ಕಲೆ

ಶಿಲ್ಪಕಲೆಗೆ  ಮಾದರಿ ಪಾಠ ಯೋಜನೆ

   ಹೆಸರು _____________________                                                                                                                                ದಿನಾಂಕ_________

ವಿಷಯ

 ಕಲೆ

ಮಕ್ಕಳಿಗೆ ಅದೂ ಇದೂ  ಚಿತ್ರ ಬರೆಯುವುದೆಂದರೆ ಬಹಳ ಇಷ್ಟ. ಎರಡು ವರ್ಷದ  ಹೊತ್ತಿಗೆ ಏನಾದರೂ ಗುರುತು ಮಾಡುವುದರಲ್ಲಿನ   ಸಂಪೂರ್ಣ ಸಂತೋಷ ಅರಿಯುತ್ತಾರೆ. ಅವರು ಯಾವುದೇ  ಮೇಣದ ಬಳಪ, ಪೆನ್ಸಿಲ್ ಅಥವಾ ಪೆನ್ ತೆಗೆದುಕೊಂಡು  ಗೀಚಲಾರಂಬಿಸುತ್ತಾರೆ.
 
ನಮ್ಮ ಪುಟ್ಟ ಮಕ್ಕಳು  ಈ ಗೀಚು ಕಲೆಯಿಂದ ವಾಸ್ತವವನ್ನು  ಬಿಂಬಿಸಲು ಪ್ರಯತ್ನ ಪಡುತ್ತಿರುವುದಿಲ್ಲ. ಇದು ಕೇವಲ ತಮ್ಮ ಹೊಸ ಸಾಮರ್ಥ್ಯದ  ಒಂದು ಸಂತೋಷದಾಯಕ ಪರಿಶೋಧನೆ ಆಗಿದೆ. ಅದೇನು  ಕಡಿಮೆ ಸಾಮರ್ಥ್ಯವೇ ?  ಪ್ರಪಂಚದ ಮೇಲೆ ಖಾಯಂ ಛಾಪು ಒತ್ತುವ ಸಾಮರ್ಥ್ಯ.
 

ಸಾಂಝಿ ಮೂಲ : ಮಥುರಾ ಸ್ಟೆನ್ಸಿಲ್ ಕರೆ, ಸಾಂಝಿ ಎಂಬುದು ಹಿಂದಿಯಿಂದ ಬಂದಿದ್ದು. ಸಜ್ವಾವಟ್, ಸಾಂಜನ್, ಸಜಾನ್ ಎಂಬ ಸಮಾನಾರ್ಥ ಪದಗಳಿವೆ. ಅಲಂಕಾರ ಮಾಡುವುದು,ಮಾಡಿಕೊಳ್ಳುವುದು ಎಂಬ ಅರ್ಥವುಳ್ಳದ್ದು.

ಕರ್ನಾಟಕದಲ್ಲೂ ಈ ಕಲೆಯ ಹಳೆಯ ಪ್ರಕಾರಗಳಿವೆ. ಉದಾಹರಣೆಗೆ ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಇದನ್ನು ಚಿತ್ರಕೊರೆಯೋದು ಎನ್ನುತ್ತಾರೆ. ಕಾರ್ಕಳ, ಕುಮಟ ಕಡೆ ಇದನ್ನು ಪರ್ಪರೆ ಎನ್ನುತ್ತಾರೆ. ದಾವಣಗೆರೆ, ಹೊನ್ನಾಳಿ ಕಡೆ ಮಾಲು ಕಟ್ಟೋದು ಎಂದರೆ ಬೀದರ್ ಗುಲ್ಬರ್ಗ ಕಡೆ ಹೋದರೆ ನಕ್ಷಾ ಮಾಡೋದು ಎನ್ನುತ್ತಾರೆ. ಚಿತ್ರದುರ್ಗ,
ತುಮಕೂರು ಜಿಲ್ಲೆಗಳಲ್ಲಿ ಕಾಗದದ ಹೂ ಕತ್ತರಿಸೋದು ಎನ್ನುತ್ತಾರೆ.

ಇದು ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಿಕ್ಷಕ ದಿನಾಚರಣೆ 2010 ರಂದು ಹೊರತಂದ ಸ್ಮರಣಿಕೆ- ಗುರುವಂದನ ದಿಂದ  ಆಯ್ದ ಲೇಖನ. ಅದನ್ನು ಇಲ್ಲಿ ಸಂಪಾದಕರಿಗೆ ಆಭಾರ ಮನ್ನಣೆಯೊಂದಿಗೆ ಇ ಪುಸ್ತಕವಾಗಿ ಕೊಡಲಾಗಿದೆ.

ಕಲೆಯ ಮೂಲಕ ಮಕ್ಕಳಿಗೆ ಚೆನ್ನಾಗಿ ವಿಷಯಗಳನ್ನು ಕಲಿಸಬಹುದು.

ಕಲೆ ಎಂಬುದು ಉಪವಿಷಯವಲ್ಲ,ಅದು ಜೀವನದ  ಮತ್ತು ಕಲಿಕೆಯ ಅಂಗಭಾಗ

ಕಲೆ ಎಂಬುದು ಉಪವಿಷಯವಲ್ಲ,ಅದು ಜೀವನದ  ಮತ್ತು ಕಲಿಕೆಯ ಅಂಗಭಾಗ

ಮಣ್ಣಿನ ಒಡನಾಟವು ಮಕ್ಕಳು ಭೂಮಿಯ  ನಿಕಟ ಸಂಪರ್ಕ ಪಡೆಯಲು ಅವಕಾಶ ಕಲ್ಪಿಸುತ್ತದೆ. ಇದು ಎಲ್ಲಾ ಮಕ್ಕಳು ಮಾಡಬಹುದಾದ ಮತ್ತು ಮಾಡಲೇಬೇಕಾದ ವಿಷಯ. ಮಣ್ಣಿನ ಜೊತೆ ಆಟವಾಡುತ್ತಾ ಇದ್ದರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ.  ಅಷ್ಟೇ ಅಲ್ಲ ಮನದ ಒತ್ತಡ  ತಗ್ಗಿಸುವ, ಅಗ್ಗವಾದ, ಮತ್ತು ಬಹು ಮಜ ಕೊಡುವ ಆಟವಾಗಿರುತ್ತದೆ.

18449 ನೊಂದಾಯಿತ ಬಳಕೆದಾರರು
7204 ಸಂಪನ್ಮೂಲಗಳು