ಆಟಿಕೆ

ಅರವಿಂದ ಗುಪ್ತ ಅವರ ಮೂಲಕೃತಿಯ ಕನ್ನಡಾನುವಾದದ ಕೃತಿಸಾಮ್ಯದಾರರಾದ ನವಕರ್ನಾಟಕ ಪಬ್ಲಿಕೇಷನ್ ಅವರ ಅನುಮತಿ ಪಡೆದು ಶೈಕ್ಷಣಿಕ ಉದ್ದೇಶಕ್ಕಾಗಿ ಇಲ್ಲಿ ಪ್ರಕಟಿಸಲಾಗಿದೆ.

ಉರುಳುತ್ತಾ ಬೀಳುವ ಕಾಗದದ ತುಣುಕು ಬಲು ಮೋಜಿನ  ಆಟಿಕೆ .  ಇದಕ್ಕೆ ಬೇಕಾದ ಸಾಮಾಗ್ರಿ ಸಣ್ಣ  3-cm ಅಗಲದ ಕಾಗದದ ಪಟ್ಟಿ ಮತ್ತು ಕಾಗದದ ವೃತ್ತಗಳು

ಇಂದು ನಾವು ಸಣ್ಣ ಪುಟ್ಟ ವಸ್ತುಗಳನ್ನು  ಇರಿಸಬಹುದಾದ  ಒಂದು ಒರಿಗಾಮಿ ಬಟ್ಟಲನ್ನು  ಮಾಡೋಣ. ನಾವು 10 ಸೆಂ ಒಂದು ಚದರ ಕಾಗದ ದಿಂದ  ಆರಂಭ ಮಾಡೋಣ. ಒಂದು ಪ್ಲಸ್ ಚಿನ್ಹೆ ಬರುವಂತೆ ಅದರ ಮಧ್ಯ ಸಾಲುಗಳ ಉದ್ದಕ್ಕೂ ಅರ್ಧದಷ್ಟಕ್ಕೆ ಕಾಗದವನ್ನು ಮಡಿಚಿರಿ. ನಂತರ ಎರಡೂ ಕರ್ಣಗಳ ಉದ್ದಕ್ಕೂ ಮಡಿಚಿರಿ. ಮುಂದೆ ವಿಡಿಯೋ ನೋಡಿ ಅನುಸರಿಸಿರಿ

 

ಒಂದು  ಖಾಲಿ ಕಡ್ಡಿ ಪೆಟ್ಟಿಗೆ ಹೊರ ಕವಚದ ಅಂಚುಗಳ ಮೇಲೆ ಎರಡು ಕಾಗದದ   ಕ್ಲಿಪ್ ಗಳನ್ನು ಹಾಕಿರಿ.  ಕ್ಲಿಪ್ಗಳ ಮೂಲಕ  ಹಾದು ಹೋಗುವಂತೆ ದಾರವೊಂದನ್ನು ಪೋಣಿಸಿರಿ.  ದಾರದ  ಎರಡೂ ತುದಿಗಳಲ್ಲಿ ಮಣಿಗಳನ್ನು ಪೋಣಿಸಿ ಕಟ್ಟಿರಿ. ಇದು ಸರಿಯಾಗಿ ಕೆಲಸ ಮಾಡಲು ನೀವು ಬೆಂಕಿಪೊಟ್ಟಣದ   ಡ್ರಾವರ್ ಅನ್ನು ಹಿಂದೆ ಮುಂದೆ ಎಳೆದಾಡಿ ಹೊಂದಿಸಬೇಕು. ದಾರವನ್ನು   ಲಂಬವಾಗಿ ಮತ್ತು  ಬಿಗಿಯಾಗಿ ಎಳೆದು ಹಿಡಿಯಿರಿ. ಬೆಂಕಿ ಪೆಟ್ಟಿಗೆ ಕುಲುಕುತ್ತಾ ಕೆಳಗೆ ಇಳಿಯುವ ಮೋಜನ್ನು ನೋಡಿರಿ.

 

ವಿಸ್ಮಯ ಆಶ್ಚರ್ಯಕ್ಕಿಂತ ಕಲಿಕೆಗೆ ಪ್ರೇರಣೆ ಮತ್ತೊಂದಿಲ್ಲ.

ನಡೆದಾಡುವ ಹಂಸ ಒಂದು ಅದ್ಭುತ ಸೃಜನಶೀಲ ಆಟಿಕೆ. ನಿಮಗೆ ಒಂದು ಕಾಗದದ ಕಪ್,ಗೋಲಿ, ಅಂಟು, ಕತ್ತರಿ ಮತ್ತು ಕೆಲವು ಸ್ಕೆಚ್ ಪೆನ್ನು ಅಗತ್ಯವಿದೆ. ಮೊದಲ ಒಂದು ಕಾಗದದ ಕಟ್ಟರ್ ಸಹಾಯದಿಂದ ಕಾಗದದ ಕಪ್ ವೃತ್ತಾಕಾರದ ತಳವನ್ನು ತೆಗೆದುಹಾಕಿ. ಇದು ಎರಡೂ ತುದಿಗಳಲ್ಲಿ ಅದೇ ದಪ್ಪ ಆದ್ದರಿಂದ ಕಪ್ ಅಂಚು ಕತ್ತರಿಸಿ. ಕಪ್ ಒಂದು ಸಣ್ಣ ಸಿಲಿಂಡರ್ ರೀತಿ ಕಾಣಿಸುತ್ತದೆ. ಆದ್ದರಿಂದ ಎರಡು ಪದರಗಳು ಮೇಲೆ ಒಂದು ಮತ್ತು ಕೆಳಗೆ ಒಂದರಂತೆ  ಇರುತ್ತದೆ ನಂತರ ವಿಡಿಯೋದಲ್ಲಿ ನೋಡಿ ಮಾಡಿ .

ಬೆಂಕಿ ಕಡ್ಡಿ ಇಲ್ಲದೆಯೆ ರಾಸಾಯನಿಕವಾಗಿ ಬೆಂಕಿ ಹಚ್ಚುವುದು ಹೇಗೆ?

ಈ ಮಾತನಾಡುವ ಕಾಗೆ ಚಲಿಸುವ ಕಾಗದದ ಆಟಿಕೆ. ಒಂದು ಚದರ ಕಾಗದದ  ತುಂಡಿನಿಂದ ಇದನ್ನು ತಯಾರಿಸಲಾಗುತ್ತದೆ. ಕಾಗೆ  ದೊಡ್ಡ ಕೊಕ್ಕು ಹೊಂದಿದ್ದು  ಮೇಲಿನ  ಮತ್ತು ಕೆಳಗಿನ ಕೊಕ್ಕುಭಾಗಗಳಿರುತ್ತವೆ.  ನೀವು  ಕಾಗೆ ರೆಕ್ಕೆಗಳನ್ನು  ಹಿಡಿದು ಎಳೆದರೆ  ಅದರ ಬಾಯಿ ತೆರೆದುಕೊಳ್ಳುತ್ತದೆ ಮತ್ತು ಮುಚ್ಚುತ್ತದೆ. ಕಾಗೆ ಮಾತನಾಡುತ್ವೇತಿದೆಯೇನೋ ಎಂದು ಕಂಡುಬರುತ್ತದೆ. ಈ ತುಂಟಕಾಗೆ ತನ್ನ ಕೊಕ್ಕಿನಲ್ಲಿ ಒಂದು ಮೀನು ಸಹ ಹಿಡಿಯುತ್ತದೆ.

ಈ ಮಾದರಿಯು ತ್ರಿಕೋನಗಳಿಂದ  ಮಾಡಿದ 3 ಆಯಾಮದ ಫ್ಲೆಕ್ಸಾಗಾನ್ ಆಗಿದೆ. ನೀವು ಅನೇಕ ಆಸಕ್ತಿದಾಯಕ ಮಾದರಿಗಳನ್ನು ಮಾಡಲು ಈ ಮಾದರಿ ತಿರುಗಿಸಿ ನೋಡಬೇಕು. 

 ಪಂಚಕೋನಾಕೃತಿ ಮತ್ತು ಷಟ್ಕೋನಾಕೃತಿ ಮಾಡಲು ಐಸ್ಕ್ರೀಂ ತುಂಡುಗಳ ಹೆಣಿಗೆ ಮಾಡುವುದನ್ನು ಇಲ್ಲಿ ತೋರಿಸಲಾಗಿದೆ.   ಈ ರಚನೆಗಳು ಯಾವುದೇ ಅಂಟು ಇಲ್ಲದೆ ಜೋಡಿಸಿಕೊಂಡಿವೆ. ಮತ್ತು ಸ್ಥಿರವಾಗಿರುತ್ತವೆ. ಬಿದ್ದರೂ ಬೇರ್ಪಡುವುದಿಲ್ಲ.

ಪುಟಗಳು(_e):

18068 ನೊಂದಾಯಿತ ಬಳಕೆದಾರರು
6931 ಸಂಪನ್ಮೂಲಗಳು