ಪ್ರತಿಭೆ

ನಮ್ಮ ಭಾರತ ದೇಶವು ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀಡುವುದಕ್ಕೆ ಬದ್ಧವಾಗಿದೆ ಎಂಬ ಅಂಶವು ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ (ಆರ್‌ಟಿಇ ೨೦೦೯) ಜಾರಿಗೆ ಬಂದ ನಂತರ ಕಾರ್ಯರೂಪದಲ್ಲಿ ಪ್ರಕಟವಾಗುತ್ತಿದೆ. ಇಂದು ಪ್ರತಿಯೊಂದು ಮಗುವೂ ಗುಣಮಟ್ಟದ ಪ್ರಾಥಮಿಕ ಶಿಕ್ಷಣಕ್ಕೆ ಹಕ್ಕನ್ನು ಹೊಂದಿದೆ. ಯಾವುದೇ ಇಬ್ಬರು ವ್ಯಕ್ತಿಗಳು ಒಂದೇ ರೀತಿ ಇರಲು ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಂಡ ಭಾರತದ ಮೂಲಭೂತ ಶಿಕ್ಷಣ ಪದ್ಧತಿ ಬೇರೆ ಬೇರೆ ಹಿನ್ನೆಲೆಗಳಿಂದ ಬರುವಂತಹ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಅವರ ಅಗತ್ಯಗಳನ್ನು ಪೂರೈಸುವತ್ತ ಸಿದ್ಧತೆಯನ್ನು ನಡೆಸಬೇಕು.

ಬೋಧನೆ ಎಂಬುದು ಒಂದು ಕಲೆ, ಆದರೆ ಅದರಲ್ಲಿ ಎಲ್ಲರೂ 10ಕ್ಕೆ 10 ಅಂಕವನ್ನು ಪಡೆಯ ಬಲ್ಲ ಕಲಾವಿದರಾಗಲಾರರು.  ಏಕೆಂದರೆ ಕೆಲವರು ಬೋಧನೆಯ ಕೆಲಸವನ್ನು ಪರಿಸ್ಥಿತಿಯ ಆವಶ್ಯಕತೆಗೆ ಒಳಪಟ್ಟು ಕೈಗೊಳ್ಳುತಾರೆಯೇ ಹೊರತು ತಾವೆ ಇಷ್ಟಪಟ್ಟು ಕೈಗೊಳ್ಳುವುದಿಲ್ಲ.  ಹೀಗಿದ್ದರೂ ಒಂದಂತೂ ನಿಜ ಅವರೂ ಶಿಕ್ಷಕರೇ.  ಒಬ್ಬ ವ್ಯಕ್ತಿ ತಾನು ಶಿಕ್ಷಕನಾದ ಕೂಡಲೇ ಮನಗಾಣ ಬೇಕಾದ ಒಂದು ಮುಖ್ಯ ಅಂಶವೆಂದರೆ ಈ ವೃತ್ತಿ  ಭವಿಷ್ಯದ ಪೀಳಿಗೆಯ ಮೇಲೆ ಪರಿಣಾಮ ಬೀರುವಂತಹುದು.  ಅವರನ್ನು ರೂಪಿಸುವಂತಹದು ಎಂಬುದು.  ಯಾವುದೇ ದೇಶವು  ಎಷ್ಟು ಒಳ್ಳೆಯದು ಎಂಬುದು ಅದು ಎಂಥಾ ಉಪಾಧ್ಯಾಯರನ್ನು ಒಳಗೊಂಡಿದೆ ಎಂಬುದನ್ನು ಅವಲಂಬಿಸುತ್ತೆ.  ಆದ್ದರಿಂದ ಒಂದು ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕನು ಬಲು ಪ್ರಮುಖವಾದ ಪಾತ್ರವನ್ನು ವಹಿಸುತ್ತಾನೆ. 

18807 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು