ತರಗತಿ ಸಂಪನ್ಮೂಲ

ಮುನ್ನುಡಿ
ಅಸಮರ್ಥತೆಯನ್ನು ಧರ್ಮದ ಆಯಾಮ ನೀಡಿ ಹಿಂದಿನ ಜನ್ಮದ ಅಥವಾ ಇಂದಿನ ಯಾವುದೋ ಪಾಪಕ್ಕೆ ದೇವರು ಕೊಟ್ಟ ಶಿಕ್ಷೆಯೆಂದು ಭಾವಿಸುವ ಒಂದು ಸಮಾಜದಲ್ಲಿ ಅಸಮರ್ಥರನ್ನು ಮುಖ್ಯವಾಹಿನಿಯಲ್ಲಿ  ಸೇರಿಸಿಕೊಳ್ಳುವುದು ನಿಜಕ್ಕೂ ಒಂದು ದೊಡ್ಡ ಪ್ರಕ್ರಿಯೆ. ಸಾಮಾನ್ಯವಾಗಿ ಅವರಿಗೂ ಹಕ್ಕುಗಳಿವೆ ಎಂಬ ದೃಷ್ಟಿಕೋನಕ್ಕೆ ಬದಲಾಗಿ ಸಹಾನುಭೂತಿ ಅಥವಾ ಅನುಕಂಪ ಇವರಬಗ್ಗೆ ಹೆಚ್ಚು ಕೆಲಸ ಮಾಡುತ್ತದೆ . ಕೇವಲ ಆರೈಕೆ , ಚಿಕಿತ್ಸೆ ಮತ್ತು ಪುನರ್ವಸತಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. (ಪುನರ್ವಸತಿಯೆಂದರೆ ದಾನ ಧರ್ಮದ ಆಧಾರದ ಮೇಲೆ ಅವರ ಮೂಲಭೂತ ಅಗತ್ಯಗಳನ್ನು  

ಇಂದು ನಾವು ಸ್ಥಳಾಂತರ ಪ್ರತಿಕ್ರಿಯೆಯನ್ನು ನಡೆಸುತ್ತೇವೆ ಮತ್ತು ಚರ್ಚಿಸುತ್ತೇವೆ. ಇದಕ್ಕಾಗಿ ಫೆರಸ್ ಸಲ್ಫೇಟ್, ಝಿಂಕ್ ಲೋಹದ ತುಣುಕುಗಳು, ಖಾಲಿ ಬೀಕರ್, ಸ್ಟಿರರ್ ಮತ್ತು ಲೋಟ ಭರ್ತಿ ನೀರು ಕೆಲವು ಸ್ಫಟಿಕಗಳ ಅಗತ್ಯವಿದೆ. ನಾವು ಮೊದಲು ಫೆರಸ್ ಸಲ್ಫೇಟ್   ದ್ರಾವಣವನ್ನು ಮಾಡುತ್ತೇವೆ. ಇದಕ್ಕಾಗಿ ಖಾಲಿ ಬೀಕರ್ನಲ್ಲಿ ಫೆರಸ್ ಸಲ್ಫೇಟ್ನ ಕೆಲವು ಹರಳುಗಳು  ಹಾಕಿರಿ. ನಂತರ  ಸ್ವಲ್ಪ ನೀರು ಸೇರಿಸಿ ಮತ್ತು ಬೆರೆಸಿ. ಸ್ವಲ್ಪ ಸಮಯದ ನಂತರ ನೀವು ಫೆರಸ್ ಸಲ್ಫೇಟ್ನ ಶುದ್ಧ ದ್ರಾವಣವನ್ನು ಪಡೆಯುತ್ತೀರಿ. ಈ ದ್ರಾವಣವು ಹಳದಿ ಬಣ್ಣದಲ್ಲಿರುತ್ತದೆ. ಫೆರಸ್ ಸಲ್ಫೇಟ್ನ ಈ ದ್ರಾವಣಕ್ಕೆ ನಾವು ಕೆಲವು ಜಿಂಕ್ ಲೋಹಗಳನ್ನು ಸೇರಿಸಿಕೊಳ್ಳುತ್ತೇವೆ.

ಸಾಂಪ್ರದಾಯಿಕ ತರಗತಿಗಳಲ್ಲಿ, ಸಾಮಾನ್ಯವಾಗಿ ಶಿಕ್ಷಕರ ಮಾತೇ ಹೆಚ್ಚು.. ಆದರೆ, ಕಲಿಕಾಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ಮಾತಿನ ಮೂಲಕ ಅವರನ್ನು ಸಕ್ರಿಯವಾಗಿ ತೊಡಗಿಸಿದಾಗ,ಕಲಿಕೆ ಕುರಿತ ಅವರ ಮನೋಭಾವ, ಕಲಿಕೆ ಫಲಗಳು ಗಣನೀಯವಾಗಿ ಸುಧಾರಿಸುತ್ತವೆ.

ನಾವು ಪ್ರತಿದಿನ ಬಳಸುವ ಟೂತ್ ಪೇಷ್ಟ್ನಲ್ಲಿ ಏನಿದೆ – ನೀವೇ ಸ್ವತಃ ಅದನ್ನು ತಯಾರಿಸಲು ಸಾಧ್ಯ ವಿ ಲ್ಲವೇ? ನಿಮ್ಮ ಅಡುಗೆಮನೆಯಲ್ಲಿ ಕಂಡುಬರುವ ವಸ್ತುಗಳಿಂದ ಸ್ವತಃ ಅದನ್ನು ತಯಾರಿಸಲು ಸಾಧ್ಯ ವಿಲ್ಲವೇ? ಈ ರೋಮಾಂಚಕಾರಿ ಚಟುವಟಿಕೆಯಲ್ಲಿ ಮಕ್ಕಳು ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಲಭ್ಯವಿರುವ ವಸ್ತುಗಳಿಂದ ಟೂತ್ಪೇಸ್ಟ್ ಮಾಡುತ್ತಾರೆ. ಇದು ಟೂತ್ ಪೇಸ್ಟ್ನಲ್ಲಿರುವ ವಿವಿಧ ಘಟಕಗಳನ್ನು ಮತ್ತು ಯಾವ ಪಾತ್ರವನ್ನು ಅವು ವಹಿಸುತ್ತವೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಒಂದು ಸಮಗ್ರ ಚಟುವಟಿಕೆಯಾಗಿದ್ದು, ಇದನ್ನು ತರಗತಿಯಲ್ಲಿ ಮಾಡಿಕಲಿ ವಿನೋದವನ್ನು ತರಲು ವಿಜ್ಞಾನ ತರಗತಿಯಲ್ಲಿ ಬಳಸಬಹುದು.

ಗಣಿತದಲ್ಲಿ  ಮಕ್ಕಳಿಗೆ ಆಸಕ್ತಿ ಹೆಚ್ಚು ಮಾಡಲು ವಾಕ್ಯ ರೂಪದ ಲೆಕ್ಕಗಳನ್ನು ಕಥೆಯ ರೂಪದಲ್ಲಿ ಮಕ್ಕಳ ಮುಂದಿಡುವ ವಿನೂತನ ವಿಧಾನದ ಪಾಠ ಯೋಜನೆಗಳನ್ನು ಟೆಸ್ ಇಂಡಿಯಾ ಅವರು ಈ ಇ-ಪುಸ್ತಕದಲ್ಲಿ ನೀಡಿದ್ದಾರೆ.

ಭೂಗೋಳಶಾಸ್ತ್ರವು ಒಂದು ಪಠ್ಯವಿಷಯವಾಗಿ ಭೂಮಿಯ ಅಧ್ಯಯನವನ್ನು ಮನುಷ್ಯನ ನೆಲೆಯ ಅಧ್ಯಯನವಾಗಿ ಒಳಗೊಳ್ಳುತ್ತದೆ; ಆದ್ದರಿಂದ ಮಾನವ ವ್ಯವಹಾರಗಳನ್ನು ನಡೆಸಿಕೊಂಡು ಬರುವುದಕ್ಕೆ ಭೌಗೋಳಿಕ ಜ್ಞಾನದ ಚೌಕಟ್ಟು ಅನಿವಾರ್ಯವಾಗುತ್ತದೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯದ  ಪ್ರೊಫೆಸರ್ ಕೆ. ಮೇಸನ್ ಒಮ್ಮೆ ಹೀಗೆ ಹೇಳಿದ್ದಾರೆ, "ನಮ್ಮ ಇಂದಿನ ಅನೇಕ ತೊಂದರೆಗಳಿಗೆ ಭೂಗೋಳದ ಬೋಧನೆಯ ನಿರ್ಲಕ್ಷ್ಯವೇ ಕಾರಣ". ಒಬ್ಬಭೂಗೋಳಶಾಸ್ತ್ರಜ್ಞನು ಹಲವಾರು ಆಧುನಿಕ ಸಮಸ್ಯೆಗಳಿಗೆ ಒಂದು ನಿರ್ದಿಷ್ಟ ಪರಿಹಾರ ನೀಡಲು ಸಾಧ್ಯವಿದೆ.

`ಮೇರಿ ಕ್ಯೂರಿ’ ಎಂಬುದು ಕೇವಲ ಒಂದು ಹೆಸರಲ್ಲ. ವೈಜ್ಞಾನಿಕ ಚಿಂತನೆ, ಸಂಶೋಧನಾ ಮನೋಭಾವ, ಕಠಿಣ ಪರಿಶ್ರಮ, ನಿಸ್ವಾರ್ಥ ಬದುಕು, ಜೀವಪರ ಮೌಲ್ಯ, ದಿಟ್ಟತನ, ದೈತ್ಯ ಸಾಧನೆಗಳ ಒಂದು ಮಹಾನ್ ಸಂಕೇತ.

ಪುಟಗಳು(_e):

17934 ನೊಂದಾಯಿತ ಬಳಕೆದಾರರು
6757 ಸಂಪನ್ಮೂಲಗಳು