ಮರ

ಪರಿಸರದ ಪಾಠಗಳು ಇತರೆ ಪಠ್ಯಗಳಂತೆ ಪುಸ್ತಕದ ಪಾಠವಾಗಿ ಉಳಿಯಬಾರದು.ಹಳ್ಳಿಗಾಡಿನ ಹಳ್ಳಿಯ ಮಕ್ಕಳ ಗಿಡ ಸಂಗೋಪನೆ ಮತ್ತು ನಿಸರ್ಗದ ಒಲವನ್ನು ಬಳಸಿಕೊಂಡು ಶಾಲಾ ಮಾಸ್ತರರೊಬ್ಬರು ಬಂಜರಾಗಿದ್ದ ಶಾಲಾ ಮೈದಾನವನ್ನು ನಳನಳಿಸುವ ನಂದನ ವನವಾಗಿ ಮಾಡಿದ ಕಥೆ ಇಲ್ಲದೆ.

ಕನ್ನಡ

ತಮ್ಮ ಸುತ್ತಮುತ್ತಲ ಮರಗಳನ್ನು ಗುರುತಿಸಿ ಶಾಲೆಯ ಸುತ್ತಲೂ ಇರುವ ಮರಗಳ ಸಮೀಕ್ಷೆ ನಡೆಸಿ, ಮರಗಳ ಉಪಯೋಗವನ್ನು ಅರಿತುಕೊಂಡು ಮತ್ತು ಅವುಗಳ ರಕ್ಷಣೆಯ ಮಹತ್ವದ ಬಗ್ಗೆ ಆಲೋಚಿಸುವ ಮೂಲಕ ಮಕ್ಖಳು  ಈ ಆಭ್ಯಾಸಪತ್ರಗಳ ಸಮೂಹದಿಂದ  ವೃಕ್ಷ ಮಿತ್ರರಾಗುತ್ತಾರೆ.

ತಮ್ಮ ಸುತ್ತಮುತ್ತಲ ಮರಗಳನ್ನು ಗುರುತಿಸಿ ಶಾಲೆಯ ಸುತ್ತಲೂ ಇರುವ ಮರಗಳ ಸಮೀಕ್ಷೆ ನಡೆಸಿ, ಮರಗಳ ಉಪಯೋಗವನ್ನು ಅರಿತುಕೊಂಡು ಮತ್ತು ಅವುಗಳ ರಕ್ಷಣೆಯ ಮಹತ್ವದ ಬಗ್ಗೆ ಆಲೋಚಿಸುವ ಮೂಲಕ ಮಕ್ಖಳು  ಈ ಆಭ್ಯಾಸಪತ್ರಗಳ ಸಮೂಹದಿಂದ  ವೃಕ್ಷ ಮಿತ್ರರಾಗುತ್ತಾರೆ.

ಕನ್ನಡ

ಶೆಲ್ ಸಿಲ್ವರ್ಸ್ಟನ್ ಅವರ" ದಿ ಗಿವಿಂಗ್ ಟ್ರೀ" ಒಂದು ಮರದ ಅಮರ ಗಾಥೆ. ನಿಸರ್ಗದಲ್ಲಿ ಸದಾ ಮುಕ್ತ ಹಸ್ತದಿಂದ ನೀಡುತ್ತಾ ಬರುವ ಮರವೊಂದರ ಉದಾತ್ತ ಗುಣವನ್ನು ಇಲ್ಲಿ ಪುಟ್ಟ ಬಾಲಕನೊಬ್ಬ ವೃದ್ದ ನಾಗುವವರೆಗೂ ಮರವೊಂದು ತೋರುವ ಸ್ನೇಹಶೀಲತೆಯಾಗಿ ಚಿತ್ರಿಸಲಾಗಿದೆ.

ಕಾಗದವನ್ನು ಮರಗಳ ತಿರುಳನ್ನು ಬಳಸಿ ತಯಾರಿಸುತ್ತಾರೆ.ದೈನಂದಿನ ಬದುಕಿನಲ್ಲಿ ಕಾಗದದ ಬಳಕೆ ಹೆಚ್ಚಾಗಿ ಆಗುತ್ತದೆ.ಇದನ್ನು ಅನೇಕ ರೀತಿಯಲ್ಲಿ ಬಳಸುತ್ತೇವೆ ಹಾಗು ಇದನ್ನು ಪುನರ್ಬಳಕೆ ಮಾಡಬಹುದು. ಈ ವಿಷಯಾಧ್ಯಯನದಿಂದ ವಿದ್ಯಾರ್ಥಿಗಳು ಕಾಗದದ ವಿವಿಧ ಬಳಕೆಗಳ ಬಗ್ಗೆ ಮತ್ತು ಅದರ ಬಳಕೆ ಯನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರ ಬಗ್ಗೆ ಮತ್ತು ಅದರ ಪುನರ್ಬಳಕೆಯ ಬಗ್ಗೆ ತನ್ಮೂಲಕ ಮರಗಳ ಸಂರಕ್ಷಣೆ ಬಗ್ಗೆ ಕಲಿಯುತ್ತಾರೆ.

ಮರಗಳ ಬಗ್ಗೆ ಇರುವ ಈ ಸೃಜನಾತ್ಮಕ ಪಾಠಯೋಜನೆಯು ಸಮಗ್ರ ವಿಧಾನವನ್ನು ಅನುಸರಿಸುತ್ತದೆ. ನೀವು ವಿಜ್ಞಾನ ಅಥವಾ ಇವಿಎಸ್ ನಲ್ಲಿ (ಪರಿಸರ ವಿಜ್ಞಾನ) ಏನು ಮಾಡುತ್ತಿದ್ದೀರೋ ಅದನ್ನು ಗಣಿತ, ಭಾಷೆ, ಸಮಾಜ ಶಾಸ್ತ್ರ, ಭೂಗೋಳ, ಕಲೆ ಇತ್ಯಾದಿ ವಿಷಯಗಳೊಂದಿಗೂ ಹೊಂದಿಸಿಕೊಳ್ಳಲು ನೆರವಾಗುತ್ತದೆ. ಈ ಪಾಠಯೋಜನೆಯಲ್ಲಿರುವ ಪ್ರತಿ ಚಟುವಟಿಕೆಯನ್ನು ಎಲ್ಲಾ ವಿಧದ ಪಠ್ಯಕ್ರಮಗಳಲ್ಲಿಯೂ ಶಾಲಾ ಪಠ್ಯಕ್ಕೆ ಅಳವಡಿಸಿಕೊಳ್ಳಬಹುದಾಗಿದೆ.

18071 ನೊಂದಾಯಿತ ಬಳಕೆದಾರರು
6932 ಸಂಪನ್ಮೂಲಗಳು