ಕುತೂಹಲ

ವಿಜ್ಞಾನಕ್ಕೆ ಸಂಬಂಧಿಸಿದಂತೆ ಹೊಸ ದೃಷ್ಟಿಕೋನಗಳನ್ನು ಕೊಡಬಹುದಾದ ಯಾವುದಾದರೂ ರಸವತ್ತಾದ ಪುಸ್ತಕವೊಂದರ ನಿರೀಕ್ಷೆಯಲ್ಲಿ ನೀವಿದ್ದರೆ, ಇದೋ ಇಲ್ಲಿದೆ ನೋಡಿ, ಅಂತಹ ಒಂದು ಪುಸ್ತಕ:The Agenda of the Apprentice Scientist. ಇದನ್ನು ನಾವು ಕನ್ನಡದಲ್ಲಿ ಅರ್ಥಮಾಡಿಕೊಳ್ಳುವ ಸಲುವಾಗಿ ’ಅಭ್ಯಾಸಿ ವಿಜ್ಞಾನಿಯೊಬ್ಬನ ಕಾರ್ಯಸೂಚಿ’ ಎಂದು ಕರೆಯಬಹುದು. ಈ ಲೇಖನದಲ್ಲಿ ಈಶಾನ್ ಮತ್ತು ಸಂಗೀತಾ ರಾಜ್ ಎಂಬ ತಾಯಿ ಮಗನ ಜೋಡಿಯೊಂದು ಈ ಪುಸ್ತಕವನ್ನು ಓದುವಾಗ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ನೀವು ಕೂಡ ಅವರ ಸಂತೋಷದಲ್ಲಿ  ಜೊತೆಗೂಡಿರಿ.  

ಕಿಟ್ಟಿಯ ರಟ್ಟಿನ ವಿಮಾನ -ಇದೊಂದು ಸರಳ ನೇರ ಹಾಗು ಮನಮುಟ್ಟುವ ಪ್ರಚಲಿತ ಶಿಕ್ಷಣ ವಿಧಾನದ ಹಾಗು ಪದ್ಧತಿ ಶಿಕ್ಷಣದ ಕೊರತೆಯ ವಿಮರ್ಶೆಯಾಗಿದೆ.ನೀರಸ ಪಾಠಕ್ಕಿಂತ ಮಕ್ಕಳ ಅಂತರಂಗದ ಸುಪ್ತ ಪ್ರತಿಭೆ ಮತ್ತು ಅಮಿತ ಕುತೂಹಲಕ್ಕೆ ಪೂರ್ಣ ಎಡೆ ಮಾಡಿಕೊಟ್ಟರೆ ಕಲಿಕೆಯು ಬಹಳ ಸಹಜವಾಗಿ ಆಗುತ್ತದೆ ಎಂಬ ಸಂದೇಶ ಇದರಲ್ಲಿದೆ.

ಕನ್ನಡ ಅಡಿ ಶೀರ್ಷಿಕೆ: ಜೈಕುಮಾರ್ ಮರಿಯಪ್ಪ

Everything is easy when you are busy. But nothing is easy when you are lazy. ಎಂಬಂತೆ ಪ್ರತಿಯೊಬ್ಬ ವ್ಯಕ್ತಿಯು ಪ್ರಾಮಾಣಿಕತೆ, ನಿಷ್ಠೆಯಿಂದ ಕಾರ್ಯವನ್ನು ನಿರ್ವಹಿಸಿದಾಗ ಮಾತ್ರ ಎಲ್ಲ ಕಾರ್ಯಗಳಲ್ಲಿ ಯಶಸ್ಸು ಕಾಣುತ್ತೇವೆ. ಸೋಮಾರಿತನದಿಂದ ವರ್ತಿಸಿದರೆ ಯಾವ ಕಾರ್ಯಗಳು ಸಿದ್ಧಿಸುವುದಿಲ್ಲ. ಪರಿಚಿತ ಹಾಗೂ ಸುರಕ್ಷಿತವಾದ ಮನೆಯನ್ನು ಬಿಟ್ಟು ಅಪರಿಚಿತವಿರುವ ಹೊಸ ಸ್ಥಳವಾದ ಶಾಲೆಗೆ ಹೋಗಲು ಜೊತೆಗೆ ಶಾಲೆಯ ಶಿಸ್ತು ನಿಯಮಗಳಿಗೆ ಹೊಂದಿಕೊಳ್ಳಲು ಕಷ್ಟವಾಗಿ ಮಗು ಹೆದರಿ ಶಾಲೆಗೆ ಹೋಗಲು ನಿರಾಕರಿಸುವುದು ಅಸಹಜವಲ್ಲ. ಅಲ್ಲದೇ ಎಲ್ಲರ ಕಣ್ಮಣಿಯಾಗಿ ಆಕರ್ಷಣೆಯ ಕೇಂದ್ರವಾಗಿ ರಾಜನಂತೆ ಮೆರೆಯುವ ಮಗುವಿಗೆ ಶಾಲೆಯಲ್ಲಿ ನೂರರಲ್ಲಿ ಒಬ್ಬನಾಗಲು ಇಷ್ಟವಾಗುವುದಿಲ್ಲ.

ಕುತೂಹಲವೆಂಬುದು ಮಕ್ಕಳ ಸಹಜ ಗುಣ. ಆದುದರಿಂದಲೇ ಅವರು ತಮ್ಮ ಸುತ್ತಲಿನ ಜಗತ್ತನ್ನು ತಡಕಿ ಹುಡುಕಿ ಪರಿಶೋಧಿಸುತ್ತಾರೆ.ಇದೇ ಕುತೂಹಲವನ್ನು ಬಳಸಿಕೊಂಡು ಅವರು ತಮ್ಮ ಸುತ್ತಲಿನ ಪರಿಸರವನ್ನು ಹುಡುಕಿ ಶೋಧಿಸುತ್ತಾ ಕಲಿಯುವುದಕ್ಕೆ ನಾವೇಕೆ ಸಹಾಯ ಮಾಡಬಾರದು?

18456 ನೊಂದಾಯಿತ ಬಳಕೆದಾರರು
7218 ಸಂಪನ್ಮೂಲಗಳು