ಚೈತನ್ಯ

ಮಕ್ಕಳ ಕುತೂಹಲದ ಚಿಗುರನ್ನು ಚಿವುಟದೇ ಬಿಟ್ಟರೇ, ತರ್ಕಗಳು ಸಹಜವಾಗಿ ಬೆಳೆದು, ಮನಸ್ಸು ಸಂಪೂರ್ಣವಾಗಿ ಅರಳಲು ಅವಕಾಶಮಾಡಿದಂತಾಗುತ್ತದೆ. ಕಮಲಾ ಮುಕುಂದರವರು ಬರೆದಿರುವಂತೆ ಎಲ್ಲಾವನ್ನೂ ಪಡೆದುಕೊಂಡೇ ಶಾಲೆಗೆ ಬರುವ ಮಕ್ಕಳಲ್ಲಿ ವ್ಯವಸ್ಥಿತವಾಗಿ ಜ್ಞಾನವನ್ನು ಹೆಚ್ಚಿಸಬೇಕಾಗಿದೆಯೇ ಹೊರತು, ಮಕ್ಕಳಲ್ಲಿ ಈಗಾಗಲೇ ಮೂಡಿರುವ ತರ್ಕಗಳನ್ನು, ಆಲೋಚನೆಗಳನ್ನು ದಿಕ್ಕು-ತಪ್ಪಿಸಬಾರದು. ಶಾಲೆ ಯಾವುದನ್ನು ಕಲಿಯಬೇಕೆಂಬುದನ್ನು, ಹೇಗೆ ಕಲಿಯಬೇಕೆಂಬುದನ್ನು ಅನುಕೂಲಿಸಬೇಕೆ ಹೊರತು, ಇಷ್ಟೇ ಕಲಿಯಬೇಕೆಂಬ ನಿರ್ಬಂಧ ಹೇರಬಾರದು.

ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಗುರುವಿಗೆ ಮಹತ್ವವಾದ ಸ್ಥಾನವಿದೆ. ಆ ದಿನದ ಗುರುಗಳು ಯಾವ ಕಾರಣದಿಂದ ಆದರ್ಶರಾಗಿದ್ದಾರೋ, ಇಂದಿಗೂ ಅಂತಹ ಶಿಕ್ಷಕರು ಆದರ್ಶರಾಗಿದ್ದಾರೆ. ಅಂತಹ ಶಿಕ್ಷಕರನ್ನು ನಾವು ಇಂದಿಗೂ ಸ್ಮರಿಸುತ್ತೇವೆ. ಮಕ್ಕಳ ಮೇಲೆ ಪ್ರಭಾವ ಬೀರುವ ಶಿಕ್ಷಕರನ್ನು ಸಮಾಜ ಇಂದಿಗೂ ಗೌರವಿಸುತ್ತದೆ.

ಶಿಕ್ಷಕ ದಿನಾಚರಣೆಯ ಹಿನ್ನೆಲೆಯಲ್ಲಿ ಹೊರಬಂದ- ಚೈತನ್ಯಪುರವಣಿಯನ್ನು ಇಲ್ಲಿಕೊಡಲಾಗಿದೆ.

ಚೈತನ್ಯ ಅಗಸ್ಟ್ 2015 ಸ್ವಾತಂತ್ರೋತ್ಸವ ಸಂಚಿಕೆ  ಹೊರ ಬಂದಿದೆ.

ಹೊಸ ರಾಷ್ಟ್ರೀಯ ನೀತಿಯ ಉದ್ದೇಶವು ಮಕ್ಕಳು ತಮ್ಮ ಬದುಕನ್ನು ಸದೃಢವಾಗಿ ಕಟ್ಟಿಕೊಳ್ಳಲು ಅಗತ್ಯವಾದ ಜ್ಞಾನ ಮತ್ತು ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಹಾಗು ದೇಶದ ಬದಲಾದ ಸನ್ನಿವೇಶವನ್ನು ಸಮರ್ಪಕವಾಗಿ ನಿಭಾಯಿಸಲು ಅಗತ್ಯವಾದಂತಹ ಗುಣಮಟ್ಟದ ಶಿಕ್ಷಣ, ನಾವಿನ್ಯತೆ ಹಾಗು ಸಂಶೋಧನೆಯನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತವನ್ನು ಜ್ಞಾನದ ವಿಷಯದಲ್ಲಿ ಶಕ್ತಿಯುತ ರಾಷ್ಟ್ರವನ್ನಾಗಿಸುವುದು, ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಶೈಕ್ಷಣಿಕ ತಜ್ಞತೆ ಹಾಗು ಕೈಗಾರಿಕೆಗಳಿಗೆ ಅಗತ್ಯವಾದಂತಹ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವುದಾಗಿದೆ.-

ರುದ್ರೇಶ್ ಎಸ್. ಮುಖ್ಯಸ್ಥರು, ಯಾದಗಿರಿ ಜಿಲ್ಲಾ ಸಂಸ್ಥೆ
ಅಜೀಂ ಪ್ರೇಂಜಿ ಫೌಂಡೇಷನ್

ಭಾರತದಲ್ಲಿ ಶಿಕ್ಷಕರ ಅಭಿವೃಧ್ಧಿಯ ಅವಶ್ಯಕತೆಯನ್ನು ಅನೇಕ ಸಂಶೋಧನೆಗಳು ದೃಢಪಡಿಸಿವೆ. ಶಿಕ್ಷಕರ ಅಭಿವೃಧ್ಧಿ ಕೇವಲ ಔಪಚಾರಿಕ ಆಯಾಮವಾದ ತರಭೇತಿಯಿಂದ ಸಾಧ್ಯವಿಲ್ಲ, ವಿಭಿನ್ನ ಅನೌಪಚಾರಿಕ ಆಯಾಮಗಳ ಅವಶ್ಯಕತೆಯನ್ನು ಮನಗಾಣಲಾಗಿದೆ. ಇಂತಹ ಒಂದು ಪ್ರಯತ್ನ ಯಾದಗಿರಿ ಜಿಲ್ಲೆಯಲ್ಲಿ ಅಜೀಂ ಪ್ರೇಂಜಿ ಫೌಂಡೇಷನ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶಿಕ್ಷಕ ಕಲಿಕಾ ಕೇಂದ್ರಗಳು, ಸ್ವಯಂ ಆಸಕ್ತಿಯ ಶಿಕ್ಷಕರ ವೇದಿಕೆಯ ಮೂಲಕ ಆರಂಭವಾಗಿದೆ. ಶಿಕ್ಷಕರಿಗೆ ಅಗಾಧವಾದ ಜ್ಞಾನ, ಅನುಭವವಿದೆ.ಮಕ್ಕಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಅನೇಕ ಶಿಕ್ಷಕರು ತಮ್ಮದೇ ರೀತಿಯಲ್ಲಿ ನಾವಿನ್ಯ ಪ್ರಯೋಗಗಳನ್ನು ತರಗತಿಯಲ್ಲಿ ಮಾಡುತ್ತಿದ್ದಾರೆ.

18624 ನೊಂದಾಯಿತ ಬಳಕೆದಾರರು
7275 ಸಂಪನ್ಮೂಲಗಳು