PKS

ಗಣಿತವೆಂದರೆ ಶಾಲೆಯ ಪಾಠಗಳಲ್ಲಿ ಅತಿ ಕಷ್ಟವಾದದ್ದು ಮತ್ತು ಮಕ್ಕಳಿಗೆ ಇಷ್ಟವೇಆಗದ ವಿಷಯವೆಂಬ ಭಾವನೆ ಇದೆ. ಬಹಳಷ್ಟು ಮಕ್ಕಳು ಇದು ಬಹಳ ಬೋರು ಹೊಡೆಸುವ ವಿಷಯ ಮತ್ತು ಬದುಕಿಗೆ ಏನೇನೂ ಸಂಬಂಧಪಡದಂತದ್ದು ಎಂದು ತಿಳಿದುಕೊಂಡಿರುತ್ತಾರೆ.ಹೀಗಿದ್ದರೂ, ಸ್ವಲ್ಪ ತಾಳ್ಮೆವಹಿಸಿದರೆ ಮತ್ತು ಗಣಿತದ ಸುತ್ತಲಿನ ತತ್ವಗಳನ್ನು ಅರಿತುಕೊಂಡರೆ ಮಕ್ಕಳಿಗೆ ಗಣಿತವು ಪ್ರಿಯ ವಿಷಯವಾಗಬಲ್ಲದು.

ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಅಪವರ್ತನಗಳನ್ನು ಮೊದಲು ಪರಿಚಯಿಸುವಾಗ ಮಕ್ಕಳು ಗೊಂದಲಕ್ಕೆ ಒಳಗಾಗುವುದುಂಟು ಆದರೆ ಸ್ವಲ್ಪ ಪ್ರಯತ್ನ ಪಟ್ಟರೆ ಅಪವರ್ತನಗಳ ಪರಿಕಲ್ಪನೆಗಳನ್ನು ಮತ್ತು ಅಧಿಕತಮ ಸಾಮಾನ್ಯ ಅಪವರ್ತನ(ಅ ಸಾ ಅ)ದ ಪರಿಕಲ್ಪನೆಗಳನ್ನು ಬಹಳ ಸುಲಭವಾಗಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಬಹುದು ಉದಾಹರಣೆಗೆ ಈ ಚಟುವಟಿಕೆ ಆಧಾರಿತ ಪಾಠವನ್ನು ನೋಡಬಹುದು.

ಗುಣಾಕಾರ ಮತ್ತು ಭಾಗಕಾರ ಮಾಡುವುದು ಕೆಲವೊಮ್ಮೆ ಬಲುಗೋಜು ಎನಿಸಬಹುದು. ಮಕ್ಕಳು ಮಾಡುತ್ತಿರುವಾಗಂತೂ ಈ ಭಾವನೆ ಅವರಲ್ಲಿ ಇನ್ನೂ ಹೆಚ್ಚು. ಕೆಲವಾರು ಸಣ್ಣ ಮತ್ತು ದೊಡ್ಡ ಸಂಖ್ಯೆಗಳ ಗುಣಾಕಾರ ಮಾಡಲು ಇಲ್ಲಿ ಸುಲಭೋಪಾಯಗಳಿವೆ. ಇದೆ ಒಂದು ವಿನೋದದಾಟ ವಾಗಬಹುದು ಮತ್ತು ಆಟದ ರೀತಿಯಲ್ಲಿ ಮಾಡಿದಾಗ ಮಕ್ಕಳಲ್ಲಿ ಗಣಿತದ ಬಗ್ಗೆ ಆಸಕ್ತಿ ಮಾಸದೇ ಉಳಿಯುತ್ತದೆ.

19009 ನೊಂದಾಯಿತ ಬಳಕೆದಾರರು
7424 ಸಂಪನ್ಮೂಲಗಳು