ವಿಜ್ಞಾನ ಮತ್ತು ತಂತ್ರಜ್ಞಾನ

 ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಾಗಿ ಈ ವಿಡಿಯೋವನ್ನು ತಯಾರಿಸಲಾಗಿದೆ

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ, ೨೦೦೯ (ಇನ್ನು ಮುಂದೆ ಆರ್‌ಟಿಇ ), ಇದುವರೆಗೂ ಹೆಚ್ಚು ಕಡಿಮೆ ಅಲ್ಪ ಜೀವಿತಾವಧಿಯನ್ನು ಹೊಂದಿದ್ದು, ಶಿಕ್ಷಣ ತಜ್ಞರ, ನೀತಿ ಸಂಯೋಜಕರ, ನಾಗರಿಕ ಸಮಾಜದ ಕಾರ್ಯಕರ್ತರ, ಖಾಸಗಿ ಮತ್ತು ಸರ್ಕಾರ ಶಾಲಾ ಸಂಸ್ಥೆ ಗಳ ಪ್ರತಿನಿಧಿಗಳ ಮತ್ತು ತಂದೆತಾಯಿಯರ  ಗುಂಪುಗಳಿಂದಲೂ ಹೊಗಳಿಕೆ ಮತ್ತು ಹೀಯಾಳಿಕೆ ಎರಡನ್ನೂ ಪಡೆದಿದೆ. ಕಾಯ್ದೆಯ ಕಲಂ ೧೨ (೧) (ಸಿ) ರಲ್ಲಿರುವ  ’ಶೇಕಡ ೨೫ರಷ್ಟು ಸ್ಥಳಾವಕಾಶ ದಲ್ಲಿ ಸಮಾಜದ ಕಡೆಗಣಿತ ವರ್ಗದ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಸೇರಿಸಕೊಳ್ಳಬೇಕೆಂಬ ಕಾನೂನು ಗಮನಾರ್ಹ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟಿರುವುದೇಅಲ್ಲದೆ ಮತ್ತು ಮಾಧ್ಯಮಗಳ ಗಮನ ವನ್ನೂ ಸೆಳೆದಿದೆ .

ವಿಜ್ಞಾನಕ್ಕೆ ಸಂಬಂಧಿಸಿದಂತೆ ಹೊಸ ದೃಷ್ಟಿಕೋನಗಳನ್ನು ಕೊಡಬಹುದಾದ ಯಾವುದಾದರೂ ರಸವತ್ತಾದ ಪುಸ್ತಕವೊಂದರ ನಿರೀಕ್ಷೆಯಲ್ಲಿ ನೀವಿದ್ದರೆ, ಇದೋ ಇಲ್ಲಿದೆ ನೋಡಿ, ಅಂತಹ ಒಂದು ಪುಸ್ತಕ:The Agenda of the Apprentice Scientist. ಇದನ್ನು ನಾವು ಕನ್ನಡದಲ್ಲಿ ಅರ್ಥಮಾಡಿಕೊಳ್ಳುವ ಸಲುವಾಗಿ ’ಅಭ್ಯಾಸಿ ವಿಜ್ಞಾನಿಯೊಬ್ಬನ ಕಾರ್ಯಸೂಚಿ’ ಎಂದು ಕರೆಯಬಹುದು. ಈ ಲೇಖನದಲ್ಲಿ ಈಶಾನ್ ಮತ್ತು ಸಂಗೀತಾ ರಾಜ್ ಎಂಬ ತಾಯಿ ಮಗನ ಜೋಡಿಯೊಂದು ಈ ಪುಸ್ತಕವನ್ನು ಓದುವಾಗ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ನೀವು ಕೂಡ ಅವರ ಸಂತೋಷದಲ್ಲಿ  ಜೊತೆಗೂಡಿರಿ.  

ಕನ್ನಡ

ಈ ವ್ಯಾಸಂಗಾವಧಿಯಲ್ಲಿ ನಾನು ‘ಅನುವಂಶೀಯತೆ ಮತ್ತು ವಿಕಾಸ’ ಅಧ್ಯಾಯ ವನ್ನು  ಬೋಧಿಸುತ್ತೇನೆ.

ಇಂದು ನಾವು ಸ್ಥಳಾಂತರ ಪ್ರತಿಕ್ರಿಯೆಯನ್ನು ನಡೆಸುತ್ತೇವೆ ಮತ್ತು ಚರ್ಚಿಸುತ್ತೇವೆ. ಇದಕ್ಕಾಗಿ ಫೆರಸ್ ಸಲ್ಫೇಟ್, ಝಿಂಕ್ ಲೋಹದ ತುಣುಕುಗಳು, ಖಾಲಿ ಬೀಕರ್, ಸ್ಟಿರರ್ ಮತ್ತು ಲೋಟ ಭರ್ತಿ ನೀರು ಕೆಲವು ಸ್ಫಟಿಕಗಳ ಅಗತ್ಯವಿದೆ. ನಾವು ಮೊದಲು ಫೆರಸ್ ಸಲ್ಫೇಟ್   ದ್ರಾವಣವನ್ನು ಮಾಡುತ್ತೇವೆ. ಇದಕ್ಕಾಗಿ ಖಾಲಿ ಬೀಕರ್ನಲ್ಲಿ ಫೆರಸ್ ಸಲ್ಫೇಟ್ನ ಕೆಲವು ಹರಳುಗಳು  ಹಾಕಿರಿ. ನಂತರ  ಸ್ವಲ್ಪ ನೀರು ಸೇರಿಸಿ ಮತ್ತು ಬೆರೆಸಿ. ಸ್ವಲ್ಪ ಸಮಯದ ನಂತರ ನೀವು ಫೆರಸ್ ಸಲ್ಫೇಟ್ನ ಶುದ್ಧ ದ್ರಾವಣವನ್ನು ಪಡೆಯುತ್ತೀರಿ. ಈ ದ್ರಾವಣವು ಹಳದಿ ಬಣ್ಣದಲ್ಲಿರುತ್ತದೆ. ಫೆರಸ್ ಸಲ್ಫೇಟ್ನ ಈ ದ್ರಾವಣಕ್ಕೆ ನಾವು ಕೆಲವು ಜಿಂಕ್ ಲೋಹಗಳನ್ನು ಸೇರಿಸಿಕೊಳ್ಳುತ್ತೇವೆ.

ಪುಟಗಳು(_e):

18111 ನೊಂದಾಯಿತ ಬಳಕೆದಾರರು
6936 ಸಂಪನ್ಮೂಲಗಳು