ಇತರೆ

ಉಪ್ಪಿಗಿಂತ ರುಚಿಯಿಲ್ಲ ,ಉಪ್ಪಿನ ಕಾಯಿ ಉಪ್ಪಿನ ಸತ್ಯಾಗ್ರಹ ಇವೆಲ್ಲ ನಾವು ಕೇಳಿದ್ದೇವೆ. ಉಪ್ಪು ತಿಂದು ಸಾಗರವನ್ನು ರಕ್ಷಿಸುವ ಮ್ಯಾನ್ ಗ್ರೋವ ಎಲ್ಲದರ ಬಗ್ಗೆ ಈ ಧ್ವನಿ ನಿರೂಪಣೆ ಕೇಳಿ.

ಇದು ನಿಜವಾಗಿಯೂ ಒಂದು ಸ್ಪೂರ್ತಿದಾಯಕ ಆಟಿಕೆ. ಇದು ಶ್ರೀಲಂಕಾದಿಂದ ಬಂದಿದೆ. ಕೋಲನ್ನು  ಚಲಿಸುವಾಗ ಚಕ್ರವು ತಿರುಗುತ್ತದೆ ಮತ್ತು ಅದರೊಂದಿಗೆ ಒಂದು ವರ್ಣರಂಜಿತ ಪ್ಲಾಸ್ಟಿಕ್ ಬಾಟಲ್ ಫ್ಯಾನ್ ಕೂಡ ತಿರುಗುತ್ತದೆ. ಈ ಉಲ್ಲಾಸಕರ ಆಟಿಕೆ ಮಾಡಲು ನೀವು 60-ಸೆಂ ಮರದ ಕೋಲು, ಅದರ ರಿಮ್ ಮೇಲೆ ರಬ್ಬರ್ ಕವರ್ ಇರುವ ಟಿನ್ ಡಬ್ಬಿ  ಮುಚ್ಚಳ ಅಗತ್ಯವಿದೆ., ಮತ್ತು 2-ಲೀಟರ್ ಪ್ಲಾಸ್ಟಿಕ್ ಬಾಟಲ್ 

 

ಬಹುತೇಕ ಮಧ್ಯಮ ವರ್ಗದವರೇ ವಾಸವಾಗಿದ್ದ ವಲಯದಲ್ಲಿದ್ದ ನಾನು ಕಲಿಯುತ್ತಿದ್ದಂತಹ ಶಾಲೆಯಲ್ಲಿನ ವಿದ್ಯಾರ್ಥಿಗಳು ನನ್ನ ನೆರೆಹೊರೆಯವರಾಗಿದ್ದು, ಅವರಲ್ಲಿ ಅನೇಕರ ತಂದೆ ಅಥವಾ ತಾಯಿ ಒಂದೇ ಕಾರ್ಖಾನೆಯಲ್ಲಿ ದುಡಿಯುವವರಾಗಿದ್ದು ನಿರ್ದೇಶಕರಿಂದ ನೆಲಗುಡಿಸುವವನವರೆಗೂ ವಿಭಿನ್ನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು.  ಈ ಶಾಲೆಯಲ್ಲಿ ಕಲಿಯುತ್ತಿದ್ದಾಗಿನ ನನ್ನ ಅನುಭವವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಹಾಂಗ್‌ಕಾಂಗ್‌ನಲ್ಲಿ ಕಂಡ ಒಂದು ಮೀನಿನ ಕಥೆ
ಅನುರಾಧ ನಾಯ್ಡು

ಹಳ್ಳಿ ವಾತಾವರಣ ಯಾರಿಗೆ ಇಷ್ಟವಾಗಲ್ಲ ತಾನೆ? ಅದರಲ್ಲೂ ಎಳೆ ವಯಸ್ಸಲ್ಲಿ ಮತ್ತು ಇಳಿ ವಯಸ್ಸಲ್ಲಿ ತುಂಬಾನೆ ನೆನಪಾಗುವ ಮತ್ತು ಒಂದಷ್ಟು ಸಮಯ ವಿನಿಯೋಗಿಸಬೇಕು ಅನ್ನುವ ಸುಂದರವಾದ ಜಾಗ ಅದು. ನಾನು ಹುಟ್ಟಿ ಬೆಳೆದಿದ್ದು ಹಳ್ಳಿಯಲ್ಲೇ ಆದರೂ ನನಗೇಕೂ ಇತ್ತೀಚೆಗೆ ಅತ್ತ ಕಡೆ ಹೋಗಬೇಕೆಂದು ತುಂಬಾನೆ ಹಾತೊರೆಯುವಂತಾಗುತ್ತಿಲ್ಲ.. ಅದಕ್ಕೆ ನಾನಿರುವ ಪಟ್ಟಣ ಕಾರಣವೇ ಅಥವಾ ಆ ಹಳ್ಳಿ ವಾತಾವರಣ ನನ್ನ ಕರೆಯುತ್ತಿಲ್ಲವೇ ಒಂದಷ್ಟುಯೋಚಿಸುತ್ತಿದ್ದೇನೆ.

ಇಡೀ ಜೀವ ಸಂಕುಲದಲ್ಲಿ ಮನುಷ್ಯ ಕೂಡ ಒಂದು ಪ್ರಾಣಿ. ಆದರೆ ಅವನು ಎಲ್ಲಾ ಪ್ರಾಣಿಗಳಿಗಿಂತ ಭಿನ್ನವಾದ ಬುದ್ಧಿವಂತ ಪ್ರಾಣಿ ಎಂದು ನಮ್ಮ ವಿಜ್ಞಾನವು ಹೇಳುತ್ತದೆ. ಏಕೆಂದರೆ ಮನುಷ್ಯ ಮತ್ತು ಪ್ರಾಣಿಯ ನಡುವಿನ ಭಿನ್ನತೆಗೆ ಭಾಷೆಯೇ ಒಂದು ಪ್ರಮುಖವಾದ ಕಾರಣ ಎಂದು ಹೇಳಬಹುದು. ಭಾಷೆ ಎಂಬುದು ಒಂದು ಸಂವಹನ ಮಾಧ್ಯಮ. ಅಂದರೆ ನಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಪ್ರಮುಖ ಸಾಧನ ಎಂದು ಹೇಳಬಹುದು. ಇಂದು ಜಗತ್ತಿನಾದ್ಯಂತ ಸಾವಿರಾರು ಭಾಷೆಗಳು ಅಸ್ತಿತ್ವದಲ್ಲಿವೆ. ಅವುಗಳ ಮೂಲಕ ಜನರು ತಮ್ಮ ಮನದ ಇಂಗಿತವನ್ನು ಮತ್ತೊಬ್ಬರಿಗೆ ಮನದಟ್ಟು ಮಾಡುತ್ತಿದ್ದಾರೆ. ಅವು ಬುಡಕಟ್ಟು ಸಮುದಾಯದವರ ಸ್ಥಳೀಯ ಭಾಷೆಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗೆ ಇವೆ.

ಡುಮ್ಮ ರಾಜ ಒಂದು ಸಣಕಲು ನಾಯಿ ಸಾಕಿದ್ದ . ಒಂದುದಿನ ಇಬ್ಬರೂ  ವಿಹಾರಕ್ಕೆ ಹೊರಟರು.

ಮಕ್ಕಳ ಕುತೂಹಲದ ಚಿಗುರನ್ನು ಚಿವುಟದೇ ಬಿಟ್ಟರೇ, ತರ್ಕಗಳು ಸಹಜವಾಗಿ ಬೆಳೆದು, ಮನಸ್ಸು ಸಂಪೂರ್ಣವಾಗಿ ಅರಳಲು ಅವಕಾಶಮಾಡಿದಂತಾಗುತ್ತದೆ. ಕಮಲಾ ಮುಕುಂದರವರು ಬರೆದಿರುವಂತೆ ಎಲ್ಲಾವನ್ನೂ ಪಡೆದುಕೊಂಡೇ ಶಾಲೆಗೆ ಬರುವ ಮಕ್ಕಳಲ್ಲಿ ವ್ಯವಸ್ಥಿತವಾಗಿ ಜ್ಞಾನವನ್ನು ಹೆಚ್ಚಿಸಬೇಕಾಗಿದೆಯೇ ಹೊರತು, ಮಕ್ಕಳಲ್ಲಿ ಈಗಾಗಲೇ ಮೂಡಿರುವ ತರ್ಕಗಳನ್ನು, ಆಲೋಚನೆಗಳನ್ನು ದಿಕ್ಕು-ತಪ್ಪಿಸಬಾರದು. ಶಾಲೆ ಯಾವುದನ್ನು ಕಲಿಯಬೇಕೆಂಬುದನ್ನು, ಹೇಗೆ ಕಲಿಯಬೇಕೆಂಬುದನ್ನು ಅನುಕೂಲಿಸಬೇಕೆ ಹೊರತು, ಇಷ್ಟೇ ಕಲಿಯಬೇಕೆಂಬ ನಿರ್ಬಂಧ ಹೇರಬಾರದು.

" ನೀವು ಏನಾದರೂ ಹೇಳಿ ನಾನು ಅದನ್ನು ಮರೆಯುತ್ತೇನೆ. ನನಗೇನಾದರೂ  ಕಲಿಸಿ  ನಾನು ನೆನಪಿನಲ್ಲಿಟ್ಟು ಕೊಳ್ಳುತ್ತೇನೆ. ಮಾಡುವುದರಲ್ಲಿ ನನ್ನನ್ನೂ ಸೇರಿಸಿಕೊಳ್ಳಿ  ನಾನು  ಚೆನ್ನಾಗಿ  ತಿಳಿದುಕೊಳ್ಳುತ್ತೇನೆ ",  ಎಂದು ಬೆಂಜಮಿನ್ ಫ್ರಾಂಕ್ಲಿನ್ ಹೇಳಿದ್ದಾರೆ.


 

 

"   ಈ ಮಾತಿನ ಜೀವಂತ  ನಿದರ್ಶನ ಇಲ್ಲಿದೆ  

 ಪ್ರತಿವರ್ಷವೂ ದೇಶದ ಹಣಕಾಸು ಮಂತ್ರಿಗಳು ದೇಶದ ಹಣಕಾಸು ಮುಂಗಡಪತ್ರ ವನ್ನು ಸದನದ ಮುಂದೆ ಅನುಮೋದನೆಗಾಗಿ ಮಂಡಿಸುತ್ತಾರೆ.

ದೇಶದ ಬಜೆಟ್ ಎಂಬುದು ದೇಶದ ರಾಜಾದಾಯದ (ರೆವೆನ್ಯೂ) ಹಣ ಖರ್ಚು ಮಾಡಲು ಒಂದು ಯೋಜನೆಯನ್ನು ರಚಿಸುವ ಪ್ರಕ್ರಿಯೆ. ಈ ಖರ್ಚು ಯೋಜನೆಯನ್ನು  ಬಜೆಟ್ ಅಥವಾ ಹಣಕಾಸು ಮುಂಗಡಪತ್ರ ಎಂದು ಕರೆಯಲಾಗುತ್ತದೆ. ಈ ರೀತಿ ಖರ್ಚು ಯೋಜನೆ ತಯಾರಿಸುವುದರಿಂದ ದೇಶದ ಕಾರ್ಯಾಂಗ  ಮಾಡಲೇಬೇಕಾದ ಅಥವಾ ಮಾಡಲು ಬಯಸುವ ಕಾರ್ಯಗಳಿಗೆ  ಸಾಕಷ್ಟು ಹಣ ದೊರಕುತ್ತದೆಯೇ ಎಂಬುದನ್ನು  ಮುಂಚಿತವಾಗಿ ನಿರ್ಧರಿಸಲು ಸಾಧ್ಯವಾಗುತ್ತದೆ.

ಪುಟಗಳು(_e):

19439 ನೊಂದಾಯಿತ ಬಳಕೆದಾರರು
7743 ಸಂಪನ್ಮೂಲಗಳು