ಶಿಕ್ಷಕಾಭಿವೃದ್ಧಿ

ನಮ್ಮ ಭಾರತ ದೇಶವು ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀಡುವುದಕ್ಕೆ ಬದ್ಧವಾಗಿದೆ ಎಂಬ ಅಂಶವು ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ (ಆರ್‌ಟಿಇ ೨೦೦೯) ಜಾರಿಗೆ ಬಂದ ನಂತರ ಕಾರ್ಯರೂಪದಲ್ಲಿ ಪ್ರಕಟವಾಗುತ್ತಿದೆ. ಇಂದು ಪ್ರತಿಯೊಂದು ಮಗುವೂ ಗುಣಮಟ್ಟದ ಪ್ರಾಥಮಿಕ ಶಿಕ್ಷಣಕ್ಕೆ ಹಕ್ಕನ್ನು ಹೊಂದಿದೆ. ಯಾವುದೇ ಇಬ್ಬರು ವ್ಯಕ್ತಿಗಳು ಒಂದೇ ರೀತಿ ಇರಲು ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಂಡ ಭಾರತದ ಮೂಲಭೂತ ಶಿಕ್ಷಣ ಪದ್ಧತಿ ಬೇರೆ ಬೇರೆ ಹಿನ್ನೆಲೆಗಳಿಂದ ಬರುವಂತಹ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಅವರ ಅಗತ್ಯಗಳನ್ನು ಪೂರೈಸುವತ್ತ ಸಿದ್ಧತೆಯನ್ನು ನಡೆಸಬೇಕು.

ಮೂಲ ವಿಷಯ: ಭಾಷೆ ಮತ್ತು ಶಿಕ್ಷಣ

ಉಪ ವಿಷಯಗಳು:

೧. ಆರಂಭಿಕ ತರಗತಿಗಳಲ್ಲಿ ಭಾಷೆ ಬೋಧನೆ

೨. ಆರಂಭಿಕ ಹಂತಗಳಲ್ಲಿ ಯಾವ ಭಾಷೆಯನ್ನು ಹೇಗೆ ಬೋಧಿಸಬೇಕು?

೩. ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳಲ್ಲಿ ಭಾಷಾ ಬೋಧನೆ

ಮೂಲ ವಿಷಯ: ಭಾಷೆ ಮತ್ತು ಶಿಕ್ಷಣ

ಉಪ ವಿಷಯಗಳು:

೧. ಆರಂಭಿಕ ತರಗತಿಗಳಲ್ಲಿ ಭಾಷೆ ಬೋಧನೆ

೨. ಆರಂಭಿಕ ಹಂತಗಳಲ್ಲಿ ಯಾವ ಭಾಷೆಯನ್ನು ಹೇಗೆ ಬೋಧಿಸಬೇಕು?

೩. ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳಲ್ಲಿ ಭಾಷಾ ಬೋಧನೆ

 
ಸಾಮಾಜಿಕ ನ್ಯಾಯಕ್ಕೆ ಉತ್ತೇಜನ ಕೊಡುವ ಉದ್ದೇಶದಿಂದ ಶಿಕ್ಷಕರನ್ನು ಸಿದ್ಧಗೊಳಿಸುವುದು ಒಂದು ಚೈತನ್ಯ ರಥ ಆಗಬಲ್ಲುದು (ಹಾನ್‌ಸೆನ್ ೨೦೦೮). ಸಾಮಾಜಿಕ ನ್ಯಾಯವು ತಾತ್ವಿಕವಾಗಿ ಚರ್ಚಿತವಾದ ಮತ್ತು ಪ್ರಮಾಣಕ ಗುಣ ಸ್ಥಾಪಕ ಪರಿಕಲ್ಪನೆಯಾಗಿದೆ. (ಗುಡ್‌ಲಾಡ್,೨೦೦೨). ಆದರೆ ರಾಲ್ಸ್ ಹೇಳುವಂತೆ ನ್ಯಾಯವು ಸಾಮಾಜಿಕ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ (ರಾಲ್ಸ್ ೧೯೭೧ ಪು.೩). ನೊವಾಕ್ (೨೦೦೦) ಅವರೂ ಸಾಮಾಜಿಕ ನ್ಯಾಯವು ವ್ಯಕ್ತಿಯೊಬ್ಬನ ಚಿಂತನಶೀಲ ಮತ್ತು ಪರ್ಯಾಲೋಚಕ ಕ್ರಿಯೆಗಳಿಗೆ ಆರೋಪಿಸಬಹುದಾದ ಕರ್ತವ್ಯ ಎಂದು ವಾದಿಸುತ್ತಾರೆ (ಗ್ರಾಂಟ್ ಮತ್ತು ಅಗಸ್ಟೊ , ೨೦೦೮ ಪು.೯೮ ರಲ್ಲಿ ಉಲ್ಲಿಖಿತವಾಗಿದೆ).  
 
 
ನಾನು ಎಲ್ಲಿಗೆ ಸೇರಿದವಳು ಎಂದು ನಿರ್ಧರಿಸುವವರು ಯಾರು? 
ರಿತಿಕಾ ಚಾವ್ಲಾ 
 
ಶಿಕ್ಷಣ, ಶೈಕ್ಷಣಿಕ ವ್ಯವಸ್ಥೆ, ಶಿಕ್ಷಕರು, ಶಿಕ್ಷಕರ ಶಿಕ್ಷಣ, ವ್ಯವಸ್ಥೆ ಯಲ್ಲಾಗಬೇಕಾದ ಬದಲಾವಣೆಗಳೇನು ಮುಂತಾದ ವಿಚಾರಗಳ ಬಗ್ಗೆ ಆಜೀಂ ಪ್ರೇಮ್ ಜಿ ವಿವಿಯ ಡಾ. ಇಂದಿರಾ ಜಯಸಿಂಹ ಸುವರ್ಣ ನ್ಯೂಸ್. ಕಾಂ ಜತೆ ಮುಕ್ತವಾಗಿ ಮಾತನಾಡಿದ್ದಾರೆ.
ಶಿಕ್ಷಕಿಯಾಗಿ ತಮ್ಮ ವೃತ್ತಿಜೀವನ್ನು ಆರಂಭಿಸಿದ ಇಂದಿರಾ ಅವರು, ಶಿಕ್ಷಣ, ಶಿಕ್ಷಕರ ಶಿಕ್ಷಣದ ಬಗ್ಗೆ ಅಪಾರ ಅಧ್ಯಯನ, ಸಂಶೋಧನೆಗಳನ್ನು ನಡೆಸಿದ್ದಾರೆ. ಶಿಕ್ಷಕರ ದಿನ ಶಿಕ್ಷಕರ ಬಗ್ಗೆ ಡಾ. ಇಂದಿರಾ ಜಯಸಿಂಹ ಸುವರ್ಣ ನ್ಯೂಸ್. ಕಾಂ ಜತೆ ಹೇಳಿದ್ದಿಷ್ಟು...
 

ಇಂಗ್ಲಿಷ್ ಭಾಷೆಯಲ್ಲಿ ಒಂದೇ ವಾಕ್ಯವನ್ನು ೩೦ ವಿಧದಲ್ಲಿ ಹೇಳುವುದನ್ನು ಕನ್ನಡದಲ್ಲಿ ಹೇಳಿಕೊಡುವ ಪಾಠ ಇಲ್ಲಿದೆ,

ಮಹಿಳೆಯನ್ನು ವಸ್ತು ವಿಷಯ ವಾಗಿರಿಸಿಕೊಂಡು  ನಿಮ್ಮ ಸೃಜನಶೀಲ ಪ್ರವೃತ್ತಿಯನ್ನು ಪ್ರಚೋದಿಸುವಂತೆ ಈ ಸಂಚಿಕೆ ಮೂಡಿ ಬಂದಿದೆ.

ಪುಟಗಳು(_e):

16850 ನೊಂದಾಯಿತ ಬಳಕೆದಾರರು
6609 ಸಂಪನ್ಮೂಲಗಳು