಲತ್  ಅವರು ತುಂಬು ಜೀವಂತಿಕೆಯ ಲವಲವಿಕೆಯ ವ್ಯಕ್ತಿ. ಕಾರ್ಪೊರೇಟ್ ಜೀವನ ಮತ್ತು ನಿಜಜೀವನದ ಸಮೃದ್ಧ ಅನುಭವ ಅವರಿಗಿದೆ.ಶಿಕ್ಷಣದ ಬಗ್ಗೆ ಅತೀವ ಆಸಕ್ತಿ ಇರುವ ಇವರು ತಮ್ಮ ಬಿಡುವಿನ ವೇಳೆಯಲ್ಲಿ,  ಗಣಿತ ಅಥವಾ ಭೌತವಿಜ್ಞಾನದ ಸಮಸ್ಯೆಗಳನ್ನು ಪರಿಹರಿಸುತ್ತಿರುತ್ತಾರೆ. ಇಲ್ಲದೆ ಹೋದಲ್ಲಿ ಇತಿಹಾಸ ಅಥವಾ ಪುರಾಣ ಸಂಬಂಧಿ ಕಥೆಗಳನ್ನು  ಓದುವ ಹವ್ಯಾಸದಲ್ಲಿ ನಿರತರಾಗಿರುತ್ತಾರೆ.  ಮಕ್ಕಳಿಗೆ  ಕಥೆ ಹೇಳುವುದು ಅದರಲ್ಲೂ ಅಸಂಬದ್ಧ ಮತ್ತು ಅಸಂಗತ ಕಥೆಗಳನ್ನು ಹೇಳುವುದು  ಇವರಿಗೆ ಬಲು  ಇಷ್ಟ.  ಇಂಥವೇ ಕಥೆಗಳನ್ನುಳ್ಳ  ಒಂದು ಇಂಗ್ಲಿಷ್ ಕೃತಿಯನ್ನು ಇತ್ತೀಚೆಗೆ ಪ್ರಕಟಿಸಿ ಸಾರಸ್ವತಲೋಕಕ್ಕೆ ಪದಾರ್ಪಣ ಮಾಡಿದ್ದಾರೆ. ಪ್ರಸ್ತುತ ಇವರು  ಸಂಸ್ಥೆಯ ಪ್ರಕಾಶನ ತಂಡದ ಮುಖ್ಯಸ್ಥರಾಗಿದ್ದಾರೆ

ರಾಜೇಶ್ ಉತ್ಸಾಹಿ

ಪೊರ್ಟಲ್ನ ತಂಡದ ಹಿಂದಿ ವಿಭಾಗದ ಸಂಪಾದಕರಾಗಿ ಶ್ರೀ ರಾಜೇಶ್ ಅವರು ಸಂಪನ್ಮೂಲ ವಿಷಯಗಳನ್ನು ಆಯ್ಕೆ ಮಾಡುತ್ತಾರೆ,ಸಂಪಾದಿಸುತ್ತಾರೆ ಹಾಗು ಸ್ವತಃ ಸಿದ್ಧಪಡಿಸುತ್ತಾರೆ.ಇತರ ವಿಷಯ ಸಹಭಾಗಿಗಳ ಜೊತೆಗೆ ಸಮನ್ವಯ ನಡೆಸುತ್ತಾರೆ. ವೈಜ್ಞಾನಿಕ ದೃಷ್ಟಿಕೋನ ಹಾಗು ವಿಮರ್ಶಾತ್ಮಕ ಚಿಂತನ ಪ್ರವೃತ್ತಿ ಇವರದು. ರಾಜೇಶ್ ಅವರು  27 ಕ್ಕೂ ಹೆಚ್ಚು ವರ್ಷಗಳ ಕಾಲ ಏಕಲವ್ಯ  ಸಂಸ್ಥೆಯಲ್ಲಿ ಸಕ್ರಿಯವಾಗಿ ಕೆಲಸಮಾಡಿರುತ್ತಾರೆ ಹಾಗು ಸುಮಾರು 17 ವರ್ಷಗಳ ಕಾಲ "ಚಕ್ಮಕ್". ಎಂಬ ಮಕ್ಕಳ ವಿಜ್ಞಾನ ಪತ್ರಿಕೆಯ  (ಏಕಲವ್ಯ ಅವರ ಪ್ರಕಟಣೆ)ಸಂಪಾದಕರಾಗಿ ದುಡಿದಿರುತ್ತಾರೆ. ಮಧ್ಯ ಪ್ರದೇಶ್ ಸರ್ಕಾರದ ಶಿಕ್ಷಣ ಇಲಾಖೆಯ ಎರಡು ಮ್ಯಾಗಜೈನು ಗಳಾದ ಗುಲ್ಲಕ್ ಮತ್ತು ಪಲಾಶ್ ಗಳನ್ನು ಸಂಪಾದನೆ ಮಾಡಿರುವ ಸಮೃದ್ಧ ಅನುಭವ ಇವರಿಗಿದೆ.ಇವರು ನಳಂದ,ರೂಮ್ ಟು ರೀಡ್ ಹಾಗು  ಮಧ್ಯ ಪ್ರದೇಶ್ ಸರ್ಕಾರದ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಆಗಿರುತ್ತಾರೆ. ತಮ್ಮ ಜೀವನದ ನಿರ್ದಿಷ್ಟಗುರಿಯ ಅರಸುವಿಕೆಯೇ ಇವರ  ಜೀವನದ ಪರಮ ಧ್ಯೇಯ.

ರಾಜ್ ಕಿಶೋರ್

ಬಲುಬೇಗನೇ ಎಲ್ಲರನ್ನು ಹೊಂದಿಕೊಳ್ಳುವ, ನೇರ ನುಡಿಯ ಆದರೆ ಕೆಲವೊಮ್ಮೆ ತನ್ನದೇ ಪ್ರಪಂಚದಲ್ಲಿ ಮುಳುಗಿ ಹೋದಂತೆ ಕಾಣುವ ಶ್ರೀರಾಜಕಿಶೋರ್ ತಮ್ಮನ್ನು "ಸ್ವತಂತ್ರ ಸುಧಾರಣಾವಾದಿ" ಎಂದು  ಕರೆದುಕೊಳ್ಳುತ್ತಾರೆ. ವಿಷಯ ತಜ್ಞರಾಗಿ ಇವರು ಪೋರ್ಟಲ್ ಗಾಗಿ ವಿಷಯ ಸಂಪನ್ಮೂಲಗಳನ್ನು ರಚಿಸುತ್ತಾರೆ ಮತ್ತು ಅವುಗಳ ಪರಿಶೀಲನೆ ಕೂಡ ಮಾಡುತ್ತಾರೆ.ವಿಶ್ವದ  ಅತಿ ದೊಡ್ಡ ಸಂಚಾರಿ ವಿಜ್ಞಾನ ವಸ್ತು ಪ್ರದರ್ಶನ ರೈಲಿನಲ್ಲಿ ವಿಜ್ಞಾನ ವಿಷಯ ನಿರೂಪಕರಾಗಿ ಕೆಲಸ ಮಾಡಿರುತ್ತಾರೆ.ಸದರಿ ರೈಲು ಭಾರತಾದ್ಯಂತ ಸಂಚರಿಸಿದ್ದು,ಅದರ ವಿಜ್ಞಾನವನ್ನು ಜನಪ್ರಿಯಗೊಳಿಸುವ ಕಾರ್ಯದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಕೈಯ್ಯಾರೆ ಮಾಡುವ ಚಟುವಟಿಕೆಗಳು ಹಾಗೂ ಪ್ರಾತ್ಯಕ್ಷಿಕೆಗಳನ್ನು ಮಾಡಿತೋರಿಸಿದ್ದಾರೆ.ಚಾರಣ(ಟ್ರೆಕ್ಕಿಂಗ್) ಅಕ್ಷರ ಪಲ್ಲಟಿಸಿ ಹೊಸ ಪದ ಸೃಷ್ಟಿಸುವುದು, ಓದುವುದು ಇವರ ನೆಚ್ಚಿನ ಹವ್ಯಾಸಗಳು.ಎಂಥಾ ನೀರಸ ಚಲನ ಚಿತ್ರವನ್ನೂ ಅನೇಕ ಬಾರಿ ನೋಡಬಲ್ಲ ಸಾಮರ್ಥ್ಯ ಇವರಿಗಿದೆ." ಮಾಡಿನೋಡಿದಾಗಲೇ ಮನನ ಸಾಧ್ಯ" ಎಂಬುದು  ಇವರ ನಂಬಿಕೆ.

ರಾಧ

ಸರಳ ಹಾಗು ಬಿಗುಮಾನರಹಿತ  ರಾಧ ಅವರನ್ನು ಸುಲಭವಾಗಿ ಭೇಟಿ ಮಾಡಬಹುದು ಮತ್ತು ಇತರರ ಮಾತುಗಳನ್ನುಇವರು ಬಲು ಗಮನವಿಟ್ಟು ಕೇಳುತ್ತಾರೆ. ಹಾಸ್ಯ ಪ್ರವೃತ್ತಿ ಮೈಗೂಡಿಸಿಕೊಂಡಿರುವ ಇವರು ಕೆಲಸವಾಗಲಿ, ಆಟವಾಗಲಿ ತಾವು ಮಾಡುವುದೆಲ್ಲದರಲ್ಲೂ ಅತ್ಯುತ್ತಮವಾದದ್ದನ್ನೇ ನೀಡಲು ಬಯಸುತ್ತಾರೆ.. ಕಾಲದ ಒತ್ತಡದಲ್ಲಿ ಕೆಲಸ ಮಾಡಬೇಕಾದ ಸಂದರ್ಭ ಇಲ್ಲದಿರುವಾಗ ರಾಧ ಅವರು ಫೋಟೊಗ್ರಫಿ,ಸಂಗೀತ,ಚಲನಚಿತ್ರ, ವರ್ಲಿ/ಜನಪದಕಲೆ,ಆಶು ನಾಟಕಗಳು ಮತ್ತು ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.ರಾಧ ಅವರು ಶಿಕ್ಷಣ ತಂತ್ರಜ್ಞಾನ ಮತ್ತು ವಿನ್ಯಾಸ ತಂಡದ ಮುಖ್ಯಸ್ಥರಾಗಿದ್ದರು.ಇವರು ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ವಿಶ್ವವಿದ್ಯಾಲಯ ಸಂಪನ್ಮೂಲ ಕೇಂದ್ರದ ಪ್ರಮುಖ ಕಾರ್ಯಕ್ರಮವಾದ ಟೀಚರ್ಸ್ ಆಫ್ ಇಂಡಿಯಾ. ಒ ಆರ್ ಜಿ.-ಇದರ ಲೋಕಾರ್ಪಣೆಯ ಹಿಂದಿನ ರೂವಾರಿಯಾಗಿ ಶ್ರಮಿಸಿದ್ದಾರೆ.

ಶಂಕರನ್

ಹೊಸ ಹೊಸ ಅಲೋಚನೆಗಳ ,ಸೃಜನಾತ್ಮಕ ಪ್ರವೃತ್ತಿಯ  ಶ್ರೀ ಶಂಕರನ್ ಅವರು  ಪೊರ್ಟಲ್ ನ ತಮಿಳು ವಿಭಾಗದ ಸಂಪಾದಕರು. ಭಾಷಾಂತರ ಕಾರರಾಗಿ ಮತ್ತು ಅದರ ಮೌಲ್ಯ ಮಾಪಕರಾಗಿ ಇವರು ನಿಗದಿತ ಪರಿಧಿಯನ್ನೂ ದಾಟಿ ಹೊಸ ಸಂಪನ್ಮೂಲ ವಿಷಯ ಗಳನ್ನು ಅಯ್ಕೆ ಮಾಡಲು ಇಚ್ಛಿಸುತ್ತಾರೆ.  ಭಾಷೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಗುತ್ತಿರುವ ಇತ್ತೀಚಿನ ಬೆಳವಣಿಗೆ ಗಳನ್ನು ಇತರರ ಗಮನಕ್ಕೆ ತರುವುದು ಇವರಿಗೆ ಬಲು ಇಷ್ಟದ ವಿಷಯ. ಪದ್ಯಗಳು, ರೂಪಕ ಸಣ್ಣ ಕತೆಗಳನ್ನು ಹಾಗು ಲೇಖನಗಳನ್ನು ತಮಿಳು ಮತ್ತು ಇಂಗ್ಲಿಷ್ನಲ್ಲಿ ಬರೆಯುವುದು ಇವರ ಇತರ ಹವ್ಯಾಸಗಳು.  ಇವರು ಇ-ಟಚ್ (ಆಂಗ್ಲ) ವಾಯ್ಮೈ(ತಮಿಳ್)  ಎಂಬ ಎರಡು ವಿದ್ಯುನ್ಮಾನ ಪತ್ರಿಕೆಗಳನ್ನು ಸಂಪಾದಿಸುತ್ತಿದ್ದಾರೆ."ಹಾರುವ ಹಕ್ಕಿಯನ್ನು ಪಂಜರದಲ್ಲಿ ಕೂಡಿಡುವುದು ಸರಿಯಲ್ಲ" ಎಂಬುದು ಇವರ ಧೃಡವಾದ ನಂಬಿಕೆ. 

ಶ್ರೀಪರ್ಣ

ಉತ್ತಮ ಕಲ್ಪನಾಶಕ್ತಿ, ಹಾಸ್ಯಪ್ರಜ್ಞೆ ಹಾಗು ಪ್ರತಿಭಟನಾ ಮನೋಭಾವದ ಶ್ರೀಪರ್ಣ ಅವರು ತಂಡದ ವಿಷಯತಜ್ಞರು.ಇವರು ಪೋರ್ಟಲ್ ಗಾಗಿ ಸಂಪನ್ಮೂಲ ರಚಿಸುತ್ತಾರೆ.ದಾಖಲೀಕರಣ ಮತ್ತು ವಿಷಯ ಸಹಭಾಗಿಗಳೊಡನೆ ಸಮನ್ವಯ ಮಾಡುತ್ತಾರೆ. ಓದುವುದು, ಪದ್ಯರಚನೆ, ಪ್ರವಾಸ, ಚಲನಚಿತ್ರವೀಕ್ಷಣೆ, ಸಂಗೀತ ಮತ್ತು ಸುಖಭೋಜನ ಇವರಿಗೆ ಪ್ರಿಯವಾದ ವಿಷಯಗಳು. "ಮುಂಜಾನೆ ಮಸುಕಿದ್ದಾಗಲೂ ಬೆಳಕಿನ ಸಂವೇದನೆ ಪಡೆವ ಹಕ್ಕಿಯೇ ವಿಶ್ವಾಸ"ಎಂಬುದು  ಇವರಿಗೆ ಸ್ಫೂರ್ತಿದಾಯಕ ಸೂಕ್ತಿ.