ತರಗತಿ 3-5

 

ಉಷ್ಣ ವಲಯದ ಮಹಾಮಾರುತಗಳು ಚಂಡಮಾರುತಗಳು. ಅವು ಉಂಟಾಗುವುದು ಹೇಗೆ? ಚಂಡಮಾರುತಗಳು
ಸಮುದ್ರದ ಉಷ್ಣಾಂಶದ ವರ್ಗಾವಣೆಯ ಕಾರಣದಿಂದ ಉಂಟಾಗುವ ಪ್ರಕ್ರಿಯೆ ಅವು ಗಳ ಬಗ್ಗೆ ಈ ಧ್ವನಿನಿರೂಪಣೆ ಕೇಳಿರಿ.

ಸ್ವಯಂ-ವಿದ್ಯಾಭ್ಯಾಸ ಎಂದರೆ  ಯಾರೇ ಶಿಕ್ಷಕರಿಲ್ಲದೆ  ಅಥವಾ ಯಾವುದೇ ವಿದ್ಯಾಸಂಸ್ಥೆಯ ಮಾರ್ಗದರ್ಶನವಿಲ್ಲದೆ ವಿದ್ಯೆಕಲಿಯುವುದು. ಹಾಗೆಂದಾಕ್ಷಣ ಎಲ್ಲರಿಂದ ದೂರವಾಗಿ ಉಳಿದು ಎಲ್ಲಾ ವಿದ್ಯಾಭ್ಯಾಸವನ್ನು ಮಾಡಬೇಕು ಎಂದಲ್ಲ. ಸ್ವಯಂ-ಕಲಿಕೆಯ ಪ್ರಕ್ರಿಯೆಯು ಚಿಂತನಾಶೀಲ  ಬರವಣಿಗೆ ಚಟುವಟಿಕೆಗಳು, ಅಧ್ಯಯನದ ಗುಂಪುಗಳಲ್ಲಿ ಪಾಲ್ಗೊಳ್ಳುವಿಕೆ ಮತ್ತು ಅಗತ್ಯವಿರುವ ಮತ್ತು ಯಾವಾಗ ಬೇಕಾದರೂ ವಿವಿಧ ಸಂಪನ್ಮೂಲಗಳನ್ನು ಒಳಗೊಂಡಿರುವ ಇತರ ಸಂಭವನೀಯ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ವಿದ್ಯನ್ಮಾನ ಸಂವಾದ ಸಂಭಾಷಣೆಗಳಂತಹ  ವಿವಿಧ ಚಟುವಟಿಕೆಗಳನ್ನು ಒಳಗೊಂಡಿದೆ.

ಚಂದ್ರನು ನಮ್ಮ ಭೂಗ್ರಹದಿಂದ ಸುಮಾರು ೪೦೦,೦೦೦ ಕಿಲೋ ಮೀಟರ್‌ಗಿಂತಲೂ ಸ್ವಲ್ಪ ಹೆಚ್ಚು ದೂರದಲ್ಲಿದ್ದಾನೆ. ಆದರೂ ಬೇರೆ ಆಕಾಶಕಾಯಗಳಿಗೆ ಹೋಲಿಸಿದರೆ ಚಂದ್ರನು ನಮಗೆ ಬಹಳ ಸಮೀಪವೆಂದೇ ಹೇಳಬಹುದು. ನಮಗೆ ಗೊತ್ತಿರುವ ಎಲ್ಲಾ ಆಕಾಶ ಕಾಯಗಳ ಪೈಕಿ ಭೂಮಿಯ ಮೇಲೆ (ಸೂರ್ಯನ ಜೊತೆ) ಹೆಚ್ಚು ಪ್ರಭಾವ ಬೀರುವ ಆಕಾಶ ಕಾಯವೆಂದರೆ ಚಂದ್ರನೇ. ಕರಾವಳಿ ತೀರದಲ್ಲಿ ವಾಸಿಸುವ ಜನರಿಗೆ ದಿನಕ್ಕೆ ಎರಡು ಬಾರಿ ಸಾಗರದಲೆಗಳ ಉಬ್ಬರದ ಅನುಭವಕ್ಕೆ ಬರುತ್ತಿರುತ್ತದೆ. ಇದು ಅಮಾವಾಸ್ಯೆಯ ರಾತ್ರಿಯಂದು ಉಬ್ಬರದ ಅಲೆಗಳು ಇನ್ನೂ ಭೋರ‍್ಗರೆಯುತ್ತವೆ.  ಸ್ವಾರಸ್ಯದ ಅಂಶವೆಂದರೆ ಅಲೆಗಳ ಉಬ್ಬರವಿಳಿತಕ್ಕೂ ಸಾಗರದ ಅಂತರಾಳದಲ್ಲಿರುವ ಯಾವುದಕ್ಕೂ ಸಂಬಂಧವಿರುವುದಿಲ್ಲ.

ಕನ್ನಡನಾಡಿನ ಮನೆ ಮನಗಳಲ್ಲಿ ಮಾತಾಗಿರುವ ಮೇರು ಕವಿ ಕುವೆಂಪು. ಅವರ ಗೀತೆ, ಕವಿತೆಯನ್ನು ಓದದಿರುವ, ಕಿವಿಗೆ ಹಾಕಿಕೊಳ್ಳದಿರುವವರಾರಿದ್ದಾರೆ? ಎಂದೂ ಮರೆಯದ ಯುಗದ ಕವಿ ಕುವೆಂಪು. ಅವರು ಕವಿ ಮಾತ್ರ ಎಂದು ನಾವು ತಿಳಿದಿದ್ದರೆ ಅದು ನಮ್ಮ ಸಂಕುಚಿತ ಪರಧಿ! ಕವಿಯಾತ್ಮದಾಚೆಗೂ ಅವರ ನಿಲುವಿದೆ. ಅವರೊಬ್ಬ ಸಾಮಾಜಿಕ ತತ್ವಜ್ಞಾನಿ, ಮಾನವತಾವಾದಿ, ನಿರಂಕುಶಮತಿಗಳು. ಎಲ್ಲದಕ್ಕಿಂತ ಹೆಚ್ಚಾಗಿ ವೈಜ್ಞಾನಿಕ ಕ್ರಾಂತಿಕಾರರು. ಅವರನ್ನು ತಿಳಿಯುತ್ತಾ ಹೋದಂತೆ ಅವರ ವೈಚಾರಿಕತೆ, ವೈಜ್ಞಾನಿಕತೆ ಅಂದಿಗೂ ಇಂದಿಗೂ ಎಂದೆಂದಿಗೂ ಪ್ರಸ್ತುತ. ರಸಋಷಿ ಕುವೆಂಪುರವರು ನೀಡಿರುವ ವಿಶ್ವಮಾವ ಸಂದೇಶ ಮತ್ತು ವೈಚಾರಿಕತೆಯ ಸಂದೇಶವಾದರೂ ಏನು? ತಿಳಿಯುವ.

 

 ವಿಂಗಡಿಸುವುದು ಮತ್ತು ವರ್ಗೀಕರಿಸುವುದು ಗಣಿತ ಶಾಸ್ತ್ರದಲ್ಲಿನ ಮುಖ್ಯ ಕುಶಲತೆಗಳು

 ವಿಂಗಡಿಸುವುದು ಮತ್ತು ವರ್ಗೀಕರಿಸುವುದು ಗಣಿತ ಶಾಸ್ತ್ರದಲ್ಲಿನ ಮುಖ್ಯ ಕುಶಲತೆಗಳು

ಪ್ರತಿಯೊಬ್ಬರ ಬಾಲ್ಯದಲ್ಲೂ ಬಾಗಿಲು ತೆರೆದು ಭವಿಷ್ಯವನ್ನು ಬರಮಾಡಿಕೊಳ್ಳುವ ಒಂದು ಕ್ಷಣವು ಯಾವಾಗಲೂ ಇದ್ದೇ ಇರುತ್ತದೆ.- ಗ್ರಹಾಂ ಗ್ರೀನ್

ಕನ್ನಡದ ಅಪ್ರತಿಮ ಸಾಹಿತಿ ಮತ್ತು ಕವಿ  ಶ್ರೀ ಕುವೆಂಪು ಅವರು(ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ) ಇಂದಿನ ಗೂಗಲ್ ಡೂಡಲ್ ವಿಷಯವಾಗಿದ್ದಾರೆ, ಇದು ಅವರ 113 ನೆಯ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ಪ್ರಕಟವಾಗಿದೆ. ಕನ್ನಡ ಭಾಷೆಯಲ್ಲಿ ಶ್ರೇಷ್ಠ ಸಾಹಿತಿ ಹಾಗು ಕನ್ನಡಕ್ಕೆ ಪ್ರಥಮ ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟವರು ಕುವೆಂಪು ಅವರು. ಅವರ ಈ ಶುಭ ನೆನಪಿಗಾಗಿ ಮಲನಾಡ ಸಿರಿ ಕುವೆಂಪು ದೃಶ್ಯ ನಿರೂಪಣೆಯನ್ನು ಇಲ್ಲಿ ಪ್ರಕಟಿಸಲಾಗಿದೆ.

ಪುಟಗಳು(_e):

17331 ನೊಂದಾಯಿತ ಬಳಕೆದಾರರು
6657 ಸಂಪನ್ಮೂಲಗಳು