ಇತರೆ

 
ಪ್ರತಿದಿನ ವಿಶ್ವದಾದ್ಯಂತ ಸಾವಿರಾರು ಮಕ್ಕಳು ಶೋಷಣೆ ಮತ್ತು ನಿರ್ಲಕ್ಷ್ಯದ ಸಂದರ್ಭಗಳನ್ನು ಎದುರಿಸುತ್ತಾರೆ. ಇದನ್ನು ತಪ್ಪಿಸುವುದು ಕೇವಲ ಯಾವುದೋ ಒಂದು ಸಂಘ ಅಥವಾ ಸಂಸ್ಥೆಯಿಂದ ಆಗುವ ಕೆಲಸವಲ್ಲ. ಇದು ಎಲ್ಲ ಸಮುದಾಯಗಳ ಜವಾಬ್ದಾರಿಯಾಗಿದೆ. ಭಾರತವು ವಿಶ್ವದ 19% ಮಕ್ಕಳನ್ನು ಹೊಂದಿದೆ. ದೇಶದ 13 ರಾಜ್ಯಗಳಲ್ಲಿನ 12447 ಮಕ್ಕಳ ಅಧ್ಯಯನದಿಂದ ಭಾರತದಲ್ಲಿಯ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಕಿರುಕುಳ ಮತ್ತು ಶೋಷಣೆಗೆ ಒಳಗಾಗುವ ಅಪಾಯದಲ್ಲಿರುವುದು ಕಂಡುಬಂದಿದೆ. ಮೂರರಲ್ಲಿ ಎರಡು ಭಾಗ ಮಕ್ಕಳು ದೈಹಿಕ ಕಿರುಕುಳಕ್ಕೆ ಒಳಗಾಗಿದ್ದರೆ ಸುಮಾರು ಶೇ50 ಕ್ಕಿಂತಲೂ ಹೆಚ್ಚು ಪ್ರಮಾಣದ ಮಕ್ಕಳು ಒಂದು ಅಥವಾ ಒಂದಕ್ಕಿಂತ ಹೆಚ್ಚು ಪ್ರಕಾರದ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದು ಕಂಡುಬಂದಿದೆ.
ಶೈಕ್ಷಣಿಕ ಬದಲಾವಣೆಯನ್ನು ಗಮನಿಸುವಾಗ ನಾವು ಪ್ರಮುಖವಾದ ಒಂದಕ್ಕೊಂದು ಸಂಬಂಧಿಸಿದ ಮೂರು ಅಂಶಗಳನ್ನು ನೋಡಬೇಕಾಗುತ್ತದೆ: ‘ಏನು’, ‘ಹೇಗೆ’ ಹಾಗೂ ‘ಯಾರು’. ಯಾವುದನ್ನು ಬದಲಾವಣೆ ಮಾಡಬೇಕು ಎಂಬುದರ ಬಗ್ಗೆ ನಾವು ಸ್ಪಷ್ಟತೆಯನ್ನು ಹೊಂದಿರಬೇಕಾಗುತ್ತದೆ. ಉದಾಹರಣೆಗೆ, ಎಲ್ಲ ಶಿಕ್ಷಕರು ತರಗತಿಗಳಲ್ಲಿ ಇದ್ದು, ಕಲಿಸುತ್ತಿರಬೇಕು. ಆದರೆ ವಾಸ್ತವವಾಗಿ ಅದಕ್ಕಿಂತಲೂ ಹೆಚ್ಚನ್ನು ನಾವು ಮಾಡಬೇಕಾಗಿರುತ್ತದೆ. ‘ಏನು’ ಎಂಬುದು ವ್ಯಕ್ತಿಗಳ, ಸಂಸ್ಥೆಗಳ ಹಾಗೂ ವ್ಯವಸ್ಥೆಯ ವಾಡಿಕೆಯ ಅಭ್ಯಾಸಗಳಲ್ಲಿ ಬದಲಾವಣೆಯನ್ನು ತರುವುದನ್ನು ಒಳಗೊಂಡಿರುತ್ತದೆ. ಎಲ್ಲಿಯವರೆಗೆ ಅವರು ಈಗ ಏನು ಮಾಡುತ್ತಿದ್ದಾರೋ ಅದನ್ನೆ ಮಾಡುತ್ತಾ ಹೋದರೆ, ಅಲ್ಲಿಯವರೆಗೆ ಭವಿಷ್ಯದಲ್ಲಿ ಬದಲಾವಣೆ ಸಾಧ್ಯವಿಲ್ಲ. 
 

ಬದುಕಿನ ಅನುಭವಗಳು ಕಾಲವು ಒದಗಿಸಿದ ಬುತ್ತಿಗಳು. ಬುತ್ತಿಯ ನವೆಂಬರ್ ತಿಂಗಳ ಸಂಚಿಕೆಯನ್ನು ಸಾದರಪಡಿಸುತ್ತಿದ್ದೇವೆ.

ನಿಗೂಢತೆ ಮಾನವನನ್ನು ಸದಾ ಕಾಡುತ್ತಾ ಬಂದಿದೆ. ಬಹುಶಃ ಮಾನವನಿಗೆ ಏನೇ ಇದ್ದರೂ ಅದು ಅರ್ಥವಾಗಬೇಕು. ಅವನ ಮಟ್ಟಕ್ಕಾದರು ಅದನ್ನು ಇದು ಹೀಗೆ ಎಂದು ಖಚಿತಪಡಿಸಿಕೊಳ್ಳಬೇಕು. ಇದು ಆಗದಿದ್ದಾಗ ಅವನು ಅದನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗುತ್ತಾನೆ. ಮಾನವನಿಗೆ, ಮಾನವ ಜನಾಂಗಕ್ಕೇನೆ ಇದನ್ನು ಅರ್ಥ ಮಾಡಿಕೊಳ್ಳುವುದು, ತಿಳಿದುಕೊಳ್ಳುವುದು, ನಿಗೂಢತೆಯನ್ನು ಭೇದಿಸುವುದು ಅವಶ್ಯಕವಾಯಿತು. ಈ ಬಗೆಯಿಂದ ಒಂದು ವಿಸ್ತಾರವೂ ವಿಕಾಸವೂ ಪ್ರಾಪ್ತವಾಯಿತು.
 
ಕಲಿಕೆಯಲ್ಲಿ ಆಸಕ್ತಿ ಮೂಡಿಸುವಂಥ ಪರಿಸರವನ್ನು ಸೃಷ್ಟಿಸ ಬಯಸುವ ಯಾವುದೇ ಶಾಲೆ ತನ್ನ ಆವರಣದಲ್ಲಿ  ಮಕ್ಕಳು ತಮ್ಮ ಕೈಯ್ಯಾರೆ ಮಾಡಿ ಕಲಿಯುವ ಕಾರ್ಯಕ್ಕೆ ಒಂದಷ್ಟು ಜಾಗವನ್ನು ಮುಡಿಪಾಗಿ ಇಡಬೇಕಾಗುತ್ತದೆ.  ಒಂದು ಕರಕುಶಲ ಕಲೆಯ ಆವರಣ ಅಥವಾ ಕೇಂದ್ರವು ಅನೇಕ ವಸ್ತುಗಳನ್ನು ಸಾಧ್ಯತೆಗಾಗಿ ಹುಡುಕಿ  ಪರೀಕ್ಷಿಸಿ ನೋಡಲು ಸಂಪದ್ಭರಿತ ಸಂಪನ್ಮೂಲವನ್ನು ಒದಗಿಸುತ್ತದೆ ಮತ್ತು ಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ಶಾಲೆಯಲ್ಲಿ ಇದನ್ನು  ಮಾಡಿಸಬಹುದು.
 

ಪುಟಗಳು(_e):

18110 ನೊಂದಾಯಿತ ಬಳಕೆದಾರರು
6936 ಸಂಪನ್ಮೂಲಗಳು