ಅಭಿಪ್ರಾಯಗಳು ಮತ್ತು ಚಿಂತನೆಗಳು

 

ತಾರುಣ್ಯ ತ್ವರಿತ  ಬೆಳವಣಿಗೆಯ ಕಾಲ. ಯುವ ಜನರು ಈ ಅವಧಿಯಲ್ಲಿ  ಹೊಸ ಸಾಮರ್ಥ್ಯಗಳನ್ನು ಬೆಳಸಿಕೊಳ್ಳುತ್ತಾರೆ ಹಾಗೆಯೇ  ಹೊಸ ಸವಾಲುಗಳನ್ನು ಎದುರಿಸುತ್ತಾರೆ. ಇದು 'ಒತ್ತಡ ಮತ್ತು ಹೋರಾಟದ' ಹಂತ ಎಂದು ಕೂಡ ಕರೆಯುತ್ತಾರೆ.  ಈ ಅವಧಿಯನ್ನು ಎಚ್ಚರಿಕೆಯಿಂದ ನಿರ್ವಹಿಸದಿದ್ದಲ್ಲಿ ಈ ಹಂತವು ಎಲ್ಲರ ಮೇಲೂ ನೇರ ಪರಿಣಾಮಗಳನ್ನು ಬೀರುತ್ತದೆ.

"ಪ್ರತಿಯೊಂದು ಮಗುವು ಸಮರ್ಥವಾಗಿ ವಿಶ್ವದ ಬೆಳಕೂ ಹೌದು ಅದೇ ಸಮಯದಲ್ಲಿ ಅದರ  ಕತ್ತಲೆಯೂ  ಹೌದು."

ಆವಾಗ ನಾನು ಪುಟ್ಟವನಿದ್ದೆ. ಆವಾಗಿನ ವಿಸ್ಮಯವೆ ಒಂದು ಬಗೆ. ಇಂದು ಅವನ್ನೆಲ್ಲ ನೆನಪಿಸಿಕೊಂಡು ಪಡುವ ವಿಸ್ಮಯವೆ ಇನ್ನೊಂದು ಬಗೆ. ಈ ವ್ಯತ್ಯಾಸಗಳ ಬಗೆಗು ವಿಸ್ಮಯಪಡುತ್ತ ನಾನು ಇದನ್ನು ಬರೆಯುತ್ತಿದ್ದೇನೆ. ಆಗ ನನ್ನಷ್ಟಕ್ಕೆ ನಾನು ಯಾವ ಕೆಲಸವನ್ನು ಮಾಡಲಾರದವನಿದ್ದೆ. ತಂದೆ ಏನಾದರು ಕೆಲಸಮಾಡುತ್ತಿದ್ದರೆ ಅವರನ್ನು ಹಿಂಬಾಲಿಸಿಕೊಂಡಿರುತ್ತಿದ್ದೆ. ನನ್ನ ಮನೆಯವರಿಗೆ ನಾನು ಪುಟ್ಟವನಾಗಿ ಕಾಣುತ್ತಿದ್ದರೆ, ಕೆಲಸದವರು ಮಾತ್ರ ನನ್ನನ್ನು ಬೆಳೆದು ದೊಡ್ಡವನಾದವನು ಎಂಬಂತೆ ಪರಿಗಣಿಸಿ ವರ್ತಿಸುತ್ತಿದ್ದರು. ಆ ದಿನ ಅಡಿಕೆ ಕೊಲಿನ ಹತ್ತು ಹಲವು ಕೆಲಸಗಳ ಮಧ್ಯೆ ಅಪ್ಪ ಬಿತ್ತನೆಗೆ ಬೀಜದ ಅಡಿಕೆ ಕೊನೆಗಳನ್ನು ಆಯ್ದು ತೆಗೆದಿರಿಸುತ್ತಿದ್ದರು.

ಶಿಕ್ಷಕರು ಚರ್ಚೆ ಆಧಾರಿತ ಚಟುವಟಿಕೆಯನ್ನು ಗುಂಪು ಕೆಲಸ ಬಳಸಿ ನಡೆಸುತ್ತಾರೆ.

ಬಹು ಶ್ರೇಣಿಯ ಬಹು ಭಾಷೆಯ ಸಂದರ್ಭದಲ್ಲಿ ಶಿಕ್ಷಕರು ಗುಂಪು ಕೆಲಸ ಆಧಾರಿತ ಚಟುವಟಿಕೆಯನ್ನು ನಿರ್ವಹಿಸುತ್ತಾರೆ.

ಬೀದರ ಜಿಲ್ಲೆಯ ಶೈಕ್ಷಣಿಕ ಮಕ್ಕಳ ಕಲಿಕಾ ಅಧ್ಯಯನದ ನಿಮಿತ್ತ ನನಗೆ ಹಲವಾರು ಶಾಲೆಗಳನ್ನು ನೋಡಲು ಸಾಧ್ಯವಾಯಿತು. ನಾನು ಭಾಲ್ಕಿ ಬ್ಲಾಕ್‌ನ ತಂಡದೊಂದಿಗೆ ಕೆಲಸಮಾಡಲು ಅನುಕೂಲವಾಯಿತು ಮರಾಠಿ ಭಾಷೆಯನ್ನು ಮಾತನಾಡುವ ಜನರ ಅಧಿಕವಾದುದರಿಂದ ನನಗೆ ಮೊದಲು ಅನುಮಾನ ಕಾಡಿತು ಏನೆಂದರೆ ಎಲ್ಲಿ ನನಗೆ ಅಧ್ಯಯನವನ್ನು ಮಾಡಲು ಅಡಚಣೆಯನ್ನು ಮಾಡುತ್ತದೆ ಎಂದೂ ಆದರು ಹಿರಿಯರು ಹೇಳಿದಂತೆ ಪಾಲಿಗೆ ಬಂದದ್ದು ಪಂಚಾಮೃತವೆಂದು ತಿಳಿದೆ ನನ್ನ ತಂಡದೊಂದಿಗೆ ಶಾಲೆಗಳನ್ನು ನೋಡಲು ಪ್ರಯಾಣ ಬೆಳೆಸಿದೆವು

ನಾವು ಆಧುನಿಕ ಭಾರತದ ಚರಿತ್ರೆಯನ್ನು ಓದುವಾಗ ಇಂಗ್ಲೆಂಡಿನ ವಸಾಹಾತುಶಾಹಿಯು ಭಾರತದ ಮೇಲೆ ಆಕ್ರಮಣ ನಡೆಸಿದುದನ್ನು ಕಾಣುತ್ತೇವೆ. ಇಂಗ್ಲೆಂಡ್ ಭಾರತದ ಮೇಲೆ ರಾಜಕೀಯ ಮತ್ತು ಆರ್ಥಿಕ ಶೋಷಣೆಯನ್ನು ಮಾತ್ರ ನೆಲೆಗೊಳಿಸಿತಲ್ಲದೇ, ನಮ್ಮ ಚಿಂತನಾಕ್ರಮವನ್ನು ಅಂದರೆ ನಮ್ಮ ಮೆದುಳನ್ನು ವಸಾಹತೀಕರಣಗೊಳಿಸಿತು. ಅದರಿಂದ ಬಿಡಿಸಿಕೊಳ್ಳಲು ಇಂದಿಗೂ ನಾವು ತಿಣುಕಾಡುತ್ತಿದ್ದೇವೆ. ಆದರೆ ಇಂಗ್ಲೆಂಡಿನ ವಸಾಹಾತುಶಾಹಿತ್ವವನ್ನು ಇಂಗ್ಲೆಂಡಿಗನಾಗಿಯೂ ಪ್ರಶ್ನಿಸಿದ ಹಾಗು ಭಾರತದ ಬಗ್ಗೆ ಅಪಾರ ಸಹಾನುಭೂತಿ ಹೊಂದಿದ್ದ, ಭಾರತದ ಗಿರಿಜನರಿಗಾಗಿ ಜೀವನವಿಡೀ ದುಡಿದ, ಕೊನೆಗೆ ಭಾರತೀಯನಾಗಿ ಇಲ್ಲಿಯೇ ಮರಣಿಸಿದ ವೆರಿಯರ್ ಇಲ್ವಿನ್ ಭಾರತವನ್ನು ಶೋಷಿಸಿದ ಇಗ್ಲೆಂಡಿನ ವಸಾಹಾತುಶಾಹಿಯನ್ನು ದೂರುವ ನಮಗೆ ಅಪವಾದವಾಗಿದ್ದಾನೆ!

ಪರೀಕ್ಷೆಯನ್ನು ವಿವಿಧ ಆಯಾಮಗಳಿಂದ ಅವಲೋಕಿಸಿದ ಲೇಖನಗಳು ಬಯಲು 55ನೇ ಸಂಚಿಕೆಯಲ್ಲಿವೆ.

ಪ್ರಾಣಿಗಳು ಏಕೆ ಚಲಿಸುತ್ತವೆ?

   
ಬಹುತೇಕ ಮಧ್ಯಮ ವರ್ಗದವರೇ ವಾಸವಾಗಿದ್ದ ವಲಯದಲ್ಲಿದ್ದ ನಾನು ಕಲಿಯುತ್ತಿದ್ದಂತಹ ಶಾಲೆಯಲ್ಲಿನ ವಿದ್ಯಾರ್ಥಿಗಳು ನನ್ನ ನೆರೆಹೊರೆಯವರಾಗಿದ್ದು, ಅವರಲ್ಲಿ ಅನೇಕರ ತಂದೆ ಅಥವಾ ತಾಯಿ ಒಂದೇ ಕಾರ್ಖಾನೆಯಲ್ಲಿ ದುಡಿಯುವವರಾಗಿದ್ದು ನಿರ್ದೇಶಕರಿಂದ ನೆಲಗುಡಿಸುವವನವರೆಗೂ ವಿಭಿನ್ನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು.  ಈ ಶಾಲೆಯಲ್ಲಿ ಕಲಿಯುತ್ತಿದ್ದಾಗಿನ ನನ್ನ ಅನುಭವವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
 

" ನೀವು ಏನಾದರೂ ಹೇಳಿ ನಾನು ಅದನ್ನು ಮರೆಯುತ್ತೇನೆ. ನನಗೇನಾದರೂ  ಕಲಿಸಿ  ನಾನು ನೆನಪಿನಲ್ಲಿಟ್ಟು ಕೊಳ್ಳುತ್ತೇನೆ. ಮಾಡುವುದರಲ್ಲಿ ನನ್ನನ್ನೂ ಸೇರಿಸಿಕೊಳ್ಳಿ  ನಾನು  ಚೆನ್ನಾಗಿ  ತಿಳಿದುಕೊಳ್ಳುತ್ತೇನೆ ",  ಎಂದು ಬೆಂಜಮಿನ್ ಫ್ರಾಂಕ್ಲಿನ್ ಹೇಳಿದ್ದಾರೆ.


 

 

"   ಈ ಮಾತಿನ ಜೀವಂತ  ನಿದರ್ಶನ ಇಲ್ಲಿದೆ  

ಪುಟಗಳು(_e):

18483 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು