ವಿಜ್ಞಾನ ಮತ್ತು ತಂತ್ರಜ್ಞಾನ

ನಾವು ಪ್ರತಿದಿನ ಬಳಸುವ ಟೂತ್ ಪೇಷ್ಟ್ನಲ್ಲಿ ಏನಿದೆ – ನೀವೇ ಸ್ವತಃ ಅದನ್ನು ತಯಾರಿಸಲು ಸಾಧ್ಯ ವಿ ಲ್ಲವೇ? ನಿಮ್ಮ ಅಡುಗೆಮನೆಯಲ್ಲಿ ಕಂಡುಬರುವ ವಸ್ತುಗಳಿಂದ ಸ್ವತಃ ಅದನ್ನು ತಯಾರಿಸಲು ಸಾಧ್ಯ ವಿಲ್ಲವೇ? ಈ ರೋಮಾಂಚಕಾರಿ ಚಟುವಟಿಕೆಯಲ್ಲಿ ಮಕ್ಕಳು ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಲಭ್ಯವಿರುವ ವಸ್ತುಗಳಿಂದ ಟೂತ್ಪೇಸ್ಟ್ ಮಾಡುತ್ತಾರೆ. ಇದು ಟೂತ್ ಪೇಸ್ಟ್ನಲ್ಲಿರುವ ವಿವಿಧ ಘಟಕಗಳನ್ನು ಮತ್ತು ಯಾವ ಪಾತ್ರವನ್ನು ಅವು ವಹಿಸುತ್ತವೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಒಂದು ಸಮಗ್ರ ಚಟುವಟಿಕೆಯಾಗಿದ್ದು, ಇದನ್ನು ತರಗತಿಯಲ್ಲಿ ಮಾಡಿಕಲಿ ವಿನೋದವನ್ನು ತರಲು ವಿಜ್ಞಾನ ತರಗತಿಯಲ್ಲಿ ಬಳಸಬಹುದು.

ವಿಜ್ಞಾನವು ಪರಿವೀಕ್ಷಣೆ, ಆಲೋಚನೆ, ಕಲ್ಪನೆ ಮಾಡುವಿಕೆ, ಪ್ರಯೋಗವನ್ನು ವಿನ್ಯಾಸಗೊಳಿಸುವುದು ಮತ್ತು ಪ್ರದರ್ಶನ ಮಾಡುವುದು, ಡೇಟಾವನ್ನು ಸಂಗ್ರಹಿಸುವುದು ಮತ್ತು ವಿಶ್ಲೇಷಣೆ ಮಾಡುವಿಕೆ, ಅವಲೋಕನಗಳನ್ನು ಮಾಡುವುದು, ಪರೀಕ್ಷೆಗಳನ್ನು ಪುನರಾವರ್ತಿಸುವುದು, ಮತ್ತಷ್ಟು ಸಾಮಾನ್ಯೀಕರಣ ಮತ್ತು ಪರಿಶೋಧನೆ ಮಾಡುವ ಪ್ರಕ್ರಿಯೆ. ಈ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಕಲಿಯುವವರಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಸೃಜನಾತ್ಮಕತೆಯನ್ನು ಉತ್ತೇಜಿಸಲು ನಾನು ಉತ್ತರಕಾಶಿ ಜಿಲ್ಲೆಯ ಒಂದು ಶಾಲೆಗೆ ಭೇಟಿ ನೀಡಿದ್ದೇನೆ. ಇದು ಉತ್ತರಕಾಶಿ ಪಟ್ಟಣಕ್ಕೆ ಸಂಪರ್ಕ ಹೊಂದಿರುವ ಅರೆ ನಗರ ಜಿಯಾನ್ಸು ಪ್ರದೇಶದಲ್ಲಿ ಉತ್ತರಕಾಶಿ ಸರ್ಕಾರಿ ಪ್ರಾಥಮಿಕ ಶಾಲೆಯಾಗಿದೆ.

`ಮೇರಿ ಕ್ಯೂರಿ’ ಎಂಬುದು ಕೇವಲ ಒಂದು ಹೆಸರಲ್ಲ. ವೈಜ್ಞಾನಿಕ ಚಿಂತನೆ, ಸಂಶೋಧನಾ ಮನೋಭಾವ, ಕಠಿಣ ಪರಿಶ್ರಮ, ನಿಸ್ವಾರ್ಥ ಬದುಕು, ಜೀವಪರ ಮೌಲ್ಯ, ದಿಟ್ಟತನ, ದೈತ್ಯ ಸಾಧನೆಗಳ ಒಂದು ಮಹಾನ್ ಸಂಕೇತ.

ಈ ಸರಳ ಸಿಡಿ ರೋಹಿತ ದರ್ಶಕವನ್ನು ದಕ್ಷಿಣ ಆಫ್ರಿಕಾದ ಪ್ರೊಫೆಸರ್ ಅಶ್ವರ್ತ್ ವಿನ್ಯಾಸಗೊಳಿಸಿದ್ದಾರೆ. ನಿಮಗೆ ಒಂದು ಹಳೆಯ ಸಿಡಿ, ಪ್ರಿಂಟ್ಔಟ್ ಎ -4 ಗಾತ್ರದ ಕಾರ್ಡ್ ಶೀಟ್, ಕತ್ತರಿ ಮತ್ತು ಅಂಟು ಬೇಕು. ಬಾಕ್ಸ್ನ ಆಯಾಮಗಳನ್ನು ಈ ರೇಖಾಚಿತ್ರದಲ್ಲಿ ನೀಡಲಾಗಿದೆ. ಒಂದು ತುದಿಯಲ್ಲಿ ಎರಡು ಚೌಕಗಳನ್ನು ಕತ್ತರಿಸಿ ಚುಕ್ಕೆಗಳ ರೇಖೆಗಳ ಉದ್ದಕ್ಕೂ ಕತ್ತರಿಸಿ. ನಂತರ ಕಾಗದದ ಉದ್ದನೆಯ ಕಿಂಡಿ ಕತ್ತರಿಸಿ. ಸಿಡಿಯನ್ನು ಈ ಕಿಂಡಿ ಮೂಲಕ ಸೇರಿಸಲಾಗುತ್ತದೆ. ನೋಡುವ ಒಂದು ಸಣ್ಣ ಆಯತಾಕಾರದ ಕಿಂಡಿ ಮತ್ತು ವೃತ್ತಾಕಾರದ ಕಿಟಕಿಗಳನ್ನು ಸಹ ಕತ್ತರಿಸಿ. ಈಗ ಎಲ್ಲಾ ಸಾಲುಗಳನ್ನು ನಿಧಾನವಾಗಿಮಡಿಕೆ ಮಾಡಿ ನಂತರ ಕಾರ್ಡ್ ಶೀಟ್ ಅನ್ನು ಸಣ್ಣ ಆಯತಾಕಾರದ ಬಾಕ್ಸ್ ಮಾಡಲು ಪದರ ಮಾಡಿ.

ಉಪ್ಪಿಗಿಂತ ರುಚಿಯಿಲ್ಲ ,ಉಪ್ಪಿನ ಕಾಯಿ ಉಪ್ಪಿನ ಸತ್ಯಾಗ್ರಹ ಇವೆಲ್ಲ ನಾವು ಕೇಳಿದ್ದೇವೆ. ಉಪ್ಪು ತಿಂದು ಸಾಗರವನ್ನು ರಕ್ಷಿಸುವ ಮ್ಯಾನ್ ಗ್ರೋವ ಎಲ್ಲದರ ಬಗ್ಗೆ ಈ ಧ್ವನಿ ನಿರೂಪಣೆ ಕೇಳಿ.

  ನಾನು ಸ್ವಾಮಿ ವಿವೇಕಾನಂದ ಗ್ರಾಮೀಣ ಶಿಕ್ಷಣ ಸೊಸೈಟಿ ಶಾಲೆಯಲ್ಲಿರುವ ಮಾಧ್ಯಮಿಕ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿ ಆಗಿದ್ದೇನೆ. ನಾನು ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರವನ್ನು ಕಲಿಸುತ್ತೇನೆ. ನನ್ನ ಮಕ್ಕಳು ಪಾಠ ಕಲಿಯುವುದನ್ನು ಆನಂದಿಸುವಾಗ ನಾನು ನನ್ನ ತರಗತಿಯಲ್ಲಿ ಪಾಠಮಾಡುವುದನ್ನು ಆನಂದಿಸುತ್ತೇನೆ. ಅದಕ್ಕಾಗಿಯೇ ನಾನು ನನ್ನ ಪಾಠಗಳನ್ನು ನವೀನ ಮತ್ತು ಸಾಧ್ಯವಾದಷ್ಟು ಮಾಡಿ ತೋರಿಸ ಬಹುದಾದದ್ದನ್ನಾಗಿ ಇರಿಸಿಕೊಳ್ಳಲು ಪ್ರಯತ್ನಿಸುತ್ತೇನೆ.

ಫ್ಯೂಸ್ ಎಂದರೇನು? ಎಲೆಕ್ಟ್ರಿಕ್ ಫ್ಯೂಸ್ ಅದನ್ನು ಏತಕ್ಕಾಗಿ ಬಳಸುತ್ತಾರೆ ಎಂದು ಅಗಸ್ತ್ಯ ಇಂಟರ್ನ್ಯಾಷನಲ್ ಫೌಂಡೇಷನ್ ಅವರು ತಯಾರಿಸಿದ ವಿಡಿಯೋದಲ್ಲಿ ತಿಳಿಸಲಾಗಿದೆ 

ಕೆಲವೊಮ್ಮೆ ಒಂದು ಒಂದು ನಿಮಿಷದ ಮೂಕ ವಿಡಿಯೋ ನಮ್ಮಲ್ಲಿ ನಮ್ಮ ದುರಾಶೆ ಮತ್ತು ಶೋಷಿಸುವ ಮೃಗಕ್ಕೆ ಕನ್ನಡಿಯನ್ನು ಹಿಡಿದು  ತೋರಿಸುತ್ತದೆ. ಇದನ್ನೇ ಆಕರ  ವಿಚಾರವಾಗಿ ತೆಗೆದುಕೊಳ್ಳಿ, ಚರ್ಚೆಯನ್ನು ಪ್ರಾರಂಭಿಸಿ, ಅವರು 'ಅಭಿವೃದ್ಧಿಯ' ಕರಾಳ ಭಾಗವನ್ನು ಕಾಣುವಂತೆ ಮಾಡಿ, ಅವರನ್ನು ಚರ್ಚೆಗೆ ಆಹ್ವಾನಿಸಿ, ಶಾಲೆಯಲ್ಲಿ ಮತ್ತು ಮನೆ ಮಟ್ಟದಲ್ಲಿ ಆಬಗ್ಗೆ ಕೆಲಸ ಮಾಡಲು ಪ್ರೇರೇಪಿಸಿ ಮತ್ತು ಹವಾಮಾನ ಯೋಧರ ಮುಂದಿನ ಪೀಳಿಗೆಯನ್ನು ಹೊರಹೊಮ್ಮಿಸಲು ಸಹಾಯ ಮಾಡಿ.

ನಾನು ನಿಮಗೆ ಕೆಲವು ಸರಳ ಪ್ರಯೋಗಗಳನ್ನು ತೋರಿಸಲು ಹೋಗುತ್ತೇನೆ. ನಾವು ಮಾಡುತ್ತಿರುವ ಹಲವಾರು ಪ್ರಯೋಗಗಳು ನಮ್ಮ ಇಂದ್ರಿಯಗಳ ಬಗ್ಗೆ ಮತ್ತು ಮೆದುಳಿನ ಮೂಲಕ ನಾವು ಹೇಗೆ ನೋಡುತ್ತೇವೆ, ಕೇಳುತ್ತೇವೆ ಅಥವಾ ಸ್ಪರ್ಶಿಸುತ್ತದೆ ಎಂಬುದನ್ನುತಿಳಿಸುತ್ತದೆ. ನಾನು ಪುಲ್ಫರಿಚ್ ಪರಿಣಾಮ ಎಂಬ ಪ್ರಯೋಗವನ್ನು ನಿಮಗೆ ತೋರಿಸುತ್ತೇನೆ. ಇದಕ್ಕಾಗಿ ನನಗೆ ಕೆಲವು ಅಗ್ಗದ ಬಿಸಿಲು ಕನ್ನಡಕಗಳ ಅಗತ್ಯವಿದೆ. ಈ ಒಂದು ನಿರ್ದಿಷ್ಟ ಲಕ್ಷಣವಿದೆ – ಅವುಗಳಲ್ಲಿ ಒಂದು ಲೆನ್ಸ್ ಕಾಣೆಯಾಗಿದೆ. ಹಾಗಾಗಿ, ನಾನು ಮಾರುಕಟ್ಟೆಗೆ ಹೋದೆ ಮತ್ತು ನಾನು ಬಹಳ ಕಡಿಮೆ ಅಗ್ಗದ ಬಿಸಿಲು ಕನ್ನಡಕಗಳ ಖರೀದಿಸಿದೆ. ಒಂದು ಲೆನ್ಸ್ ತೆಗೆದುಹಾಕಲು ನಿಮಗೆ ಸ್ವಲ್ಪ ಸಹಾಯ ಬೇಕು.

ಪುಟಗಳು(_e):

18096 ನೊಂದಾಯಿತ ಬಳಕೆದಾರರು
6935 ಸಂಪನ್ಮೂಲಗಳು