ಶಿಕ್ಷಕಾಭಿವೃದ್ಧಿ

ಬಹುತೇಕ ಮಧ್ಯಮ ವರ್ಗದವರೇ ವಾಸವಾಗಿದ್ದ ವಲಯದಲ್ಲಿದ್ದ ನಾನು ಕಲಿಯುತ್ತಿದ್ದಂತಹ ಶಾಲೆಯಲ್ಲಿನ ವಿದ್ಯಾರ್ಥಿಗಳು ನನ್ನ ನೆರೆಹೊರೆಯವರಾಗಿದ್ದು, ಅವರಲ್ಲಿ ಅನೇಕರ ತಂದೆ ಅಥವಾ ತಾಯಿ ಒಂದೇ ಕಾರ್ಖಾನೆಯಲ್ಲಿ ದುಡಿಯುವವರಾಗಿದ್ದು ನಿರ್ದೇಶಕರಿಂದ ನೆಲಗುಡಿಸುವವನವರೆಗೂ ವಿಭಿನ್ನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು.  ಈ ಶಾಲೆಯಲ್ಲಿ ಕಲಿಯುತ್ತಿದ್ದಾಗಿನ ನನ್ನ ಅನುಭವವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಕಥೆಗಳು ಮತ್ತು ಕಥೆಗಳನ್ನು ಕೇಳುವ ಅಭ್ಯಾಸವು ನಮ್ಮ ಜೀವನ ಮತ್ತು ಸಮಾಜದಿಂದ 

ಅಭಿವ್ಯಕ್ತಿ ಸ್ವಾತಂತ್ರ್ಯದ  ವಸ್ತು ವಿಷಯವನ್ನಿಟ್ಟು ಕೊಂಡು ಈ ಸ್ವಾತಂತ್ರ್ಯ ದಿನಾಚರಣೆಯಂದು ಬಯಲು ಬಳಗದವರು ತಮ್ಮ 60 ನೇ ಸಂಚಿಕೆಯನ್ನು ಹೊರ ತಂದಿದ್ದಾರೆ.ಓದಿ ಆನಂದಿಸಿರಿ.

೨೦೧೪ರ ಶೈಕ್ಷಣಿಕ ವರ್ಷದವರೆಗೆ ಕರ್ನಾಟಕ ಪಠ್ಯ ಪುಸ್ತಕ ಸಮಿತಿ ಕನ್ನಡ ಕಸ್ತೂರಿ ಎಂಬ ಪಠ್ಯಪುಸ್ತಕದ ೯ನೇತರಗತಿಯಲ್ಲಿ ಪರಿಚಯಿಸಿದ ಮೊದಲ ಪಾಠ ಮನಃ ಪರಿವರ್ತನೆ ಇದನ್ನು ಸದಾಶಿವ ಜಂಬಯ್ಯ ನಾಗಲೋಟಿಮಠರವರು ಬರೆದಿದ್ದರು. ಈ ಪಾಠವು ’ಒಬ್ಬ ಶಿಕ್ಷಕರು, ತಡವಾಗಿ ಶಾಲೆಗೆ ಬರುವ ಮಗುವನ್ನು ಬಡಿದು ಬುದ್ಧಿ ಹೇಳುವ ಶಿಕ್ಷಕ ಒಂದು ಕಡೆ, ಮಗು ತನ್ನ ಸಮವಸ್ತ್ರವನ್ನು ಬಿಚ್ಚಿಟ್ಟು ತನ್ನ ಬೆತ್ತಲೆ ಮೈಗೆ ಶಿಕ್ಷಕರಿಂದ ಹೊಡೆಸಿಕೊಳ್ಳುವ ಪ್ರಸಂಗ ಮತ್ತೊಂದು ಕಡೆ. ಇವುಗಳ ಮಧ್ಯೆ ಶಿಕ್ಷಕನಿಗೆ ಬಡತನದ ಪಾಠ ಕಲಿಸುವ ಮಗು, ಆ ಮಗುವಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಶಿಕ್ಷಕ ಮುಂದೆ ತಾನೇ ಸ್ವ-ಇಚ್ಚೆಯಿಂದ ಆ ಮಗುವಿಗೆ ಶಿಕ್ಷಣವನ್ನು ಕೊಡಿಸುತ್ತಾನೆ. ಆ ಹುಡುಗ ಇಂದು ದೊಡ್ಡ ಅಧಿಕಾರಿಯಾಗಿದ್ದಾನೆ’.

ನನ್ನ ವೃತ್ತಿಯ ದೈನಂದಿನ ಕೆಲಸ ಕಾರ್ಯದಲ್ಲಿ ನಾನು ನಿಯತವಾಗಿ  ಶಾಲಾ ಪೂರ್ವಮಕ್ಕಳ ಜೊತೆ ಕೆಲಸ ಮಾಡುವ  ಅಂಗನವಾಡಿ ಶಿಕ್ಷಕರ ಸಂಸರ್ಗದಲ್ಲಿರುತ್ತೇನೆ  ಮತ್ತು ಆ ಮಕ್ಕಳ ಚಟುವಟಿಕೆಯನ್ನು  ನಿಕಟವಾಗಿ ವೀಕ್ಷಿಸಲು ಅವಕಾಶ ನನಗೆ ದೊರೆಯುತ್ತದೆ. ಎಲ್ಲಾ ಮಕ್ಕಳು ಮಾತಿನಿಂದಲೇ ಸಂಭಾಷಣೆ ಮಾಡಲಾರರು. ಈ ಪುಟಾಣಿ ಮಕ್ಕಳು  ಕೆಲವೊಮ್ಮೆ  ಪದಗಳ ಮೂಲಕ ಹೇಳಬಹುದು, ಅಥವಾ ಕೆಲವೊಮ್ಮೆ  ತಾವೇನು ಹೇಳಲು ಬಯಸುತ್ತಾರೋ ಅದರೆಡೆ ಸುಮ್ಮನೆ ನಿಟ್ಟಿಸಿ ನೋಡುತ್ತಿರುತ್ತಾರೆ.ಅದರಿಂದ ಅವರ ಮನಸ್ಸಿನಲ್ಲೇನಿದೆ ಎಂದು ಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ನಮಗೆ ಸಾಧ್ಯವಿಲ್ಲದೇ ಹೋಗಬಹುದು.

ಹಳ್ಳಿ ಹೈದನ ಮುದ್ದಿನ ಶಾಲೆ ಗ್ರಾಮದ ಜನರಿಗೆ ನಲ್ಮೆಯ ಶಾಲೆ  ಅಕ್ಷರ ಕಲಿಕೆಯ ಪಾಠದ ಶಾಲೆ ಮಕ್ಕಳಿಗೊಲಿದ ಜೀವದ ಶಾಲೆ ||
ಹಸಿರನು ಚಾಚಿ ನಿಂತ ಶಾಲೆ  ಉಸಿರಿನ ಪಾಠವ ಮಾಡುವ ಶಾಲೆ ಚಿತ್ರವ ಬಿಡಿಸುವ ಚಪ್ಪರ ಶಾಲೆ  ಓಟವ ಕಲಿಸಿದ ಆಟದ ಶಾಲೆ
ಜೀವನ ಕಲಿಸಿದ ಮುದ್ದಿನ ಶಾಲೆ ||

ಆತ್ಮಸಾಕ್ಷಿ ಮೆಲ್ಲಮೆಲ್ಲನೆ ಉಸುರುವ ಹಸಿ ಹಸಿಯಾದ ಸತ್ಯದ ತುಣುಕು, ಧುತ್ತೆಂದು ಹೊಳೆಯುತ್ತಲೇ ಮಾಯವಾಗುವ ಮಂದಹಾಸದ ಕೋಲ್ಮಿಂಚು, ನನ್ನೊಳಗನ್ನು ನಾ ಬಗೆದು ನೋಡಿದಾಗ ಕೋಶಾವಸ್ಥೆಯಲ್ಲಿರುವ ಹೊಂಗಿರಣ,
ಅಡಿಯಿಂದ ಮುಡಿಯವರೆಗೆ ಎರಕ ಹೊಯ್ದಿಟ್ಟ ಸ್ವಂತಿಕೆಯ ಅಪ್ಪಟ ಛಾಯೆ, ಕೆಣಕುತ್ತಲೇ ಜೂಟಾಟವಾಡುವ ಅಂತರಂಗದ ಕನ್ನಡಿಯ ಪ್ರತಿಬಿಂಬ,,ಅಸ್ತಿತ್ವದ ಹುಡುಕಾಟಕ್ಕೆ, ಅಸ್ಮಿತೆಯ ಮಿಸುಕಾಟಕ್ಕೆ ದೊರೆತ ಅನನ್ಯ ಉತ್ತರ
ಹೆಸರಿಟ್ಟೆ ನಾ ತಣ್ಣಗೆ ಅದಕೆ ಅಭಿವ್ಯಕ್ತಿ !

ಕಲಾಕೃತಿಯ ರಚನೆಯ ಮೂಲಕ ವಿದ್ಯಾರ್ಥಿಗಳು ಹೊಸ ಆಲೋಚನೆಗಳನ್ನು ರಚಿಸಬಹುದು ಮತ್ತು ತಿಳಿಸಬಹುದು. ಕಲಾಕೃತಿಯನ್ನು ನೋಡುವ ಮೂಲಕ, ವಿದ್ಯಾರ್ಥಿಗಳು ಹೊಸ ದಿಕ್ಕುಗಳು ಮತ್ತು ಹೊಸ ಆಲೋಚನೆಗಳಿಂದ ಸ್ಫೂರ್ತಿ ಪಡೆಯಬಹುದು. ಈ ಕರೇನ್ ಹೇಡಾಕ್ ಲೇಖನವನ್ನು ಓದಿ ನೋಡಿ, ಇದರಲ್ಲಿ ವಿಜ್ಞಾನದ ತಲುಪುವ ಮತ್ತು ಕಲಿಕೆಯ ಬಗ್ಗೆ ತನ್ನ ವ್ಯಾಪಕ ಅನುಭವವನ್ನು ಬರೆದಿದ್ದಾರೆ.
 

ಸಾರಾಂಶ

 ಬೆಂಗಳೂರು ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಶಿಕ್ಷಣದ ಪಾತ್ರ ಮಹತ್ತರವಾದದ್ದು. ಶಿಕ್ಷಣದ ಅರ್ಥ, ವ್ಯಾಪ್ತಿ, ಮಹತ್ವ ಇತ್ಯಾದಿಗಳನ್ನು ವ್ಯಾಖ್ಯಾನದ ರೂಪದಲ್ಲಿ ವಿವರಿಸುವ ಒಂದು ವರ್ಗ, ಅದನ್ನು ‘ಪರಿಕಲ್ಪನೆ’ಯ ರೂಪದಲ್ಲಿ ನೋಡುತ್ತಿರುವ ಬಗೆ ಇಂದು ಆಸಕ್ತಿದಾಯಕವಾಗಿದೆ. ಒಂದು ವಿಷಯ ವಸ್ತುವನ್ನು ಅಧ್ಯಯನ ಮಾಡಿ, ಅದರ ಆಳ ಮತ್ತು ಮಹತ್ವವನ್ನು ಅರಿಯುವ ಹಂತದಲ್ಲಿ ಉಂಟಾಗುವ ಜ್ಞಾನವನ್ನು ‘ಶಿಕ್ಷಣ’ ಎಂದು ವ್ಯಾಖ್ಯಾನಿಸುತ್ತಾರೆ. ಅಂದರೆ ಓರ್ವ ವ್ಯಕ್ತಿ ಈಗಾಗಲೇ ಲಭ್ಯವಿರುವ ಜ್ಞಾನಕೋಶಗಳನ್ನು ತಿಳಿಯುವ ಪ್ರಕ್ರಿಯೆಗೆ ಶಿಕ್ಷಣವನ್ನು ಪಡೆಯುತ್ತಿರುವುದಾಗಿ ಹೇಳುತ್ತಾರೆ.

ಪುಟಗಳು(_e):

18462 ನೊಂದಾಯಿತ ಬಳಕೆದಾರರು
7223 ಸಂಪನ್ಮೂಲಗಳು