ಸಮಾಜ ಪಾಠಗಳು

     ಆರಡಿ ಮೂರಿಂಚು ಎತ್ತರದ ಆಕಾರ, ಕಟ್ಟು ಮಸ್ತಾದ ಮೈಕಟ್ಟು - ಪ್ರಭು ಅವರನ್ನು ನೋಡಿದಾಗ ಬಳ್ಳಾರಿಯಲ್ಲಿ ಏನು ಬಂದರೂ ಒಂದು ಕೈ ನೋಡಬಲ್ಲ ಆಸಾಮಿ ಎನಿಸುವಂತಿದ್ದರು.  ಆದರೆ ಬಳ್ಳಾರಿ ಬದುಕಿನ ರೀತಿ ನೀತಿ ಏನೇ  ಇರಲಿ ಪ್ರಭು ಅವರು ಮಾತ್ರ ಅತ್ಯಂತ ಸಾಧು ವಾದ ಮತ್ತು ಬಲು ಅರ್ಥ ಪೂರ್ಣವಾದ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.  ಬಳ್ಳಾರಿಯಲ್ಲಿ ಒಂದು ಬಲು ಗೌರವಾನ್ವಿತವಾದ  ಶಾಲೆಯನ್ನು ನಡೆಸುತ್ತಿದ್ದರು.
 

ಬಾಲ್ಯದ ಸವಿನೆನಪುಗಳನ್ನು ಹೊತ್ತು ಬಯಲು ನವೆಂಬರ್ ಸಂಚಿಕೆ ಬಂದಿದೆ.

ನಾನು ಚಿಕ್ಕವಳಿದ್ದಾಗ ಮನೆಯಲ್ಲಿ ಕಾಲಕಳೆಯುವದಕ್ಕಿಂತ ಹೆಚ್ಚಿನ ಸಮಯವನ್ನು ನನ್ನ ಸಮ ವಯಸ್ಸಿನವರೊಂದಿಗೆ ಆಟದ ಅಂಗಳದಲ್ಲಿ ಕಳೆಯಲು ಬಯಸುತ್ತಿದ್ದೆ. ಅದೇ ತಾನೆ ಮಳೆ ಬಂದು ನಿಂತ ನೀರು ಹರಿದು ಬದಿಯಲ್ಲಿ ಮರಳು ಶೇಕರಣೆ ಆದಾಗ ನಮಗೆಲ್ಲರಿಗೂ ಸುಗ್ಗಿಯೆ ಸುಗ್ಗಿ. ನಾವು ಮರಳಿನ ಗುಡ್ಡೆಯನ್ನು ಮಾಡಿ ಅದರಲ್ಲಿ ನಮ್ಮ ಒಂದು ಪಾದವನ್ನು ಸೇರಿಸಿ ಕೈಯಿಂದ ಮರಳನ್ನು ಒತ್ತಿ ಪಾದವನ್ನು ಹೊರಗೆ ಎಳೆದು ಕೊಂಡು ಇದು ಮನೆಯಾಯಿತ್ತು. ಎಂದು ಸಂತೋಷ ಪಡುತ್ತಿದ್ದೆವು.

ಗಾದೆಗಳು ಜೀವನಾನುಭವ ಬನಿಗಟ್ಟಿಬಂದ ಮಾತುಗಳು. ಹತ್ತುಕಟ್ಟುವ ಕಡೆ ಒಂದು ಮುತ್ತುಕಟ್ಟು ಎಂಬ ಗಾದೆ ಮಾತೇ ಇದೆ. ನೂರಾರು ಮಾತನಾಡುವ ಬದಲು ಒಂದೇ ಒಂದು ಗಾದೆಯನ್ನು ಸರಿಯಾದ ಸಮಯದಲ್ಲಿ ಪ್ರಯೋಗಿಸಿದರೆ ಅದು ಮನದಲ್ಲಿ ನಾಟಿ ನಿಲ್ಲುತ್ತದೆ ವಿಷಯ ಮನದಟ್ಟಾಗುತ್ತದೆ. ನಮ್ಮ ಪೂರ್ವಿಕರು ಕೃ಼ಷಿ ಶಾಸ್ತ್ರವನ್ನು ಬರೆದಿಟ್ಟಿದ್ದಾರೋ ಇಲ್ಲವೋ.ಆದರೆ ಗಾದೆ ಮಾತುಗಳಲ್ಲಿ ಅವು ಅಡಗಿವೆ.ಬಿ. ರಾಮಚಂದ್ರ ಭಟ್ ಅವರು 20 ಪ್ರಚಲಿತ ಗಾದೆ ಮಾತುಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ.

ಶ್ರಮ ಅನ್ನೋದು ನಮ್ಮ ದುಡಿಮೆಯಲ್ಲಿ ಅಡಗಿರುವ ಸತ್ಯ. ಶ್ರಮಕ್ಕೆ ಪರ್ಯಾಯ ಪದ ‘ಬೆವರು’ ಎಂದರೆ ತಪ್ಪಾಗದು. ಕೆಲಸ ಮಾಡದವನಿಗೆ
ಶ್ರಮದ ಅರ್ಥ ಮತ್ತು ಮಹತ್ವ ತಿಳಿಯದು. ಸೋಮಾರಿಗಳು ಇದರಿಂದ ಬಲುದೂರ. ಶ್ರಮ ಒಳ್ಳೆಯದಕ್ಕೂ ಇದೆ ಕೆಟ್ಟದ್ದಕ್ಕೂ ಇದೆ. ಫಲಿತಾಂಶ
ಮಾತ್ರ ಶ್ರಮವನ್ನು ಅವಲಂಭಿಸಿರುತ್ತದೆ. ಎರಡು ರೀತಿಯಲ್ಲಿ ನಾವು ಶ್ರಮವನ್ನು ನೋಡಬಹುದು. ಫಲಾಪೇಕ್ಷೆಯನ್ನು ಬಯಸಿ ಹೊಟ್ಟೆಪಾಡಿಗೆ
ಅಥವ ಜೀವನಕ್ಕಾಗಿ ಮಾಡುವ ಶ್ರಮ ಒಂದಾದರೆ, ಏನನ್ನೂ ನಿರೀಕ್ಷಿಸದೆ ಸೇವಾ ಮನೋಭಾವದಿಂದ ಪರರಿಗಾಗಿ ಮಾಡುವ ಶ್ರಮಧಾನ

 ಒಂದು ಸೀಮಾತೀತ, ವಿಚಾರಪೂರ್ಣ, ಕಲ್ಪನೆ ಗರಿಗೆದರಿದ ಸಹಯೋಗದ ಯೋಜನೆಯ ಮೂಲಕ ಇತಿಹಾಸವನ್ನು ಮಕ್ಕಳ ಮನಮುಟ್ಟುವಂತೆ ಹೇಗೆ ಬೋಧಿಸಬಹುದೆಂದು 

ಆತ ಆರು ವರ್ಷದ ಬಾಲಕ. ಶಾಲೆಗೆ ಹೋಗಿ ಗೆಳೆಯರ ಜೊತೆ ಮನೆಗೆ ಹಿಂತಿರುಗಿ ಬರುತ್ತಿದ್ದನು. ಮಾರ್ಗ ಮಧ್ಯೆ ಒಂದು ಮಾವಿನ ತೋಟ ಇತ್ತು. ಬಲಿತ, ದೋರಗಾಯಿ ಆಗಿದ್ದ ಗಿಡದಲ್ಲೇ ಹಣ್ಣಾಗಿದ್ದ ಮಾವಿನ ಕಾಯಿಗಳನ್ನು ಕಂಡು ಮಕ್ಕಳಿಗೆ ಕಿತ್ತು ತಿನ್ನುವ ಆಸೆಯಾಯಿತು. ದೊಡ್ಡ ಹುಡುಗರೆಲ್ಲಾ ಮರ ಏರಿ ಕಾಯಿ ಕೀಳಲಾರಂಭಿಸಿದರು. ಈ ಚಿಕ್ಕ ಹುಡುಗ ಆಸೆಗಣ್ಣಿನಿಂದ ಹಣ್ಣು ಗಳನ್ನೆ ನೋಡುತ್ತಾ ಗೆಳೆಯರಿಗಾಗಿ ಕಾಯತ್ತಾ ಕೆಳಗೆ ನಿಂತಿದ್ದ. ಹಿಂದಿನಿಂದ ತೋಟಗಾರ ಬಂದದ್ದು ಅವನಿಗೆ ಗೊತ್ತಾಗಲಿಲ್ಲ. ತೋಟಗಾರ ಕೆಳಗೆ ನಿಂತಿದ್ದ  ಆ ಹುಡುಗನನ್ನು ಮೊದಲು ಹಿಡಿದುಕೊಂಡನು.ತೋಟಗಾರನನ್ನು ಕಂಡದ್ದೇ ತಡ ಉಳಿದವರೆಲ್ಲ ಮರದಿಂದ ಧುಮುಕಿ ಪರಾರಿಯಾದರು.

 ಮಾಧ್ಯಮಿಕ ಶಾಲೆಯ (ಗ್ರೇಡು 5,6 ಮತ್ತು 7ರ) ಶಿಕ್ಷಕಿಯಾಗಿ ನಾನು ಮಕ್ಕಳು ತರಗತಿಯಲ್ಲಿ ಪಾಠ ನಡೆದಿರುವಾಗ, ತಮ್ಮ ಬಸ್ಸುಗಳಿಗಾಗಿ ಕಾಯುತ್ತಾ ಶಾಲೆಯ ಅಂಗಳದಲ್ಲಿ ಕುಳಿತು ಮಾತನಾಡುವಾಗ ಅಥವಾ ಶಿಕ್ಷಕರ ಕೊಠಡಿಯನ್ನು ದಾಟಿ ಮುಂದೆ ಹೋಗುವಾಗ ಒಬ್ಬರನ್ನೊಬ್ಬರು ಬೈಯುತ್ತಿರುವುದನ್ನು ಗಮನಿಸಿದ್ದೇನೆ. ಆರಂಭದಲ್ಲಿ ನಾನು ಹರೆಯಕ್ಕೆ ಬರುತ್ತಿರುವ ಮಕ್ಕಳು ಮಾತನಾಡುವಾಗ ಈ ರೀತಿಯಾಗಿ ಒಡ್ಡೊಡ್ಡಾಗಿ ಹಾಗೂ ಇನ್ನೊಬ್ಬ ಸ್ನೇಹಿತನ ಜತೆ ಮಾತು ಶುರು ಮಾಡಲು ಮೃದುವಾಗಿ ಚುಡಾಯಿಸುತ್ತಾ ಮಾತನಾಡುತ್ತಾರೆ ಅಂದುಕೊಂಡಿದ್ದೆ. ಆದರೆ ನಾನೊಬ್ಬ ಶಿಕ್ಷಕಿಯಾಗಿ ಯಾವಾಗಲೂ ಅವರು ಪರಸ್ಪರ ಎಂಥ ಭಾಷೆಯನ್ನು ಬಳಸುತ್ತಾರೆ, ಅವರು ಹಾಗೆ ಪ್ರತಿಕ್ರಿಯಿಸುವಾಗ ಕೋಪದಿಂದ ಇರುತ್ತಾರೆಯೇ ಎಂಬುದಕ್ಕೆ ಸದಾ `ಕಿವಿ'ಯಾಗಿರುತ್ತೇನೆ.

ಪುಟಗಳು(_e):

17934 ನೊಂದಾಯಿತ ಬಳಕೆದಾರರು
6757 ಸಂಪನ್ಮೂಲಗಳು