ಲೆಕ್ಕ

ಮಕ್ಕಳು ಮಾತನಾಡುತ್ತಾ ಗಣಿತದ ಪದಸಂಪತ್ತನ್ನು ಮೈಗೂಡಿಸಿಕೊಳ್ಳುವ ವಿಧಾನ ಇಲ್ಲಿದೆ

ರಾಮಕೃಷ್ಣ ವಿದ್ಯಾಕೇಂದ್ರ, ಶಿವನಹಳ್ಳಿ ಅವರು ತಯಾರಿಸಿರುವ ಒಂದನೆ ತರಗತಿಯ ಪಠ್ಯಪುಸ್ತಕವನ್ನು ಬಳಸಿಕೊಳ್ಳಲು ಇಲ್ಲಿ ಕೊಡಲಾಗಿದೆ.

ಮಾನವರ ಯಾವುದೇ ಚಟುವಟಿಕೆಯನ್ನು ತೆಗೆದುಕೊಳ್ಳಿ ಅದರಲ್ಲಿ  ಚಿಂತನಾ ಕೌಶಲ್ಯ ಇದ್ದೇ ಇರುತ್ತದೆ. ಚಿಂತನಾ ಕೌಶಲ್ಯಗಳೆಂದರೇನು? ಅವು ನಾವು ಅತ್ಯಾವಶ್ಯಕವಾಗಿ ಮಾಡುವ ಬೌದ್ಧಿಕ ಪ್ರಕ್ರಿಯೆಗಳು: ವಸ್ತುಗಳ ವರ್ಗೀಕರಣ, ಗುಣಲಕ್ಷಣಗಳ ವೀಕ್ಷಣೆ, ಮಾಹಿತಿಗಳನ್ನು ಸಂಕೇತಿಸುವಿಕೆ, ಹೋಲಿಸುವುದು, ನಿರ್ಧಾರಗಳನ್ನು ಕೈಗೊಳ್ಳುವುದು. ತೀರ್ಮಾನಿಸುವುದು ಮತ್ತು ಸಮಸ್ಯೆಗಳನ್ನು ಪರಿಹರಿಸುವುದು ಇತ್ಯಾದಿ.ಪದ್ಮಪ್ರಿಯ ಶಿರಾಲಿಯವರು ಅದನ್ನು ಬೋಧಿಸುವ ವಿಧಾನವನ್ನು ಇಲ್ಲಿ ತಿಳಿಸಿದ್ದಾರೆ.

ಗಣಿತ ಬೋಧನೆಯಲ್ಲಿ ಬರಬಹುದಾದ ಅಡೆ ತಡೆಗಳನ್ನು ಇದರಲ್ಲಿ ತಮ್ಮ ಸ್ವಾನುಭವದಿಂದ ನಾರಾಣಪ್ಪ ಕೆ ಅವರು ನಿರೂಪಿಸಿದ್ದಾರೆ.ಅಲ್ಲದೆ ಪರಿಹಾರೋಪಾಯಗಳನ್ನು ಸೂಚಿಸಿದ್ದಾರೆ.

 

 

ಪ್ರಾಥಮಿಕ ಶಾಲಾ ಶಿಕ್ಷಕರೊಂದಿಗಿನ ಅನೇಕ ಕಾರ್ಯಾಗಾರಗಳಲ್ಲಿ ಗಮನಕ್ಕೆ ಬಂದ ಅಂಶವೆಂದರೆ ಶಿಕ್ಷಕರು ಯಾವುದೇ ಅಭ್ಯಾಸಗಳ ಹಿನ್ನೆಲೆಯಿಲ್ಲದೆಯೇ ನೇರವಾಗಿ ಪದ್ಧತಿ ಪ್ರಕಾರ ಲೆಕ್ಕಾಚಾರ ಮಾಡುವುದನ್ನು ಬೋಧಿಸಲು ತೊಡಗುತ್ತಾರೆ. ಅನೇಕ ಸಾರಿ ಅವರು ಬೋಧಿಸುವ ವೇಗ ಮತ್ತು ಪಠ್ಯಸಾಮಗ್ರಿಗಳ ಉಪಯೋಗವು  ಮಕ್ಕಳಿಗೆ ವಿಷಯವನ್ನು ಕ್ರಮಬದ್ಧವಾಗಿ ಮನದಟ್ಟು ಮಾಡಿಕೊಳ್ಳುವ ಅವಕಾಶವನ್ನು ನೀಡುವುದಿಲ್ಲ. ಅಲ್ಲದೇ ಮಕ್ಕಳಿಗೆ ಏನೇನು ಪೂರ್ವಜ್ಞಾನ ಮತ್ತು ಕೌಶಲಗಳು ಇರಬೇಕೆಂಬುದರ ಬಗ್ಗೆ ಗಮನ ನೀಡದೇ ಉಪೇಕ್ಷಿಸಲಾಗುತ್ತದೆ. ಇಲ್ಲಿ ನೀಡಲಾಗಿರುವ ಸಲಹೆಗಳು ಈ ಕೊರತೆಗಳನ್ನು ನೀಗಿಸಲು ಮತ್ತು ಬಲವಾದ ತಳಹದಿಯನ್ನು ನೀಡಲು ಶಿಕ್ಷಕರಿಗೆ ನೆರವಾಗುತ್ತವೆ
 

ನಾವು ಮಕ್ಕಳಿಗೆ ಕಳೆಯುವುದನ್ನು ಯಾವಾಗ ಪರಿಚಯಿಸುತ್ತೇವೆ? ಹತ್ತು ವಸ್ತುಗಳನ್ನು ಇಟ್ಟು ಅದರಲ್ಲಿ ಒಂದೊಂದನ್ನೇ ತೆಗೆಯುತ್ತಾ ಕಳೆಯುವುದನ್ನು ಪರಿಚಯಿಸುತ್ತೇವೆ.ಇಲ್ಲಿದೆ ಕಳೆಯುವುದನ್ನು ತೋರಿಸುವ ದೃಶ್ಯರೂಪ ವಿಧಾನ

ದೈನಂದಿನಜೀವನದಲ್ಲಿ ವೇಗವಾಗಿಯೂ ನಿಖರವಾಗಿಯೂ ವ್ಯವಹರಿಸಲು ಎಷ್ಟು ಬೇಕೋ ಅಷ್ಟು ಮೂಲಭೂತ ಗಣಿತೀಯ ಕುಶಲತೆಗಳನ್ನು ಕರಗತ ಮಾಡಿಕೊಳ್ಳಲು ನೆರವು ನೀಡುವ ನಮ್ಮ ಪ್ರಾಚೀನರ ಪುಸ್ತಕಗಳನ್ನುಆಧರಿಸಿದ ಕನ್ನಡ ಪುಸ್ತಕ ಇದು. ಇಂದಿನ ಶಾಲೆಗಳಲ್ಲಿ ಕಲಿಸದ ತಂತ್ರಗಳು ಇದರಲ್ಲಿವೆ.

 

ಚದುರಂಗ ಮಣೆ ಬಳಸಿ ಸಮಸಂಖ್ಯೆಗಳು ಮತ್ತು ಬೆಸ ಸಂಖ್ಯೆಗಳನ್ನು ಹೇಗೆ ಹೇಳಿಕೊಡಬಹುದು ನೋಡಿ.

<iframe width="560" height="315" src="//www.youtube.com/embed/i8wxRmbgIy8?list=UUhBDcAp-rXDfIVy7GxY8yrw" frameborder="0" allowfullscreen></iframe>

ಪುಟಗಳು(_e):

18311 ನೊಂದಾಯಿತ ಬಳಕೆದಾರರು
7139 ಸಂಪನ್ಮೂಲಗಳು