ಅಳತೆ

ಇಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಕೂಡುವ ಲೆಕ್ಕದ ಮೇಲೆ ಕಾರ್ಯಪತ್ರ ಕೊಡಲಾಗಿದೆ. ಮೋಜಿನ ಆದರೂ ಸವಾಲು ನೀಡುವ ಕಾರ್ಯಪತ್ರವನ್ನು ಒಂದು ಪುನರ್ಮನನ ಅಥವಾ ಮೌಲ್ಯ ಮಾಪನ ಕಾರ್ಯಪತ್ರವಾಗಿ  ಬಳಸಬಹುದು. ಲೆಕ್ಕದ ಸಂಕೀರ್ಣತೆ ಪ್ರತಿ ಪುಟದೊಂದಿಗೆ ಹೆಚ್ಚುತ್ತಾ ಹೋಗುತ್ತದೆ.

ಗಣಿತದ ಅಭ್ಯಾಸಪತ್ರ

ಅಳತೆಯ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಮಕ್ಕಳಿಗೆ ಅನುಭವ ಹಾಗೂ ಪ್ರೌಢಿಮೆಗಳು ಅವಶ್ಯಕ. ಒಂದು ಪರಿಮಾಣದ ಬಗ್ಗೆ ಜಾಗೃತಿ ಹಾಗೂ ಅದರ ಜೊತೆಗೆ ಮಿಳಿತವಾದ ಸೂಕ್ತ ಭಾಷೆ ಇವೆರಡೂ ಜತೆ ಜತೆಗಾಗಿ ಉಂಟಾಗುತ್ತದೆ. ದೊಡ್ಡದು, ಚಿಕ್ಕದು, ಹೆಚ್ಚು-ಕಡಿಮೆ ಈ ಪದಗಳನ್ನು ಮಕ್ಕಳು ಬಹಳ ಮುಂಚಿತವಾಗಿಯೇ ಕಲಿತಿರುತ್ತಾರೆ. ಆದಾಗ್ಯೂ ಪರಿಮಾಣ ಅಥವಾ ಸಂಖ್ಯೆಯ ನಿತ್ಯತೆಯ ತತ್ವವನ್ನು ಅರ್ಥಮಾಡಿಕೊಳ್ಳಲು ಸಮಯ ಬೇಕಾಗುತ್ತದೆ. 

ಶಿಕ್ಷಣ ಕ್ಷೇತ್ರದ ಹೊಸ ಹೊಸ ಚಿಂತನೆಗಳನ್ನು ಕುರಿತು ಲೇಖನಗಳ ಸಂಕಲನವನ್ನು ವಿಷಯನಿಷ್ಠವಾಗಿ ಲರ್ನಿಂಗ್ ಕರ್ವ್ ಸಂಚಿಕೆಗಳ ಮೂಲಕ ಅಜೀಂ ಪ್ರೇಂಜಿ ವಿಶ್ವ ವಿದ್ಯಾಲಯವು ಹೊರತರುತ್ತಿದೆ. ಶಾಲಾ ಶಿಕ್ಷಣದಲ್ಲಿ ಕಲಿಕಾನಿರ್ಧರಣೆ- ಈ ವಿಷಯ ಆಧಾರಿತ ಲರ್ನಿಂಗ್ ಕರ್ವ್-ಕನ್ನಡ ಆವೃತ್ತಿ ಸಿದ್ಧವಾಗಿದ್ದು ಅದರ ಇ-ಆವೃತ್ತಿಯನ್ನು ನಮ್ಮ ವೇದಿಕೆ ಮೂಲಕ ಸಾದರಪಡಿಸುತ್ತಿದ್ದೇವೆ.

,

ಕನ್ನಡ

                      ಮೌಲ್ಯ ಮಾಪನದ ಬಗ್ಗೆ ಎಷ್ಟೊಂದು ಬರೆದಾಗಿದೆ ಎಂದರೆ, ಅದರ ಬಗ್ಗೆ ಹೇಳುವುದಕ್ಕೆ  ಹೊಸತೇನೂ  ಇಲ್ಲ ಎಂಬಂತಾಗಿದೆ. ಆದರೂ ಬೇರೆ ದೃಷ್ಟಿಕೋನದಿಂದ  ಇದನ್ನು ನೋಡುವ ಪ್ರಯತ್ನವನ್ನು  ನಾನು ಇಲ್ಲಿ ಮಾಡುತ್ತಿದ್ದೇನೆ.  ಶಿಕ್ಷಕರು ತಮ್ಮ ವೃತ್ತಿಯಲ್ಲಿ ಮಾಡಲು ಜಿಗುಪ್ಸೆಪಡುವ  ಕಾಲುಭಾಗದಲ್ಲಿ ಇದೂ ಸೇರಿದೆ. ಆದರೆ ಏನು ಮಾಡುವುದು? ಇದು  ಪಾಠ ಹೇಳುವ- ಕಲಿಯುವ ಪ್ರಕ್ರಿಯೆಯ ಮತ್ತು ಶಿಕ್ಷಣ ವ್ಯವಸ್ಥೆಯ ಅಂತರ್ಗತ ಭಾಗವಾಗಿದೆ.

ಸಾಂಪ್ರದಾಯಿಕವಾಗಿ, ಶಾಲೆಗಳಲ್ಲಿ ಮೌಲ್ಯಮಾಪನವನ್ನು ಯಾಂತ್ರಿಕವಾಗಿ ಮಾಡುತ್ತಾರೆಯೇ ಹೊರತು, ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವುದಕ್ಕಾಗಲಿ ಮತ್ತು ಅನ್ವಯಿಸುವುದಕ್ಕಾಗಲಿ ಯಾರೂ ಗಮನ ಹರಿಸುತ್ತಿಲ್ಲ.  ನಾವು ಮಾಡಿರುವ ಶಾಲಾ ಪರೀಕ್ಷಾ ಪ್ರಶ್ನೆಪತ್ರಿಕೆ ಆಧಾರದ ಮೇರೆಗೆ ವಿಶ್ಲೇಷಣೆ ಮಾಡಿದಾಗ ಎಲ್ಲೆಡೆ ಅದರಲ್ಲೂ  ಭಾರತದಲ್ಲಿ,  ಇದು ಸತ್ಯವೆಂಬುದು ನಿರ್ವಿವಾದ. "ದ್ಯುತಿಸಂಶ್ಲೇಷಣೆ ಎಂದರೇನು? ಒಂದು ಅಚ್ಚುಕಟ್ಟಾದ ಚಿತ್ರವನ್ನು ಬರೆದು, ಹೆಸರಿಸಿ ಅದರ ಸಹಾಯದಿಂದ ವಿವರಿಸಿ." ಇಂತಹ ಪ್ರಶ್ನೆಗಳನ್ನು ನಾವು ಶಾಲಾ ಪ್ರಶ್ನೆಪತ್ರಿಕೆಗಳಲ್ಲಿ ಸಾಮಾನ್ಯವಾಗಿ ನೋಡುತ್ತಿರುತ್ತೇವೆ.

17921 ನೊಂದಾಯಿತ ಬಳಕೆದಾರರು
6752 ಸಂಪನ್ಮೂಲಗಳು