ಇತರೆ

ಶೈಕ್ಷಣಿಕ ಬದಲಾವಣೆಯನ್ನು ಗಮನಿಸುವಾಗ ನಾವು ಪ್ರಮುಖವಾದ ಒಂದಕ್ಕೊಂದು ಸಂಬಂಧಿಸಿದ ಮೂರು ಅಂಶಗಳನ್ನು ನೋಡಬೇಕಾಗುತ್ತದೆ: ‘ಏನು’, ‘ಹೇಗೆ’ ಹಾಗೂ ‘ಯಾರು’. ಯಾವುದನ್ನು ಬದಲಾವಣೆ ಮಾಡಬೇಕು ಎಂಬುದರ ಬಗ್ಗೆ ನಾವು ಸ್ಪಷ್ಟತೆಯನ್ನು ಹೊಂದಿರಬೇಕಾಗುತ್ತದೆ. ಉದಾಹರಣೆಗೆ, ಎಲ್ಲ ಶಿಕ್ಷಕರು ತರಗತಿಗಳಲ್ಲಿ ಇದ್ದು, ಕಲಿಸುತ್ತಿರಬೇಕು. ಆದರೆ ವಾಸ್ತವವಾಗಿ ಅದಕ್ಕಿಂತಲೂ ಹೆಚ್ಚನ್ನು ನಾವು ಮಾಡಬೇಕಾಗಿರುತ್ತದೆ. ‘ಏನು’ ಎಂಬುದು ವ್ಯಕ್ತಿಗಳ, ಸಂಸ್ಥೆಗಳ ಹಾಗೂ ವ್ಯವಸ್ಥೆಯ ವಾಡಿಕೆಯ ಅಭ್ಯಾಸಗಳಲ್ಲಿ ಬದಲಾವಣೆಯನ್ನು ತರುವುದನ್ನು ಒಳಗೊಂಡಿರುತ್ತದೆ. ಎಲ್ಲಿಯವರೆಗೆ ಅವರು ಈಗ ಏನು ಮಾಡುತ್ತಿದ್ದಾರೋ ಅದನ್ನೆ ಮಾಡುತ್ತಾ ಹೋದರೆ, ಅಲ್ಲಿಯವರೆಗೆ ಭವಿಷ್ಯದಲ್ಲಿ ಬದಲಾವಣೆ ಸಾಧ್ಯವಿಲ್ಲ. 
 

ಬದುಕಿನ ಅನುಭವಗಳು ಕಾಲವು ಒದಗಿಸಿದ ಬುತ್ತಿಗಳು. ಬುತ್ತಿಯ ನವೆಂಬರ್ ತಿಂಗಳ ಸಂಚಿಕೆಯನ್ನು ಸಾದರಪಡಿಸುತ್ತಿದ್ದೇವೆ.

ನಿಗೂಢತೆ ಮಾನವನನ್ನು ಸದಾ ಕಾಡುತ್ತಾ ಬಂದಿದೆ. ಬಹುಶಃ ಮಾನವನಿಗೆ ಏನೇ ಇದ್ದರೂ ಅದು ಅರ್ಥವಾಗಬೇಕು. ಅವನ ಮಟ್ಟಕ್ಕಾದರು ಅದನ್ನು ಇದು ಹೀಗೆ ಎಂದು ಖಚಿತಪಡಿಸಿಕೊಳ್ಳಬೇಕು. ಇದು ಆಗದಿದ್ದಾಗ ಅವನು ಅದನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗುತ್ತಾನೆ. ಮಾನವನಿಗೆ, ಮಾನವ ಜನಾಂಗಕ್ಕೇನೆ ಇದನ್ನು ಅರ್ಥ ಮಾಡಿಕೊಳ್ಳುವುದು, ತಿಳಿದುಕೊಳ್ಳುವುದು, ನಿಗೂಢತೆಯನ್ನು ಭೇದಿಸುವುದು ಅವಶ್ಯಕವಾಯಿತು. ಈ ಬಗೆಯಿಂದ ಒಂದು ವಿಸ್ತಾರವೂ ವಿಕಾಸವೂ ಪ್ರಾಪ್ತವಾಯಿತು.
 
ಕಲಿಕೆಯಲ್ಲಿ ಆಸಕ್ತಿ ಮೂಡಿಸುವಂಥ ಪರಿಸರವನ್ನು ಸೃಷ್ಟಿಸ ಬಯಸುವ ಯಾವುದೇ ಶಾಲೆ ತನ್ನ ಆವರಣದಲ್ಲಿ  ಮಕ್ಕಳು ತಮ್ಮ ಕೈಯ್ಯಾರೆ ಮಾಡಿ ಕಲಿಯುವ ಕಾರ್ಯಕ್ಕೆ ಒಂದಷ್ಟು ಜಾಗವನ್ನು ಮುಡಿಪಾಗಿ ಇಡಬೇಕಾಗುತ್ತದೆ.  ಒಂದು ಕರಕುಶಲ ಕಲೆಯ ಆವರಣ ಅಥವಾ ಕೇಂದ್ರವು ಅನೇಕ ವಸ್ತುಗಳನ್ನು ಸಾಧ್ಯತೆಗಾಗಿ ಹುಡುಕಿ  ಪರೀಕ್ಷಿಸಿ ನೋಡಲು ಸಂಪದ್ಭರಿತ ಸಂಪನ್ಮೂಲವನ್ನು ಒದಗಿಸುತ್ತದೆ ಮತ್ತು ಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ಶಾಲೆಯಲ್ಲಿ ಇದನ್ನು  ಮಾಡಿಸಬಹುದು.
 

ಹೋಂ ವರ್ಕ್ ಮೋಜಿನದಾಗಿಸಲು 10 ವಿಧಾನಗಳು

ಶಿಕ್ಷಣದ ಗುರಿ ಬಹು ಪ್ರತಿಭೆಗಳಿರುವ ವ್ಯಕ್ತಿಗಳನ್ನು ತಯಾರಿಸಲು ಶ್ರಮಿಸುವುದು. ಶಿಕ್ಷಣ ಮಕ್ಕಳು ಸಂಪೂರ್ಣ ವ್ಯಕ್ತಿಗಳಾಗಿ ವಿಕಾಸಗೊಳ್ಳುವಂತೆ ಪಠ್ಯ ಮತ್ತು ಪಠ್ಯೇತರ ಪಠ್ಯಕ್ರಮಗಳು ಎರಡನ್ನೂ ಒಳಗೊಳ್ಳುವಷ್ಟು ವಿಶಾಲವಾಗಿ ಇರಬೇಕು. ಈ ಲೇಖನ ಒಬ್ಬ ವಿದ್ಯಾರ್ಥಿಯ ಜೀವನದಲ್ಲಿ ಪಠ್ಯೇತರ ಚಟುವಟಿಕೆಗಳ ಮಹತ್ವವನ್ನು ತಿಳಿಸಲು ಪ್ರಯತ್ನಿಸುತ್ತದೆ.

ಸರ್ ಎಂ.ವಿಶ್ವೇಶ್ವರಯ್ಯ ಭಾರತ ಕಂಡ ಮಹಾನ್ ದಾರ್ಶನಿಕರಲ್ಲಿ ಒಬ್ಬರು .ದೇಶಾದ್ಯಂತ ತಮ್ಮ ಇಂಜಿನಿಯರಿಂಗ್ ಸಾಧನೆಗಳ ಮೂಲಕ ಅನೇಕ ಸ್ಮರಣೀಯ ನಿರ್ಮಿತಿಗಳನ್ನು ರಚಿಸಿದ ಇವರು ತಾವು  ಸ್ವಾತಂತ್ರ್ಯ ಪೂರ್ವ ಮೈಸೂರು ಸಂಸ್ಥಾನದ ದೀವಾನರಾಗಿದ್ದ ಸಂದರ್ಭಗಳಲ್ಲಿ ನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಕಣಸು ಕಂಡವರು ಹಾಗು ಅದರ ಸ್ಥಾಫನೆಗಾಗಿ ಶ್ರಮಿಸಿದವರು. ಶಿಕ್ಷಣ ರಂಗದಲ್ಲೂ ಸ್ವತಂತ್ರ ಭಾರತಕ್ಕೆ ಮಾದರಿಯಾಗುವಂತಹ ಕೆಲಸವನ್ನು ಮಾಡಿದರು.

ಸರಕಾರಿ ಶಾಲೆಗಳಲ್ಲಿನ ಪ್ರಾಥಮಿಕ ಶಿಕ್ಷಣದ ಸ್ಥಿತಿಯನ್ನು ಶೈಕ್ಷಣಿಕ ವರದಿಗಳ ವಾರ್ಷಿಕ ಸಮೀಕ್ಷೆಯಲ್ಲಿ (ಅಸರ್-ಆನ್ಯುಯಲ್ ಸರ್ವೇ ಆಫ್ ಎಜುಕೇಶನಲ್ ರಿಪೋಟ್ರ್ಸ್– ಎಎಸ್‍ಇಆರ್) ಕಾಲ ಕಾಲಕ್ಕೆ ತಪ್ಪದೇ ಎತ್ತಿ ಹೇಳುತ್ತಿದೆ.

ಔಪಚಾರಿಕ ಶಾಲಾಶಿಕ್ಷಣದ ಪ್ರವೇಶಕ್ಕೆ ಮುನ್ನವೇ ಪರಿಸರದ ಒಡನಾಟದಲ್ಲಿ ಮತ್ತು ತನ್ನ ಸುತ್ತಮುತ್ತಲಿನ ಸಹಜ ಸನ್ನಿವೇಶಗಳಲ್ಲಿ ಒಂದು ಮಗುವಿಭಿನ್ನ ರೀತಿಯ ಆಕಾರ ಮತ್ತು ಆಕೃತಿಗಳನ್ನು ಕಂಡುಕೊಳ್ಳುತ್ತದೆ (2-ಆಯಾಮಗಳಲ್ಲಿ ಮತ್ತು 3-ಆಯಾಮಗಳಲ್ಲಿ). ಪ್ರತಿಯೊಂದು ವಸ್ತುವೂ ಒಂದು ಗುರುತಿಸಲ್ಪಡುವ ಲಕ್ಷಣಗಳನ್ನುಳ್ಳ ಒಂದು ಆಕಾರವನ್ನು ಹೊಂದಿರುತ್ತದೆ, ಅದನ್ನು ವೀಕ್ಷಿಸಬಹುದು, ಗುರುತಿಸಬಹುದು, ಅದಕ್ಕೆ ಒಂದು ಹೆಸರು ಕೊಡಬಹುದು, ವರ್ಣಿಸಬಹುದು ಮತ್ತು ವರ್ಗೀಕರಿಸಬಹುದು ಎಂಬ ಪರಿಕಲ್ಪನೆಗಳನ್ನು ಮಗುವು ಮನದಟ್ಟುಮಾಡಿಕೊಂಡಿರುತ್ತದೆ.ಇಂತಹ ಆಕೃತಿಗಳ ಅನೇಕ ಉದಾಹರಣೆಗಳನ್ನು ಮಗು ಈಗಾಗಲೇ ಅನುಭವಕ್ಕೆ ತಂದುಕೊಂಡಿರುತ್ತದೆ.
 

ಪುಟಗಳು(_e):

19439 ನೊಂದಾಯಿತ ಬಳಕೆದಾರರು
7743 ಸಂಪನ್ಮೂಲಗಳು