ವಿಜ್ಞಾನ ಮತ್ತು ತಂತ್ರಜ್ಞಾನ

ನಾವೆಲ್ಲರೂ ವರ್ತಮಾನ ಹಾಗೂ ಭವಿಷ್ಯತ್ತಿನ ನೆಲೆಯಲ್ಲಿ ಮಕ್ಕಳನ್ನು ಬಹು ನಿರೀಕ್ಷಿತ ಶೋಭಾಯಮಾನ ಕೂಸುಗಳು ಭವಿತವ್ಯದ ಸತ್ಪ್ರಜೆಗಳು ಎಂಬಂತೆ ಬುದ್ದಿಜೀವಿಗಳು ಮಾತನಾಡುವುದು, ಆ ನೆಲೆಯಲ್ಲಿ ಬೇಕಾದ ಸರ್ವ ಸಿದ್ಧತೆಗಳನ್ನು ಮಗುವಿನ ಬಾಲ್ಯ / ಬುನಾದಿಯಿಂದಲೇ ಮಾಡುತ್ತೇವೆ. ಹಾಗಾದರೆ ಸತ್ಪ್ರಜೆಗಳು ಎಲ್ಲಿ ರೂಪುಗೊಳ್ಳುತ್ತಾರೆ ?, ಹೇಗೆ ತಯಾರಾಗುತ್ತಾರೆ ? ಅವರನ್ನು ರೂಪಿಸುವವರು ಯಾರು ? ಎಂಬಂತಹ ಮೂಲಭೂತ ಪ್ರಶ್ನೆಗಳನ್ನು ಕಂಡುಕೊಳ್ಳುವ ಮಾಗಿ ಕಾಲ ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯ ಮೇಲಿರುವ ಜವಬ್ದಾರಿ. ಇದು ಕೇವಲ ಶಿಕ್ಷಣ ಇಲಾಖೆಯದ್ದೇ? ಅಥವ ಪ್ರತಿಯೊಬ್ಬ ನಾಗರೀಕನ ಮೂಲಭೂತ ಕರ್ತವ್ಯವೇ? ಈ ನೆಲೆಯಲ್ಲಿ ಯೋಚಿಸುತ್ತಿರುವಾಗ ಹತ್ತು ಹಲವು ಯೋಚನೆಗಳು ನಮ್ಮೊಳಗೆ ಮಿಂಚಿನಂತೆ ಸಂಚರಿಸುತ್ತವೆ.

ಪ್ರಸಿದ್ಧ ಭಾರತೀಯ ವೈಜ್ಞಾನಿಕ ಪ್ರೊಫೆಸರ್ ಯಶಪಾಲ್  ಅವರು ಇನ್ನಿಲ್ಲ. 90 ವರ್ಷದ ಸಾರ್ಥಕ ಜೀವನದ ನಂತರ 24-07-2017 ವರು ದೇಹಾಂತ ಹೊಂದಿದ್ದಾರೆ.

ಹಾಂಗ್‌ಕಾಂಗ್‌ನಲ್ಲಿ ಕಂಡ ಒಂದು ಮೀನಿನ ಕಥೆ
ಅನುರಾಧ ನಾಯ್ಡು

ನಮ್ಮ ವಸ್ತು ಪ್ರಪಂಚವನ್ನು ರೂಪಿಸುವ ಈ ರಾಸಾಯನಿಕ ಕ್ರಿಯೆ -ಪ್ರತಿಕ್ರಿಯೆಗಳು ಯಾವುವು? ಈ ಕ್ರಿಯೆ -ಪ್ರತಿಕ್ರಿಯೆಗಳಲ್ಲಿ ಹೆಚ್ಚಿನವು ಬಲವಾಗಿದ್ದು ನಿರ್ದಿಷ್ಟವಾಗಿರುತ್ತವೆ.,

ಇಂದಿನ ಜ್ಞಾನ ನಮಗೆ ಒಂದೇ ರಾತ್ರಿಯಲ್ಲಿ ಬರಲಿಲ್ಲ ಸಹಸ್ರಾರು ವರ್ಷಗಳಿಂದ ಕಲಿಯುತ್ತಿದ್ದೇವೆ.

 ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳು

ಇಂದು ಜೀವಶಾಸ್ತ್ರದ ಅನೇಕ ಕ್ಷೇತ್ರಗಳಲ್ಲಿ ಸೂಕ್ಷ್ಮದರ್ಶಕವು ಕರಾರುವಾಕ್ಕಾದ ಸಂಶೋಧನೆಗೆ ಬಹು  ಮುಖ್ಯ ಉಪಕರಣವಾಗಿದೆ. ಸರಳ ಮತ್ತು ಸಂಯುಕ್ತ ಸೂಕ್ಷ್ಮದರ್ಶಕಗಳ ಬಗ್ಗೆ ಚಟುವಟಿಕೆಗಳು ಇಲ್ಲಿವೆ

 

ಚಿಟ್ಟೆಗಳು ಅಂದಕ್ಕೂ ಆಶ್ಚರ್ಯಕ್ಕೂ ಆಕರ ಗಳಾಗಿವೆ. ಆದರೆ ಈ ಬೆಡಗಿನ ಕೀಟಗಳಿಗೆ ಇಂತಹ ಆಕರ್ಷಕ ಬಣ್ಣ ಬಂದದ್ದಾದರೂ ಹೇಗೆ? ಅವುಗಳನ್ನು ವೀಕ್ಷಿಸಲು ಸರಿಯಾದ ಸಮಯ ಯಾವುದು? ಅವುಗಳ ನಡವಳಿಕೆಯ ಬಗ್ಗೆ ನಮಗೇನು ಗೊತ್ತಿದೆ?

ವಿಜ್ಞಾನ ಕಾರ್ಯಾಗಾರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಸೃಷ್ಟಿಯ ಚಲನ ನಿಶ್ಚಲವಾದರೆ ಆಗುವ ಪರಿಣಾಮಗಳ ಬಗ್ಗೆ ಯೋಚಿಸಿ ಎಂದು ಕಾರ್ಯಾಗಾರದಲ್ಲಿ ಹೇಳಿ ಮನೆಗೆ ಇದೇ ವಿಷಯದ ಬಗೆಗೆ ಯೋಚಿಸುತ್ತಾ ತೆರಳಿದೆ. ರಾತ್ರಿ ಊಟದ ನಂತರ ವಿವಿಧ ಹಣ್ಣುಗಳ ರುಚಿಕರ ಜೇನು ಬೆರತ ಸಲಾಡ್‌ನ್ನು ಭರ್ಜರಿಯಾಗಿ ಸವಿದು ಹಾಗೇ ಹಾಸಿಗೆಗೆ ಜಾರಿದೆ. ನಿದಿರೆ ಆವರಿಸಿದುದೇ ತಿಳಿಯಲಿಲ್ಲ!!!! ಗಾಢವಾದ ನಿದ್ದೆ... ಆಗ ಬೆಳಗಿನ ಜಾವ ಏನೋ? ತಿಳಿಯಲಿಲ್ಲ. ಕಣ್ಣುಜ್ಜುತ್ತಾ ಎದ್ದು ಹೊರಬರುತ್ತಿದ್ದೇನೆ. ಸ್ವಲ್ಪ ಸೂರ್ಯ ರಶ್ಮಿ ಕಂಡಂತಾಯಿತು! ನೋಡು ನೋಡುತ್ತಿದ್ದಂತೆ... ರವಿಕಿರಣ ಭೂಮಿ ತಲುಪಲು ಸಾಧ್ಯವಾಗುತ್ತಿಲ್ಲ! ಅಲ್ಲೇ ಆಕಾಶದಲ್ಲೇ ಸಾಗುವ ದಾರಿಯಲ್ಲೇ ನಿಂತಂತೆ ಗೋಚರಿಸುತ್ತಿದೆ. ಭೂಮಿಯನ್ನೇ ತಲುಪುತ್ತಿಲ್ಲ.

ಪುಟಗಳು(_e):

18461 ನೊಂದಾಯಿತ ಬಳಕೆದಾರರು
7223 ಸಂಪನ್ಮೂಲಗಳು