ಕಲಿಕಾ ನಿರ್ಧರಣೆ

ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಗುರುವಿಗೆ ಮಹತ್ವವಾದ ಸ್ಥಾನವಿದೆ. ಆ ದಿನದ ಗುರುಗಳು ಯಾವ ಕಾರಣದಿಂದ ಆದರ್ಶರಾಗಿದ್ದಾರೋ, ಇಂದಿಗೂ ಅಂತಹ ಶಿಕ್ಷಕರು ಆದರ್ಶರಾಗಿದ್ದಾರೆ. ಅಂತಹ ಶಿಕ್ಷಕರನ್ನು ನಾವು ಇಂದಿಗೂ ಸ್ಮರಿಸುತ್ತೇವೆ. ಮಕ್ಕಳ ಮೇಲೆ ಪ್ರಭಾವ ಬೀರುವ ಶಿಕ್ಷಕರನ್ನು ಸಮಾಜ ಇಂದಿಗೂ ಗೌರವಿಸುತ್ತದೆ.

ಶಿಕ್ಷಕ ದಿನಾಚರಣೆಯ ಹಿನ್ನೆಲೆಯಲ್ಲಿ ಹೊರಬಂದ- ಚೈತನ್ಯಪುರವಣಿಯನ್ನು ಇಲ್ಲಿಕೊಡಲಾಗಿದೆ.

ಶಿಕ್ಷಣ ಕ್ಷೇತ್ರದ ಹೊಸ ಹೊಸ ಚಿಂತನೆಗಳನ್ನು ಕುರಿತು ಲೇಖನಗಳ ಸಂಕಲನವನ್ನು ವಿಷಯನಿಷ್ಠವಾಗಿ ಲರ್ನಿಂಗ್ ಕರ್ವ್ ಸಂಚಿಕೆಗಳ ಮೂಲಕ ಅಜೀಂ ಪ್ರೇಂಜಿ ವಿಶ್ವ ವಿದ್ಯಾಲಯವು ಹೊರತರುತ್ತಿದೆ. ಶಾಲಾ ಶಿಕ್ಷಣದಲ್ಲಿ ಕಲಿಕಾನಿರ್ಧರಣೆ- ಈ ವಿಷಯ ಆಧಾರಿತ ಲರ್ನಿಂಗ್ ಕರ್ವ್-ಕನ್ನಡ ಆವೃತ್ತಿ ಸಿದ್ಧವಾಗಿದ್ದು ಅದರ ಇ-ಆವೃತ್ತಿಯನ್ನು ನಮ್ಮ ವೇದಿಕೆ ಮೂಲಕ ಸಾದರಪಡಿಸುತ್ತಿದ್ದೇವೆ.

,

ಕಲಿಕಾ ನಿರ್ಧರಣೆ ಎನ್ನುವುದು ಶಿಕ್ಷಣದ ವ್ಯವಸ್ಥೆಯಲ್ಲಿನ ವಿವಿಧ ಅಂಶಗಳ ಪರಿಣಾಮಗಳನ್ನು ಅಳತೆ ಮಾಡುವ ಒಂದು ಸಾಧನ. ಈ ವಿಧಾನ ನಿರ್ದಿಷ್ಟ ವಿಷಯಗಳಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಗುರುತಿಸಲು ಸಹಕಾರಿಯಾಗಿದೆ. ಅಲ್ಲದೇ ಬೋಧನೆ-ಕಲಿಕೆ ಪ್ರಕ್ರಿಯೆಯಲ್ಲಿ ಶಿಕ್ಷಕರ ಅನುಭವ ಮತ್ತು ಪಾಂಡಿತ್ಯವನ್ನು ತಿಳಿಯಲೂ ಇದು ಸಹಾಯ ಮಾಡುತ್ತದೆ. ಜೊತೆಗೆ ಮಕ್ಕಳ ಸಾಧನೆಯ ಮೇಲೆ  ಬೇರೆ ಬೇರೆ ಶಾಲೆಗಳು ಮತ್ತು ಬೋಧನಾ ಮಾಧ್ಯಮಗಳ ಪರಿಣಾಮವನ್ನು ತಿಳಿಸುತ್ತದೆ.

ಕೇರಳ ಮತ್ತು ತಮಿಳುನಾಡಿನ ಗಡಿಯಂಚಿನಲ್ಲಿರುವ, ಕೊಯಮತ್ತೂರು ಜಿಲ್ಲೆಗೆ ಸೇರಿರುವ ಆನೈಕಟ್ಟಿ ಎಂಬಲ್ಲಿ ಅವಕಾಶವಂಚಿತ ಮತ್ತು ಬುಡಕಟ್ಟು ಜನಾಂಗದ ಮಕ್ಕಳಿಗಾಗಿರುವ ಒಂದು ಹೊಸರೂಪದ ಶಾಲೆ - ವಿದ್ಯಾವನಂ.  ಆ ಪ್ರದೇಶದಲ್ಲಿರುವ ಮಕ್ಕಳಿಗಾಗಿ ಕಡಿಮೆ ವೆಚ್ಚದ ಆಂಗ್ಲ ಮಾಧ್ಯಮ ಶಾಲೆಯನ್ನು ಒದಗಿಸುವ ಉದ್ದೇಶದಿಂದ ಇದು 2007 ರಲ್ಲಿ ಪ್ರಾರಂಭವಾಯಿತು.  ಕಳೆದ ಐದು ವರ್ಷಗಳಲ್ಲಿ ಇದು, ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಒದಗಿಸುತ್ತಿರುವ ಒಂದು ಖಾಸಗೀ ಶಾಲೆ ಮಾತ್ರವಾಗಿ ಉಳಿಯದೇ, ಆನೈಕಟ್ಟಿ ಮತ್ತು ಅದರ ಸುತ್ತಲಿನ ಹಳ್ಳಿಗಳಲ್ಲಿರುವ ಮಕ್ಕಳಿಗೆ ಉತ್ತಮ ದರ್ಜೆಯ ಶಿಕ್ಷಣವನ್ನು ಆಂಗ್ಲ ಮಾಧ್ಯಮದಲ್ಲಿ ನೀಡುತ್ತಿರುವ ಒಂದು ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ.

  ಕಲಿಕಾ ಖಾತರಿ ಕಾರ್ಯಕ್ರಮ (ಎಲ್.ಜಿ.ಪಿ.) ಅಜೀಂ ಪ್ರೇಂಜಿ ಪ್ರತಿಷ್ಠಾನವು 2003 ರಿಂದ 2008ರ ಅವಧಿಯಲ್ಲಿ ಪರಿಕಲ್ಪಿಸಿ ಐದು ರಾಜ್ಯಗಳಲ್ಲಿ ಜಾರಿಗೆ ತಂದ ವಿಶಾಲ ಪರಿಧಿಯ ವಿದ್ಯಾರ್ಥಿಗಳ ಕಲಿಕಾನಿರ್ಧರಣೆಯ ಕಾರ್ಯಕ್ರಮ.

18624 ನೊಂದಾಯಿತ ಬಳಕೆದಾರರು
7275 ಸಂಪನ್ಮೂಲಗಳು