ವಿಜ್ಞಾನ

 ದು ಸಂಶೋಧನೆ ಮತ್ತು ಚಿಂತನೆಯ ಯುಗ.ನೀವೇ ಕೆಲವು ಸಂಶೋಧನೆಗಳನ್ನು ಮಾಡುವ ಅವಕಾಶ ಇಲ್ಲಿದೆ. ಮಾಹಿತಿ ಸಂಗ್ರಹಿಸಲು ಪುಸ್ತಕಗಳನ್ನು ಓದಿರಿ,ವೈದ್ಯರು ಮತ್ತು ನಿಮ್ಮ ತಂದೆ ತಾಯಿಗಳೊಂದಿಗೆ ಚರ್ಚಿಸಿರಿ.ಮತ್ತು ಅಂತರಜಾಲ ತಾಣಗಳಿಗೆ ಭೇಟಿಯಿತ್ತು ಮಾಹಿತಿ ಪಡೆದುಕೊಳ್ಳಿರಿ.

ವಿಜ್ಞಾನದ ಒಬ್ಬ ಉಪಾಧ್ಯಾಯನಿಗೆ (10 ವರ್ಷಕ್ಕೂ ಹೆಚ್ಚು ಕಾಲ ನಾನು ಅದೇ ಕೆಲಸ ಮಾಡುತ್ತಾ ಬಂದಿದ್ದೇನೆ) ಎದುರಾಗುವ ಅತ್ಯಂತ ದೊಡ್ಡ ಸವಾಲು ವಿದ್ಯಾರ್ಥಿಗಳ ಒಳ ಅರಿವುಗಳು ಅಥವಾ ಹೊಳವುಗಳಿಗೆ ಸಂಬಂಧಪಟ್ಟಿದ್ದು.  ಒಂದು ರೀತಿಯಲ್ಲಿ ನೋಡಿದರೆ, ಯಾರಾದರೂ ಲೋಕ ವಿದ್ಯಮಾನವನ್ನೂ ತನ್ನ ಒಳ ಅರಿವಿನಿಂದ ಅರ್ಥಮಾಡಿಕೊಳ್ಳಲು ಹೊರಟರೆ ಆ ವ್ಯಕ್ತಿಗೆ ಒಂದು ಸುಸಂಬದ್ಧ ಚಿತ್ರವನ್ನು ರಚಿಸಿಕೊಳ್ಳಲು ಸಮರ್ಥವಾದ ಸಕ್ರಿಯ ಮನಸ್ಸಿದೆ ಎಂದು ಅರ್ಥ.  ಆದರೆ ಇನ್ನೊಂದು ದೃಷ್ಟಿಯಿಂದ ನೋಡಿದಾಗ ಡೇವಿಡ್ ಊಡಿ ಅವರು ಹೇಳಿದ್ದಂತೆ ಹೀಗೆ ಹೊಳವುಗಳ ಸಹಾಯದಿಂದ ನಾವು ಎಲ್ಲ ವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ ಅದು ಜಗತ್ತನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಅಡ್ಡಿಯಾಗುತ್ತದೆ..

ಮಕ್ಕಳಿಗೆ ಕಥೆ ಕೇಳಲು ಬಹಳ ಇಷ್ಟ. ಶಾಲೆಗಳಲ್ಲಿ ಭಾಷೆಯ ಪ್ರಾವೀಣ್ಯತೆಯನ್ನು ಉತ್ತಮಗೊಳಿಸಲು ಅಥವಾ ನೀತಿ ಪಾಠಗಳನ್ನು ಬೋಧಿಸಲು ಮಾತ್ರ ಕಥೆಗಳನ್ನು ಹೇಳಲಾಗುತ್ತದೆ.ಆದ್ದರಿಂದ ಕಥೆಗಳು ಕೇವಲ ಭಾಷಾ ತರಗತಿಗಳಿಗೆ ಅಥವಾ ನೈತಿಕ ವಿಜ್ಞಾನ ತರಗತಿಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಆದರೆ ವಿಜ್ಞಾನದಂತಹ ವಸ್ತು ವಿಷಯದಲ್ಲಿ ಕಥೆಯನ್ನು ಬಳಸಿ ಬೋಧಿಸುವುದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಕಥೆಗಳನ್ನು ಬಳಸುವುದರಿಂದ ವಿಜ್ಞಾನದ ಬೋಧನೆ ಹಾಗು ಕಲಿಕೆ ಹೇಗೆ ಹೆಚ್ಚು ಸ್ವಾರಸ್ಯಕರವಾಗುತ್ತದೆ ಎಂದು ಈ ಲೇಖನ ತಿಳಿಸುತ್ತದೆ.

ವಿಜ್ಞಾನವೆಂಬುದು ಜ್ಞಾನದ ಕಣಜ ಎನ್ನುವುದಕ್ಕಿಂತಲೂ ಮಿಗಿಲಾಗಿ ಅದೊಂದು ಆಲೋಚನಾ ರೀತಿ.

ವಿಜ್ಞಾನವೆಂಬುದು ಜ್ಞಾನದ ಕಣಜ ಎನ್ನುವುದಕ್ಕಿಂತಲೂ ಮಿಗಿಲಾಗಿ ಅದೊಂದು ಆಲೋಚನಾ ರೀತಿ.

    

ಪಟಾಕಿ ವಿಷ್ಣುಚಕ್ರ ಗಿರಗಿರನೆ ತಿರುಗುವುದನ್ನು ನೋಡಿದ್ದೀರಾ !,ಅಪಾಯವಿಲ್ಲದೆ ದಿನಗಟ್ಟಳೆ ಗಿರಗೀಠಿ ಆಟ ಆಡಬೇಕೇ? ಕಾಸು ಖರ್ಚಿಲ್ಲದ ಟರ್ಬೇನು ತಯಾರಿಕೆಇಲ್ಲಿದೆ.

ನೆಲದಲ್ಲಿ ಮಣ್ಣಿನ ಕಣಗಳ ನಡುವೆ ನೀರು ಹುದುಗಿರುತ್ತದೆ. ನೀರನ್ನು ಈ ರೀತಿ ಹೀರಿ ಹಿಡಿದಿಟ್ಟುಕೊಳ್ಳುವ ಮರಳಿನ ಸಾಮರ್ಥ್ಯವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಒಂದು ಪ್ರಯೋಗವನ್ನು ಆಟಿಕೆಯ ರೂಪದಲ್ಲಿ ಗುಪ್ತ ಅವರು ನಿರೂಪಿಸಿದ್ದಾರೆ. ಆಟಕ್ಕೆ ಆಟವೂ ಆಯಿತು ಪಾಠಕ್ಕೆ ಪಾಠವೂ ಆಯಿತು. ವಿಡಿಯೋ ನೋಡಿ.

ಮಾನವ ಅಂಗಗಳ ಕಾರ್ಯ ನಿರ್ವಹಣೆ ಬಹಳ ಅದ್ಭುತ! ಅಮೋಘ!.ಅದರಲ್ಲೂ ಕಣ್ಣಿನ ರಚನೆ ಮತ್ತು ಕಾರ್ಯ ನಿರ್ವಹಣೆ ಒಂದು ರೋಚಕ ಅನುಭವ. ಆಟಿಕೆಯಾಗಿ ಮತ್ತು ಪಾಠೋಪಕರಣವಾಗಿ ಕಣ್ಣಿನ ಮಾದರಿಯನ್ನು ತಯಾರಿಸುವ ವಿಧಾನವನ್ನು ಅರವಿಂದಗುಪ್ತ ಅವರು ಈ ದೃಶ್ಯನಿರೂಪಣೆಯಲ್ಲಿ ನೀಡಿದ್ದಾರೆ.

" ಆಡಿಸಿ ನೋಡು ಅಲುಗಿಸಿ ನೋಡು ಬಿದ್ದು ಹೋಗದು" ಬೀಳದೆ ಬೀಗುವ ಬೊಂಬೆ ಯಾರಿಗೆ ಇಷ್ಟವಿಲ್ಲ. ಮಾಡುವುದಂತೂ ಇನ್ನೂ ಮೋಜಿನ ವಿಷಯ. ಗುರುತ್ವಾಕರ್ಷಣೆ ಮತ್ತು ಸಮತೋಲನ ಉಳಿಸಿಕೊಳ್ಳುವುದು ಕಲಿಯಲು ಮತ್ತು ನೋಡಲು ಬಹಳ ಆಕರ್ಷಕ. ಈ ಬೊಂಬೆ ಆಟವನ್ನು ನೋಡಿ.

ನಾವು ಚಿಕ್ಕಂದಿನಲ್ಲಿ ಈ ಆಟಿಕೆಯನ್ನು ಬೀದಿ ಮಾರಾಟಗಾರರಿಂದ ಕೊಂಡು ಆಡಿದ್ದು ಜ್ಞಾಪಕ, ಮಣ್ಣಿನ ರಾಟೆ(pulley),ರಬ್ಬರ್ ಬ್ಯಾಂಡು,ರಂಗುರಂಗಿನ ಮಡಿಚು ಕಾಗದ ಇದರಿಂದ ಸರಸರನೆ ಬರುವ ಹಾವನ್ನು ಇಲ್ಲಿ ನೋಡಿ.

ಗುರುತ್ವಾಕರ್ಷಣೆಗೆ ಅನುಗುಣವಾಗಿ ಚಲಿಸುವುದು ನೀರಿನ ಗುಣ. ನದಿ ಹಳ್ಳ, ತೊರೆ ಮುಂತಾದ ನೀರಿನ ಆಕರಗಳಲ್ಲೆಲ್ಲಾ ನೀರು ಚಲಿಸುತ್ತಲೇ ಇರುತ್ತದೆ. ಬೆಟ್ಟದಿಂದ ಸಾಗರಕ್ಕೆ ಮುಗಿಯದ ಪಯಣ ಅವುಗಳದ್ದು. ಪ್ರಯೋಗಾಲಯದ ಒಳಗಡೆ ಸುರಕ್ಷಿತವಾಗಿ ನೀರಿನ ಚಲನೆಯ ರೀತಿಯನ್ನು ಪುಟ್ಟ ಮಕ್ಕಳಿಗೆ ತೋರಿಸಿಕೊಡುವ ಪ್ರಯೋಗ ಇಲ್ಲಿದೆ.
ಸ್ಕೂಲ್ ವಾಟರ್ ಪೋರ್ಟಲ್ | ಜೈಕುಮಾರ್ ಮರಿಯಪ್ಪ

ಪುಟಗಳು(_e):

18591 ನೊಂದಾಯಿತ ಬಳಕೆದಾರರು
7257 ಸಂಪನ್ಮೂಲಗಳು