Inclusion

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ, ೨೦೦೯ (ಇನ್ನು ಮುಂದೆ ಆರ್‌ಟಿಇ ), ಇದುವರೆಗೂ ಹೆಚ್ಚು ಕಡಿಮೆ ಅಲ್ಪ ಜೀವಿತಾವಧಿಯನ್ನು ಹೊಂದಿದ್ದು, ಶಿಕ್ಷಣ ತಜ್ಞರ, ನೀತಿ ಸಂಯೋಜಕರ, ನಾಗರಿಕ ಸಮಾಜದ ಕಾರ್ಯಕರ್ತರ, ಖಾಸಗಿ ಮತ್ತು ಸರ್ಕಾರ ಶಾಲಾ ಸಂಸ್ಥೆ ಗಳ ಪ್ರತಿನಿಧಿಗಳ ಮತ್ತು ತಂದೆತಾಯಿಯರ  ಗುಂಪುಗಳಿಂದಲೂ ಹೊಗಳಿಕೆ ಮತ್ತು ಹೀಯಾಳಿಕೆ ಎರಡನ್ನೂ ಪಡೆದಿದೆ. ಕಾಯ್ದೆಯ ಕಲಂ ೧೨ (೧) (ಸಿ) ರಲ್ಲಿರುವ  ’ಶೇಕಡ ೨೫ರಷ್ಟು ಸ್ಥಳಾವಕಾಶ ದಲ್ಲಿ ಸಮಾಜದ ಕಡೆಗಣಿತ ವರ್ಗದ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಸೇರಿಸಕೊಳ್ಳಬೇಕೆಂಬ ಕಾನೂನು ಗಮನಾರ್ಹ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟಿರುವುದೇಅಲ್ಲದೆ ಮತ್ತು ಮಾಧ್ಯಮಗಳ ಗಮನ ವನ್ನೂ ಸೆಳೆದಿದೆ .

ಶಾಲೆ ಪ್ರಾರಂಭವಾಗಿ ಒಂದು ತಿಂಗಳು ಕಳೆದಿತ್ತು, ಎಸ್ ಎನ್ನುವ ವಿದ್ಯಾರ್ಥಿನಿಗೆ ತಾನು ಹೇಳುತ್ತಿರುವ ಯಾವುದೇ ವಿಷಯವೂ ಅರ್ಥವಾಗುತ್ತಿಲ್ಲ, ಅವಳಿಗೆ ಹೇಗೆ ಹೇಳಿಕೊಡುವುದು ಎಂದು ನನಗೆ ತಿಳಿಯುತ್ತಿಲ್ಲ ಎಂದು ಯುಕೆಜಿ ಶಿಕ್ಷಕರಾದ ಶೀಮತಿ ಜಿ, ಬಹಳ ಚಿಂತೆಗೆ ಒಳಗಾಗಿದ್ದರು. ಅವಳು ತನ್ನ ಜೊತೆಗಿರುವ ಇತರ ವಿದ್ಯಾರ್ಥಿಗಳ ಪುಸ್ತಕದಿಂದ ನೋಡಿ ನಕಲು ಮಾಡುತ್ತಾಳೆ.  ಆಟದ ಸಮಯದಲ್ಲಿ ಇತರರೊಡನೆ ಬೆರೆತು ಆಟವಾಡದೆ ಸುಮ್ಮನೆ ನಿಂತು ನೋಡುತ್ತಿರುತ್ತಾಳೆ.
ಬಹುತೇಕ ಮಧ್ಯಮ ವರ್ಗದವರೇ ವಾಸವಾಗಿದ್ದ ವಲಯದಲ್ಲಿದ್ದ ನಾನು ಕಲಿಯುತ್ತಿದ್ದಂತಹ ಶಾಲೆಯಲ್ಲಿನ ವಿದ್ಯಾರ್ಥಿಗಳು ನನ್ನ ನೆರೆಹೊರೆಯವರಾಗಿದ್ದು, ಅವರಲ್ಲಿ ಅನೇಕರ ತಂದೆ ಅಥವಾ ತಾಯಿ ಒಂದೇ ಕಾರ್ಖಾನೆಯಲ್ಲಿ ದುಡಿಯುವವರಾಗಿದ್ದು ನಿರ್ದೇಶಕರಿಂದ ನೆಲಗುಡಿಸುವವನವರೆಗೂ ವಿಭಿನ್ನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು.  ಈ ಶಾಲೆಯಲ್ಲಿ ಕಲಿಯುತ್ತಿದ್ದಾಗಿನ ನನ್ನ ಅನುಭವವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
 

ಎಲ್ಲಾ ಮಕ್ಕಳಿಗೆ ಸಾಮಾನ್ಯ ಶಾಲೆಗಳಿವೆ ಮತ್ತು ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಬೇರೆಯದೇ ಶಾಲೆಗಳು ಇವೆ ಎಂದು ಮೊದಲಿಂದ ನಾವು ತಿಳಿದುಕೊಳ್ಳುತ್ತಾ ಬೆಳೆದಿದ್ದೇವೆ. ವಿಭಿನ್ನ ಅಗತ್ಯಗಳ ಮಕ್ಕಳು ವಿಭಿನ್ನ ಶಾಲೆಗಳಿಗೆ ಹೋಗುತ್ತಿದ್ದರು. ಆದರೆ ಇಂದು ವಿಶೇಷ ಮಕ್ಕಳು ನಿಯಮಿತ ಶಾಲೆಗಳಿಗೆ ಹೋದರೆ ಅವರಿಗೆ ಹೆಚ್ಚಿನ ಲಾಭ ಎಂದು ವ್ಯಾಪಕವಾಗಿ ನಂಬಲಾಗಿದೆ. ಆದ್ದರಿಂದ 40 ಅಥವಾ 50 ಸಾಮಾನ್ಯ ಮಕ್ಕಳ ಜೊತೆಗೆ ವಿಶೇಷ ಮಗುವಿನ ಕಾಳಜಿ ಯನ್ನು ಹೇಗೆ ಶಿಕ್ಷಕರು ನಿರ್ವಹಿಸಬಹುದು?

18585 ನೊಂದಾಯಿತ ಬಳಕೆದಾರರು
7253 ಸಂಪನ್ಮೂಲಗಳು