ಶಿಕ್ಷಕ

ಇಂದು ದೇಶದ ಎರಡನೇ ರಾಷ್ಟ್ರಪತಿ ಶ್ರಿ ಸರ್ವಪಳ್ಳಿ ರಾಧಾಕೃಷ್ಣ ಅವರ ಜನ್ಮದಿನ .ಅದನ್ನು ಭಾರತದಾದ್ಯಂತ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಅನೇಕ ಖ್ಯಾತನಾಮರು ಶಿಕ್ಷಕರ ಬಗ್ಗೆ ಆಡಿರುವ ತ್ತಮ ಮಾತುಗಳನ್ನು ಇಲ್ಲಿ ಕೊಡಲಾಗಿದೆ.

“ ನಾನೇನೂ ಶಿಕ್ಷಕನಲ್ಲ .ನಾನೊಬ್ಬ ಸಹಪ್ರಯಾಣಿಕ ನೀವು ಬಂದು ದಾರಿ ಯಾವುದೆಂದು ಕೇಳಿದಿರಿ.ನಾನು ಮುಂದಕ್ಕೆ ಕೈ ತೋರಿಸಿದೆ ನನಗೂ ನಿಮಗೂ ಮುಂದಕ್ಕೆ ಕೈತೋರಿಸಿದೆ ಅಷ್ಟೆ.” ಜಾರ್ಜ್ ಬರ್ನಾರ್ಡ್ ಷಾ

ಶಾಲೆಗೆ ಹೋದ ಮೇಲೆ ಅಲ್ಲಿ ನಾಲ್ಕಕ್ಷರ ಕಲಿಸಿದವರು ಮಾತ್ರ ಶಿಕ ಕರೆಂದು ಭಾವಿಸುವುದು ತಪ್ಪೆಂದು ನನ್ನ ಭಾವನೆ. ಏಕೆಂದರೆ ಅಕ್ಷರ ಕಲಿಕೆ .ಏಕೆಂದರೆ ಅಕ್ಷರ ಕಲಿಕೆಯನ್ನು ಶಾಲೆಯ ಹೊರಗೂ ಕೂಡ ಬೇರೆ ಬೇರೆ ವ್ಯಕ್ತಿಗಳಿಂದ ಕಲಿಯುವುದಕ್ಕೆ ಸಾಧ್ಯವಿದೆ. ಅದರ ಜೊತೆಗೆ ಬದುಕಿನ ಪಾಠವನ್ನು ಕಲಿಸಿದ ಎಷ್ಟೋ ಮಹತ್ವದ ವ್ಯಕ್ತಿತ್ವವುಳ್ಳವರನ್ನು ನಮ್ಮ ಬದುಕಿನಲ್ಲಿ ನೋಡಿರುತ್ತೇವೆ. ಅಂಥ ಮಹತ್ವದ ಶಿಕ್ಷಕರ ಸಾಲಿನಲ್ಲಿ ನೋಡಿದಾಗ ನನಗೆ ಕಾಣುವ ಶಿಕ್ಷಕಿಯೆಂದರೆ ನನ್ನ ಅಮ್ಮ. ನಾನು ಸಣ್ಣವನಿದ್ದಾಗ ನನಗೆ ಅಕ್ಷರ ಕಲಿಸಿದ್ದು ಯಾರೋ ಒಬ್ಬ ಶಾಲೆಯ ಶಿಕ್ಷಕರಲ್ಲ. ಬದಲಾಗಿ ನನ್ನ ಅವ್ವ. ನನಗೆ ಪ್ರಾರಂಭದ ಎರಡು ಅಕ್ಷರಗಳನ್ನು ಕಲಿಸಿದವಳು ಆಕೆ. ಹಾಗೆಂದ ಮಾತ್ರಕ್ಕೆ ಅವಳೇನು ಓದಿದವಳಲ್ಲ.

ಆರಾವಳಿಯ ಪ್ರಾಂತ್ಯದ ಮಧ್ಯಭಾಗದ ತಿಳಿ ಹಸಿರು ಗುಡ್ಡಗಳ ನಡುವೆ ಹಾವಿನ ರೀತಿ ಸಾಗುವ ರಸ್ತೆಯಲ್ಲಿ ಸಂಜೆಯ ಹೊತ್ತಿನಲ್ಲಿ ತನ್ನ ವಿಶೇ? ಸನ್ನೆ ಮತ್ತು ಶಬ್ದದ ಮೂಲಕ ಮುವತ್ತಕು ಹೆಚ್ಚು ಮೇಕೆಗಳನ್ನು ತನ್ನ ಅಂಕೆಯಲ್ಲಿಟ್ಟುಕೊಂಡು ಅವುಗಳಿಗೆ ರಸ್ತೆ ನಿಯಮಗಳನ್ನು ಕಲಿಸುತಿದ್ದ ಪುಟ್ಟ ಪೋರಿ ಭವರಿ. ಹೀಗೆ ಸಾಗುತ್ತದೆ ಭವರಿಯ ಕನಸಿನ ಭ್ರಮಣ ಎಂಬ ಲೇಖನ . ತರತಮ ಭಾವವನ್ನೇ ಮುಖ್ಯ ವಸ್ತುವನ್ನಾಗಿರಿಸಿಕೊಂಡ ಈ ಸಂಚಿಕೆಯ ಲೇಖನಗಳನ್ನು ಓದಿ ಆನಂದಿಸಿರಿ.

ಬದುಕಿನಲ್ಲಿ ಹುಡುಕಾಟ ನಿರಂತರವಾಗಿ ಇರುತ್ತದೆ.ಅದನ್ನೇ ವಸ್ತು ವಿಷಯವಾಗಿಟ್ಟುಕೊಂಡ ಲೇಖನ-ಕವನಗಳೊಂದಿಗೆ ಬುತ್ತಿ ಹೊರಬಂದಿದೆ.

ಮಕ್ಕಳ ಮನದಲ್ಲಿ ಒಬ್ಬಿಲ್ಲೊಬ್ಬ ಶಿಕ್ಷಕ ತನ್ನ ಛಾಪು ಮೂಡಿಸಿರುತ್ತಾರೆ. ಅಂಥ ಅನುಭವದ ಲೇಖನ ಇಲ್ಲಿದೆ.

ನಾವು   ಬೀದರ    ಜಿಲ್ಲೆಯ   ಹುಮನಾಬಾದ   ತಾಲೂಕಿನ   ಹಳ್ಳಿಖೇಡ(ಬಿ)ದಲ್ಲಿ   ಶಿಕ್ಷಕ ಕಲಿಕಾ   ಕೇಂದ್ರವನ್ನು   ಸ್ಥಾಪಿಸಲು   ಬಂದಿದ್ದೆವು.   ಇಲ್ಲಿಗೆ   ಬಂದ   ತಕ್ಷಣ  ಒಬ್ಬರಪರಿಚಯವಾಯಿತು.  ಅವರೇ  ಮಲ್ಲಪ್ಪ  ಜಿಗಜವಣಿಯವರು.  ಇವರೊಂದಿಗೆ   ನನಗೆ ಸುಮಾರು   ಒಂದುವರೆ   ವರುಷಗಳ   ಪರಿಚಯವಿದೆ.   ಹಳ್ಳಿಖೇಡ   ಶಿಕ್ಷಕ   ಕಲಿಕಾ ಕೇಂದ್ರದ   ನಿರ್ವಹಣೆಯಲ್ಲಿ   ನಮ್ಮೊಂದಿಗೆ   ಹೆಗಲುಕೊಟ್ಟು   ಕೆಲಸ   ಮಾಡುತ್ತಿದ್ದಾರೆ.ಪ್ರತಿನಿತ್ಯ  ಭೇಟಿಯಾಗುತ್ತ  ಕಲಿಕಾ  ಕೇಂದ್ರಗಳ  ಬಗ್ಗೆ  ಸಾಕಷ್ಟು  ಚರ್ಚಿಸುತ್ತಾರೆ.  ಶಿಕ್ಷಕ ಕಲಿಕಾ  ಕೇಂದ್ರದ  ಕೋರ್  ಕಮಿಟಿಯ  ಪ್ರಮುಖ  ವ್ಯಕ್ತಿಯಾಗಿದ್ದಾರೆ.  ಜೊತೆಗೆ  ವಿಜ್ಞಾನ ವೇದಿಕೆಯ  ಸಂಚಾಲಕರು  ಆಗಿದ್ದಾರೆ.
ಕನ್ನಡ

ಅದು ೧೯೯೯ನೇ ಇಸವಿ,ಅಕ್ಟೋಬರ್ ೨೦ನೆಯ ತಾರೀಕು. ನಾನು ಪ್ರಶಿಕ್ಷಕನೆಂಬ ನೆಲೆಯಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ ಮೊದಲ ದಿನ. ಯೋಗಾಯೋಗ ಎಂಬಂತೆ ನಾನು ಕಲಿತ ಕಾಲೇಜಿನಲ್ಲಿಯೇ ಅಂದರೆ ಬಿ ಎಡ್ ಮತ್ತು ಎಂ ಎಡ್ ವ್ಯಾಸಂಗ ಪೂರೈಸಿದ ಉಡುಪಿಯ ಡಾ ಟಿ ಎಂ ಎ ಪೈ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಉಪನ್ಯಾಸಕನಾಗಿ ನಿಯುಕ್ತನಾದೆ. ಹಿಂದೊಮ್ಮೆ ನಾನಲ್ಲಿ ವಿದ್ಯಾರ್ಥಿ.ಈಗ ನಾನಲ್ಲಿ ಅಧ್ಯಾಪಕ! ನಿಜ ಹೇಳ ಬೇಕೆಂದರೆ ಇದು ನನ್ನಲ್ಲಿ ಯಾವುದೇ ಬಗೆಯ ಪುಳಕವನ್ನುಂಟು ಮಾಡಲಿಲ್ಲ. ಬದಲಿಗೆ ಸಾಕಷ್ಟು ಆತಂಕ,ಉದ್ವೇಗ,ಭಯವನ್ನುಂಟು ಮಾಡಿತ್ತು.ಓರ್ವ ವಿದ್ಯಾರ್ಥಿಯಾಗಿ ಕಲಿಸಿದ ಅಧ್ಯಾಪಕರೊಡನೆ ಬೆರೆಯುವುದು ಬೇರೆ.

ನಾಡೋಜ ಎಂದರೆ ಇಡೀ ನಾಡಿಗೆ ಗುರು ಸಮಾನರಾದವರು ಎಂದು ಅರ್ಥ.  ರೈ ಅವರು 1915 ಜೂನ್‌ 8 ರಂದು ಕಾಸರಗೋಡಿನ ಪೆರಡಾಲ ಗ್ರಾಮದಲ್ಲಿ ದುಗ್ಗಪ್ಪ ರೈ ಹಾಗೂ ದೈಯಕ್ಕ ದಂಪತಿಯ ಪುತ್ರನಾಗಿ ಜನಿಸಿದರು.

ಹೀಗೊಂದು ಪತ್ರ ಬಂದಿತ್ತು.ಶಿಕ್ಷಣ ಎಂದರೇನು? ಶಿಕ್ಷಣದ ಉಪಯೋಗವೇನು?ಎಂದು ಮುಗ್ದ ನೊಬ್ಬಕೇಳಿದರೆ ನಿಮ್ಮ ಉತ್ತರವೇನು?ಅದಕ್ಕೇನೋ ಉತ್ತರ ಬರೆದೆ ಆಗ ಸಾಂದರ್ಭಿಕವಾಗಿ ಸಿಕ್ಕ ಒಂದು ಲೇಖನವನ್ನು ಇಲ್ಲಿ ಕೊಡುತ್ತಿದ್ದೇವೆ.

ಇದು ಶಿಕ್ಷಣ ಇಲಾಖೆ ಕರ್ನಾಟಕ ಇವರು ಪ್ರಕಟಿಸಿದ ಗುರುವಂದನ 2010 ರಲ್ಲಿ ಪ್ರಕಟಗೊಂಡ ಲೇಖನ

ಆಜೀಂ ಪ್ರೇಂಜಿ ಪ್ರತಿಷ್ಠಾನದ ಬಾಲ ಸ್ನೇಹಿ ಶಾಲಾ ಪ್ರಯತ್ನವು ಒಂದು ವರ್ಣಮಯ,  ಸೋಪಜ್ಞ , ಅಪ್ಪಟ ದೇಶೀಯ ಶಿಕ್ಷಣ ಕ್ಷೇತ್ರದ ಪ್ರಯೋಗ ಶಾಲೆಯಾಗಿದೆ.ಇಲ್ಲಿನ ಕಾರ್ಯ ಕರ್ತರ ಚಿಂತನೆ ,ಶ್ರದ್ಧೆ,ಪ್ರಯೋಗ ಶೀಲತೆ ಮತ್ತು ನವೀನ ವಿಚಾರಗಳು ಅನುಪಮ ಮತ್ತು ಅನುಸೆರಣೀಯ. 2013 ಫೆಬ್ರವರಿ ತಿಂಗಳ ಅದರ ವಾರ್ತಾಪತ್ರವನ್ನು ಇಲ್ಲಿ ಪ್ರಕಟಿಸಲಾಗಿದೆ.

ಪುಟಗಳು(_e):

18618 ನೊಂದಾಯಿತ ಬಳಕೆದಾರರು
7278 ಸಂಪನ್ಮೂಲಗಳು