ಸಂಭಾಷಣೆ

ಮಕ್ಕಳು ಬಾಲ್ಯದಲ್ಲಿ ಅನೇಕ ರೀತಿಯಲ್ಲಿ ಸಂಭಾಷಣೆ ನಡೆಸುತ್ತಾರೆ,ನಸುನಗುತ್ತಾರೆ.ಜೋರಾಗಿ ನಗುತ್ತಾರೆ.ಭಾಷಾ ಬೋಧನೆಯ ಬುನಾದಿಯಾಗಿ ಮಾತೃಭಾಷೆ ಹೇಗೆ ಸಹಾಯವಾಗುತ್ತದೆ ಎಂಬುದನ್ನು  ತಿಳಿಯಲು ಈ ಲೇಖನ ಓದಿರಿ.

ಈ ಪ್ರಶ್ನೆಗಳು ನೀವು ನಿಮ್ಮ ಮಕ್ಕಳಿಂದ ಮುಖ್ಯ ಮಾಹಿತಿ ತಿಳಿದುಕೊಳ್ಳಲು ಸಹಾಯ ಮಾಡುತ್ತವೆ.

 “ಹೇಗಿತ್ತಪ್ಪ  ಸ್ಕೂಲ್ ಇವತ್ತು” ಎಂದು  ಎಷ್ಟು ಬಾರಿ ನೀವು ನಿಮ್ಮ ಮಗುವಿಗೆ  ಕೇಳಿದ್ದೀರಿ ಹಾಗೆಯೇ ಅವರಿಂದ ಉತ್ತರ ಸರಿಯಾಗಿ ಬರದಿದ್ದಾಗ ನೀವೆಷ್ಟು  ನಿರಾಶೆಗೊಂಡಿದ್ದೀರಿ ನೆನೆಸಿಕೊಳ್ಳಿ? ಮಗುವಿನ ತಾಯಿಯಾಗಿ , ನನ್ನ ಮಗ ಈ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದೇ ಹೋದರೂ  ನಾನು ಅನೇಕ ಬಾರಿ ಈ ಪ್ರಶ್ನೆಯನ್ನು ನನ್ನ ಮಗನಿಗೆ ಕೇಳಿದ್ದೇನೆ.

 ನಮ್ಮ ಶಾಲೆಗಳಲ್ಲಿ ಮಕ್ಕಳು ಮಾತನಾಡುವುದೇ ತಪ್ಪು ಎಂಬ ಕಲ್ಪನೆ ಬೆಳೆದು ಬಿಟ್ಟಿದೆ.  ಯಾವುದೇ ಮಗು ಮಾತಾಡ್ತಾ ಇದ್ದರೆ.ಇಲ್ಲ! ಅವನು ಸರಿಯಾಗಿ ಓದುತ್ತಿಲ್ಲ ಎಂದು ಪರಿಗಣಿಸುತ್ತೇವೆ.  ಹೀಗಾಗಿ ಉಪಾಧ್ಯಾಯರು ಯಾವುದೇ ಮಗು ಮಾತನಾಡುತ್ತಿರುವುದನ್ನು ಕಂಡಕೂಡಲೇ ಅವನಿಗೆ ಮಾತು ನಿಲ್ಲಿಸು ಎಂದು ಗದರುತ್ತಾರೆ.  ಉಪಾಧ್ಯಾಯರು ಯಾವುದೆ ನಿರ್ದಿಷ್ಟ ಕೆಲಸ ಮಾಡದೇ ಇರುವಾಗ ಅಥವಾ ಅರ್ಧ ವಿರಾಮದ ಸಮಯದಲ್ಲಿ ಮಾತ್ರ ಮಕ್ಕಳಿಗೆ ಮಾತನಾಡುವ ಸ್ವಾತಂತ್ರ್ಯವು ಸಿಗುತ್ತದೆ.

 

18610 ನೊಂದಾಯಿತ ಬಳಕೆದಾರರು
7272 ಸಂಪನ್ಮೂಲಗಳು