ಶಿಕ್ಷಣ

ಶಿಕ್ಷಣ, ಶೈಕ್ಷಣಿಕ ವ್ಯವಸ್ಥೆ, ಶಿಕ್ಷಕರು, ಶಿಕ್ಷಕರ ಶಿಕ್ಷಣ, ವ್ಯವಸ್ಥೆ ಯಲ್ಲಾಗಬೇಕಾದ ಬದಲಾವಣೆಗಳೇನು ಮುಂತಾದ ವಿಚಾರಗಳ ಬಗ್ಗೆ ಆಜೀಂ ಪ್ರೇಮ್ ಜಿ ವಿವಿಯ ಡಾ. ಇಂದಿರಾ ಜಯಸಿಂಹ ಸುವರ್ಣ ನ್ಯೂಸ್. ಕಾಂ ಜತೆ ಮುಕ್ತವಾಗಿ ಮಾತನಾಡಿದ್ದಾರೆ.
ಶಿಕ್ಷಕಿಯಾಗಿ ತಮ್ಮ ವೃತ್ತಿಜೀವನ್ನು ಆರಂಭಿಸಿದ ಇಂದಿರಾ ಅವರು, ಶಿಕ್ಷಣ, ಶಿಕ್ಷಕರ ಶಿಕ್ಷಣದ ಬಗ್ಗೆ ಅಪಾರ ಅಧ್ಯಯನ, ಸಂಶೋಧನೆಗಳನ್ನು ನಡೆಸಿದ್ದಾರೆ. ಶಿಕ್ಷಕರ ದಿನ ಶಿಕ್ಷಕರ ಬಗ್ಗೆ ಡಾ. ಇಂದಿರಾ ಜಯಸಿಂಹ ಸುವರ್ಣ ನ್ಯೂಸ್. ಕಾಂ ಜತೆ ಹೇಳಿದ್ದಿಷ್ಟು...
 

ಆ ಕೊಠಡಿಯ 30ಅಡಿX 20ಅಡಿ. ಅಳತೆಯದು.  ಅದರಲ್ಲಿ ನಾವು 40 ಮಂದಿ ಕುಳಿತಿದ್ದೆವು 34 ಜನ ಸರ್ಕಾರಿ ಶಾಲೆ ಶಿಕ್ಷಕರು ಮತ್ತು ನಾವು ಆರು ಜನ ವೀಕ್ಷಕರು ಎಲ್ಲಾ ನೆಲದ ಮೇಲೆ ಚಾಪೆ ಹಾಸಿ ಕುಳಿತುಕೊಂಡಿದ್ದೆವು.

`ರಂಗಣ್ಣನ ಕನಸಿನ ದಿನಗಳು'  ಕನ್ನಡ ಸಾಹಿತ್ಯದ  ಒಂದು ಚಿರಂತನ ಕೃತಿ. ಶಿಕ್ಷಣ ಇಲಾಖೆಯಲ್ಲೇ ತಮ್ಮ ವೃತ್ತಿಬದುಕನ್ನು ಕಳೆದ ಎಂ.ಆರ್.

ಎಲ್ಲರಿಗೂ  2016 ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ ಬಯಲು ಹೊಸ ಸಂಚಿಕೆ ಹೊರಬಂದಿದೆ.

     ಹೀಗೆಂದು ಊಹಿಸಿಕೊಳ್ಳಿ.  ಅದೊಂದು ಕಾರ್ಖಾನೆ.  ಕಾರ್ಖಾನೆ ತುಂಬ ಯಂತ್ರಗಳು.  ಒಂದೊಂದನ್ನೂ ನಡೆಸಲು ಒಬ್ಬ ಚಾಲಕ.  ಚಾಲಕರ ಬಗ್ಗೆ ನಿಮಗೆ ಗೊತ್ತೇ ಇದೆಯಲ್ಲಾ.  ಕೆಲವರು ಶ್ರಮಪಟ್ಟು ದುಡಿಯುತ್ತಾರೆ, ಕೆಲವರು ಮೈಗಳ್ಳರು, ಕೆಲವರಿಗೆ ಗೈರು ಹಾಜರಾಗುವುದೇ ಅಭ್ಯಾಸ.  ಆದರೆ ಅವರಲ್ಲಿ ಬಹಳಷ್ಟು ಮಂದಿ ಉದರಂಭರಣ ಮಾಡುವ ಸರಾಸರಿ ಸಭ್ಯವ್ಯಕ್ತಿಗಳು.   ಇದೇ ಕಾರ್ಖಾನೆಯಲ್ಲಿ ತಮ್ಮ ಚಾಲಕರಂತೆ ಯಂತ್ರಗಳದ್ದೂ ವಿಲಕ್ಷಣ ವಿಶೇಷತೆ ಇರುತ್ತದೆ.  ಉದಾಹರಣೆಗೆ ಸುಸ್ಥಿರತೆ ನಿಖರತೆಯಿಂದ ಹಿಡಿದು ಬೇಗನೆ ಕೆಟ್ಟು ಹೋಗುವವರೆಗೆ ಇವುಗಳ ಗುಣ ಶ್ರೇಣಿ ಇರುತ್ತದೆ.

 

 ಹಿಂದೆಲ್ಲ ಮಗ್ಗಿಗಳ ಕಲಿಕೆ ಮಕ್ಕಳಿಗೆ ಶುರುವಾಗುತ್ತಿದ್ದುದೆ ಏಳು ಅಥವಾ ಎಂಟನೆಯ ವರ್ಷದಿಂದ. ಸ್ವಂತ ವಾಕ್ಯಗಳನ್ನು ಬರೆಯುವುದನ್ನು ಕಲಿಸುತ್ತಿದ್ದುದು ಮೂರನೆಯ ತರಗತಿಯಿಂದ. ಕೂಡುವ ಕಳೆಯುವ ಲೆಕ್ಕಗಳು ಸಾಕಷ್ಟು ಮೆದುಳಿನ ಬೆಳವಣಿಗೆಯ ನಂತರ ಶುರುವಾಗುತ್ತಿದ್ದವು. ನಿಧಾನಕ್ಕೆ ಮಕ್ಕಳಲ್ಲಿ ಪದಸಂಪತ್ತನ್ನು ಬೆಳೆಸಲಾಗುತ್ತಿತ್ತು. ಒಂದರಿಂದ ನೂರರ ವರೆಗಿನ ಅಂಕಿಗಳನ್ನು ಒಂದು ವರ್ಷದಷ್ಟು ಸಮಯ ತೆಗೆದುಕೊಂಡು ಕಲಿಸಲಾಗುತ್ತಿತ್ತು. ಈಗ ಇನ್ನೂ ನಾಲ್ಕು ವರ್ಷದ ಮಕ್ಕಳಿಗೆ ಕೂಡುವ ಕಳೆಯುವ ಲೆಕ್ಕಗಳನ್ನು ಕಲಿಸಲಾಗುತ್ತದೆ. ದಿನಕ್ಕೆ ಆರರಿಂದ ಎಂಟು ಹೊಸ ಪದಗಳನ್ನು ಕಲಿಯಲು ಹೇಳಲಾಗುತ್ತದೆ.

     ಆರಡಿ ಮೂರಿಂಚು ಎತ್ತರದ ಆಕಾರ, ಕಟ್ಟು ಮಸ್ತಾದ ಮೈಕಟ್ಟು - ಪ್ರಭು ಅವರನ್ನು ನೋಡಿದಾಗ ಬಳ್ಳಾರಿಯಲ್ಲಿ ಏನು ಬಂದರೂ ಒಂದು ಕೈ ನೋಡಬಲ್ಲ ಆಸಾಮಿ ಎನಿಸುವಂತಿದ್ದರು.  ಆದರೆ ಬಳ್ಳಾರಿ ಬದುಕಿನ ರೀತಿ ನೀತಿ ಏನೇ  ಇರಲಿ ಪ್ರಭು ಅವರು ಮಾತ್ರ ಅತ್ಯಂತ ಸಾಧು ವಾದ ಮತ್ತು ಬಲು ಅರ್ಥ ಪೂರ್ಣವಾದ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.  ಬಳ್ಳಾರಿಯಲ್ಲಿ ಒಂದು ಬಲು ಗೌರವಾನ್ವಿತವಾದ  ಶಾಲೆಯನ್ನು ನಡೆಸುತ್ತಿದ್ದರು.
 

ಸರ್ ಎಂ.ವಿಶ್ವೇಶ್ವರಯ್ಯ ಭಾರತ ಕಂಡ ಮಹಾನ್ ದಾರ್ಶನಿಕರಲ್ಲಿ ಒಬ್ಬರು .ದೇಶಾದ್ಯಂತ ತಮ್ಮ ಇಂಜಿನಿಯರಿಂಗ್ ಸಾಧನೆಗಳ ಮೂಲಕ ಅನೇಕ ಸ್ಮರಣೀಯ ನಿರ್ಮಿತಿಗಳನ್ನು ರಚಿಸಿದ ಇವರು ತಾವು  ಸ್ವಾತಂತ್ರ್ಯ ಪೂರ್ವ ಮೈಸೂರು ಸಂಸ್ಥಾನದ ದೀವಾನರಾಗಿದ್ದ ಸಂದರ್ಭಗಳಲ್ಲಿ ನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಕಣಸು ಕಂಡವರು ಹಾಗು ಅದರ ಸ್ಥಾಫನೆಗಾಗಿ ಶ್ರಮಿಸಿದವರು. ಶಿಕ್ಷಣ ರಂಗದಲ್ಲೂ ಸ್ವತಂತ್ರ ಭಾರತಕ್ಕೆ ಮಾದರಿಯಾಗುವಂತಹ ಕೆಲಸವನ್ನು ಮಾಡಿದರು.

ಪುಟಗಳು(_e):

18793 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು