ಮೌಲ್ಯಮಾಪನ

ಬಹುತೇಕ ಮಧ್ಯಮ ವರ್ಗದವರೇ ವಾಸವಾಗಿದ್ದ ವಲಯದಲ್ಲಿದ್ದ ನಾನು ಕಲಿಯುತ್ತಿದ್ದಂತಹ ಶಾಲೆಯಲ್ಲಿನ ವಿದ್ಯಾರ್ಥಿಗಳು ನನ್ನ ನೆರೆಹೊರೆಯವರಾಗಿದ್ದು, ಅವರಲ್ಲಿ ಅನೇಕರ ತಂದೆ ಅಥವಾ ತಾಯಿ ಒಂದೇ ಕಾರ್ಖಾನೆಯಲ್ಲಿ ದುಡಿಯುವವರಾಗಿದ್ದು ನಿರ್ದೇಶಕರಿಂದ ನೆಲಗುಡಿಸುವವನವರೆಗೂ ವಿಭಿನ್ನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು.  ಈ ಶಾಲೆಯಲ್ಲಿ ಕಲಿಯುತ್ತಿದ್ದಾಗಿನ ನನ್ನ ಅನುಭವವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಮೌಲ್ಯ ಮಾಪನವು ಇಂದು ಶಿಕ್ಷಣದ ಬಹುಮುಖ್ಯ ಭಾಗ
ಇದನ್ನು ಕೇಳಿ ಕೆಲವರಿಗೆ ಆಶ್ಚರ್ಯವಾಗಬಹುದು! ಮೊದಲಿಂದಲೂ ಮೌಲ್ಯ ಮಾಪನ ಶಿಕ್ಷಣದ ಮುಖ್ಯ ಭಾಗವಾಗಿರಲಿಲ್ಲವೇ ಈಗೇನು ವಿಶೇಷ ಎನ್ನಬಹುದು. ನಿಜ,ಮುಖ್ಯಭಾಗವಾಗಿತ್ತು ಆದರೆ ಈಗ ಅದಕ್ಕೆಂದು ಹೊಸ ಆಯಾಮ ಬಂದಿದೆ. ಮೌಲ್ಯಮಾಪನದಲಿ  ವಿದ್ಯಾರ್ಥಿಯು ಸಕ್ರಿಯವಾಗಿ ಭಾಗವಹಿಸುವುದರಿಂದ ಅವನಿಗೆ ವಿಶೇಷ ಅನುಕೂಲವೂ ಒದಗುತ್ತಿದೆ.

ಶಿಕ್ಷಣ ಕ್ಷೇತ್ರದ ಹೊಸ ಹೊಸ ಚಿಂತನೆಗಳನ್ನು ಕುರಿತು ಲೇಖನಗಳ ಸಂಕಲನವನ್ನು ವಿಷಯನಿಷ್ಠವಾಗಿ ಲರ್ನಿಂಗ್ ಕರ್ವ್ ಸಂಚಿಕೆಗಳ ಮೂಲಕ ಅಜೀಂ ಪ್ರೇಂಜಿ ವಿಶ್ವ ವಿದ್ಯಾಲಯವು ಹೊರತರುತ್ತಿದೆ. ಶಾಲಾ ಶಿಕ್ಷಣದಲ್ಲಿ ಕಲಿಕಾನಿರ್ಧರಣೆ- ಈ ವಿಷಯ ಆಧಾರಿತ ಲರ್ನಿಂಗ್ ಕರ್ವ್-ಕನ್ನಡ ಆವೃತ್ತಿ ಸಿದ್ಧವಾಗಿದ್ದು ಅದರ ಇ-ಆವೃತ್ತಿಯನ್ನು ನಮ್ಮ ವೇದಿಕೆ ಮೂಲಕ ಸಾದರಪಡಿಸುತ್ತಿದ್ದೇವೆ.

,

                      ಮೌಲ್ಯ ಮಾಪನದ ಬಗ್ಗೆ ಎಷ್ಟೊಂದು ಬರೆದಾಗಿದೆ ಎಂದರೆ, ಅದರ ಬಗ್ಗೆ ಹೇಳುವುದಕ್ಕೆ  ಹೊಸತೇನೂ  ಇಲ್ಲ ಎಂಬಂತಾಗಿದೆ. ಆದರೂ ಬೇರೆ ದೃಷ್ಟಿಕೋನದಿಂದ  ಇದನ್ನು ನೋಡುವ ಪ್ರಯತ್ನವನ್ನು  ನಾನು ಇಲ್ಲಿ ಮಾಡುತ್ತಿದ್ದೇನೆ.  ಶಿಕ್ಷಕರು ತಮ್ಮ ವೃತ್ತಿಯಲ್ಲಿ ಮಾಡಲು ಜಿಗುಪ್ಸೆಪಡುವ  ಕಾಲುಭಾಗದಲ್ಲಿ ಇದೂ ಸೇರಿದೆ. ಆದರೆ ಏನು ಮಾಡುವುದು? ಇದು  ಪಾಠ ಹೇಳುವ- ಕಲಿಯುವ ಪ್ರಕ್ರಿಯೆಯ ಮತ್ತು ಶಿಕ್ಷಣ ವ್ಯವಸ್ಥೆಯ ಅಂತರ್ಗತ ಭಾಗವಾಗಿದೆ.

ಕೇರಳ ಮತ್ತು ತಮಿಳುನಾಡಿನ ಗಡಿಯಂಚಿನಲ್ಲಿರುವ, ಕೊಯಮತ್ತೂರು ಜಿಲ್ಲೆಗೆ ಸೇರಿರುವ ಆನೈಕಟ್ಟಿ ಎಂಬಲ್ಲಿ ಅವಕಾಶವಂಚಿತ ಮತ್ತು ಬುಡಕಟ್ಟು ಜನಾಂಗದ ಮಕ್ಕಳಿಗಾಗಿರುವ ಒಂದು ಹೊಸರೂಪದ ಶಾಲೆ - ವಿದ್ಯಾವನಂ.  ಆ ಪ್ರದೇಶದಲ್ಲಿರುವ ಮಕ್ಕಳಿಗಾಗಿ ಕಡಿಮೆ ವೆಚ್ಚದ ಆಂಗ್ಲ ಮಾಧ್ಯಮ ಶಾಲೆಯನ್ನು ಒದಗಿಸುವ ಉದ್ದೇಶದಿಂದ ಇದು 2007 ರಲ್ಲಿ ಪ್ರಾರಂಭವಾಯಿತು.  ಕಳೆದ ಐದು ವರ್ಷಗಳಲ್ಲಿ ಇದು, ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಒದಗಿಸುತ್ತಿರುವ ಒಂದು ಖಾಸಗೀ ಶಾಲೆ ಮಾತ್ರವಾಗಿ ಉಳಿಯದೇ, ಆನೈಕಟ್ಟಿ ಮತ್ತು ಅದರ ಸುತ್ತಲಿನ ಹಳ್ಳಿಗಳಲ್ಲಿರುವ ಮಕ್ಕಳಿಗೆ ಉತ್ತಮ ದರ್ಜೆಯ ಶಿಕ್ಷಣವನ್ನು ಆಂಗ್ಲ ಮಾಧ್ಯಮದಲ್ಲಿ ನೀಡುತ್ತಿರುವ ಒಂದು ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ.

  ಕಲಿಕಾ ಖಾತರಿ ಕಾರ್ಯಕ್ರಮ (ಎಲ್.ಜಿ.ಪಿ.) ಅಜೀಂ ಪ್ರೇಂಜಿ ಪ್ರತಿಷ್ಠಾನವು 2003 ರಿಂದ 2008ರ ಅವಧಿಯಲ್ಲಿ ಪರಿಕಲ್ಪಿಸಿ ಐದು ರಾಜ್ಯಗಳಲ್ಲಿ ಜಾರಿಗೆ ತಂದ ವಿಶಾಲ ಪರಿಧಿಯ ವಿದ್ಯಾರ್ಥಿಗಳ ಕಲಿಕಾನಿರ್ಧರಣೆಯ ಕಾರ್ಯಕ್ರಮ.

ಎ. ಎಫ್.

ನಿಮ್ಮ ಮಕ್ಕಳು ದೊಡ್ಡವರಾದ ಮೇಲೆ ಏನಾಗಬೇಕು ಎಂದು ಬಯಸುತ್ತೀರಾ ಎಂದು ಇಂದಿನ ತಂದೆತಾಯಿಯರನ್ನು ಕೇಳಿ ನೋಡಿ. ಇದಕ್ಕೆ ಕೆಲವರು ನಿರ್ದಿಷ್ಟ ವೃತ್ತಿಗಳ ಹೆಸರನ್ನೇ ಹೇಳಬಹುದು. ಕೆಲವರು ತಮ್ಮ ಮಕ್ಕಳು ವೈದ್ಯ ಅಥವಾ ಇಂಜಿನಿಯರ್ ಆಗಬೇಕೆಂದು ಬಯಸಿದರೆ, ಸ್ವಲ್ಪ ಮುಕ್ತವಾಗಿ ಯೋಚಿಸುವವರು ಸಂಗೀತ ಅಥವಾ ಕ್ರೀಡಾ ಕ್ಷೇತ್ರಗಳನ್ನು ಹೆಸರಿಸುತ್ತಾರೆ. ಈ ತಂದೆತಾಯಿಯರು ಯಾವುದೇ ವೃತ್ತಿಯನ್ನು ಆಯ್ದುಕೊಳ್ಳಲಿ ಇಲ್ಲಿರುವ ಸಾಮಾನ್ಯ ಅಂಶ ಏನೆಂದರೆ ಆ ವೃತ್ತಿಯಿಂದ ತಮ್ಮ ಮಕ್ಕಳು ತೀವ್ರಾಸಕ್ತಿಯ ಜೀವನ ನಡೆಸಲು ಸಾಧ್ಯವಾಗಬೇಕು ಹಾಗೂ ಆರ್ಥಿಕ ಸುಭದ್ರತೆಯನ್ನು ಕಾಯ್ದುಕೊಳ್ಳಲು ಸಹಾಯವಾಗಬೇಕು ಎಂಬುದಾಗಿರುತ್ತದೆ.

ಈಗಿರುವ ಶಾಲೆಗಳ ನಿಯಮದಂತೆ ಪ್ರಿ-ಕೆಜಿಯಿಂದಲೂ ಕಲಿಕಾ ನಿರ್ಧರಣೆಯು ಶಾಲಾ ಚಟುವಟಿಕೆಯ ಒಂದು ಮುಖ್ಯ ಅಂಶವಾಗಿದೆ. ನಾನು 3ವರ್ಷದ ಅವಳಿ ಮಕ್ಕಳ ತಾಯಿ.  ನನ್ನ ಮಕ್ಕಳನ್ನು ಶಾಲೆಗೆ ಸೇರಿಸಿದ ಮೊದಲ ತಿಂಗಳಿನಿಂದ ಅವರು ಪ್ರತಿತಿಂಗಳೂ ಕಲಿಕಾ ನಿರ್ಧರಣೆಗೆ ಒಳಪಡಬೇಕಾಗಿದೆ. ನನಗೆ ಇಚ್ಛೆ ಇಲ್ಲದಿದ್ದರೂ ಕೂಡ ನಾನು ನನ್ನ ಮಕ್ಕಳಿಗೆ ತಮ್ಮ ಬುದ್ಧಿ ಸಾಮರ್ಥ್ಯವನ್ನು ತೋರಿಸಲು ಒತ್ತಡ ಹಾಕುವಂತೆ ಬಲವಂತಮಾಡಲಾಯಿತು. ಉಪಾಧ್ಯಾಯರು ಮಕ್ಕಳನ್ನು ಪರಸ್ಪರ ಹೋಲಿಕೆ ಮಾಡಿ ಮಕ್ಕಳ ಪ್ರಗತಿ ಹೆಚ್ಚಿಸಲು ನಿರಂತರ ಸಲಹೆಯನ್ನು ನೀಡುವುದರಿಂದ ತಂದೆತಾಯಿಗಳಿಗೆ ಮಕ್ಕಳ ಮೇಲೆ ಒತ್ತಡ ಹಾಕಲು ಇಷ್ಟವಿಲ್ಲದಿದ್ದರೂ ಅವರು ಆ ರೀತಿ ಮಾಡಬೇಕಾಗಿ ಬರುತ್ತದೆ.

ಪುಟಗಳು(_e):

17921 ನೊಂದಾಯಿತ ಬಳಕೆದಾರರು
6752 ಸಂಪನ್ಮೂಲಗಳು