ಬರವಣಿಗೆ

ಮಕ್ಕಳು ವಿವಿಧ ರೀತಿಯ ಸಹಜ ಮಾತು ಮತ್ತು ಬರವಣಿಗೆಯ ವಸ್ತುಗಳನ್ನು ನೋಡಿ ಅವುಗಳ ಒಡನಾಟ ಮಾಡುವುದರಿಂದ ಭಾಷೆ ಮತ್ತು ಬರವಣಿಗೆಯನ್ನು ಚೆನ್ನಾಗಿ ಕಲಿಯುತ್ತಾರೆ.

 

ಲೇಖನ ಕಲೆಯನ್ನು ಮೈಗೂಡಿಸುವುದನ್ನು ಕುರಿತು ಕೆಲವು ಪಾಠಕಲ್ಪನೆಗಳು ಇಲ್ಲಿವೆ.

ಇದು ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಿಕ್ಷಕ ದಿನಾಚರಣೆ 2010 ರಂದು ಹೊರತಂದ ಸ್ಮರಣಿಕೆ- ಗುರುವಂದನ ದಿಂದ  ಆಯ್ದ ಲೇಖನ. ಅದನ್ನು ಇಲ್ಲಿ ಸಂಪಾದಕರಿಗೆ ಆಭಾರ ಮನ್ನಣೆಯೊಂದಿಗೆ ಇ ಪುಸ್ತಕವಾಗಿ ಕೊಡಲಾಗಿದೆ.

ಬರವಣಿಗೆ ನಿಸ್ಸಂದೇಹವಾಗಿ ಪಠ್ಯಕ್ರಮದ ಅವಿಭಾಜ್ಯ ಭಾಗ ಮತ್ತು ಆದ್ದರಿಂದಲೇ ನಾವು  ನಮ್ಮ ವಿದ್ಯಾರ್ಥಿಗಳನ್ನು  ಸದಾ ಅದೂ ಇದು ಬರೆಯಲುತೊಡಗಿಸುತ್ತೇವೆ.

ಬರವಣಿಗೆ ಎಂದರೆ ಕೇವಲ ಕಾಗುಣಿತ,ನಕಲು ಮಾಡುವುದು ಅಷ್ಟೇ ಅಲ್ಲ ಅದೊಂದು ಕಲೆ.ತನ್ನಿಂದ ಹಿಡಿದು ಸುತ್ತಮುತ್ತಲ ಎಲ್ಲದರಬಗ್ಗೆ ವರ್ಣಿಸುವ ಕಲೆಯನ್ನು ಕಲಿಸುವ ಅಭ್ಯಾಸ ಪತ್ರಗಳು ಇಲ್ಲಿವೆ.

18452 ನೊಂದಾಯಿತ ಬಳಕೆದಾರರು
7212 ಸಂಪನ್ಮೂಲಗಳು