ಕಲೆ ಮತ್ತು ಮಾನವಿಕಗಳು

ಇದು ಮಾಹಿತಿ ಸಮೃದ್ಧ ಯುಗ.ವಿಜ್ಞಾನ ಕ್ಷೇತ್ರವಂತೂ ಬಲು ವಿಶಾಲವಾಗಿ ಬೆಳೆದಿದೆ. ಆದರೆ ಅದೇನೂ ಒಂದೇ ದಿನದಲ್ಲಿ ಆದದ್ದಲ್ಲ. ಅನೇಕ ವಿಜ್ಞಾನಿಗಳ ಕೂಡು ಚಿಂತನೆ, ಆನ್ವೇಷಣೆ ಮತ್ತು ಪ್ರಯೋಗಗಳಿಂದ ಸತ್ಯಗಳು ಹೊರಹೊಮ್ಮಿವೆ.

ಭೌತಶಾಸ್ತ್ರ ಎಂದರೇನು?

 

ಹಗಲೆಲ್ಲಾ ಇವರು ದಂತವೈದ್ಯರು, ಬಿಡುವಿನಲ್ಲಿ ಅದ್ಭುತ  ವೆಬ್  ಕಾಮಿಕ್ ಕಲಾವಿದರು. ಕಾಮಿಕ್ ಪ್ರಪಂಚದಲ್ಲಿ  ಗ್ರಾಂಟ್ ಸ್ನೈಡರ್ ಅವರಿಗೆ ವಿಶಿಷ್ಟ ಸ್ಥಾನವಿದೆ. ಅವರ ಕುಂಚ ಚಿತ್ರಿಸದ ವಿಷಯವಿಲ್ಲ, ಹೋರಾಟವಿರಲಿ ಕನಸೇ ಇರಲಿ.ಕಲೆಇರಲಿ ಕಲ್ಪನೆ ಇರಲಿ  ಮುಗ್ದ ಮನವಿರಲಿ ಸ್ನಿಗ್ದ ಕವನ ವಿರಲಿ ಎಲ್ಲಾ ಇಲ್ಲಿ ಒಡಮೂಡುತ್ತವೆ.

ಅದರ ಒಂದು ತುಣುಕು ಇಲ್ಲಿದೆ.

ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಗುರುವಿಗೆ ಮಹತ್ವವಾದ ಸ್ಥಾನವಿದೆ. ಆ ದಿನದ ಗುರುಗಳು ಯಾವ ಕಾರಣದಿಂದ ಆದರ್ಶರಾಗಿದ್ದಾರೋ, ಇಂದಿಗೂ ಅಂತಹ ಶಿಕ್ಷಕರು ಆದರ್ಶರಾಗಿದ್ದಾರೆ. ಅಂತಹ ಶಿಕ್ಷಕರನ್ನು ನಾವು ಇಂದಿಗೂ ಸ್ಮರಿಸುತ್ತೇವೆ. ಮಕ್ಕಳ ಮೇಲೆ ಪ್ರಭಾವ ಬೀರುವ ಶಿಕ್ಷಕರನ್ನು ಸಮಾಜ ಇಂದಿಗೂ ಗೌರವಿಸುತ್ತದೆ.

ಶಿಕ್ಷಕ ದಿನಾಚರಣೆಯ ಹಿನ್ನೆಲೆಯಲ್ಲಿ ಹೊರಬಂದ- ಚೈತನ್ಯಪುರವಣಿಯನ್ನು ಇಲ್ಲಿಕೊಡಲಾಗಿದೆ.

ಅದು ೧೯೯೯ನೇ ಇಸವಿ,ಅಕ್ಟೋಬರ್ ೨೦ನೆಯ ತಾರೀಕು. ನಾನು ಪ್ರಶಿಕ್ಷಕನೆಂಬ ನೆಲೆಯಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ ಮೊದಲ ದಿನ. ಯೋಗಾಯೋಗ ಎಂಬಂತೆ ನಾನು ಕಲಿತ ಕಾಲೇಜಿನಲ್ಲಿಯೇ ಅಂದರೆ ಬಿ ಎಡ್ ಮತ್ತು ಎಂ ಎಡ್ ವ್ಯಾಸಂಗ ಪೂರೈಸಿದ ಉಡುಪಿಯ ಡಾ ಟಿ ಎಂ ಎ ಪೈ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಉಪನ್ಯಾಸಕನಾಗಿ ನಿಯುಕ್ತನಾದೆ. ಹಿಂದೊಮ್ಮೆ ನಾನಲ್ಲಿ ವಿದ್ಯಾರ್ಥಿ.ಈಗ ನಾನಲ್ಲಿ ಅಧ್ಯಾಪಕ! ನಿಜ ಹೇಳ ಬೇಕೆಂದರೆ ಇದು ನನ್ನಲ್ಲಿ ಯಾವುದೇ ಬಗೆಯ ಪುಳಕವನ್ನುಂಟು ಮಾಡಲಿಲ್ಲ. ಬದಲಿಗೆ ಸಾಕಷ್ಟು ಆತಂಕ,ಉದ್ವೇಗ,ಭಯವನ್ನುಂಟು ಮಾಡಿತ್ತು.ಓರ್ವ ವಿದ್ಯಾರ್ಥಿಯಾಗಿ ಕಲಿಸಿದ ಅಧ್ಯಾಪಕರೊಡನೆ ಬೆರೆಯುವುದು ಬೇರೆ.

ಸಂದರ್ಶನದ ಮೂಲಕ ವ್ಯಕ್ತಿ ಚಿತ್ರ ಕಟ್ಟಿಕೊಡುವ ಬುತ್ತಿ ಸೆಪ್ಟಂಬರ್ ಸಂಚಿಕೆ ಹೊರಬಂದಿದೆ.

 ಬಯಲು ಪತ್ರಿಕೆಯ ಈ ಆವೃತ್ತಿಯನ್ನು ಪ್ರಕಟಿಸಲು ಅವಕಾಶ ದೊರೆತದ್ದಕ್ಕಾಗಿ ಮಂಡ್ಯ ಜಿಲ್ಲಾ ಸಂಸ್ಥೆಯ ಇಡೀ ತಂಡಕ್ಕೆ ಬಹಳ ಸಂತೋಷ ಆಗಿದೆ. ಸರದಿಯ ಮೇಲೆ ಪ್ರತಿ ಮಾಸಿಕ ಆವೃತ್ತಿಯನ್ನು  ಪ್ರಕಟಿಸಲು ಅವಕಾಶ ನೀಡುವುದು  ನಿಜಕ್ಕೂ  ಒಂದು ಅದ್ಭುತ ಕಲ್ಪನೆ ಆಗಿದೆ.ಈ ತಿಂಗಳ  ಶಿಕ್ಷಕರು ದಿನಕ್ಕೆ ಲೇಖನಗಳ ವಸ್ತು ವಿಷಯವಾಗಿ "ನನ್ನ ನೆಚ್ಚಿನ ಶಿಕ್ಷಕರು "  ವಿಷಯವನ್ನುಆಯ್ಕೆ ಮಾಡಲಾಯಿತು. ಈ ಸೂಕ್ತ ಥೀಮ್  ನಿಂದ ಸ್ಫೂರ್ತ ರಾದ ಲೇಖಕರು ತಮ್ಮ ಅನುಭವ ಮತ್ತು ನೆನಪುಗಳನ್ನುಹಂಚಿಕೊಂಡು  ಬಯಲು ಪತ್ರಿಕೆಯನ್ನು  ಸಮೃದ್ಧಗೊಳಿಸಿದ್ದಾರೆ.-ರವಿಕುಮಾರ್ ಬಿ.ಟಿ.

 

ಗಣಿತದ ಆಯಾಮಗಳು ಒಂದು ಸೌಂದರ್ಯ ಸಂವೇದನೆ ಇಲ್ಲಿದೆ.

ತಾಂತ್ರಿಕತೆ ಎಂದರೆ ನನಗೆ ತುಂಬ ಹೆದರಿಕೆ. ಕೆಲಸ ಮಾಡಲು ಬೇಕಾದ ಯಾವುದೆ ತಂತ್ರಗಳನ್ನು ನಾನು ಕಲಿತದ್ದೇ ಕಡಿಮೆ. ಹಾಗೆ ನೋಡಿದರೆ ಕೈಯಲ್ಲಿ ಬಳಕೆ ಮಾಡುವಂತಹ ವಸ್ತುಗಳನ್ನು ಬಳಸುವ ತಂತ್ರ ನನ್ನ ಕೈಗೆ ಎಟಕಲೇ ಇಲ್ಲ. ಬರವಣಿಗೆಯಿಂದ  ಹಿಡಿದು ಕಂಪ್ಯೂಟಿಂಗ್ ತನಕ ನನ್ನ ಬಳಕೆ ಸೀಮಿತವಾದುದು. ಅಕ್ಷರಗಳು ಚನ್ನಾಗಿಲ್ಲ ಎಂದು ಶಾಲೆಯಲ್ಲಿ ಅನೇಕ ಸಲ ಶಿಕ್ಷಕರು ನನ್ನ ಕೈಗೆ ಹೊಡೆದದ್ದಿದೆ. ಅವರು ಎಷ್ಟೇ ಹೊಡೆದರು ಮುದ್ದಾದ ಅಕ್ಷರಗಳು ನನ್ನ ಕೈಯಿಂದ ಹೊರಡಲೇ ಇಲ್ಲ. ಆ! ನನ್ನ ಬರವಣಿಗೆ ಸ್ವಲ್ಪವಾದರು ಉತ್ತಮವಾದದ್ದು ಸುಗಂಧಿ ಎಂಬ 8ನೇ ಕ್ಲಾಸಿನ ಶಿಕ್ಷಕಿಯಿಂದ. ಆ ಶಿಕ್ಷಕಿ ನನ್ನನ್ನು ಕಾಪಿ ಬರೆಸುವುದಾಗಲೀ, ಅಕ್ಷರ ತಿದ್ದಿಸಿದ್ದಾಗಲಿ, ಇಂತಹ ಯಾವುದೇ ಅಭ್ಯಾಸ ಮಾಡಿಸಿದ್ದು ನನಗೆ ನೆನಪಿಲ್ಲ.

ಈ ತಿಂಗಳ ಬಯಲು ಸಂಚಿಕೆಯ  ವಿಷಯ "ಬಿತ್ತನೆ" ಆಗಿದೆ. ನಮ್ಮ ಅನೇಕ ಸದಸ್ಯರು ಈ ಸಂಚಿಕೆಗೆ  ಕೊಡುಗೆ ನೀಡಿ  ಅದನ್ನು ಸಮೃದ್ಧಗೊಳಿಸಿದ್ದಾರೆ.

ಪುಟಗಳು(_e):

19226 ನೊಂದಾಯಿತ ಬಳಕೆದಾರರು
7452 ಸಂಪನ್ಮೂಲಗಳು