ಪರೀಕ್ಷೆ

ಪರೀಕ್ಷೆಯನ್ನು ವಿವಿಧ ಆಯಾಮಗಳಿಂದ ಅವಲೋಕಿಸಿದ ಲೇಖನಗಳು ಬಯಲು 55ನೇ ಸಂಚಿಕೆಯಲ್ಲಿವೆ.

ಕಲ್ಪನೆಯು ಜ್ಞಾನಕ್ಕಿಂತ ಮುಖ್ಯ. ಜ್ಞಾನಕ್ಕೆ ಮಿತಿಯಿದೆ. ಆದರೆ, ಕಲ್ಪನೆ ಇಡೀ ಪ್ರಪಂಚವನ್ನೇ ಆವರಿಸುತ್ತದೆ. ಅಭಿವೃದ್ಧಿಯನ್ನು ಪ್ರಚೋದಿಸುತ್ತಾ, ವಿಕಾಸಕ್ಕೆ ಜನ್ಮ ನೀಡುತ್ತದೆ’. - ಆಲ್ಬರ್ಟ್ ಐನ್‍ಸ್ಟೈನ್
 ಮೂವರು ಕುರುಡರು ಒಬ್ಬೊಬ್ಬರ ಮಾಹಿತಿಯನ್ನೂ ಒಟ್ಟುಗೂಡಿಸಿ ಆನೆಯನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು ಯತ್ನಿಸಿದ ರೀತಿಗೂ ಶಿಕ್ಷಣ ತಜ್ಞರು ಮಕ್ಕಳ ಬುದ್ಧಿಮತ್ತೆಯನ್ನು ಅವರ ಜ್ಞಾನದ ಬಂಡವಾಳದ ಮೂಲಕ ಅರ್ಥ ಮಾಡಿಕೊಳ್ಳುವ ಪ್ರಯತ್ನಕ್ಕೂ ಸಾಮ್ಯತೆ ಇದೆ. ಕಲಿಕಾ ನಿರ್ಧರಣೆ ಹೆಚ್ಚು ಎಂದರೆ ಮಗುವಿನ ಒಟ್ಟಾರೆ ವ್ಯಕ್ತಿತ್ವದ ಒಂದು ಸಣ್ಣ ಭಾಗವನ್ನು ಮಾತ್ರ ತೋರಬಲ್ಲದು.

ಪರೀಕ್ಷಾ ಸುಧಾರಣೆಯ ಭಾಗವಾಗಿ ಸತತ ಸಮಗ್ರ ಮೌಲ್ಯಮಾಪನವನ್ನು  ದೇಶದುದ್ದಗಲ ಎಲ್ಲ ಶಾಲೆಗಳಲ್ಲಿ ಅನುಷ್ಠಾನಗೊಳಿಸಿದ ಬಳಿಕ ಅದು ಒಂದು ಸಂಚಲನವನ್ನೇ ಉಂಟುಮಾಡಿದೆ. ಶಿಕ್ಷಕರು ‘ಫಾರ್ಮೇಟಿವ್’, ‘ಸಮ್ಮೇಟಿವ್’ ಎಂಬಿತ್ಯಾದಿ ಪದಗಳನ್ನು ಸಲೀಸಾಗಿ ಬಳಸುವುದಕ್ಕೆ ಶುರು ಮಾಡಿದ್ದಾರೆ. ಇದು ಸ್ವಾಗತಾರ್ಹ. ದೇಶದ ದೂರ ದೂರದ ಜಿಲ್ಲೆಗಳಲ್ಲಿ  ಈ ಹೊಸ ಪ್ರಯತ್ನವನ್ನು ಇವರೆ ತಾನೇ ಫಲಪ್ರದಗೊಳಿಸುವವರು.   ಹಲವು ರಾಜ್ಯ ಸರ್ಕಾರಗಳು ತಂತಮ್ಮ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಅಂದರೆ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಎಲ್ಲರಿಗೂ- ಜಿಲ್ಲಾ ಬ್ಲಾಕು ಮತ್ತು ಕ್ಲಸ್ಟರ್ ಹಂತದ ಅಧಿಕಾರಿಗಳಿಗೆ.ಮುಖ್ಯೋಪಾಧ್ಯಾಯರಿಗೆ,ಶಿಕ್ಷಕರಿಗೆ ತಕ್ಕುದಾದ ತರಬೇತಿ ನೀಡಿ  ಸಜ್ಜುಗೊಳಿಸಿದ ಕಾರಣ ಇದು ಸಾಧ್ಯವಾಗಿದೆ.

18818 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು