ಶಿಕ್ಷಕಾಭಿವೃದ್ಧಿ

ಶಾಲೆ ಪ್ರಾರಂಭವಾಗಿ ಒಂದು ತಿಂಗಳು ಕಳೆದಿತ್ತು, ಎಸ್ ಎನ್ನುವ ವಿದ್ಯಾರ್ಥಿನಿಗೆ ತಾನು ಹೇಳುತ್ತಿರುವ ಯಾವುದೇ ವಿಷಯವೂ ಅರ್ಥವಾಗುತ್ತಿಲ್ಲ, ಅವಳಿಗೆ ಹೇಳಿಕೊಡುವುದು ಹೇಗೆ ಎಂದು ನನಗೆ ತಿಳಿಯುತ್ತಿಲ್ಲ ಎಂದು ಯುಕೆಜಿ ಶಿಕ್ಷಕರಾದ ಶೀಮತಿ ಜಿ, ಬಹಳ ಚಿಂತೆಗೆ ಒಳಗಾಗಿದ್ದರು.

 
ಸಾಮಾಜಿಕ ನ್ಯಾಯಕ್ಕೆ ಉತ್ತೇಜನ ಕೊಡುವ ಉದ್ದೇಶದಲ್ಲಿ ಶಿಕ್ಷಕರನ್ನು ಸಿದ್ಧಗೊಳಿಸುವುದು ಒಂದು ಚೈತನ್ಯ ರಥ ಆಗಬಲ್ಲುದು (ಹಾನ್‌ಸೆನ್ ೨೦೦೮). ಸಾಮಾಜಿಕ ನ್ಯಾಯವು ತಾತ್ವಿಕವಾಗಿ ಪರ ವಿರೋಧ ಒಡ್ಡುವ ಮತ್ತು ಪ್ರಮಾಣಕ ಗುಣ ಸ್ಥಾಪಕ ಪರಿಕಲ್ಪನೆಯಾಗಿದೆ. (ಗುಡ್‌ಲಾಡ್,೨೦೦೨). ಆದರೆ ರಾಲ್ಸ್ ಹೇಳುವಂತೆ ನ್ಯಾಯವು ಸಾಮಾಜಿಕ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ (ರಾಲ್ಸ್ ೧೯೭೧ ಪು.೩). ನೊವಾಕ್ (೨೦೦೦) ಅವರೂ ಸಾಮಾಜಿಕ ನ್ಯಾಯವು ವ್ಯಕ್ತಿಯೊಬ್ಬನ ಆಲೋಚನಾತ್ಮಕ ಮತ್ತು ಪರ್ಯಾಲೋಚಕ ಕ್ರಿಯೆಗಳಿಗೆ ಆರೋಪಿಸಬಹುದಾದ ಕರ್ತವ್ಯ ಎಂದು ವಾದಿಸುತ್ತಾರೆ (ಗ್ರಾಂಟ್ ಮತ್ತು ಅಗಸ್ಟೊ , ೨೦೦೮ ಪು.೯೮ ರಲ್ಲಿ ಉಲ್ಲಿಖಿತವಾಗಿದೆ).  
 

ಹಾಂಗ್‌ಕಾಂಗ್‌ನಲ್ಲಿ ಕಂಡ ಒಂದು ಮೀನಿನ ಕಥೆ
ಅನುರಾಧ ನಾಯ್ಡು

ಹಳ್ಳಿ ವಾತಾವರಣ ಯಾರಿಗೆ ಇಷ್ಟವಾಗಲ್ಲ ತಾನೆ? ಅದರಲ್ಲೂ ಎಳೆ ವಯಸ್ಸಲ್ಲಿ ಮತ್ತು ಇಳಿ ವಯಸ್ಸಲ್ಲಿ ತುಂಬಾನೆ ನೆನಪಾಗುವ ಮತ್ತು ಒಂದಷ್ಟು ಸಮಯ ವಿನಿಯೋಗಿಸಬೇಕು ಅನ್ನುವ ಸುಂದರವಾದ ಜಾಗ ಅದು. ನಾನು ಹುಟ್ಟಿ ಬೆಳೆದಿದ್ದು ಹಳ್ಳಿಯಲ್ಲೇ ಆದರೂ ನನಗೇಕೂ ಇತ್ತೀಚೆಗೆ ಅತ್ತ ಕಡೆ ಹೋಗಬೇಕೆಂದು ತುಂಬಾನೆ ಹಾತೊರೆಯುವಂತಾಗುತ್ತಿಲ್ಲ.. ಅದಕ್ಕೆ ನಾನಿರುವ ಪಟ್ಟಣ ಕಾರಣವೇ ಅಥವಾ ಆ ಹಳ್ಳಿ ವಾತಾವರಣ ನನ್ನ ಕರೆಯುತ್ತಿಲ್ಲವೇ ಒಂದಷ್ಟುಯೋಚಿಸುತ್ತಿದ್ದೇನೆ.

 

ಓದುವ ತಂತ್ರಗಳನ್ನು ಕುರಿತು ಅನೇಕ ಲೇಖನಗಳನ್ನು ಬರೆಯಲಾಗಿದೆ ಆದರೆ ಓದುವುದರ ಮೌಲ್ಯಮಾಪನವನ್ನು ಕುರಿತು ಮತ್ತು ಅದು ಸಾಕ್ಷರತೆಯನ್ನು ಹೇಗೆ ಸುಧಾರಿಸುತ್ತದೆ ಎಂಬುದರ ಬಗ್ಗೆ ಹೆಚ್ಚು ಬರೆಯಲಾಗಿಲ್ಲ. ಇದನ್ನೇ ಮನಸ್ಸಿನಲ್ಲಿಟ್ಟು ಕೊಂಡು, ನಬಿನಿತಾ ದೇಶ್ ಮುಖ್ ಅವರು ವಿದ್ಯಾರ್ಥಿಗಳ ಓದುವ ಮಟ್ಟವನ್ನು ಹೆಚ್ಚಿಸಲು ಸುಲಭವಾಗಿ ಬಳಸಬಹುದಾದ ಮೌಲ್ಯಮಾಪನ ಕಾರ್ಯತಂತ್ರಗಳನ್ನು ಪ್ರಸ್ತುತಪಡಿಸಲು ಈ ಲೇಖನದಲ್ಲಿ ಪ್ರಯತ್ನಿಸಿದ್ದಾರೆ.

ನಾನು ಎಲ್ಲಿಗೆ ಸೇರಿದವಳು ಎಂದು ನಿರ್ಧರಿಸುವವರು ಯಾರು?
ರಿತಿಕಾ ಚಾವ್ಲಾ

ಇಡೀ ಜೀವ ಸಂಕುಲದಲ್ಲಿ ಮನುಷ್ಯ ಕೂಡ ಒಂದು ಪ್ರಾಣಿ. ಆದರೆ ಅವನು ಎಲ್ಲಾ ಪ್ರಾಣಿಗಳಿಗಿಂತ ಭಿನ್ನವಾದ ಬುದ್ಧಿವಂತ ಪ್ರಾಣಿ ಎಂದು ನಮ್ಮ ವಿಜ್ಞಾನವು ಹೇಳುತ್ತದೆ. ಏಕೆಂದರೆ ಮನುಷ್ಯ ಮತ್ತು ಪ್ರಾಣಿಯ ನಡುವಿನ ಭಿನ್ನತೆಗೆ ಭಾಷೆಯೇ ಒಂದು ಪ್ರಮುಖವಾದ ಕಾರಣ ಎಂದು ಹೇಳಬಹುದು. ಭಾಷೆ ಎಂಬುದು ಒಂದು ಸಂವಹನ ಮಾಧ್ಯಮ. ಅಂದರೆ ನಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಪ್ರಮುಖ ಸಾಧನ ಎಂದು ಹೇಳಬಹುದು. ಇಂದು ಜಗತ್ತಿನಾದ್ಯಂತ ಸಾವಿರಾರು ಭಾಷೆಗಳು ಅಸ್ತಿತ್ವದಲ್ಲಿವೆ. ಅವುಗಳ ಮೂಲಕ ಜನರು ತಮ್ಮ ಮನದ ಇಂಗಿತವನ್ನು ಮತ್ತೊಬ್ಬರಿಗೆ ಮನದಟ್ಟು ಮಾಡುತ್ತಿದ್ದಾರೆ. ಅವು ಬುಡಕಟ್ಟು ಸಮುದಾಯದವರ ಸ್ಥಳೀಯ ಭಾಷೆಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗೆ ಇವೆ.

"ಮಾನವ ಪ್ರಕೃತಿಯ ಕಂದ,ಇದರ ಜೊತೆಗೆ ನಡೆಯುವುದೇ ಚಂದ,ಮೀರಿ ನಡೆದು ಪಡೆದರೆ ವಿಕೃತಾನಂದ.ಪ್ರಕೃತಿ ಮುನಿದು ಜಗದ ತುಂಬೆಲ್ಲಾ ಆಕ್ರಂದ..ಆಕ್ರಂದ"
ಜೂನ್ ೫ ರ ವಿಶ್ವಪರಿಸರ ದಿನದ ಆಚರಣೆಯ ಶುಭಾವಸರದಲ್ಲಿ ಪ್ರಕೃತಿಯ ಜೊತೆ ಸಾಗಲು ಕಂಕಣಬದ್ಧರಾಗೋಣ
"ಪ್ರಕೃತಿಯ ಜೊತೆಗೆ ಮಾನವನ ಬೆಸುಗೆ"

ವಿಜ್ಞಾನ ಕಾರ್ಯಾಗಾರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಸೃಷ್ಟಿಯ ಚಲನ ನಿಶ್ಚಲವಾದರೆ ಆಗುವ ಪರಿಣಾಮಗಳ ಬಗ್ಗೆ ಯೋಚಿಸಿ ಎಂದು ಕಾರ್ಯಾಗಾರದಲ್ಲಿ ಹೇಳಿ ಮನೆಗೆ ಇದೇ ವಿಷಯದ ಬಗೆಗೆ ಯೋಚಿಸುತ್ತಾ ತೆರಳಿದೆ. ರಾತ್ರಿ ಊಟದ ನಂತರ ವಿವಿಧ ಹಣ್ಣುಗಳ ರುಚಿಕರ ಜೇನು ಬೆರತ ಸಲಾಡ್‌ನ್ನು ಭರ್ಜರಿಯಾಗಿ ಸವಿದು ಹಾಗೇ ಹಾಸಿಗೆಗೆ ಜಾರಿದೆ. ನಿದಿರೆ ಆವರಿಸಿದುದೇ ತಿಳಿಯಲಿಲ್ಲ!!!! ಗಾಢವಾದ ನಿದ್ದೆ... ಆಗ ಬೆಳಗಿನ ಜಾವ ಏನೋ? ತಿಳಿಯಲಿಲ್ಲ. ಕಣ್ಣುಜ್ಜುತ್ತಾ ಎದ್ದು ಹೊರಬರುತ್ತಿದ್ದೇನೆ. ಸ್ವಲ್ಪ ಸೂರ್ಯ ರಶ್ಮಿ ಕಂಡಂತಾಯಿತು! ನೋಡು ನೋಡುತ್ತಿದ್ದಂತೆ... ರವಿಕಿರಣ ಭೂಮಿ ತಲುಪಲು ಸಾಧ್ಯವಾಗುತ್ತಿಲ್ಲ! ಅಲ್ಲೇ ಆಕಾಶದಲ್ಲೇ ಸಾಗುವ ದಾರಿಯಲ್ಲೇ ನಿಂತಂತೆ ಗೋಚರಿಸುತ್ತಿದೆ. ಭೂಮಿಯನ್ನೇ ತಲುಪುತ್ತಿಲ್ಲ.

ಊಟದ ಗಂಟೆಯಾಯಿತು. ನನ್ನ ಪಾಟಿ ಚೀಲದಿಂದ ಊಟದ ಡಬ್ಬಿ ತೆಗೆದುಕೊಂಡು ತರಗತಿ ಕೋಣೆಯಿಂದ ಹೊರನಡೆದೆ. ಮೆಟ್ಟಲಿಳಿದು ಸಾಮಾನ್ಯವಾಗಿ ನಾನು ಊಟಕ್ಕೆ ಕುಳಿತುಕೊಳ್ಳುವ ಶೆಡ್ಡಿನ ಹತ್ತಿರ ಹೋಗಿ ಕುಳಿತುಕೊಂಡೆ. ಕಬ್ಬಿಣದ ಸರಳುಗಳ ನಡುವಿನಿಂದ ಆಚೆ ನೋಡುವಾಗ, ನನ್ನ ಕೆಲವು ಸಹಪಾಠಿಗಳು ಹೊರಗೆ ಮರದ ಕೆಳಗೆ ವೃತ್ತಾಕಾರವಾಗಿ ಕುಳಿತುಕೊಂಡಿರುವುದು, ಇನ್ನು ಕೆಲವರು ಮೈದಾನದಲ್ಲಿ ಆಟ ಆಡುತ್ತಿರುವುದು ಕಾಣಿಸುತ್ತದೆ.  ಊಟ ಮುಗಿಸಿ ನಾನು ಕೆಲಸದಾಕೆಯ ಪಕ್ಕ ಹೋಗಿ ಕುಳಿತುಕೊಂಡೆ. ಶಾಲೆಯಲ್ಲಿ ನನಗೆ ಇರುವ ಏಕೈಕ ಸ್ನೇಹಿತೆ ಅಂದರೆ ಇವರು ಮಾತ್ರ. ಅವರು ಕಚೇರಿಯಲ್ಲಿ ಕೆಲಸ ಮಾಡುತ್ತಾರೆ. ನನ್ನನ್ನು ಚುಡಾಯಿಸಲು ಅವರು ನನ್ನನ್ನು ಕರೆಯುವುದು ಶಕ್ತಿಮಾನ್ ಎಂದು. ಅವರು ಹಾಗೆ ಕರೆಯುವುದು ನನಗೆ ಇಷ್ಟ.

ಪುಟಗಳು(_e):

18462 ನೊಂದಾಯಿತ ಬಳಕೆದಾರರು
7223 ಸಂಪನ್ಮೂಲಗಳು