ಓದು

 ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯದ   ಶೈಲಜಾ ಮೆನನ್  ಲರ್ನಿಂಗ್ ಕರ್ವ್ ಮ್ಯಾಗಜಿನ್ ಗಾಗಿ ಬರೆದ  ಎಳೆವಯಸ್ಸಿನಲ್ಲಿ ಭಾಷೆ ಮತ್ತು ಅಕ್ಷರ ಕಲಿಕೆ: ಇದು ಹೇಗಿರಬೇಕು? ಎಂಬ ಲೇಖನವನ್ನು ಇಲ್ಲಿ ಕೊಡಲಾಗಿದೆ.

 

ಶ್ಯಾಮನಿಗೆ ನಿದ್ದೆಗಣ್ಣಲ್ಲಿ ಎದ್ದಾಗ ಹಲ್ಲುಜ್ಜುವುದು ಕಷ್ಟವಾಗುತ್ತಿತ್ತು ಆದರೆ ಕನಸು ಕಾಣಲು ಕಷ್ಟವಾಗುತ್ತಿರಲಿಲ್ಲ.

ಪೈಲ್ವಾನ್ ಆದರೇನು ಬರಿ ಕುಸ್ತಿ ಮಾತ್ರ ಆಡಬೇಕೆ ಕ್ರಿಕೇಟ್ ಆಡಬಾರದೇನು? ಪೈಲ್ವಾನ್ ಮಕ್ಕಳ ಜೊತೆ ಕ್ರಿಕೇಟ್ ಆಡಿದ ಕಥೆ ಓದಿರಿ.

 ಅಕ್ಷರಮಾಲೆ ಮತ್ತು ಕಾಗುಣಿತ ಕಲಿತಮೇಲೆ ಪದಗಳನ್ನು ಗುರುತಿಸಿ ಓದುವುದು  ಮತ್ತು ಬರೆಯುವುದು ಮಕ‍್ಕಳು ಅವಶ್ವಾಗಿ ಕಲಿಯಬೇಕಾದ ಭಾಷಾ ಕೌಶಲ. ಅದಕ್ಕಾಗಿ ರೂಪಿಸಿದ ಅಭ್ಯಾಸಪತ್ರ ಇಲ್ಲಿದೆ.

ಇದು ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಿಕ್ಷಕ ದಿನಾಚರಣೆ 2010 ರಂದು ಹೊರತಂದ ಸ್ಮರಣಿಕೆ- ಗುರುವಂದನ ದಿಂದ  ಆಯ್ದ ಲೇಖನ. ಅದನ್ನು  ಇಲ್ಲಿ ಸಂಪಾದಕರಿಗೆ ಆಭಾರ ಮನ್ನಣೆಯೊಂದಿಗೆ ಇ ಪುಸ್ತಕವಾಗಿ ಕೊಡಲಾಗಿದೆ.

2006ರ ನವೆಂಬರ್ ನಲ್ಲಿ ಉತ್ತರಾಖಂಡ್ ಶಿಕ್ಷಣ ಇಲಾಖೆಯವರು, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು- 2005 ರ ಮಾರ್ಗದರ್ಶಕ ಸೂತ್ರಗಳಿಗೆ ಅನುಗುಣವಾಗಿ ಪ್ರಾಥಮಿಕ ಶಾಲೆಗಳಿಗೆ ಹೊಸ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಲು ನಿರ್ಧರಿಸಿದರು. ಒಂದನೇ ತರಗತಿಗಾಗಿ ಒಂದು ಪಠ್ಯಪುಸ್ತಕವನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ವಹಿಸಲಾದ 12 ಮಂದಿ ಉಪಾಧ್ಯಾಯರು ಮತ್ತು ಲೇಖಕರ ತಂಡದಲ್ಲಿ ನಾನು ಒಬ್ಬ ಸದಸ್ಯನಾಗಿದ್ದೆ. "ಹಸೀ–ಖುಷಿ" ಎಂಬ ನಮ್ಮ ಪುಸ್ತಕವು, ಹಿಂದಿ, ಗಣಿತ ಮತ್ತು ಪರಿಸರ ಅಧ್ಯಯನ ಇವೆಲ್ಲವನ್ನೂ ಒಳಗೊಂಡ ಒಂದು ಸಂಯುಕ್ತ ಪಠ್ಯಪುಸ್ತಕವಾಗಿತ್ತು. ನಮ್ಮ ತಂಡದಲ್ಲಿ ಹಿಂದಿ ಮತ್ತು ಗಣಿತ ಬೋಧನೆಯ ಹಿನ್ನೆಲೆಯನ್ನು ಹೊಂದಿರುವ ಶಿಕ್ಷಕರಿದ್ದರು. ಆದರೆ ನಾವೆಲ್ಲ ಸೇರಿ ಒಂದು ಸಂಯುಕ್ತ ಪಠ್ಯಪುಸ್ತಕವನ್ನು ಬರೆಯ ಬೇಕಿತ್ತು.ನಿಜಕ್ಕೂಅದೇ ಒಂದು ಸವಾಲಾಗಿತ್ತು.
ಹೇಮರಾಜ್ ಭಟ್ | ಕನ್ನಡಕ್ಕೆ: ಜೈ ಕುಮಾರ್ ಮರಿಯಪ್ಪ

18585 ನೊಂದಾಯಿತ ಬಳಕೆದಾರರು
7253 ಸಂಪನ್ಮೂಲಗಳು