ಶಿಶು ವಿಹಾರ

ಬಣ್ಣಕ್ಕಾಗಲಿ ಬೊಂಬೆಗಳಿಗಾಗಲಿ ಭಾಷೆಯ ಗೊಡವೆ ಏಕೆ?  ನಿಮ್ಮ ವಿದ್ಯಾರ‍್ಥಿಗಳಿಗೆ ಒಂದಿಷ್ಟು ಕ್ರಯಾನು ಮತ್ತು ಬಣ್ಣದ ಪೆನ್ಸಿಲ್ಲುಗಳನ್ನು ಕೊಡಿರಿ. ಹ್ಯೂಗೊ ಮತ್ತವನ ಗೆಳೆಯರು ಇ ಪುಸ್ತಕಕ್ಕೆ ಬಣ್ಣ ಬಳೆಯಲಿ.

ಬಹಳಷ್ಟು ಮಂದಿ ಶಿಕ್ಷಕರು ಒಪ್ಪಿಕೊಳ್ಳುವ ಮಾತೆಂದರೆ ತಮ್ಮತರಗತಿಯಲ್ಲಿ ತಾವು ಕೇವಲ ಶಿಕ್ಷಕರಾಗಿ ಉಳಿಯುವುದಿಲ್ಲ ಬದಲು ತಾವೇ ವಿದ್ಯಾರ್ಥಿಯಾಗಿ ಹೋಗಿಬಿಡುತ್ತಾರೆ ಎಂಬುದು.ಪ್ರತಿಯೊಬ್ಬ ಶಿಕ್ಷಕರು ತಾವು ಬೋಧಿಸುವ ಮಕ್ಕಳಿಗೆ ಕಲಿಸುವಷ್ಟೇ ಅವರಿಂದಲೂ ತಾವು ಕಲಿಯುತ್ತಾರೆ.

ಮಕ್ಕಳಲ್ಲಿ ಅವರದ್ದೇ ಆದ ಪದಸಂಪತ್ತು ಇರುತ್ತದೆ. ಅವರು ಅವುಗಳನ್ನು ಬಹಳ ಸಹಜವಾಗಿ ಬಳಸುತ್ತಾ ಇರುತ್ತಾರೆ. ಆದರೆ ಅವರಿಗೆ ಔಪಚಾರಿಕ ಪರಿಸರಕ್ಕೆ ಬಂದಾಗ ಅಂದರೆ, ಉದಾಹರಣೆಗೆ ಶಾಲೆಗಳು ಇತ್ಯಾದಿ ಪರಿಸರಕ್ಕೆ ಅವರು ಬಂದಾಗ ಅವರಿಗೆ ಸಂಕೋಚ ಕಾಡುತ್ತದೆ. ಇದೇ ಸಂಕೋಚವು ಅವರಿಗೆ ಹೊಸ ಹೊಸ ಕಲಿಕೆಗೆ ತಡೆಯಾಗಿ ವರ್ತಿಸುತ್ತದೆ. ಈ ಚಟುವಟಿಕೆಯು ಅವರಿಗೆ ತಮ್ಮ ಸ್ವಂತ ಪದ - ಸಂಪತ್ತನ್ನು ಬಳಸಲು ಅವಕಾಶ ನೀಡುತ್ತದೆ. ಇದರಿಂದ ಅವರ ಮಾತನಾಡುವ ಕೌಶಲ್ಯ ಮತ್ತು ಅಭಿವ್ಯಕ್ತಿಯ ಸಾಮರ್ಥ್ಯವು ಹೆಚ್ಚುತ್ತದೆ..

ಶಿಕ್ಷಕರು ವಿದ್ಯಾರ್ಥಿಗಳಲ್ಲಿ 'ಸ್ವಾತಂತ್ರ್ಯ' ಮತ್ತು 'ಶಿಸ್ತು'  ಗಳ  ಸಮತೋಲನವನ್ನು ಹೇಗೆ  ಸಾಧಿಸಬಹುದು  ಎಂಬುದನ್ನು ಲೇಖಕರು ಈ ಲೇಖನದಲ್ಲಿ ವಿಚಾರ ಮಾಡಿದ್ದಾರೆ.

ಎಳೆಯ ಮಕ್ಕಳು ತಮ್ಮ ಮಾತೃಭಾಷೆಯನ್ನು ಹೇಗೆ ಕಲಿತುಕೊಳ್ಳುತ್ತವೆ ಎಂಬುದನ್ನು ನಾವೆಲ್ಲ ಗಮನಿಸಿದ್ದೇವೆ. ಹಿರಿಯರು ಹಾಗೂ ಇತರ ಮಕ್ಕಳು ಬೇರೆ ಬೇರೆ ಸಂದರ್ಭಗಳಲ್ಲ್ಲಿ ಆಡುವ ಮಾತುಗಳ ಇಡೀ ವಾಕ್ಯಗಳನ್ನು ಅವರು ಆಲಿಸುತ್ತಾರೆ. ಮಾತನಾಡುವಾಗ ಅವರು ಬಿಡಿಪದಗಳನ್ನು ಮಾತ್ರ ಬಳಸಿದರೂ, ಪೂರ್ಣವಾಕ್ಯಗಳನ್ನು ಹಾಗೂ ತಮಗೆ ನೀಡಿರುವ ಸೂಚನೆಗಳನ್ನು ಮತ್ತು ಮೆಚ್ಚುಗೆಯ ಮಾತುಗಳನ್ನು ಅರ್ಥಮಾಡಿಕೊಳ್ಳಬಲ್ಲರು.

ಪುಟಗಳು(_e):

18789 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು