ವಿಜ್ಞಾನ

ಗಾಳಿಯ ಒತ್ತಡ ಮತ್ತು ಗಾಳಿಯ ಸ್ಥಾನಪಲ್ಲಟ ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಮಕ್ಕಳಿಗೆ ಪ್ರತ್ಯಕ್ಷವಾಗಿ ತೋರಿಸಿಕೊಡಲು ಒಂದು ಪ್ರಯೋಗವನ್ನು ಇಲ್ಲಿ ಕೊಡಲಾಗಿದೆ.
ಮೂಲ: ಸ್ಕೂಲ್ಸ್ ವಾಟರ್ ಪೋರ್ಟಲ್, ಕನ್ನಡಕ್ಕೆ: ಜೈಕುಮಾರ್ ಮರಿಯಪ್ಪ

ನೀರಿದೆ,ಹೊಲಗದ್ದೆಗಳಿವೆ, ಸರಿ! ಒಡ್ಡು ಕಟ್ಟು, ನಾಲೆ ಅಗೆದು ನೀರು ಹರಿಸು- ಇದಿಷ್ಟೇ ನೀರಾವರಿಯ ಹಿಂದಿನ ತತ್ವ ಆಗಬಾರದು. ಸಿಹಿ ನೀರು ಒಂದು ಅಮೂಲ್ಯ ಸಂಪನ್ಮೂಲ. ಅದನ್ನು ಮನಬಂದಂತೆ ಅಸಡ್ಡೆಯಿಂದ ಬಳಸ ಬಾರದು. ಏಕೆಂದರೆ ನೆಲ-ಜಲ-ಪರಿಸರ ಎಲ್ಲವೂ ನಾವು ಮುಂದಿನ ಪೀಳಿಗೆಗಳಿಗೆ ಬಿಟ್ಟು ಹೋಗಬೇಕಾದ ಅಮೂಲ್ಯ ಆಸ್ತಿಗಳು.ಅವರು ನಮ್ಮನ್ನು ದೂಷಿಸದಂತೆ ನಾವು ಅವನ್ನು ಜತನವಾಗಿ ರಕ್ಷಿಸಬೇಕು. ಬಳಸುವಾಗಲೂ ಪರಿಪೂರ್ಣ ದಕ್ಷತೆಯಿಂದ ಬಳಸಬೇಕು. ಈ ದಿಶೆಯಲ್ಲಿ ಅಪತಾನೀಶ್ ಎಂಬ ಬುಡಕಟ್ಟು ಜನಾಂಗದಿಂದ ನಾವುಕಲಿಯಬೇಕಾದ ಅಂಶಗಳು ಬಹಳವಿವೆ.
ಮಮತ ಪಾಂಡ್ಯ ಮತ್ತು ಮೀನಾ ರಘುನಾಥನ್, ಸ್ಕೂಲ್ ವಾಟರ್ ಪೋರ್ಟಲ್
ಸಂಪಾದನೆ ಮತ್ತು ಕನ್ನಡಾನುವಾದ: ಜೈಕುಮಾರ್ ಮರಿಯಪ್ಪ

ಭಾರವಾದ ವಸ್ತು ತೇಲಬಹುದೇ? ಹಾಗಿದ್ದರೆ ಹೇಗೆ? ಬನ್ನಿ ಪ್ರಯೋಗಗಳನ್ನುಮಾಡಿ ಭಾರವಾದ ವಸ್ತುಗಳನ್ನು ಹೇಗೆ ತೇಲುವಂತೆ ಮಾಡಬಹುದು ಎಂಬುದನ್ನು ಕಲಿಯೋಣ.
ಮೂಲ:ಸ್ಕೂಲ್ ವಾಟರ್ ಪೋರ್ಟಲ್ ಕನ್ನಡಕ್ಕೆ: ಜೈಕುಮಾರ್ ಮರಿಯಪ್ಪ.

ಜಲ ಪರಿಸರಕ್ಕೆ ಧಕ್ಕೆ ಒದಗಿಸುವ ಒಂದು ಅಂಶವೆಂದರೆ ನೀರಿನ ಆಕರಗಳಾದ ಕೆರೆ- ಕುಂಟೆ,ನದಿ -ಹೊಳೆಹಾಗು ಜಲಾಶಯ ಗಳಲ್ಲಿ ಹೂಳು ಅಥವಾ ಬಗ್ಗಡ ತುಂಬಿಕೊಳ್ಳುವುದು. ಇದರಿಂದ ಅಪಾಯ ಅನೇಕ. ನೀರಿನ ಆಕರಗಳ ಪಾತ್ರ ಕಡಿಮೆ ಆಗುತ್ತದೆ. ಅವುಗಳ ನೀರು ಸಂಗ್ರಹಣೆ ಸಾಮರ್ಥ್ಯ ಕುಗ್ಗುತ್ತದೆ. ನೀರು ಸೇವನೆಗೆ ಯೋಗ್ಯ ವಾಗಿರುವುದಿಲ್ಲ ಜಲ ಚರ ಜೀವಿಗಳಿಗೆ ಉಸಿರಾಟಕ್ಕೆ ತೊಂದರೆ ಆಗಿ ಅವು ಸಾಯುತ್ತವೆ.
ಮೂಲ :ಸ್ಕೂಲ್ ವಾಟರ್ ಪೋರ್ಟಲ್ ಕನ್ನಡಕ್ಕೆ: ಜೈಕುಮಾರ್ ಮರಿಯಪ್ಪ.

ಮಳೆ ಮಾಪಕ: ಒಂದು ನಿರ್ದಿಷ್ಟ ಕಾಲದಲ್ಲಿ ಬೀಳುವ ಮಳೆ ಹನಿಗಳ ಪ್ರಮಾಣವನ್ನು ಅಳೆಯಲು ಪವನ ಶಾಸ್ತ್ರಜ್ಞರು ಮತ್ತು ಜಲ ಶಾಸ್ತ್ರಜ್ಞರು ಬಳಸುವ ಸಾಧನವನ್ನು ಮಳೆ ಮಾಪಕ ಎನ್ನುತ್ತಾರೆ. (ಮಂಜಿನ ರೂಪದಲ್ಲಿ ಬಿದ್ದದ್ದನ್ನು ಅಳೆಯುವ ಸಾಧನಕ್ಕೆ ಹಿಮ ಮಾಪಕ ಎನ್ನುತ್ತಾರೆ.) ಈ ಚಟುವಟಿಕೆಯ ಉದ್ದೇಶವೇನೆಂದರೆ ಹವಾಮಾನದಲ್ಲಿ ಮಳೆಯು ಅಳೆಯ ಬಹುದಾದದ್ದು ಎಂಬುದನ್ನು ಮಕ್ಕಳಿಗೆ ತಿಳಿಸುವುದು.

"ಮಿನಮಾಟ" ಎಂಬುದು ಪಾದರಸದಿಂದ ಉಂಟಾಗುವ ಬಲು ಮಾರಣಾಂತಿಕ ನರರೋಗ. ಈ ರೋಗವು ಪತ್ತೆಯಾದದ್ದು 1950ರಲ್ಲಿ. ಮಿನಮಾಟ ಕೊಲ್ಲಿಯಲ್ಲಿ ವಾಸಿಸುತ್ತಿದ್ದ ಜನರು ಯಾವುದೋ ನಿಗೂಢ ನರರೋಗದಿಂದ ಸಾಯಲಾರಂಭಿಸಿದರು.

ಮೂಲ: ನವದೆಹಲಿಯ ಪರಿಸರ ಶಿಕ್ಷಣ ಕೇಂದ್ರ ಅವರು ಪ್ರಕಟಿಸಿದ ಆರೋಗ್ಯ ಮತ್ತು ಪರಿಸರ ಸಮಸ್ಯೆಗಳನ್ನು ಕುರಿತ ಸಮಸ್ಯೆಗಳ ಬಗ್ಗೆ ಅಗ್ರ ಲೇಖನ-ಮೇ-ಜೂನ್,2005
ಚಿತ್ರಗಳು: ಪಶಿಕೇ & ಅರ್ಘ್ಯಂ

ವಿಜ್ಞಾನದ ಶಿಕ್ಷಕನಾದವನು ಕೇವಲ ಪಾಠದ ವಿಷಯವನ್ನು ಮಾತ್ರವೇ ಬೋಧಿಸಲು ತನ್ನನ್ನು ಸೀಮಿತ ಗೊಳಿಸಿಕೊಳ್ಳಬೇಕೆ? ಅಥವಾ ಅದನ್ನೂ ಮೀರಿ ಹೊರಬಂದು ಇತರ ವಿಷಯಗಳನ್ನು ಪ್ರಸ್ತಾಪಿಸಿ ಪಾಠ ಮಾಡಬೇಕೆ? ಇವೇ ಮುಂತಾದ ಪ್ರಶ್ನೆಗಳನ್ನು ಈ ಲೇಖನದಲ್ಲಿ ಎತ್ತಲಾಗಿದೆ. ಹೀಗಾಗಿ ಇದೊಂದು ವಿಚಾರ ಪ್ರಬೋಧಕ ಲೇಖನವಾಗಿ ಓದಿಸಿಕೊಂಡು ಹೋಗುತ್ತದೆ.
ಯಾಸ್ಮಿನ್ ಜಯತೀರ್ಥ | ಕನ್ನಡಕ್ಕೆ : ಜೈಕುಮಾರ್ ಮರಿಯಪ್ಪ

ಪುಟಗಳು(_e):

18591 ನೊಂದಾಯಿತ ಬಳಕೆದಾರರು
7257 ಸಂಪನ್ಮೂಲಗಳು