ಭಾಷೆ

ಮಕ್ಕಳು ವಿವಿಧ ರೀತಿಯ ಸಹಜ ಮಾತು ಮತ್ತು ಬರವಣಿಗೆಯ ವಸ್ತುಗಳನ್ನು ನೋಡಿ ಅವುಗಳ ಒಡನಾಟ ಮಾಡುವುದರಿಂದ ಭಾಷೆ ಮತ್ತು ಬರವಣಿಗೆಯನ್ನು ಚೆನ್ನಾಗಿ ಕಲಿಯುತ್ತಾರೆ.

 

ಆವಾಗ ನಾನು ಪುಟ್ಟವನಿದ್ದೆ. ಆವಾಗಿನ ವಿಸ್ಮಯವೆ ಒಂದು ಬಗೆ. ಇಂದು ಅವನ್ನೆಲ್ಲ ನೆನಪಿಸಿಕೊಂಡು ಪಡುವ ವಿಸ್ಮಯವೆ ಇನ್ನೊಂದು ಬಗೆ. ಈ ವ್ಯತ್ಯಾಸಗಳ ಬಗೆಗು ವಿಸ್ಮಯಪಡುತ್ತ ನಾನು ಇದನ್ನು ಬರೆಯುತ್ತಿದ್ದೇನೆ. ಆಗ ನನ್ನಷ್ಟಕ್ಕೆ ನಾನು ಯಾವ ಕೆಲಸವನ್ನು ಮಾಡಲಾರದವನಿದ್ದೆ. ತಂದೆ ಏನಾದರು ಕೆಲಸಮಾಡುತ್ತಿದ್ದರೆ ಅವರನ್ನು ಹಿಂಬಾಲಿಸಿಕೊಂಡಿರುತ್ತಿದ್ದೆ. ನನ್ನ ಮನೆಯವರಿಗೆ ನಾನು ಪುಟ್ಟವನಾಗಿ ಕಾಣುತ್ತಿದ್ದರೆ, ಕೆಲಸದವರು ಮಾತ್ರ ನನ್ನನ್ನು ಬೆಳೆದು ದೊಡ್ಡವನಾದವನು ಎಂಬಂತೆ ಪರಿಗಣಿಸಿ ವರ್ತಿಸುತ್ತಿದ್ದರು. ಆ ದಿನ ಅಡಿಕೆ ಕೊಲಿನ ಹತ್ತು ಹಲವು ಕೆಲಸಗಳ ಮಧ್ಯೆ ಅಪ್ಪ ಬಿತ್ತನೆಗೆ ಬೀಜದ ಅಡಿಕೆ ಕೊನೆಗಳನ್ನು ಆಯ್ದು ತೆಗೆದಿರಿಸುತ್ತಿದ್ದರು.

ಮಗುವಿನ ಔಪಚಾರಿಕ ಶಿಕ್ಷಣ  ಆರಂಭವಾಗುವ ಮೊದಲು, ಮಗುವು ಕಲಿಕೆಯ ಆರಂಭಿಸಲು ಸಿದ್ಧವಿರಬೇಕು.  ಕಲಿಕೆಯ ಪೂರ್ವ ಕೌಶಲ್ಯ ಗಳೆಂದರೆ ಏಕಾಗ್ರತೆ, ಗಮನವಿಟ್ಟು ಕೇಳುವುದು,  ನೆನಪಿನ ಶಕ್ತಿ ಮತ್ತು ನಿರ್ದಿಷ್ಟ ಪ್ರದೇಶಗಳಲ್ಲಿ ಕೆಲವು ನಿರ್ದಿಷ್ಟ ಕೌಶಲ್ಯಗಳು  ಅಗತ್ಯವಾದ ಕೆಲವು ವಯಸ್ಸಿಗೆ ಸೂಕ್ತವಾದ ಶೈಕ್ಷಣಿಕ ಕಲಿಕೆಗೆ ಪೂರ್ವಾಪೇಕ್ಷಿತ ಕೌಶಲ್ಯಗಳು.

ಒಂದು ಭಾಷೆಯು ಚೆನ್ನಾಗಿ ಕರಗತವಾಗಬೇಕಾದರೆ ಅದರ ಸಹಜ ನುಡಿಗಟ್ಟುಗಳಲ್ಲಿ ಕೈ ಪಳಗಿರಬೇಕು.ಭಾಷೆಯ ನುಡಿಗಟ್ಟುಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರೆ ಭಾಷೆಕಲಿಯುವುದು ಸುಲಭವಾಗುತ್ತದೆ.ಕನ್ನಡಭಾಷೆಯ ಪಲುಕು ಸೌಂದರ್ಯ ಮತ್ತು ರಮ್ಯತೆ ನಮ್ಮ ಮಾತು ಮತ್ತು ಬರವಣಿಗೆಯಲ್ಲಿ ಹೊಮ್ಮಬೇಕಾದರೆ ಅದರ ಅಪಾರ ಪದಪುಂಜಗಳು ಮತ್ತು ನುಡಿಗಟ್ಟುಗಳ ಚೆನ್ನಾಗಿ ಪರಿಚಯವಾಗಿರಬೇಕು. ಈ ಲೇಖನದಲ್ಲಿ ಕನ್ನಡಭಾಷೆಯ ಪದಗಳ ಸೂಕ್ಷ್ಮ ಅರ್ಥವ್ಯತ್ಯಾಸ ಅರ್ಥ ಮಾಡಿಸಲು ಪ್ರಯತ್ನಿಸಲಾಗಿದೆ.

ಒಂದು ರೀತಿಯಲ್ಲಿ ಎಲ್ಲ ವಿಷಯಗಳ ಕಲಿಕೆಯಲ್ಲೂ ಭಾಷೆಯ ಬೋಧನೆ ಮತ್ತು ಕಲಿಕೆ ಇದ್ದೆ ಇರುತ್ತದೆ ಅದರಂತೆ ಭಾಷೆ ಕೋಣೆಯನ್ನು ಸಜ್ಜುಗೊಳಿಸಬೇಕು.

ಇದು ಅರವಿಂದ ಗುಪ್ತ ಅವರ ಪುಸ್ತಕ ಸಂಚಯದಿಂದ  ಆಯ್ದ ಸಿ ಎಫ್ ಎಲ್ ನ ಅಧ್ಯಾಪಕಿ ಲೀಲಾ ಗರಡಿ ಅವರು ಬರೆದ ಲೇಖನ.

ಊರಿಗೊಂದು ಶಾಲೆ ಎಂಬ ನಿಯಮದಡಿಯಲ್ಲಿ 1972ರಲ್ಲಿ ಪ್ರಾರಂಭವಾದ ಈ ಶಾಲೆ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲೂಕಿನ ಆನಗಟ್ಟಿ ಎಂಬ ಹಳ್ಳಿಯಲ್ಲಿರುವ ಹಿರಿಯ ಪ್ರಾಥಮಿಕ ಶಾಲೆ.  ಶಾಲೆಯಲ್ಲಿ ಎಲ್ಲಾ ಮಕ್ಕಳೂ ಒಂದೇ ಮನೆಯ ಮಕ್ಕಳಂತೆ ಬೆರೆತು ಸ್ವಚ್ಚಂದವಾಗಿ ಕಲಿಯುತ್ತಿರುವ ವಾತಾವರಣವಿದೆ.

ಭಾಷೆಯು ಮಕ್ಕಳು ತಮ್ಮೊಳಗೇ ತಾವು ಮಾತನಾಡಿಕೊಳ್ಳುವ ಮತ್ತು ಇತರರ ಜೊತೆಗೂ ಮಾತಾಡುವ ಒಂದು ಮಾಧ್ಯಮ. ಅದು ಮಕ್ಕಳಿಗೆ ತಮ್ಮ ಅನುಭವಗಳನ್ನು ನಿರೂಪಿಸಲು, ನೈಜತೆಯನ್ನು ಕಟ್ಟಿಕೊಳ್ಳಲು ಮತ್ತು ಅದರ ಮೇಲೆ ಹಿಡಿತವನ್ನು ಸಾಧಿಸಿಕೊಳ್ಳಲು ಸಹಾಯ ಮಾಡುವ ಒಂದು ಮಾಧ್ಯಮವೂ ಆಗಿದೆ. ಸ್ಪಷ್ಟವಾಗಿ ಕಲಿಯಲು ಮತ್ತು ಅರ್ಥಮಾಡಿಕೊಳ್ಳಲು, ತಮ್ಮ ಅನಿಸಿಕೆಗಳನ್ನು ಸ್ಪಷ್ಟಗೊಳಸಿಕೊಳ್ಳುವಲ್ಲಿ ಸಹಾಯ ಮಾಡುವ ಅವಶ್ಯಕ ಕಲಿಕಾ ಸಾಧನದಂತೆ ತನ್ನ ಸ್ಥಾನಪಡೆದುಕೊಂಡಿದೆ. ಭಾಷೆ ಕೇವಲ ಸಂಪರ್ಕಮಾಧ್ಯಮವಷ್ಟೇ ಅಲ್ಲ-ಇದು ನಮ್ಮ ಎಲ್ಲಾ ಬಗೆಯ ಜ್ಞಾನಾರ್ಜನೆಗೆ ಇರುವ ದೊಡ್ಡ ಮೆಟ್ಟಿಲು.

ಪುಟಗಳು(_e):

19019 ನೊಂದಾಯಿತ ಬಳಕೆದಾರರು
7425 ಸಂಪನ್ಮೂಲಗಳು