Learning

ಕಲಾಕೃತಿಯ ರಚನೆಯ ಮೂಲಕ ವಿದ್ಯಾರ್ಥಿಗಳು ಹೊಸ ಆಲೋಚನೆಗಳನ್ನು ರಚಿಸಬಹುದು ಮತ್ತು ತಿಳಿಸಬಹುದು. ಕಲಾಕೃತಿಯನ್ನು ನೋಡುವ ಮೂಲಕ, ವಿದ್ಯಾರ್ಥಿಗಳು ಹೊಸ ದಿಕ್ಕುಗಳು ಮತ್ತು ಹೊಸ ಆಲೋಚನೆಗಳಿಂದ ಸ್ಫೂರ್ತಿ ಪಡೆಯಬಹುದು. ಈ ಕರೇನ್ ಹೇಡಾಕ್ ಲೇಖನವನ್ನು ಓದಿ ನೋಡಿ, ಇದರಲ್ಲಿ ವಿಜ್ಞಾನದ ತಲುಪುವ ಮತ್ತು ಕಲಿಕೆಯ ಬಗ್ಗೆ ತನ್ನ ವ್ಯಾಪಕ ಅನುಭವವನ್ನು ಬರೆದಿದ್ದಾರೆ.
 

ಸಾರಾಂಶ

ಮಗುವಿಗೆ ಏನೂ ಗೊತ್ತಿರುವುದಿಲ್ಲ, ನಾನು ಹೇಳಿದುದನ್ನು ನಾನು ಹೇಳಿದ ಹಾಗೆಯೇ ಕಲಿಯಬೇಕು, ಯಾವ ಪ್ರಶ್ನೆಯನ್ನೂ ಅದು ಕೇಳ ಕೂಡದು, ಕಲಿಕೆ ಕೇವಲ ತರಗತಿಯಲ್ಲಿ ಮಾತ್ರವೇ ನಡೆಯಬಲ್ಲುದು” ಎಂದು ಭಾವಿಸುವುದು ಮಹಾ ಮೂರ್ಖತನ.

ಅದು ೧೯೯೯ನೇ ಇಸವಿ,ಅಕ್ಟೋಬರ್ ೨೦ನೆಯ ತಾರೀಕು. ನಾನು ಪ್ರಶಿಕ್ಷಕನೆಂಬ ನೆಲೆಯಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ ಮೊದಲ ದಿನ. ಯೋಗಾಯೋಗ ಎಂಬಂತೆ ನಾನು ಕಲಿತ ಕಾಲೇಜಿನಲ್ಲಿಯೇ ಅಂದರೆ ಬಿ ಎಡ್ ಮತ್ತು ಎಂ ಎಡ್ ವ್ಯಾಸಂಗ ಪೂರೈಸಿದ ಉಡುಪಿಯ ಡಾ ಟಿ ಎಂ ಎ ಪೈ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಉಪನ್ಯಾಸಕನಾಗಿ ನಿಯುಕ್ತನಾದೆ. ಹಿಂದೊಮ್ಮೆ ನಾನಲ್ಲಿ ವಿದ್ಯಾರ್ಥಿ.ಈಗ ನಾನಲ್ಲಿ ಅಧ್ಯಾಪಕ! ನಿಜ ಹೇಳ ಬೇಕೆಂದರೆ ಇದು ನನ್ನಲ್ಲಿ ಯಾವುದೇ ಬಗೆಯ ಪುಳಕವನ್ನುಂಟು ಮಾಡಲಿಲ್ಲ. ಬದಲಿಗೆ ಸಾಕಷ್ಟು ಆತಂಕ,ಉದ್ವೇಗ,ಭಯವನ್ನುಂಟು ಮಾಡಿತ್ತು.ಓರ್ವ ವಿದ್ಯಾರ್ಥಿಯಾಗಿ ಕಲಿಸಿದ ಅಧ್ಯಾಪಕರೊಡನೆ ಬೆರೆಯುವುದು ಬೇರೆ.

 ಸುತ್ತಲು ಈಗಷ್ಟೆ ಮೈದುಂಬಿ ಬೆಳೆದು ನಿಂತಿರುವ ತೆಂಗಿನ ಮರಗಳು. ಅದಕ್ಕೂ ಎತ್ತರಕ್ಕೆ ಏರಿ ಕಂಗೊಳಿಸುತ್ತಿರುವ ಉದ್ದನೆಯ ಇತರೆ ಮರಗಳು. ವಿಶಾಲವಾದ ಹಸಿರು ಹುಲ್ಲು ಹಾಸಿನ ಮೈದಾನ. ಕೇಸರಿ ಬಿಳಿ ಹಸಿರು ಬಣ್ಣದಿಂದ ಶೋಭಿಸುತ್ತಿರುವ  ಸಾಲು ಸಾಲು ಕಂಬಗಳ ಹಿಂದೆ ಸದಾ ಸ್ವಚ್ಚವಾಗಿರುವ ತರಗತಿ ಕೊಠಡಿಗಳು.  ಯಾದಗಿರಿಯಂತಹ ಬಿಸಿಲುನಾಡಿನಲ್ಲಿಯೂ ಕೂಡ ಮಲೆನಾಡಿನ ವಾತಾವರಣದ ಅನುಭವ. ಇದು ನನ್ನ ಫೆಲೋಷಿಪ್ನ ಬೋಧನ–ಕಲಿಕಾ ಪ್ರಕ್ರಿಯೆಗಾಗಿ ಆಯ್ದುಕೊಂಡ  ಯಾದಗಿರಿ ನಗರದಿಂದ ಸುಮಾರು ಹದಿನೈದು ಕಿಲೋಮೀಟರ್ ಅಂತರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿತ್ರಣ. ಇಲ್ಲಿಯ ತನಕ ಪ್ರಾಥಮಿಕ ಶಾಲಾ ಹಂತದ ಮಕ್ಕಳ ಕಲಿಕೆಯಲ್ಲಿ ಭಾಗವಹಿಸಿದ ಅನುಭವ ಇಲ್ಲದ ನಾನು ಬಹಳ ಹಿಂಜರಿಕೆಯಿಂದಲೆ ಶಾಲೆಗೆ ಪ್ರವೇಶಿಸಿದ್ದೆ.

ಬೋಧನೆ ಕಲಿಕೆ ವಿಧಾನಗಳು ವಿದ್ಯಾರ್ಥಿಯ ಕಲಿಕೆಯ ಗುಣಮಟ್ಟ ಹೆಚ್ಚಿಸ ಬೇಕೆಂಬುದು ‍ಶಿಕ್ಷಣ ಕ್ಷೇತ್ರದ ಎಲ್ಲರ ಹೆಬ್ಬಯಕೆ.ಅದಕ್ಕಾಗಿ ವಿವಿಧ ವಿಷಯಗಳನ್ನು ಬೋಧಿಸುವಲ್ಲಿ ಹಲವು ಉಪಾದ್ಯಾಯರು ವ್ಯಕ್ತಿಗತವಾಗಿ ರೂಪಿಸಿಕೊಂಡ ಯಶಸ್ವಿ ತಂತ್ರಗಳನ್ನು ಈ ಸಂಚಿಕೆಯಲ್ಲಿ ಕೊಡಲಾಗಿದೆ.

ಮಕ್ಕಳಿಗೆ ಯೋಜನೆ ಕೊಟ್ಟು ಮಾಡಿಸುವುದು ಆಸಕ್ತಿದಾಯಕ ಕೆಲಸವಷ್ಟೇ ಅಲ್ಲಶಾಲಾ ಪಾಠದ ನೀರಸ ವಾಡಿಕೆಯನ್ನು ನಿವಾರಿಸುತ್ತದೆ. ತರಗತಿಯ ಯೋಜನೆಗಳಿಂದ ಹಲವಾರು ಉದ್ದೇಶಗಳನ್ನು ಸಾಧಿಸಬಹುದು. ನಿರ್ದಿಷ್ಟ ವಿಷಯದ ಬಗ್ಗೆ ಕಲಿಯುವುದೇ ಅಲ್ಲದೆ, ಮಕ್ಕಳು ಪರಸ್ಪರ ಒಡನಾಟ, ಅನುಬಂಧ ಮತ್ತು ಒಂದು ತಂಡವಾಗಿ ಕೆಲಸ ಮಾಡುವುದನ್ನು ಕಲಿಯುತ್ತಾರೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇಬ್ಬರಿಗೂ, ಒಂದು ಯೋಜನೆಯ ವಿಷಯವನ್ನು ಮಾನವ ಮನಸ್ಸು ಹೇಗೆ ವಿವಿಧ ರೀತಿಯಲ್ಲಿ ಗ್ರಹಿಸಿ ಅರಗಿಸಿಕೊಳ್ಳುತ್ತದೆ ಎಂಬುದನ್ನು ತೋರಿಸುತ್ತದೆ.

ರಗತಿಯಲ್ಲಿ ಕಲಿತ ವಿಷಯಗಳಿಗೂ ಸಂಶೋಧನೆ,ಪ್ರಾಜೆಕ್ಟ್ ಕೆಲಸ ಇತ್ಯಾದಿ ಚಟುವಟಿಕೆಗಳಿಗೂ ಸಂಬಂಧ ಕಲ್ಪಿಸಿ  ಹೋಂ ವರ್ಕ್ ಅನ್ನು ಹೆಚ್ಚು ಆಸಕ್ತಿದಾಯಕ

ವಾಗುವಂತೆ  ಮಾಡಬಹುದು.

ಶಿಕ್ಷಕನು ತನ್ನ ತರಗತಿಯ ಬೋಧನೆಯಲ್ಲಿ, ಮತ್ತು ಮೌಲ್ಯ ನಿರ್ಧಾರಣೆ ಮತ್ತು ಹಿಮ್ಮಾಹಿತಿ ಪಡೆಯುವ ಪ್ರಕ್ರಿಯೆಯಲ್ಲಿ ತರಗತಿಯಲ್ಲಿನ ವಿವಿಧ ರೀತಿಯ ವಿದ್ಯಾರ್ಥಿಗಳ ಆವಶ್ಯಕತೆಯನ್ನು ಚೆನ್ನಾಗಿ ಮನಗಂಡು ಅವುಗಳಿಗಾಗಿ ಸೂಕ್ತ ಏರ್ಪಾಟುಗಳನ್ನು ಮಾಡಿದರೆ,ಪರೀಕ್ಷೆಗೆ ಕೂರಬೇಕಾದ ವಾಸ್ತವದ ಹೊರತಾಗಿಯೂ, ಅವರು ಒಟ್ಟಾರೆ ವಿಷಯವನ್ನು ಕಲಿಯುವ ಮಟ್ಟವು ಉತ್ತಮಗೊಳ್ಳುತ್ತದೆ.

ಪುಟಗಳು(_e):

18618 ನೊಂದಾಯಿತ ಬಳಕೆದಾರರು
7278 ಸಂಪನ್ಮೂಲಗಳು