ಕಲಿಕೆ

ಶಾಲೆಯು ಸಮಾಜದ ಸೂಕ್ಶ್ಮ ಪ್ರತಿರೂಪ. ಮಕ್ಕಳನ್ನು ಸಮಾಜದ ಉತ್ತಮ ಪ್ರಜೆಯಾಗಿ ರೂಪಿಸುವುದು ಶಾಲೆಗಳ ಪ್ರಮುಖ ಕರ್ತವ್ಯ

ಆತ್ಮಸಾಕ್ಷಿ ಮೆಲ್ಲಮೆಲ್ಲನೆ ಉಸುರುವ ಹಸಿ ಹಸಿಯಾದ ಸತ್ಯದ ತುಣುಕು, ಧುತ್ತೆಂದು ಹೊಳೆಯುತ್ತಲೇ ಮಾಯವಾಗುವ ಮಂದಹಾಸದ ಕೋಲ್ಮಿಂಚು, ನನ್ನೊಳಗನ್ನು ನಾ ಬಗೆದು ನೋಡಿದಾಗ ಕೋಶಾವಸ್ಥೆಯಲ್ಲಿರುವ ಹೊಂಗಿರಣ,
ಅಡಿಯಿಂದ ಮುಡಿಯವರೆಗೆ ಎರಕ ಹೊಯ್ದಿಟ್ಟ ಸ್ವಂತಿಕೆಯ ಅಪ್ಪಟ ಛಾಯೆ, ಕೆಣಕುತ್ತಲೇ ಜೂಟಾಟವಾಡುವ ಅಂತರಂಗದ ಕನ್ನಡಿಯ ಪ್ರತಿಬಿಂಬ,,ಅಸ್ತಿತ್ವದ ಹುಡುಕಾಟಕ್ಕೆ, ಅಸ್ಮಿತೆಯ ಮಿಸುಕಾಟಕ್ಕೆ ದೊರೆತ ಅನನ್ಯ ಉತ್ತರ
ಹೆಸರಿಟ್ಟೆ ನಾ ತಣ್ಣಗೆ ಅದಕೆ ಅಭಿವ್ಯಕ್ತಿ !

ತರಗತಿಯಲ್ಲಿ ನಡೆಸುವ ಮೂರು ಚಟುವಟಿಕೆಗಳನ್ನಾಯ್ದುಕೊಳ್ಳಿ. ಉದಾಹರಣೆಗೆ ಒಂದು ಸೀಸದಕಡ್ಡಿಯನ್ನು ಚೂಪುಮಾಡುವುದು, ಕಪ್ಪುಹಲಗೆ ಒರೆಸುವುದು, ಒಗಟು ಬಿಡಿಸುವುದು, ಮೂರು ಮಕ್ಕಳು ಒಮ್ಮೆಗೇ ಇವುಗಳನ್ನು ಮಾಡಲಿ. ಮರಳು ಗಡಿಯಾರದಿಂದ ಇವುಗಳಲ್ಲಿ ಬೇಗ ಮಾಡಬಹುದಾದ್ದುದನ್ನು, ಹೆಚ್ಚುಕಾಲ ತೆಗೆದುಕೊಳ್ಳುವುದನ್ನು ಮಕ್ಕಳು ಕಂಡುಹಿಡಿಯಲಿ.
 

ಆವಾಗ ನಾನು ಪುಟ್ಟವನಿದ್ದೆ. ಆವಾಗಿನ ವಿಸ್ಮಯವೆ ಒಂದು ಬಗೆ. ಇಂದು ಅವನ್ನೆಲ್ಲ ನೆನಪಿಸಿಕೊಂಡು ಪಡುವ ವಿಸ್ಮಯವೆ ಇನ್ನೊಂದು ಬಗೆ. ಈ ವ್ಯತ್ಯಾಸಗಳ ಬಗೆಗು ವಿಸ್ಮಯಪಡುತ್ತ ನಾನು ಇದನ್ನು ಬರೆಯುತ್ತಿದ್ದೇನೆ. ಆಗ ನನ್ನಷ್ಟಕ್ಕೆ ನಾನು ಯಾವ ಕೆಲಸವನ್ನು ಮಾಡಲಾರದವನಿದ್ದೆ. ತಂದೆ ಏನಾದರು ಕೆಲಸಮಾಡುತ್ತಿದ್ದರೆ ಅವರನ್ನು ಹಿಂಬಾಲಿಸಿಕೊಂಡಿರುತ್ತಿದ್ದೆ. ನನ್ನ ಮನೆಯವರಿಗೆ ನಾನು ಪುಟ್ಟವನಾಗಿ ಕಾಣುತ್ತಿದ್ದರೆ, ಕೆಲಸದವರು ಮಾತ್ರ ನನ್ನನ್ನು ಬೆಳೆದು ದೊಡ್ಡವನಾದವನು ಎಂಬಂತೆ ಪರಿಗಣಿಸಿ ವರ್ತಿಸುತ್ತಿದ್ದರು. ಆ ದಿನ ಅಡಿಕೆ ಕೊಲಿನ ಹತ್ತು ಹಲವು ಕೆಲಸಗಳ ಮಧ್ಯೆ ಅಪ್ಪ ಬಿತ್ತನೆಗೆ ಬೀಜದ ಅಡಿಕೆ ಕೊನೆಗಳನ್ನು ಆಯ್ದು ತೆಗೆದಿರಿಸುತ್ತಿದ್ದರು.

ಮಗುವಿಗೆ ಏನೂ ಗೊತ್ತಿರುವುದಿಲ್ಲ, ನಾನು ಹೇಳಿದುದನ್ನು ನಾನು ಹೇಳಿದ ಹಾಗೆಯೇ ಕಲಿಯಬೇಕು, ಯಾವ ಪ್ರಶ್ನೆಯನ್ನೂ ಅದು ಕೇಳ ಕೂಡದು, ಕಲಿಕೆ ಕೇವಲ ತರಗತಿಯಲ್ಲಿ ಮಾತ್ರವೇ ನಡೆಯಬಲ್ಲುದು” ಎಂದು ಭಾವಿಸುವುದು ಮಹಾ ಮೂರ್ಖತನ.

ಇದು Deschooling society ಎಂಬ ಇಂಗ್ಲಿಷ್ ಕೃತಿಯ ಅನುವಾದ.

ಊರಿಗೊಂದು ಶಾಲೆ ಎಂಬ ನಿಯಮದಡಿಯಲ್ಲಿ 1972ರಲ್ಲಿ ಪ್ರಾರಂಭವಾದ ಈ ಶಾಲೆ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲೂಕಿನ ಆನಗಟ್ಟಿ ಎಂಬ ಹಳ್ಳಿಯಲ್ಲಿರುವ ಹಿರಿಯ ಪ್ರಾಥಮಿಕ ಶಾಲೆ.  ಶಾಲೆಯಲ್ಲಿ ಎಲ್ಲಾ ಮಕ್ಕಳೂ ಒಂದೇ ಮನೆಯ ಮಕ್ಕಳಂತೆ ಬೆರೆತು ಸ್ವಚ್ಚಂದವಾಗಿ ಕಲಿಯುತ್ತಿರುವ ವಾತಾವರಣವಿದೆ.

 ‘ದಿನದ ಆರಂಭ ’ ಎಂಬುದು ಪ್ರತಿದಿನ ಮುಂಜಾನೆ 40 ನಿಮಿಷಗಳವರೆಗೆ ಎಲ್ಲರೂ ಅನೌಪಚಾರಿಕವಾಗಿ ಸೇರುವ ಒಂದು ಚಟುವಟಿಕೆಗೆ ನೀಡಿದ ಹೆಸರು. ಪ್ರತಿದಿನ ಮುಂಜಾನೆ ನಾವೆಲ್ಲರೂ ಶಾಲೆಯ ಆವರಣದಲ್ಲಿ ಗುಂಪಾಗಿ ಸೇರುತ್ತೇವೆ. ನಂತರ ನಾವು ಒಬ್ಬೊಬ್ಬರಾಗಿ ಎಷ್ಟು ಜನ ಇದ್ದೇವೆ ಎಂಬುದನ್ನು ತಿಳಿದುಕೊಳ್ಳಲು ಎಣಿಕೆ ಪ್ರಾರಂಭಿಸುತ್ತೇವೆ. ಇದನ್ನು ಆಯಾ ದಿನದ ಚಟುವಟಿಕೆಯ  ಯಾವ ಶಿಕ್ಷಕರದ್ದಾಗಿರುತ್ತದೆಯೋ ಅವರು ಮಾಡುತ್ತಾರೆ.  

ಪುಟಗಳು(_e):

18456 ನೊಂದಾಯಿತ ಬಳಕೆದಾರರು
7218 ಸಂಪನ್ಮೂಲಗಳು