ಜಡತ್ವ

ಚಂದ್ರನು ನಮ್ಮ ಭೂಗ್ರಹದಿಂದ ಸುಮಾರು ೪೦೦,೦೦೦ ಕಿಲೋ ಮೀಟರ್‌ಗಿಂತಲೂ ಸ್ವಲ್ಪ ಹೆಚ್ಚು ದೂರದಲ್ಲಿದ್ದಾನೆ. ಆದರೂ ಬೇರೆ ಆಕಾಶಕಾಯಗಳಿಗೆ ಹೋಲಿಸಿದರೆ ಚಂದ್ರನು ನಮಗೆ ಬಹಳ ಸಮೀಪವೆಂದೇ ಹೇಳಬಹುದು. ನಮಗೆ ಗೊತ್ತಿರುವ ಎಲ್ಲಾ ಆಕಾಶ ಕಾಯಗಳ ಪೈಕಿ ಭೂಮಿಯ ಮೇಲೆ (ಸೂರ್ಯನ ಜೊತೆ) ಹೆಚ್ಚು ಪ್ರಭಾವ ಬೀರುವ ಆಕಾಶ ಕಾಯವೆಂದರೆ ಚಂದ್ರನೇ. ಕರಾವಳಿ ತೀರದಲ್ಲಿ ವಾಸಿಸುವ ಜನರಿಗೆ ದಿನಕ್ಕೆ ಎರಡು ಬಾರಿ ಸಾಗರದಲೆಗಳ ಉಬ್ಬರದ ಅನುಭವಕ್ಕೆ ಬರುತ್ತಿರುತ್ತದೆ. ಇದು ಅಮಾವಾಸ್ಯೆಯ ರಾತ್ರಿಯಂದು ಉಬ್ಬರದ ಅಲೆಗಳು ಇನ್ನೂ ಭೋರ‍್ಗರೆಯುತ್ತವೆ.  ಸ್ವಾರಸ್ಯದ ಅಂಶವೆಂದರೆ ಅಲೆಗಳ ಉಬ್ಬರವಿಳಿತಕ್ಕೂ ಸಾಗರದ ಅಂತರಾಳದಲ್ಲಿರುವ ಯಾವುದಕ್ಕೂ ಸಂಬಂಧವಿರುವುದಿಲ್ಲ.
18627 ನೊಂದಾಯಿತ ಬಳಕೆದಾರರು
7275 ಸಂಪನ್ಮೂಲಗಳು