ಮಾಡಿ ಕಲಿ

ಒಂದು  ಖಾಲಿ ಕಡ್ಡಿ ಪೆಟ್ಟಿಗೆ ಹೊರ ಕವಚದ ಅಂಚುಗಳ ಮೇಲೆ ಎರಡು ಕಾಗದದ   ಕ್ಲಿಪ್ ಗಳನ್ನು ಹಾಕಿರಿ.  ಕ್ಲಿಪ್ಗಳ ಮೂಲಕ  ಹಾದು ಹೋಗುವಂತೆ ದಾರವೊಂದನ್ನು ಪೋಣಿಸಿರಿ.  ದಾರದ  ಎರಡೂ ತುದಿಗಳಲ್ಲಿ ಮಣಿಗಳನ್ನು ಪೋಣಿಸಿ ಕಟ್ಟಿರಿ. ಇದು ಸರಿಯಾಗಿ ಕೆಲಸ ಮಾಡಲು ನೀವು ಬೆಂಕಿಪೊಟ್ಟಣದ   ಡ್ರಾವರ್ ಅನ್ನು ಹಿಂದೆ ಮುಂದೆ ಎಳೆದಾಡಿ ಹೊಂದಿಸಬೇಕು. ದಾರವನ್ನು   ಲಂಬವಾಗಿ ಮತ್ತು  ಬಿಗಿಯಾಗಿ ಎಳೆದು ಹಿಡಿಯಿರಿ. ಬೆಂಕಿ ಪೆಟ್ಟಿಗೆ ಕುಲುಕುತ್ತಾ ಕೆಳಗೆ ಇಳಿಯುವ ಮೋಜನ್ನು ನೋಡಿರಿ.

 

ಪುಸ್ತಕ ಓದುವಾಗ ಮಧ್ಯೆ ಎನಾದರೂ ಕೆಲಸಬಂದರೆ ಅದನ್ನು ಬಿಟ್ಟು ಮೇಲೇಳಲೇ ಬೇಕು.ಆಗ ಎಲ್ಲಿವರೆಗೆ ಓದಿದ್ದೆ ಎಂಬುದನ್ನು ಗುರುತು ಹಿಡಿಯುವುದು ಹೇಗೆ, ಆದಕ್ಕೆ ಒಂದು ಪುಟ ಗುರುತು ಬೇಕು. ಪುಸ್ತಕದ ಪುಟವನ್ನು ಕಿವಿ ಮಡಚುವುದು ಕೆಟ್ಟ ಅಭ್ಯಾಸ .ಅದರ ಬದಲು ಸುಂದರವಾದ ಒಂದು ಪುಟ ಗುರುತನ್ನು ಮಾಡಿದರೆ ಹೇಗೆ ?

 

ಎ 4 ಅಳತೆಯ ಜೆರಾಕ್ಸ್ ಪೇಪರ್ ನಿಂದ ಅದನ್ನು ಮಡಚಿ ಸ್ವಯಂ ಬಂಧಿತ ಘನಕೃತಿ ರಚಿಸಿ . ಈ ಘನಾಕೃತಿಯನ್ನು ರಚಿಸಲು ಯಾವುದೇ ಕತ್ತರಿ ಅಥವಾ ಅಂಟು ಬಳಸಬೇಕಾಗಿಲ್ಲ.

 

18117 ನೊಂದಾಯಿತ ಬಳಕೆದಾರರು
6936 ಸಂಪನ್ಮೂಲಗಳು