ತರಗತಿ 3-5

ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಹೇಮಚಂದ್ರ ಎಂಬ ಭಾರತೀಯ ವಿದ್ವಾಂಸರು ಆಸಕ್ತಿಕರ ಸಂಖ್ಯಾ ಅನುಕ್ರಮವೊಂದನ್ನು ಶೋಧಿಸಿದರು. ಇದಾದ ಒಂದು ಶತಮಾನದ ನಂತರ ಈ ಅನುಕ್ರಮವು ಇಟಲಿಯ ಗಣಿತಜ್ಞ, ಲಿಯನಾರ್ಡೊ ಫಿಬೊನಾಚಿಯ ಗಮನವನ್ನು ಸೆಳೆಯಿತು. ಆತ ಇದರ ಬಗ್ಗೆ ಬರೆದ ನಂತರ ಇದನ್ನು ಫಿಬೊನಾಚಿ ಅನುಕ್ರಮವೆಂದು ಕರೆಯಲಾಯಿತು. ಇದು ಸರಳವಾಗಿದ್ದರೂ ಕೂಡ ಆಕರ್ಷಣೀಯವಾಗಿದೆ, ಕಾರಣ ಇದರ ನಿರ್ದಿಷ್ಟ ಸಂಖ್ಯಾ ಶ್ರೇಣಿಯು ನಿಸರ್ಗದಲ್ಲಿ ಹಲವು ಬಾರಿ ಪುನರಾವರ್ತಿಸಿದೆ; ಹೂವು, ಕಪ್ಪೆಚಿಪ್ಪು, ಮೊಟ್ಟೆ, ಬೀಜ, ನಕ್ಷತ್ರಗಳಲ್ಲಿ.... ಇದರ ಬಗ್ಗೆ ಇನ್ನಷ್ಟು ವಿಷಯಗಳನ್ನು ಈ ಪುಸ್ತಕದಿಂದ ತಿಳಿದುಕೊಳ್ಳಿ.

ತನಗೆ ಏನೂ ತಿಳಿಯದು ಎಂಬುದನ್ನು ಅರಿಯುವುದೇ ನಿಜವಾದ ಬುದ್ಧಿವಂತಿಕೆ. "

"ಯಾವ ಪರೀಕ್ಷೆಗೂ ಒಳಗಾಗದ ಜೀವನ ಜೀವನವೇ ಆಲ್ಲ."

"ಒಳಿತು ಎಂದರೆ ಒಂದೇ ಒಂದು ಅದೇ ಜ್ಞಾನ,  ಕೆಡುಕು ಎಂದರೆ ಒಂದೇ ಒಂದು ಅದೇ ಅಜ್ಞಾನ".

 

ಸಾಂಪ್ರದಾಯಿಕ ತರಗತಿಗಳಲ್ಲಿ, ಸಾಮಾನ್ಯವಾಗಿ ಶಿಕ್ಷಕರ ಮಾತೇ ಹೆಚ್ಚು.. ಆದರೆ, ಕಲಿಕಾಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ಮಾತಿನ ಮೂಲಕ ಅವರನ್ನು ಸಕ್ರಿಯವಾಗಿ ತೊಡಗಿಸಿದಾಗ,ಕಲಿಕೆ ಕುರಿತ ಅವರ ಮನೋಭಾವ, ಕಲಿಕೆ ಫಲಗಳು ಗಣನೀಯವಾಗಿ ಸುಧಾರಿಸುತ್ತವೆ.

ನಾವು ಪ್ರತಿದಿನ ಬಳಸುವ ಟೂತ್ ಪೇಷ್ಟ್ನಲ್ಲಿ ಏನಿದೆ – ನೀವೇ ಸ್ವತಃ ಅದನ್ನು ತಯಾರಿಸಲು ಸಾಧ್ಯ ವಿ ಲ್ಲವೇ? ನಿಮ್ಮ ಅಡುಗೆಮನೆಯಲ್ಲಿ ಕಂಡುಬರುವ ವಸ್ತುಗಳಿಂದ ಸ್ವತಃ ಅದನ್ನು ತಯಾರಿಸಲು ಸಾಧ್ಯ ವಿಲ್ಲವೇ? ಈ ರೋಮಾಂಚಕಾರಿ ಚಟುವಟಿಕೆಯಲ್ಲಿ ಮಕ್ಕಳು ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಲಭ್ಯವಿರುವ ವಸ್ತುಗಳಿಂದ ಟೂತ್ಪೇಸ್ಟ್ ಮಾಡುತ್ತಾರೆ. ಇದು ಟೂತ್ ಪೇಸ್ಟ್ನಲ್ಲಿರುವ ವಿವಿಧ ಘಟಕಗಳನ್ನು ಮತ್ತು ಯಾವ ಪಾತ್ರವನ್ನು ಅವು ವಹಿಸುತ್ತವೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಒಂದು ಸಮಗ್ರ ಚಟುವಟಿಕೆಯಾಗಿದ್ದು, ಇದನ್ನು ತರಗತಿಯಲ್ಲಿ ಮಾಡಿಕಲಿ ವಿನೋದವನ್ನು ತರಲು ವಿಜ್ಞಾನ ತರಗತಿಯಲ್ಲಿ ಬಳಸಬಹುದು.

.ನಾನು ಇಂದು ಶಾಲೆಗೆ ಹೋದಾಗ, ಅದು ಎಷ್ಟು  ಅದ್ಭುತ ಅನುಭವವಾಗಿರುತ್ತದೆ ಎಂಬುದರ ಯಾವುದೇ ಸುಳಿವು ನನಗೆ ಇರಲಿಲ್ಲ. ಎಂದಿನಂತೆ, ನಾನು ಸುತ್ತು ಪರಿಶೀಲನೆಗೆ ಹೋದೆ ಮತ್ತು ಕೆಲವು ಶಿಕ್ಷಕರ ಜೊತೆ ಮಾತುಕತೆ  ಆಡುತ್ತಿದ್ದೆ. ಅವರು ತರಗತಿಯಲ್ಲಿ ತಾವು ಎದುರಿಸುತ್ತಿರುವ ಸವಾಲುಗಳನ್ನು ಹಂಚಿಕೊಂಡರು ಮತ್ತು ತಮಗೆ ಸಹಾಯ ಮಾಡಲು ಅವರು ಕೇಳಿದರು. ಆ ತನಕ ಆ ದಿನ ಬಹಳ ಎಂದಿನಂತೆ ಇತ್ತು.  ಶಿಕ್ಷಕರೊಬ್ಬರು ನನ್ನ ಬಳಿಗೆ ಓಡಿ ಬಂದು ಗ್ರೇಡ್ 6 ,ಇಂಗ್ಲಿಷ್ ಟೀಚರ್ ರಶ್ಮಿ ಮೇಡಮ್, ಅನ್ನು ಭೇಟಿಯಾಗಲು ಹೇಳಿದರು. ಏನೋ ಭಯಾನಕವಾದದ್ದು ಸಂಭವಿಸಿದೆ ಎಂದು ನಾನು ಭಯಪಟ್ಟಿದ್ದೆ.

ಗಣಿತದಲ್ಲಿ  ಮಕ್ಕಳಿಗೆ ಆಸಕ್ತಿ ಹೆಚ್ಚು ಮಾಡಲು ವಾಕ್ಯ ರೂಪದ ಲೆಕ್ಕಗಳನ್ನು ಕಥೆಯ ರೂಪದಲ್ಲಿ ಮಕ್ಕಳ ಮುಂದಿಡುವ ವಿನೂತನ ವಿಧಾನದ ಪಾಠ ಯೋಜನೆಗಳನ್ನು ಟೆಸ್ ಇಂಡಿಯಾ ಅವರು ಈ ಇ-ಪುಸ್ತಕದಲ್ಲಿ ನೀಡಿದ್ದಾರೆ.

"ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದನು, ಅವನ ಬಳಿ ಒಂದು ದೊಡ್ಡ ಅರಮನೆ ಇದ್ದಿತು. ಅದಕ್ಕೆ ಚಿನ್ನದ ಬಾಗಿಲುಗಳು ಇದ್ದವು  ಮತ್ತು ರಾಜನು ಓಡಾಡಲು  ಬೆಳ್ಳಿ ರಥಗಳಿದ್ದವು ". “ಬಹಳ ಹಿಂದೆ  ಒಂದು ದಟ್ಟ ಕಾಡಿನಲ್ಲಿ  ಒಂದು ಬಿಳಿ ಆನೆ,ಕಪ್ಪು ನರಿ ಮತ್ತು ನೀಲಿ ಹಕ್ಕಿ ಇದ್ದವು. ಅವೆಲ್ಲಾ ಸೇರಿ ಹಬ್ಬ ಮಾಡುತ್ತಿದ್ದವು.”ಇತ್ಯಾದಿ ಕಥೆಗಳನ್ನು ನಮ್ಮ ಅಜ್ಜಿ ಮತ್ತು ನಮ್ಮ ಅಪ್ಪ ಅಮ್ಮ ನಮಗೆ ರಾಗವಾಗಿ ಹೇಳಿದ್ದನ್ನು ಕೇಳುತ್ತಾ ನಾವು ಬೆಳೆದಿದ್ದೇವೆ. ಬಹುಪಾಲು ಅದು ನಮ್ಮ ಕಲ್ಪನಾ ಹೊರ ಜಗತ್ತಿಗೆ ನಮ್ಮ ಭಾವನಾತ್ಮಕ ಸಂಪರ್ಕವನ್ನು ಬೆಸೆಯುವ ಕೊಂಡಿಗಳಾಗಿದ್ದವು. ನಾವು ಚಿಕ್ಕವರಿದ್ದಾಗ ನಾವು  ಕೇಳಿದ ಕಥೆಗಳು ನಮಗೆ ಜೀವನದ ಪ್ರಮುಖ ಪಾಠಗಳನ್ನು ಕಲಿಯಲು ಸಹಾಯ ಮಾಡಿದ್ದವು.

ಪುಟಗಳು(_e):

17331 ನೊಂದಾಯಿತ ಬಳಕೆದಾರರು
6657 ಸಂಪನ್ಮೂಲಗಳು