pi

ಇಂದು ನಾವು ವರ್ಗ ಚಟುವಟಿಕೆಯ ಮೂಲಕ ಪೈ ಮೌಲ್ಯವನ್ನು ಕಂಡುಕೊಳ್ಳೋಣ. 22 ಮಕ್ಕಳು ಕೈಗಳನ್ನು ಪರಸ್ಪರ ಹಿಡಿದು ಅಂದಾಜು ವೃತ್ತಾಕಾರದಲ್ಲಿ ಕುಳಿತುಕೊಳ್ಳುತ್ತಾರೆ. 7 ಮಕ್ಕಳು ಕೈಗಳನ್ನು ಪರಸ್ಪರ ಹಿಡಿದು ವೃತ್ತದ ವ್ಯಾಸದಲ್ಲಿ ಕುಳಿತುಕೊಳ್ಳುತ್ತಾರೆ. ಇದು ಪೈ ಮೌಲ್ಯವನ್ನು ತೋರಿಸುತ್ತದೆ - ವೃತ್ತದ ವ್ಯಾಸದ ಸುತ್ತಳತೆಯ ಅನುಪಾತ ಸುಮಾರು 22/7 ಆಗಿರುತ್ತದೆ.

 

ಪೈ ಎಂಬ ಅನಂತ ಸಂಖ್ಯೆಯ ಸೌಂದರ್ಯ & ಸಾರ್ವತ್ರಿಕತೆಯನ್ನು  ಪರಿಚಯಿಸಲು ಮತ್ತು ಪರಿಶೋಧಿಸಲು ನಾವು ಸಂಗ್ರಹಿಸಿದ ಕೆಲವು ಚಟುವಟಿಕೆಗಳನ್ನು ನಿಮಗೆ ನೀಡುತ್ತಿದ್ದೇವೆ. ಇಂದು ಪ್ರಯತ್ನಿಸಿ, ಮತ್ತು ವಿಶ್ವ ಪೈ ದಿನವನ್ನು.ಆಚರಿಸಿರಿ.

 

1. ನಿಮ್ಮ ಆಯ್ಕೆಯ ಯಾವುದೇ ವೃತ್ತವನ್ನು ತೆಗೆದುಕೊಳ್ಳಿ.  ಮುಂದೆ ಅದೇ ತರಹದ  4  ವೃತ್ತಗಳನ್ನು ರಚಿಸಿರಿ.

ಒಂದು  ವೃತ್ತದ ಪರಿಧಿಯ  ಮತ್ತು ಅದರ ವ್ಯಾಸದ  ಅನುಪಾತವು ಯಾವಾಗಲೂ ಒಂದೇ ಅಗಿರುತ್ತದೆ ಅಂದರೆ : 3,14159 ... ಮತ್ತು ಅನಂತವಾಗಿ ಮುಂದುವರೆಯುತ್ತದೆ  ( ಇದು ಅಕ್ಷರಶಃ ನಿಜ!). ಈ  ಅಭಾಗಲಬ್ಧ ಸಂಖ್ಯೆ, ಪೈ, ಅನಂತ ಅಂಕಿಗಳ ಒಂದು ಸಂಖ್ಯೆ, ಆದ್ದರಿಂದ ಎಷ್ಟೇ ಹತ್ತಿರಕ್ಕೆ ಬಂದೆವು ಎನಿಸಿದರೂ  ಅದರ ನಿರ್ದಿಷ್ಟ ಅಳತೆಯ ಲೆಕ್ಕಾಚಾರ ಎಂದಿಗೂ ನಮಗೆ ನಿಲುಕುವುದಿಲ್ಲ. ರೆನಾಲ್ಡೋ ಲೋಪ್ಸ್ ಅವರು ಸಂಗೀತ, ಆರ್ಥಿಕ ಮಾದರಿಗಳು, ಮತ್ತು ಬ್ರಹ್ಮಾಂಡದ ಸಾಂದ್ರತೆ ಅಧ್ಯಯನಕ್ಕೆ ಸಹ ಪೈ  ಹೇಗೆ ವ್ಯಾಪಕವಾಗಿ  ಅನ್ವಯವಾಗುತ್ತದೆ ಎಂಬುದನ್ನು  ವಿವರಿಸುತ್ತಾರೆ.

18624 ನೊಂದಾಯಿತ ಬಳಕೆದಾರರು
7274 ಸಂಪನ್ಮೂಲಗಳು