ಮಾಡಿಕಲಿ

ನಮ್ಮ ನಾಡಿನ ಶಾಲಾ ವಿದ್ಯಾರ್ಥಿಗಳಿಗೆ  ವಿಜ್ಷಾನದ ಕೈಪಿಡಿ  ಒದಗಿಸಲು ಮಪುಸ್ತಕವನ್ನು ಅರವಿಂದ ಗುಪ್ತ ಅವರ ಪುಸ್ತಕ ಬಂಡಾರದಿಂದ ಇ ಪುಸ್ತಕವನ್ನು  ಒದಗಿಸಲಾಗಿದೆ.

 

ಇದು ಪಿ ಎಂ ಪ್ರಕಾಶ್ ಅವರು ಅನುವಾದಿಸಿದ ಅರವಿಂದ್ ಗುಪ್ತ  ಅವರ ಟಾಯ್ಸ್ ಕೃತಿಯ ಕನ್ನಡಾನುವಾದ.ಇದರ ಲಿಂಕ್ ಇಲ್ಲಿದೆ.

https://archive.org/stream/ArvindGuptaToysKannada-Part1/kannada-prakash-...

ವಿಜ್ಞಾನಕ್ಕೆ ಸಂಬಂಧಿಸಿದಂತೆ ಹೊಸ ದೃಷ್ಟಿಕೋನಗಳನ್ನು ಕೊಡಬಹುದಾದ ಯಾವುದಾದರೂ ರಸವತ್ತಾದ ಪುಸ್ತಕವೊಂದರ ನಿರೀಕ್ಷೆಯಲ್ಲಿ ನೀವಿದ್ದರೆ, ಇದೋ ಇಲ್ಲಿದೆ ನೋಡಿ, ಅಂತಹ ಒಂದು ಪುಸ್ತಕ:The Agenda of the Apprentice Scientist. ಇದನ್ನು ನಾವು ಕನ್ನಡದಲ್ಲಿ ಅರ್ಥಮಾಡಿಕೊಳ್ಳುವ ಸಲುವಾಗಿ ’ಅಭ್ಯಾಸಿ ವಿಜ್ಞಾನಿಯೊಬ್ಬನ ಕಾರ್ಯಸೂಚಿ’ ಎಂದು ಕರೆಯಬಹುದು. ಈ ಲೇಖನದಲ್ಲಿ ಈಶಾನ್ ಮತ್ತು ಸಂಗೀತಾ ರಾಜ್ ಎಂಬ ತಾಯಿ ಮಗನ ಜೋಡಿಯೊಂದು ಈ ಪುಸ್ತಕವನ್ನು ಓದುವಾಗ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ನೀವು ಕೂಡ ಅವರ ಸಂತೋಷದಲ್ಲಿ  ಜೊತೆಗೂಡಿರಿ.  

ಉರುಳುತ್ತಾ ಬೀಳುವ ಕಾಗದದ ತುಣುಕು ಬಲು ಮೋಜಿನ  ಆಟಿಕೆ .  ಇದಕ್ಕೆ ಬೇಕಾದ ಸಾಮಾಗ್ರಿ ಸಣ್ಣ  3-cm ಅಗಲದ ಕಾಗದದ ಪಟ್ಟಿ ಮತ್ತು ಕಾಗದದ ವೃತ್ತಗಳು

ನನ್ನ ಶಾಲೆಯ ಪಠ್ಯಪುಸ್ತಕದಲ್ಲಿ ಗೋಲ್ಡ್ ಲೀಫ್ ವಿದ್ಯುದ್ದರ್ಶಕದ ಬಗ್ಗೆ ಓದಿದ್ದೆ. ಆದರೆ ಅದನ್ನು ಕಣ್ಣಾರೆ ನೋಡಿರುವುದಿಲ್ಲ. ಆದರೆ ನೀವು ನಿಜವಾಗಿಯೂ ಒಂದು ವಿದ್ಯುದ್ದರ್ಶಕ ಮಾಡಲು ಚಿನ್ನದ  ಎಲೆಗಳು ಬೇಕೇ ಬೇಕೆ? ಇಲ್ಲಿ ಕಾಗದದ ತುಣುಕುಗಳುಳ್ಳ ಸರಳ ವಿದ್ಯುತ್ ದರ್ಶಕವನ್ನು ಹೇಗೆ ಮಾಡಬಹುದು ನೋಡಿರಿ. 

ಈ ರಾಸಾಯನಿಕ ಬೆಳಕಿನ ಬಳಕೆಯನ್ನು ಟ್ರೆಕ್ಕಿಂಗ್  ಹೋಗುವವರು ತಮ್ಮ ಡೇರೆಗಳಲ್ಲಿ  ಬೆಳಕಿ ಗಾಗಿ ಬಳಸುವ ಲೈಟ್ ಕಡ್ಡಿಯಲ್ಲಿ ನೋಡಬಹುದು.

ಮಕ್ಕಳಲ್ಲಿ ಮಗುವಾಗಿ ಅವರ ಸೃಜನ ಶೀಲತೆಯನ್ನು ಹೊರತರುವಂತಹ ಅದರ ಜೊತೆಗೆ ನಿಸರ್ಗ ವಿಜ್ಞಾನ ಮುಂತಾದವನ್ನು ವಿವರಿಸುವ ಪ್ರಯತ್ನದಲ್ಲಿ ಅದ್ಭುತ ಪ್ರತಿಭೆ ತೋರಿಸಿದವರು ಅರವಿಂದ ಗುಪ್ತ . ಕಸದಿಂದ ಆಟಿಕೆ ತಯಾರಿಸುವ ಮೋಡಿಗಾರ ಇಂಜಿನಿಯರ್ ಇವರು. ಇವರ ಕೆಲವು ಪ್ರಾಜೆಕ್ಟುಗಳು ಇಲ್ಲಿ ಈ ಪುಸ್ತಕವಾಗಿವೆ .ಇಳಿನಕಲು ಮಾಡಿಕೊಂಡು ಓದಿರಿ. ಈ ಲಿಂಕ್ ನಲ್ಲೂ ಓದಬಹುದು.https://archive.org/stream/ArvindGuptaToysKannada-Part4/kannada-prakash-...

ಇಂದು ನಾವು ಸಣ್ಣ ಪುಟ್ಟ ವಸ್ತುಗಳನ್ನು  ಇರಿಸಬಹುದಾದ  ಒಂದು ಒರಿಗಾಮಿ ಬಟ್ಟಲನ್ನು  ಮಾಡೋಣ. ನಾವು 10 ಸೆಂ ಒಂದು ಚದರ ಕಾಗದ ದಿಂದ  ಆರಂಭ ಮಾಡೋಣ. ಒಂದು ಪ್ಲಸ್ ಚಿನ್ಹೆ ಬರುವಂತೆ ಅದರ ಮಧ್ಯ ಸಾಲುಗಳ ಉದ್ದಕ್ಕೂ ಅರ್ಧದಷ್ಟಕ್ಕೆ ಕಾಗದವನ್ನು ಮಡಿಚಿರಿ. ನಂತರ ಎರಡೂ ಕರ್ಣಗಳ ಉದ್ದಕ್ಕೂ ಮಡಿಚಿರಿ. ಮುಂದೆ ವಿಡಿಯೋ ನೋಡಿ ಅನುಸರಿಸಿರಿ

 

ವಿಸ್ಮಯ ಆಶ್ಚರ್ಯಕ್ಕಿಂತ ಕಲಿಕೆಗೆ ಪ್ರೇರಣೆ ಮತ್ತೊಂದಿಲ್ಲ.

ಇಂದು ಒಂದು ಪ್ಲಾಸ್ಟಿಕ್ ಬಾಟಲ್, ಉರಿಯುವ ಒಂದು ಮೇಣದ ಬತ್ತಿ ಮತ್ತು ಲಗತ್ತಿಸಲಾದ ಹೀರು ಕೊಳವೆ ಸಹಾಯದಿಂದ ನಾವು ಒಂದು ಮೋಜಿನ ಕಾರಂಜಿ ಮಾಡೋಣ.ಇಲ್ಲಿ ನೀವು ಬಾಟಲ್ ಒಳಗೆ ಬಣ್ಣದ ನೀರು ಒಂದು ಜೆಟ್ ಹಾಗೆ ಹರಿಯುವುದನ್ನು  ನೋಡಬಹುದು. 

ಪುಟಗಳು(_e):

18068 ನೊಂದಾಯಿತ ಬಳಕೆದಾರರು
6931 ಸಂಪನ್ಮೂಲಗಳು