ಮಾತೃಭಾಷೆ

ಮಕ್ಕಳು ಬಾಲ್ಯದಲ್ಲಿ ಅನೇಕ ರೀತಿಯಲ್ಲಿ ಸಂಭಾಷಣೆ ನಡೆಸುತ್ತಾರೆ,ನಸುನಗುತ್ತಾರೆ.ಜೋರಾಗಿ ನಗುತ್ತಾರೆ.ಭಾಷಾ ಬೋಧನೆಯ ಬುನಾದಿಯಾಗಿ ಮಾತೃಭಾಷೆ ಹೇಗೆ ಸಹಾಯವಾಗುತ್ತದೆ ಎಂಬುದನ್ನು  ತಿಳಿಯಲು ಈ ಲೇಖನ ಓದಿರಿ.

ಮನೆಯಲ್ಲಿ ಮಕ್ಕಳು ಹೇಗೆ ಭಾಷೆಯನ್ನು ಕಲಿಯುತ್ತವೆ ಮತ್ತು ಅವು ಹೇಗೆ ಅಷ್ಟೊಂದು ಜಟಿಲವಾದ ವಾಕ್ಯಗಳನ್ನು ಮಾತೃಭಾಷೆಯಲ್ಲಿ ಹೇಳಲು ಶಕ್ತರಾಗುತ್ತಾರೆ ಎಂಬುದನ್ನು  ಕುರಿತು ಜರು ಗಮನಿಸಿರುವ ಅಂಶಗಳನ್ನು ಅನುಸರಿಸಿ ಸಾಕಷ್ಟು ಸಿದ್ಧಾಂತಗಳಾಗಿವೆ. ಮಕ್ಕಳು ತಮ್ಮ ಮನೆಯಲ್ಲಿ ಮಾತನಾಡುವ ಭಾಷೆಯಲ್ಲಿ ತೀರಾ ಚಿಕ್ಕವಯಸ್ಸಿನಲ್ಲಿಯೇ ಯಾವುದೇ ಅಡೆತಡೆಯಿಲ್ಲದೆ ಮಾತನಾಡುತ್ತಾರೆ. ಯಾವುದೇ ಪರಿಶ್ರಮವಿಲ್ಲದೆ ಅವರಿಗೆ ಏನನಿಸುತ್ತಿದೆ ಎಂಬುದನ್ನು ಹೇಳಲು ಹಾಗೂ ತಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನು ವಿವರಿಸಲು ಹಾಗೂ ಯಾವುದೇ ಪೂರ್ವ ಶಿಕ್ಷಣವಿಲ್ಲದೆ ಹಾಗೂ ಕಷ್ಟವಿಲ್ಲದೆಯೇ ಯಾವುದೇ ಘಟನೆಯನ್ನು ಕುರಿತು ವಿವೇಚನೆ ತೋರಿಸುತ್ತಾರೆ ಮತ್ತು ವಿಶ್ಲೇಷಣೆ ಮಾಡುತ್ತಾರೆ.
18344 ನೊಂದಾಯಿತ ಬಳಕೆದಾರರು
7154 ಸಂಪನ್ಮೂಲಗಳು